ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಆಯುಷ್ಮಾನ್ ಭವ ಕುರಿತ ತಾಜಾ ಮಾಹಿತಿ


ಆಯುಷ್ಮಾನ್ ಆರೋಗ್ಯ ಮಂದಿರಗಳಿಗೆ 11.48 ಲಕ್ಷ ಆರೋಗ್ಯ ಮೇಳಗಳ ಮೂಲಕ 8.25 ಕೋಟಿ ಮಂದಿ ಭೇಟಿ

ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 33.000 ಆರೋಗ್ಯ ಮೇಳಗಳಿಗೆ 1.30 ಕೋಟಿಗೂ ಅಧಿಕ ಮಂದಿ ಭೇಟಿ

16 ಕೋಟಿ ಅಧಿಕ ಮಂದಿಗೆ ಕ್ಷಯರೋಗ, ರಕ್ತದೊತ್ತಡ, ಮಧುಮೇಹ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠ ಕ್ಯಾನ್ಸರ್ ಮತ್ತು ಕ್ಯಾಟರಾಕ್ಟ್ ಮತ್ತಿತರ ರೋಗಗಳ ತಪಾಸಣೆ

ಆರೋಗ್ಯ ಮೇಳಗಳಲ್ಲಿ ಸುಮಾರು 34 ಲಕ್ಷ ಆಯುಷ್ಮಾನ್ ಕಾರ್ಡ್ ಗಳ ಸೃಷ್ಟಿ

​​​​​​​40 ಲಕ್ಷಕ್ಕೂ ಅಧಿಕ ಅಭಾ (ಆರೋಗ್ಯ ಐಡಿ) ಕಾರ್ಡ್ ಗಳ ಸೃಷ್ಟಿ

Posted On: 15 DEC 2023 2:34PM by PIB Bengaluru

ಭಾರತದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆಗಳನ್ನು ತಲುಪಿಸುವ ಗುರಿಯನ್ನು ಹೊಂದಿರುವ ಮಹತ್ವದ ಉಪಕ್ರಮ, 'ಆಯುಷ್ಮಾನ್ ಭವ' ಅಭಿಯಾನ ಮತ್ತು ಆಯುಷ್ಮಾನ್ ಭವ ಪೋರ್ಟಲ್ ಅನ್ನು  ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ವರ್ಚುವಲ್ ರೂಪದಲ್ಲಿ 2023ರ ಸೆಪ್ಟೆಂಬರ್  13 ರಂದು ಗುಜರಾತ್‌ನ ಗಾಂಧಿನಗರದಲ್ಲಿ ಚಾಲನೆ ನೀಡಿದ್ದರು. ಆಯುಷ್ಮಾನ್ ಕಾರ್ಡ್‌ಗಳ ಲಭ್ಯತೆಯನ್ನು ಸುಲಭಗೊಳಿಸಲು, ಅಭಾ ಐಡಿಗಳನ್ನು ಸೃಷ್ಟಿಸಲು ಮತ್ತು ಪ್ರಮುಖ ಆರೋಗ್ಯ ಯೋಜನೆಗಳು ಮತ್ತು ಸಾಂಕ್ರಾಮಿಕವಲ್ಲದ ರೋಗಗಳಾದ ಕ್ಷಯರೋಗ ಮತ್ತು ಸಿಕಲ್ ಸೆಲ್ ನಂತಹ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು 2023ರ ಸೆಪ್ಟಂಬರ್ 17 ರಿಂದ ದೇಶದ ವಿವಿಧ ಭಾಗಗಳಲ್ಲಿ ಆರೋಗ್ಯ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಸೆಪ್ಟೆಂಬರ್ 2023. ಈ ಆರೋಗ್ಯ ಶಿಬಿರಗಳನ್ನು ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳ ಬಗ್ಗೆ ನಾಗರಿಕರಿಗೆ ತಿಳಿಸಲು ಮತ್ತು ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾಗಿದ್ದು, ಅವು ಜನರಿಗೆ ಜಾಗೃತಿ ಮೂಡಿಸಲು ಮತ್ತು ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನಗಳನ್ನು ನೇರವಾಗಿ ಜನರಿಗೆ ತಲುಪಿಸುವ ಗುರಿಯನ್ನು ಹೊಂದಿವೆ.

