ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಭಾನುವಾರ, ಡಿಸೆಂಬರ್ 10 ರಂದು ಬಿಹಾರದ ಪಾಟ್ನಾದಲ್ಲಿ ನಡೆಯುವ ಪೂರ್ವ ವಲಯ ಪರಿಷತ್ತಿನ 26 ನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಲು ಸಹಕಾರಿ ಮತ್ತು ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯ ಬಳಕೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ
 
ಬಲವಾದ ರಾಜ್ಯಗಳು ಬಲಿಷ್ಠ ರಾಷ್ಟ್ರವನ್ನು ನಿರ್ಮಿಸುತ್ತವೆ ಮತ್ತು ಎರಡು ಅಥವಾ ಹೆಚ್ಚಿನ ರಾಜ್ಯಗಳು ಅಥವಾ ಕೇಂದ್ರ ಮತ್ತು ರಾಜ್ಯಗಳ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಕುರಿತು ನಿಯಮಿತವಾದ ಸಂವಾದ ಮತ್ತು ಚರ್ಚೆಗೆ ವೇದಿಕೆ ಮತ್ತು ವ್ಯವಸ್ಥಿತ ಕಾರ್ಯವಿಧಾನವನ್ನು ಒದಗಿಸುತ್ತವೆ ಎಂದು ವಲಯ ಪರಿಷತ್ತುಗಳು ನಂಬುತ್ತವೆ
 
ಕಳೆದ 9 ವರ್ಷಗಳಲ್ಲಿ, 2014 ರಿಂದ, 29 ಸ್ಥಾಯಿ ಸಮಿತಿಗಳ ಸಭೆಗಳು ಮತ್ತು 26 ವಲಯ ಮಂಡಳಿಗಳ ಸಭೆಗಳು ಸೇರಿದಂತೆ ವಿವಿಧ ವಲಯ ಮಂಡಳಿಗಳ ಒಟ್ಟು 55 ಸಭೆಗಳನ್ನು ನಡೆಸಲಾಗಿದೆ
 
ವಲಯ ಮಂಡಳಿಗಳ ಪ್ರತಿ ಸಭೆಯಲ್ಲೂ ರಾಷ್ಟ್ರೀಯ ಪ್ರಾಮುಖ್ಯತೆಯ ಅನೇಕ ವಿಷಯಗಳನ್ನು ಚರ್ಚಿಸಲಾಗುತ್ತದೆ

Posted On: 09 DEC 2023 9:34AM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಭಾನುವಾರ, 10ನೇ ಡಿಸೆಂಬರ್ 2023 ರಂದು ಬಿಹಾರದ ಪಾಟ್ನಾದಲ್ಲಿ ನಡೆಯುವ ಪೂರ್ವ ವಲಯ ಪರಿಷತ್ತಿನ 26 ನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಪೂರ್ವ ವಲಯ ಪರಿಷತ್ತು ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳನ್ನು ಒಳಗೊಂಡಿದೆ. ಸಭೆಯನ್ನು ಬಿಹಾರ ಸರ್ಕಾರದ ಸಹಯೋಗದೊಂದಿಗೆ ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಅಂತರ್ ರಾಜ್ಯ ಪರಿಷತ್‌ ಸಚಿವಾಲಯವು ಆಯೋಜಿಸಿದೆ. ಪೂರ್ವ ವಲಯ ಪರಿಷತ್ತಿನ 26 ನೇ ಸಭೆಯಲ್ಲಿ ಸದಸ್ಯ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಆ ರಾಜ್ಯಗಳ ಇಬ್ಬರು ಹಿರಿಯ ಸಚಿವರು ಭಾಗವಹಿಸಲಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮತ್ತು ಇತರ ಹಿರಿಯ ಅಧಿಕಾರಿಗಳು ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ರಾಜ್ಯಗಳ ಮರುಸಂಘಟನೆ ಕಾಯಿದೆ, 1956 ರ ಸೆಕ್ಷನ್ 15-22 ರ ಅಡಿಯಲ್ಲಿ ಐದು ವಲಯ ಪರಿಷತ್‌ ಗಳನ್ನು 1957 ರಲ್ಲಿ ಸ್ಥಾಪಿಸಲಾಯಿತು. ಕೇಂದ್ರ ಗೃಹ ಸಚಿವರು ಈ ಐದು ವಲಯ ಪರಿಷತ್‌ ಗಳ ಅಧ್ಯಕ್ಷರಾಗಿದ್ದರೆ, ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿ/ಲೆಫ್ಟಿನೆಂಟ್ ಗವರ್ನರ್ ಆಯಾ ವಲಯ ಪರಿಷತ್ತಿನ ಸದಸ್ಯರಾಗಿರುತ್ತಾರೆ, ಅವರಲ್ಲಿ ಒಬ್ಬರು ಪ್ರತಿ ವರ್ಷ ಸರದಿಯ ಮೂಲಕ ಉಪಾಧ್ಯಕ್ಷರಾಗಿರುತ್ತಾರೆ. ಪ್ರತಿ ರಾಜ್ಯದಿಂದ ಇನ್ನೂ ಇಬ್ಬರು ಸಚಿವರನ್ನು ರಾಜ್ಯಪಾಲರು ಪರಿಷತ್ತಿನ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುತ್ತಾರೆ. ಪ್ರತಿ ವಲಯ ಪರಿಷತ್ತು ಮುಖ್ಯ ಕಾರ್ಯದರ್ಶಿಗಳ ಮಟ್ಟದಲ್ಲಿ ಸ್ಥಾಯಿ ಸಮಿತಿಯನ್ನು ಸಹ ರಚಿಸಿದೆ. ಬಿಹಾರದ ಮುಖ್ಯಮಂತ್ರಿಯವರು ಪೂರ್ವ ವಲಯ ಪರಿಷತ್ತಿನ 26 ನೇ ಸಭೆಯ ಉಪಾಧ್ಯಕ್ಷರಾಗಿದ್ದಾರೆ.

