ಕೃಷಿ ಸಚಿವಾಲಯ
ಇಂದು ಜಾರ್ಖಂಡ್‌ನ ಜಾರ್ಖಂಡ್‌ನ ಜಮ್‌ಶೆಡ್‌ಪುರದಲ್ಲಿ ನೆರವೇರಿದ 'ವೀರ್ ಬಾಲ್ ದಿವಸ್' ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಂದ್ರ ಸಚಿವ ಅರ್ಜುನ್ ಮುಂಡಾ
Posted On:
26 DEC 2023 2:04PM by PIB Bengaluru
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರು ಇಂದು ಜಾರ್ಖಂಡ್‌ನ ಜಮ್‌ಶೆಡ್‌ಪುರದಲ್ಲಿರುವ ಗುರುದ್ವಾರ ಸಾಹೀಬ್ ಬಾಬಾ ದೀಪ್ ಸಿಂಗ್ ಜಿಯಲ್ಲಿ 'ವೀರ್ ಬಾಲ್ ದಿವಸ್' ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
10 ನೇ ಗುರು ಗೋವಿಂದ್ ಸಿಂಗ್ ಅವರ ಸಾಹಿಬ್ಜಾಡೆ (ಪುತ್ರರು) ಗಳಾದ ಬಾಬಾ ಫತೇ ಸಿಂಗ್ ಮತ್ತು ಜೋರಾವರ್ ಸಿಂಗ್ ಅವರು ಹುತಾತ್ಮರಾದ 170ರ ಡಿಸೆಂಬರ್ 26ನೇ ತಾರೀಖಿನ ದಿನವನ್ನು ವೀರ್ ಬಾಲ್ ದಿವಸ್ ಎಂದು ಆಚರಿಸಲಾಗುತ್ತದೆ. ಈ ಬಾಲಕರನ್ನು ಅಂದು ಮೊಘಲ್ ಗವರ್ನರ್ ವಜೀರ್ ಖಾನ್ 1704 ರ ಡಿಸೆಂಬರ್ 26 ರಂದು ಅವರ ಆಸ್ಥಾನದಲ್ಲಿ ಮರಣದಂಡನೆ ವಿಧಿಸಿದ್ದರು. ಶಾಹೀದ್ ದೀಪ್ ಸಿಂಗ್ ಅವರ ಹುತಾತ್ಮರ ಸ್ಮರಣೆಗಾಗಿ ನಿರ್ಮಿಸಲಾದ ಜಮ್‌ಶೆಡ್‌ಪುರದಲ್ಲಿರುವ ಏಕೈಕ ಗುರುದ್ವಾರ ಇದಾಗಿದೆ.
ಸಿಖ್ಖರು ಅನ್ಯಾಯ, ವಿನಾಶದ ವಿರುದ್ಧ ತಲೆಮಾರುಗಳಿಂದ ಹೋರಾಟ ನಡೆಸಿದ ಸುದೀರ್ಘ ಇತಿಹಾಸವಿದೆ. ಮಾನವೀಯತೆ ಮತ್ತು ದೇಶಕ್ಕಾಗಿ ಸಿಖ್ ಗುರುಗಳು ಮಾಡಿದ ತ್ಯಾಗವನ್ನು ಯಾರೂ ಸರಿಗಟ್ಟಲು ಸಾಧ್ಯವಿಲ್ಲ. ನಿಸ್ವಾರ್ಥ ಸೇವೆ ಮತ್ತು ಶಾಂತಿಯ ಸಂದೇಶವನ್ನು ನೀಡುವ ಗುರು ಗ್ರಂಥ ಸಾಹಿಬ್, ಸಿಖ್ ಸಮುದಾಯಕ್ಕೆ ಮಾತ್ರವಲ್ಲದೆ ಇತರ ಪ್ರತಿಯೊಂದು ಭಾರತೀಯ ಸಮುದಾಯಕ್ಕೂ ಸ್ಫೂರ್ತಿಯ ಮೂಲವಾಗಿದೆ.
*****
(Release ID: 1990496)
Visitor Counter : 72