ಗೃಹ ವ್ಯವಹಾರಗಳ ಸಚಿವಾಲಯ
ಕುವೈತ್ ರಾಷ್ಟ್ರದ ಅಮೀರ್ ಗೌರವಾನ್ವಿತ ಶೇಖ್ ನವಾಫ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ನಿಧನದ ಗೌರವಾರ್ಥ 2023ರ ಡಿಸೆಂಬರ್ 17, ರಂದು ಏಕ ದಿನದ ಸರಕಾರಿ ರಾಷ್ಟ್ರೀಯ ಶೋಕಾಚರಣೆ
प्रविष्टि तिथि:
16 DEC 2023 9:54PM by PIB Bengaluru
ಕುವೈತ್ ರಾಷ್ಟ್ರದ ಅಮೀರ್ ಶೇಖ್ ನವಾಫ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರು 2023ರ ಡಿಸೆಂಬರ್ 16 ರಂದು ನಿಧನರಾದರು. ಅಗಲಿದ ಗಣ್ಯರಿಗೆ ಗೌರವದ ಸಂಕೇತವಾಗಿ, ಭಾರತ ಸರ್ಕಾರವು 2023ರ ಡಿಸೆಂಬರ್ 17 ರಂದು ಭಾರತದಾದ್ಯಂತ ಒಂದು ದಿನದ ಶೋಕಾಚರಣೆಗೆ ನಿರ್ಧರಿಸಿದೆ.
ಭಾರತದಾದ್ಯಂತ ರಾಷ್ಟ್ರಧ್ವಜವನ್ನು ನಿಯಮಿತವಾಗಿ ಹಾರಿಸುವ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗುವುದು ಮತ್ತು ಈ ದಿನದಂದು ಯಾವುದೇ ಅಧಿಕೃತ ಮನರಂಜನೆ ಕಾರ್ಯಕ್ರಮ ಇರುವುದಿಲ್ಲ.
****
(रिलीज़ आईडी: 1987590)
आगंतुक पटल : 122