2023ರ ಡಿಸೆಂಬರ್ 04 ರಿಂದ 2023ರ  ಡಿಸೆಂಬರ್ 10 ರವರೆಗಿನ ಈ ವಾರದಲ್ಲಿ, 73,963 ಆಯುಷ್ಮಾನ್ ಆರೋಗ್ಯ ಮಂದಿರ ಆರೋಗ್ಯ ಮೇಳಗಳನ್ನು ಆಯೋಜಿಸಲಾಗಿದೆ ಮತ್ತು 2023ರ ಸೆಪ್ಟಂಬರ್ 17ರಂದು ಈ ಅಭಿಯಾನದ ಆರಂಭವಾದಾಗಿನಿಂದ ಒಟ್ಟು 11,48,855 ಆಯುಷ್ಮಾನ್ ಆರೋಗ್ಯ ಮಂದಿರ ಆರೋಗ್ಯ ಮೇಳಗಳು ವರದಿಯಾಗಿವೆ. ಈ ಆರೋಗ್ಯ ಮೇಳಗಳು 8,25,14,633 ಜನರು ಭೇಟಿ ನೀಡಿದ್ದಾರೆ, ಆದರೆ 2023ರ ಡಿಸೆಂಬರ್ 10ಕ್ಕೆ ಕೊನೆಗೊಂಡ ವಾರದಲ್ಲಿ 58,85,737 ಜನರು ಮೇಳಗಳಲ್ಲಿ ಭಾಗವಹಿಸಿದ್ದಾರೆ.

2023ರ ಸೆಪ್ಟಂಬರ್ 17 ರಿಂದೀಚೆಗೆ, ಸುಮಾರು 16 ಕೋಟಿ (16,03,17,875) ಜನರು ಕ್ಷಯರೋಗ, ರಕ್ತದೊತ್ತಡ, ಮಧುಮೇಹ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠ ಕ್ಯಾನ್ಸರ್ ಮತ್ತು ಕ್ಯಾಟರಾಕ್ಟ್‌ ಸೇರಿ ಏಳು ಬಗೆಯ ರೋಗಗಳ ತಪಾಸಣೆಗೆ ಒಳಗಾಗಿದ್ದಾರೆ. 2023ರ ಡಿಸೆಂಬರ್ 10ಕ್ಕೆ ಕೊನೆಗೊಂಡ ವಾರದಲ್ಲಿ 1,12,87,779 ಜನರು ಏಳು ರೋಗಗಳ ಉಚಿತ ತಪಾಸಣೆಗೆ ಒಳಗಾಗಿದ್ದಾರೆ.

ಸುಮುದಾಯ ಆರೋಗ್ಯ ಕೇಂದ್ರಗಳ (ಸಿಎಚ್ ಸಿಗಳ) ಅಡಿಯಲ್ಲಿ ಈವರೆಗೆ 32,792 ಆರೋಗ್ಯ ಮೇಳಗಳನ್ನು ನಡೆಸಲಾಗಿದ್ದು, ಈವರೆಗೆ ಒಟ್ಟು 1,30,39,084 ಜನರು ನೋಂದಾಯಿಸಿಕೊಂಡಿದ್ದಾರೆ.

ಈವರೆಗೆ ಒಟ್ಟು 34,49,204 ಆಯುಷ್ಮಾನ್ ಕಾರ್ಡ ಗಳನ್ನು ಸೃಷ್ಟಿಸಲಾಗಿದೆ ಮತ್ತು 2023ರ ಡಿಸೆಂಬರ್ 10ಕ್ಕೆ ಕೊನೆಗೊಂಡ ವಾರದಲ್ಲಿ 27,023 ಕಾರ್ಡ್ ಗಳನ್ನು ಸೃಷ್ಟಿಸಲಾಗಿದೆ. ಅಭಾ (ಆರೋಗ್ಯ ಐಡಿ) ಕಾರ್ಡ್ ಗಳ ಸೃಷ್ಟಿ ಒಟ್ಟಾರೆ 40,81,135 ತಲುಪಿದೆ.

