ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

2023 ಅಕ್ಟೋಬರ್ ನಲ್ಲಿ 17.28 ಲಕ್ಷ ಹೊಸ ಕಾರ್ಮಿಕರು ಇಎಸ್ಐ ಯೋಜನೆಗೆ  ದಾಖಲು


25 ವರ್ಷ ವಯಸ್ಸಿನೊಳಗಿನ 8.25 ಲಕ್ಷ ಯುವ ಉದ್ಯೋಗಿಗಳು ಹೊಸ ನೋಂದಣಿ ಮಾಡಿಸಿದ್ದಾರೆ

2023 ಅಕ್ಟೋಬರ್ ನಲ್ಲಿ ಸುಮಾರು 23,468 ಹೊಸ ಸಂಸ್ಥೆಗಳು ಇಎಸ್ಐ ಯೋಜನೆಗೆ ನೋಂದಾಯಿಸಲಾಗಿದೆ

2023 ಅಕ್ಟೋಬರ್ ನಲ್ಲಿ 51 ತೃತೀಯ ಲಿಂಗಿಗಳು ಅಥವಾ ಮಂಗಳಮುಖಿಯರಿಗೆ ಇಇಸ್ಐ ಯೋಜನೆಯ ಪ್ರಯೋಜನಗಳನ್ನು ವಿಸ್ತರಿಸಲಾಗಿದೆ

Posted On: 15 DEC 2023 11:35AM by PIB Bengaluru

2023 ಅಕ್ಟೋಬರ್ ನಲ್ಲಿ 17.28 ಲಕ್ಷ ಹೊಸ ಕಾರ್ಮಿಕರನ್ನು ಇಎಸ್ಐ ಯೋಜನೆಗೆ ಸೇರಿಸಲಾಗಿದೆ ಎಂದು ಉದ್ಯೋಗಿಗಳ ರಾಜ್ಯ ವಿಮಾ ನಿಗಮ(ಇಎಸ್ಐಸಿ)ದ ತಾತ್ಕಾಲಿಕ ವೇತನದಾರರ ದತ್ತಾಂಶ ಬಹಿರಂಗಪಡಿಸಿದೆ.

2023 ಅಕ್ಟೋಬರ್ ನಲ್ಲಿ ಸುಮಾರು 23,468 ಹೊಸ ಸಂಸ್ಥೆಗಳನ್ನು ನೋಂದಾಯಿಸಲಾಗಿದೆ. ಅವುಗಳನ್ನು ಉದ್ಯೋಗಿಗಳ ರಾಜ್ಯ ವಿಮಾ ನಿಗಮದ ಸಾಮಾಜಿಕ ಭದ್ರತಾ ಯೋಜನೆಯ ಅಡಿ ತರಲಾಗಿದೆ, ಇದರಿಂದಾಗಿ ಹೆಚ್ಚಿನ ವ್ಯಾಪ್ತಿಯನ್ನು ಖಾತ್ರಿಪಡಿಸಲಾಗಿದೆ.

2023 ಅಕ್ಟೋಬರ್ ನಲ್ಲಿ ಒಟ್ಟು 17.28 ಲಕ್ಷ ಕಾರ್ಮಿಕ ಉದ್ಯೋಗಿಗಳ ಪೈಕಿ 25 ವರ್ಷ ವಯಸ್ಸಿನೊಳಗಿನ 8.25 ಲಕ್ಷ ಉದ್ಯೋಗಿಗಳು ಹೊಸ ನೋಂದಣಿ ಮಾಡಿಕೊಂಡಿರುವುದರಿಂದ, ಅಂದರೆ ಒಟ್ಟು ಉದ್ಯೋಗಿಗಳ ಪೈಕಿ 47.76% ಪ್ರಮಾಣ ಯುವ ಉದ್ಯೋಗಿಗಳಾಗಿದ್ದಾರೆ. ಇದರಿಂದ ರಾಷ್ಟ್ರದ ಯುವಜನರಿಗೆ ಹೆಚ್ಚಿನ ಉದ್ಯೋಗಗಳನ್ನು ಸೃಜಿಸಲಾಗಿದೆ ಎಂದು ದತ್ತಾಂಶವು ಸ್ಪಷ್ಟವಾಗಿ ಬಹಿರಂಗಪಡಿಸಿದೆ.

ವೇತನದಾರರ ದತ್ತಾಂಶದ ಲಿಂಗವಾರು ವಿಶ್ಲೇಷಣೆಯ ಪ್ರಕಾರ, 2023 ಅಕ್ಟೋಬರ್ ನಲ್ಲಿ, ಮಹಿಳಾ ಸದಸ್ಯರ ನಿವ್ವಳ ದಾಖಲಾತಿ 3.31 ಲಕ್ಷ ಎಂದು ಸೂಚಿಸುತ್ತದೆ. ಒಟ್ಟು 51 ತೃತೀಯ ಲಿಂಗಿಗಳು ಅಥವಾ ಮಂಗಳಮುಖಿ ಉದ್ಯೋಗಿಗಳು ಸಹ 2023 ಅಕ್ಟೋಬರ್ ನಲ್ಲಿ ಇಎಸ್ಐ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ ಎಂಬುದನ್ನು ಇದು ತೋರಿಸುತ್ತಿದೆ. ಇಎಸ್ಐಸಿ ಸಮಾಜದ ಪ್ರತಿಯೊಂದು ವರ್ಗಕ್ಕೂ ಅದರ ಪ್ರಯೋಜನಗಳನ್ನು ತಲುಪಿಸಲು ಬದ್ಧವಾಗಿದೆ.

ದತ್ತಾಂಶ ಸೃಜನೆಯು ನಿರಂತರ ಪ್ರಕ್ರಿಯೆ ಆಗಿರುವುದರಿಂದ ಈಗ ನೀಡಿರುವ ವೇತನದಾರರ ದತ್ತಾಂಶವು ತಾತ್ಕಾಲಿಕವಾಗಿದೆ.

 

*****

 


(Release ID: 1986747) Visitor Counter : 77