ಪ್ರಧಾನ ಮಂತ್ರಿಯವರ ಕಛೇರಿ

​​​​​​​ಫಲಾನುಭವಿ ರೈತರನ್ನು ‘ಜೈ ಜಗನ್ನಾಥ’ ಎಂದು ಶುಭಾಶಯ ಕೋರಿದ ಪ್ರಧಾನಮಂತ್ರಿಯವರು 


ಒಡಿಶಾ ರೈತನಿಗೆ ಆತನ ಮಕ್ಕಳ ಭವಿಷ್ಯದ ಬಗ್ಗೆ ವಿಶ್ವಾಸ ಮೂಡಿಸಲಾಯಿತು 

Posted On: 30 NOV 2023 1:25PM by PIB Bengaluru

ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಸಂವಾದ ನಡೆಸಿದರು. ಪ್ರಧಾನಮಂತ್ರಿ ಮಹಿಳಾ ಕಿಸಾನ್ ಡ್ರೋನ್ ಕೇಂದ್ರಕ್ಕೆ ಕೂಡ ಅವರು ಚಾಲನೆ ನೀಡಿದರು. ಈ ಕಾರ್ಯಕ್ರಮದ ವೇಳೆ, ಪ್ರಧಾನಮಂತ್ರಿಯವರು ದಿಯೋಘರ್‌ನ ಏಮ್ಸ್ ನಲ್ಲಿ 10,000ನೇ ಜನೌಷದಿ ಕೇಂದ್ರವನ್ನು ಲೋಕಕ್ಕೆ ಸಮರ್ಪಿಸಿದರು. ಇದಲ್ಲದೆ, ಶ್ರೀ ಮೋದಿಯವರು ದೇಶದಲ್ಲಿ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 10,000 ದಿಂದ 25,000 ಕ್ಕೆ ಹೆಚ್ಚಿಸುವ ಕಾರ್ಯಕ್ರಮಕ್ಕೂ ಚಾಲನೆ ನೀಡಿದರು. ಈ ವರ್ಷದ ಆರಂಭದಲ್ಲಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಮಂತ್ರಿಯವರು ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್‌ಗಳನ್ನು ಒದಗಿಸುವುದು ಮತ್ತು ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 10,000 ರಿಂದ 25,000 ಕ್ಕೆ ಹೆಚ್ಚಿಸುವ ಎರಡೂ ಉಪಕ್ರಮಗಳನ್ನು ಘೋಷಿಸಿದ್ದರು. ಈ ಭರವಸೆಗಳ ಈಡೇರಿಕೆಗೆ ಕಾರ್ಯಕ್ರಮ ಸಾಕ್ಷಿಯಾಗಿತ್ತು.

ಒಡಿಶಾದ ರಾಯಗಢದ ಪೂರ್ಣ ಚಂದ್ ಬೆನಿಯಾ ಎಂಬ ರೈತನನ್ನು ಪ್ರಧಾನಮಂತ್ರಿಯವರು ‘ಜೈ ಜಗನಾಥ್’ ಎಂದು ಸ್ವಾಗತಿಸಿದರು. ಶ್ರೀ ಬೆನಿಯಾ ಅವರು ಅನೇಕ ಸರ್ಕಾರಿ ಯೋಜನೆಗಳ ಫಲಾನುಭವಿಯಾಗಿದ್ದಾರೆ. ಉಜ್ವಲದಂತಹ ಯೋಜನೆಗಳಿಂದ ತನ್ನ ಜೀವನ ಹೇಗೆ ಬದಲಾಯಿತು ಎಂಬುದನ್ನು ಫಲಾನುಭವಿ ರೈತ ವಿವರಿಸಿದರು. ಈಗ ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಕನಸು ಕಾಣುವ ವಿಶ್ವಾಸವಿರುವುದಾಗಿ ಪ್ರಧಾನಮಂತ್ರಿಯವರಿಗೆ ತಿಳಿಸಿದರು. ಅವರ ಪ್ರಯೋಜನಕ್ಕಾಗಿ ಇನ್ನೂ ಯಾವ ಯಾವ ಯೋಜನೆಗಳು ಲಭ್ಯವಿವೆ ಎಂಬುದರ ಕುರಿತು ಯಾತ್ರೆಯಲ್ಲಿ ಜೊತೆಗಿರುವ ಅಧಿಕಾರಿಗಳಿಂದ ಕೇಳಿ ತಿಳಿದುಕೊಳ್ಳುವಂತೆ ಪ್ರಧಾನಮಂತ್ರಿಯವರು ಬೆನಿಯಾ ಅವರಿಗೆ ಹೇಳಿದರು. 

*****



(Release ID: 1982252) Visitor Counter : 64