ದೇಶಾದ್ಯಂತ ಆಯೋಜಿಸಲಾಗಿರುವ ಆಯುಷ್ಮಾನ್ ಭವ ಅಭಿಯಾನದ ದೃಶ್ಯ

Picture 9

ಉತ್ತರಾಖಂಡದಲ್ಲಿ ಆಯೋಜಿಸಲಾಗಿದ್ದ ಆಯುಷ್ಮಾನ್ ಭವ ಆರೋಗ್ಯ ಮೇಳ

ಮಧ್ಯಪ್ರದೇಶದಲ್ಲಿ ಆಯೋಜಿಸಲಾಗಿದ್ದ ಆಯುಷ್ಮಾನ್ ಭವ ಆರೋಗ್ಯ ಮೇಳ

ಮಹಾರಾಷ್ಟ್ರದಲ್ಲಿ ಆಯೋಜಿಸಲಾಗಿದ್ದ ಆಯುಷ್ಮಾನ್ ಭವ ಆರೋಗ್ಯ ಮೇಳ

ಹರಿಯಾಣದಲ್ಲಿ ಆಯೋಜಿಸಲಾಗಿದ್ದ ಆಯುಷ್ಮಾನ್ ಭವ ಆರೋಗ್ಯ ಮೇಳ

ಕರ್ನಾಟಕದಲ್ಲಿ ಆಯೋಜಿಸಲಾಗಿದ್ದ ಆಯುಷ್ಮಾನ್ ಭವ ಆರೋಗ್ಯ ಮೇಳ

Picture 4

ಜಾರ್ಖಂಡದಲ್ಲಿ ಆಯೋಜಿಸಲಾಗಿದ್ದ ಆಯುಷ್ಮಾನ್ ಭವ ಆರೋಗ್ಯ ಮೇಳ

 

ಸಿಎಚ್‌ಸಿ ಮೇಳದ ದೃಶ್ಯ

Picture 3

Picture 1

ಪುದುಚೇರಿಯಲ್ಲಿ ನಡೆದ ಸಿಎಚ್ ಸಿ ಮೇಳದಲ್ಲಿ ವಿಶೇಷ ಸೇವೆಗಳನ್ನು ನೀಡುತ್ತಿರುವುದು,

ಹಿನ್ನೆಲೆ: “ಆಯುಷ್ಮಾನ್ ಭವ' ಉಪಕ್ರಮವು ಪ್ರತಿ ಗ್ರಾಮ/ಪಟ್ಟಣದಲ್ಲಿ ಗರಿಷ್ಠ ಎಲ್ಲಾ ಆರೋಗ್ಯ ಸೇವೆಗಳನ್ನು ಪೂರೈಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಬದ್ಧತೆಗೆ ಅನುಗುಣವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವುದನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಸಮಾಜದ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆಗಳ ಲಭ್ಯತೆಯನ್ನು ಒದಗಿಸಲು ಯೋಜಿಸಲಾಗಿದೆ. 'ಆಯುಷ್ಮಾನ್ ಭವ' ಉಪಕ್ರಮವು 'ಆಯುಷ್ಮಾನ್ - ಆಪ್ಕೆ ದ್ವಾರ 3.0', 'ಆಯುಷ್ಮಾನ್ ಸಭಾಗಳು', ಆರೋಗ್ಯ ಮತ್ತು ಸ್ವಾಸ್ಥ್ಯಕ್ಕಾಗಿ  ಆಯುಷ್ಮಾನ್ ಮೇಳಗಳು- ಮತ್ತು ವೈದ್ಯಕೀಯ ಕಾಲೇಜುಗಳು, ಸಿಎಚ್ ಸಿಗಳಲ್ಲಿ ವೈದ್ಯಕೀಯ ಶಿಬಿರಗಳು ಮತ್ತು ಅಂತಿಮವಾಗಿ ಗ್ರಾಮ/ನಗರ ಪಂಚಾಯ್ತಿ ಅಥವಾ ನಗರ ವಾರ್ಡ್ ಗಳು 'ಆಯುಷ್ಮಾನ್ ಪಂಚಾಯತ್' ಸ್ಥಾನಮಾನ ಹೊಂದುವುದು ಅಥವಾ ಗರಿಷ್ಠ ಸೇವೆಗಳನ್ನು ನೀಡಿ 'ಆಯುಷ್ಮಾನ್ ನಗರ ವಾರ್ಡ್' ಸ್ಥಾನಮಾನ ಪಡೆಯುವುದು ಸೇರಿದೆ.

****

 



(Release ID: 1986673) Visitor Counter : 58