ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

2024 ರ ಋತುವಿನಲ್ಲಿ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಸಂಪುಟದ ಅನುಮೋದನೆ

Posted On: 27 DEC 2023 3:38PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಫುಟ ಸಭೆಯಲ್ಲಿ 2024 ರ ಋತುವಿನಲ್ಲಿ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಯನ್ನು(MSPs) ನಿಗದಿಪಡಿಸಿ ಅನುಮೋದನೆ ನೀಡಲಾಗಿದೆ.

ಸರ್ಕಾರವು 2018-19 ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದಂತೆ, ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಎಲ್ಲಾ ಕಡ್ಡಾಯ ಬೆಳೆಗಳ MSP ಗಳನ್ನು ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಹೆಚ್ಚು  ನಿಗದಿಪಡಿಸಲಾಗಿದೆ. 2024 ರ ಋತುವಿನಲ್ಲಿ ಪ್ರತಿ ಕ್ವಿಂಟಾಲ್‌ಗೆ 11,160/- ಮತ್ತು ಕೊಬ್ಬರಿ ಗಿಟುಕಿಗೆ ರೂ. 12,000  ನಿಗದಿಪಡಿಸಲಾಗಿದೆ. ಮಿಲ್ಲಿಂಗ್ ಕೊಬ್ಬರಿಗೆ ಶೇಕಡಾ 51.84 ಮತ್ತು ಕೊಬ್ಬರಿ ಗಿಟುಕಿಗೆ ಶೇಕಡಾ 63.26 ರಷ್ಟು ಮಾರ್ಜಿನ್ ಅನ್ನು ಖಚಿತಪಡಿಸಲಾಗಿದೆ. ಇದು ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ 1.5 ಪಟ್ಟು ಮೀರಿದೆ. ಮಿಲ್ಲಿಂಗ್ ಕೊಬ್ಬರಿಯನ್ನು ಎಣ್ಣೆಯನ್ನು ತೆಗೆಯಲು ಬಳಸಲಾಗುತ್ತದೆ, ಆದರೆ ಗಿಟುಕು/ಖಾದ್ಯ ಕೊಬ್ಬರಿಯನ್ನು ಒಣ ಹಣ್ಣಾಗಿ ಸೇವಿಸಲಾಗುತ್ತದೆ ಮತ್ತು ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಕೇರಳ ಮತ್ತು ತಮಿಳುನಾಡು ಕೊಬ್ಬರಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ, ಕರ್ನಾಟಕದಲ್ಲಿ ಕೊಬ್ಬರಿ ಗಿಟುಕನ್ನು ಪ್ರಧಾನವಾಗಿ ಉತ್ಪಾದಿಸಲಾಗುತ್ತದೆ.

2024 ರ ಋತುವಿನ MSP ಹಿಂದಿನ ಋತುವಿಗಿಂತ ಮಿಲ್ಲಿಂಗ್ ಕೊಬ್ಬರಿಗೆ ಪ್ರತಿ ಕ್ವಿಂಟಾಲ್‌ಗೆ ರೂ.300/- ಮತ್ತು ಕೊಬ್ಬರಿ ಗಿಟುಕಿಗೆ ರೂ.250/- ಹೆಚ್ಚಳವಾಗಿದೆ. ಕಳೆದ 10 ವರ್ಷಗಳಲ್ಲಿ, ಸರ್ಕಾರವು ಕ್ವಿಂಟಾಲ್‌ಗೆ 5,250 ರೂ.ಗಳಿಂದ ಮತ್ತು 2014-15 ರಲ್ಲಿ ಕ್ವಿಂಟಾಲ್‌ಗೆ ರೂ.5,500 ರಿಂದ ಕ್ವಿಂಟಾಲ್‌ಗೆ ರೂ.11,160 ಮತ್ತು 2024-25 ರಲ್ಲಿ 12,000 ರೂ. ಕ್ರಮವಾಗಿ 113 ಪ್ರತಿಶತ ಮತ್ತು 118 ಪ್ರತಿಶತ ಬೆಳವಣಿಗೆಯನ್ನು ದಾಖಲಿಸಿದೆ.

ಹೆಚ್ಚಿನ MSP ತೆಂಗು ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುತ್ತದೆ ಆದರೆ ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ಹೆಚ್ಚಿಸಲು ರೈತರನ್ನು ಉತ್ತೇಜಿಸಲಾಗುತ್ತಿದೆ. 

ಪ್ರಸಕ್ತ 2023 ರ ಹಂಗಾಮಿನಲ್ಲಿ, ಸರ್ಕಾರವು 1.33 ಲಕ್ಷ ಮೆಟ್ರಿಕ್ ಟನ್ ಕೊಬ್ಬರಿಯನ್ನು ರೂ.1,493 ಕೋಟಿ ವೆಚ್ಚದಲ್ಲಿ ದಾಖಲೆಯ ಪ್ರಮಾಣದಲ್ಲಿ ಸಂಗ್ರಹಿಸಿದೆ, ಇದರಿಂದ ಸುಮಾರು 90,000 ರೈತರಿಗೆ ಪ್ರಯೋಜನವಾಗಿದೆ. ಪ್ರಸ್ತುತ 2023 ರಲ್ಲಿ ಸಂಗ್ರಹಣೆಯು ಹಿಂದಿನ ಋತುವಿಗಿಂತ (2022) ಶೇಕಡಾ 227 ಏರಿಕೆಯನ್ನು ದಾಖಲಿಸಿದೆ.

ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NAFED) ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಬೆಲೆ ಬೆಂಬಲ ಯೋಜನೆ (PSS) ಅಡಿಯಲ್ಲಿ ಕೊಬ್ಬರಿ ಮತ್ತು ಸಿಪ್ಪೆ ಸುಲಿದ ತೆಂಗಿನಕಾಯಿಯನ್ನು ಸಂಗ್ರಹಿಸಲು ಕೇಂದ್ರೀಯ ನೋಡಲ್ ಏಜೆನ್ಸಿಗಳಾಗಿ (CNAs) ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಾಗುತ್ತದೆ.

****



(Release ID: 1990901) Visitor Counter : 112