ರಾಜ್ಯಗಳು ಪ್ರಸ್ತಾಪಿಸಿದ ವಿಷಯಗಳನ್ನು ಮೊದಲು ಸಂಬಂಧಪಟ್ಟ ವಲಯ ಪರಿಷತ್ತಿನ ಸ್ಥಾಯಿ ಸಮಿತಿಯ ಮುಂದೆ ಚರ್ಚೆಗೆ ಮಂಡಿಸಲಾಗುತ್ತದೆ. ಪರಸ್ಪರ ಒಪ್ಪಿಗೆಯಿಂದ ಪರಿಹರಿಸಲಾಗದ ಸಮಸ್ಯೆಗಳನ್ನು ವಲಯ ಪರಿಷತ್ತಿನ ಸಭೆಯಲ್ಲಿ ಚರ್ಚೆಗೆ ಮಂಡಿಸಲಾಗುತ್ತದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಲು ಸಹಕಾರಿ ಮತ್ತು ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯ ಬಳಕೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಪ್ರಬಲ ರಾಜ್ಯಗಳು ಬಲಿಷ್ಠ ರಾಷ್ಟ್ರವನ್ನು ಸೃಷ್ಟಿಸುತ್ತವೆ ಮತ್ತು ಎರಡು ಅಥವಾ ಹೆಚ್ಚಿನ ರಾಜ್ಯಗಳು ಅಥವಾ ಕೇಂದ್ರ ಮತ್ತು ರಾಜ್ಯಗಳ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಕುರಿತು ನಿಯಮಿತವಾದ ಸಂವಾದ ಮತ್ತು ಚರ್ಚೆಗೆ ವೇದಿಕೆ ಮತ್ತು ವ್ಯವಸ್ಥಿತ ಕಾರ್ಯವಿಧಾನವನ್ನು ಒದಗಿಸುತ್ತವೆ ಎಂದು ವಲಯ ಪರಿಷತ್ತುಗಳು ನಂಬುತ್ತವೆ. ಕಳೆದ 9 ವರ್ಷಗಳಲ್ಲಿ, 2014 ರಿಂದ, 29 ಸ್ಥಾಯಿ ಸಮಿತಿಗಳ ಸಭೆಗಳು ಮತ್ತು 26 ವಲಯ ಪರಿಷತ್ತುಗಳ ಸಭೆಗಳು ಸೇರಿದಂತೆ ವಿವಿಧ ವಲಯ ಪರಿಷತ್ತುಗಳ ಒಟ್ಟು 55 ಸಭೆಗಳನ್ನು ನಡೆಸಲಾಗಿದೆ.

ವಲಯ ಪರಿಷತ್ತುಗಳು ಸಲಹಾ ಪಾತ್ರವನ್ನು ವಹಿಸುತ್ತವೆ, ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಪರಿಷತ್ತುಗಳು ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ತಿಳುವಳಿಕೆ ಮತ್ತು ಸಹಕಾರವನ್ನು ಉತ್ತೇಜಿಸುವ ಪ್ರಮುಖ ಕಾರ್ಯವಿಧಾನವಾಗಿ ಹೊರಹೊಮ್ಮಿವೆ. ಪರಿಷತ್ತಿನ ಸಭೆಗಳಲ್ಲಿ ರಾಗಿಗೆ ಸಮಾನವಾಗಿ ಕೊಡೋ, ಕುಟ್ಕಿ ಮತ್ತು ಇತರ ಸಣ್ಣ ಸಿರಿಧಾನ್ಯ ಬೆಳೆಗಳ ಕನಿಷ್ಠ ಬೆಂಬಲ ಬೆಲೆ, ಸಮಗ್ರ ಹೂಳು ನಿರ್ವಹಣಾ ನೀತಿಯಡಿಯಲ್ಲಿ ಜಲಶಕ್ತಿ ಸಚಿವಾಲಯದಿಂದ 2022 ರಲ್ಲಿ ಹೂಳು ನಿರ್ವಹಣೆಗಾಗಿ ರಾಷ್ಟ್ರೀಯ ಚೌಕಟ್ಟನ್ನು ಬಿಡುಗಡೆ ಮಾಡುವುದು, ರಾಜ್ಯ ಮಟ್ಟದ ತಾಂತ್ರಿಕ ಸಮಿತಿಯಿಂದ 2022-23 ರಿಂದ ಕಿಸಾನ್ ಕ್ರೆಡಿಟ್ ಕಾರ್ಡ್‌ನಲ್ಲಿ ಲ್ಯಾಕ್ ಕೃಷಿಗೆ ಹಣಕಾಸಿನ ಪ್ರಮಾಣವನ್ನು ನಿರ್ಧರಿಸಲು ಮತ್ತು ಲ್ಯಾಕ್ ಕೃಷಿಯನ್ನು ಸೇರಿಸುವ ನಿರ್ಧಾರ. ವಲಯ ಪರಿಷತ್ತುಗಳು ಗಣಿಗಾರಿಕೆ, ಕೆಲವು ವಸ್ತುಗಳ ಮೇಲೆ ಕೇಂದ್ರ ಹಣಕಾಸು ನೆರವು, ಮೂಲಸೌಕರ್ಯಗಳ ಸೃಷ್ಟಿ, ಭೂಸ್ವಾಧೀನ ಮತ್ತು ಭೂ ವರ್ಗಾವಣೆ, ನೀರು ಹಂಚಿಕೆ, ನೇರ ಲಾಭ ವರ್ಗಾವಣೆ ಯೋಜನೆ (ಡಿಬಿಟಿ), ರಾಜ್ಯ ಮರುಸಂಘಟನೆ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಇತರ ಸಾಮಾನ್ಯ ಆಸಕ್ತಿಯ ವಿಷಯಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳನ್ನು ಚರ್ಚಿಸುತ್ತವೆ. 

ವಲಯ ಪರಿಷತ್ತುಗಳ ಪ್ರತಿ ಸಭೆಯಲ್ಲೂ ರಾಷ್ಟ್ರೀಯ ಪ್ರಾಮುಖ್ಯತೆಯ ಅನೇಕ ವಿಷಯಗಳನ್ನು ಚರ್ಚಿಸಲಾಗುತ್ತದೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳ ತ್ವರಿತ ತನಿಖೆ ಮತ್ತು ವಿಲೇವಾರಿಗಾಗಿ ತ್ವರಿತಗತಿ ವಿಶೇಷ ನ್ಯಾಯಾಲಯಗಳ (ಎಫ್‌ ಎಸ್‌ ಟಿ ಸಿ) ಆರಂಭ, ಪ್ರತಿ ಹಳ್ಳಿಯ 5 ಕಿಮೀ ವ್ಯಾಪ್ತಿಯಲ್ಲಿ ಬ್ಯಾಂಕ್‌ ಗಳು/ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಶಾಖೆಗಳ ಸೌಲಭ್ಯ, ಎರಡು ಲಕ್ಷ ಹೊಸ ಪ್ರಾಥಮಿಕ ಕೃಷಿ ಸಾಲ ಸಂಘಗಳ ರಚನೆ, ಪೌಷ್ಠಿಕ ಅಭಿಯಾನದ ಮೂಲಕ ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸುವುದು, ಮಕ್ಕಳು ಶಾಲೆ ಬಿಡುವ ಪ್ರಮಾಣವನ್ನು ಕಡಿಮೆ ಮಾಡುವುದು, ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಭಾಗವಹಿಸುವಿಕೆ ಮತ್ತು ರಾಷ್ಟ್ರೀಯ ಮಟ್ಟದ ಇತರ ಸಾಮಾನ್ಯ ಆಸಕ್ತಿಯ ವಿಷಯಗಳು ಸೇರಿವೆ. 

*****
 



(Release ID: 1984545) Visitor Counter : 76