ಸಂಸದೀಯ ವ್ಯವಹಾರಗಳ ಸಚಿವಾಲಯ
azadi ka amrit mahotsav

ಡಿಸೆಂಬರ್ 4 ರಿಂದ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಕೇಂದ್ರ ಸರ್ಕಾರವು ರಾಜಕೀಯ ಪಕ್ಷಗಳ ಸದನ ನಾಯಕರೊಂದಿಗೆ ಸಭೆ ನಡೆಸಿತು


ಸಂಸತ್ತಿನ ಸುಗಮ ಕಲಾಪಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ಸಹಕಾರಕ್ಕಾಗಿ ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಕರೆ ನೀಡಿದರು.

ಸಂಸತ್ತಿನಲ್ಲಿ ಎಲ್ಲಾ ಪ್ರಮುಖ ವಿಷಯಗಳನ್ನು ಚರ್ಚಿಸಲಾಗುವುದು : ಶ್ರೀ ರಾಜನಾಥ್ ಸಿಂಗ್

ಚಳಿಗಾಲದ ಅಧಿವೇಶನವು 19 ದಿನಗಳ ಅವಧಿಯಲ್ಲಿ ಒಟ್ಟು 15 ಸಭೆಗಳನ್ನು ಒದಗಿಸುತ್ತದೆ

Posted On: 02 DEC 2023 5:16PM by PIB Bengaluru

2023 ರ ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಮೊದಲು ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಎಲ್ಲಾ ರಾಜಕೀಯ ಪಕ್ಷಗಳ ಸದನ ನಾಯಕರೊಂದಿಗೆ ಸರ್ಕಾರದ ಸಭೆಯನ್ನು ಇಂದು ಇಲ್ಲಿ ನಡೆಸಲಾಯಿತು. ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು , ಸಂಸತ್ತಿನ ಚಳಿಗಾಲದ ಅಧಿವೇಶನವು ಸೋಮವಾರ, 4ನೇ ಡಿಸೆಂಬರ್, 2023 ರಂದು ಪ್ರಾರಂಭವಾಗುತ್ತದೆ ಮತ್ತು ಸರ್ಕಾರಿ ವ್ಯವಹಾರದ ಅಗತ್ಯತೆಗಳಿಗೆ ಒಳಪಟ್ಟು, ಅಧಿವೇಶನವು 22ನೇ ಡಿಸೆಂಬರ್, 2023 ಶುಕ್ರವಾರದಂದು ಮುಕ್ತಾಯಗೊಳ್ಳಬಹುದು ಎಂದು ತಿಳಿಸಿದರು. 19 ದಿನಗಳ ಅವಧಿಯ ಅಧಿವೇಶನವು 15 ಸಭಾಹಾಜರಿಯನ್ನು ಹೊಂದಿರುತ್ತದೆ. ಈ ಅಧಿವೇಶನದಲ್ಲಿ ತಾತ್ಕಾಲಿಕವಾಗಿ 19 ಶಾಸಕಾಂಗ ವ್ಯವಹಾರ ಮತ್ತು 2 ಹಣಕಾಸು ವ್ಯವಹಾರದ ವ್ಯವಹಾರಿಕ ಅಂಶಗಳನ್ನು ಗುರುತಿಸಲಾಗಿದೆ ಎಂದು ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ತಿಳಿಸಿದರು.

https://static.pib.gov.in/WriteReadData/userfiles/image/image001F58D.jpg

 

ಸದನದ ಅಧಿವೇಶನದ ಅವಧಿಯಲ್ಲಿ ಆಯಾ ಸಭಾಧ್ಯಕ್ಷರು ಕಾರ್ಯವಿಧಾನದ ನಿಯಮಗಳ ಅಡಿಯಲ್ಲಿ ಅನುಮತಿಸಲಾದ ಯಾವುದೇ ವಿಷಯವನ್ನು ಮೇಲೆ ಚರ್ಚಿಸಲು ಸರ್ಕಾರ ಯಾವಾಗಲೂ ಸಿದ್ಧವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರು ಹೇಳಿದರು. ಸಂಸತ್ತಿನ ಉಭಯ ಸದನಗಳು ಸುಗಮವಾಗಿ ನಡೆಯಲು ಸಕ್ರಿಯ ಸಹಕಾರ ಮತ್ತು ಬೆಂಬಲಕ್ಕಾಗಿ ಅವರು ಎಲ್ಲಾ ಪಕ್ಷದ ನಾಯಕರನ್ನು ವಿನಂತಿಸಿದರು. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ (ಸ್ವತಂತ್ರ ಉಸ್ತುವಾರಿ), ಸಂಸದೀಯ ವ್ಯವಹಾರಗಳ ಸಚಿವಾಲಯ ಮತ್ತು ಸಂಸ್ಕೃತಿ ಸಚಿವಾಲಯಗಳ ರಾಜ್ಯ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್ ಸಭೆಯಲ್ಲಿ ಹಾಜರಿದ್ದರು

ಸಂಸತ್ತಿನ ಉಭಯ ಸದನಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು ಪ್ರಸ್ತಾಪಿಸಿದ ಅಂಶಗಳನ್ನು ಆಲಿಸಿದ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್, ಸಭೆಯಲ್ಲಿ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದ್ದಕ್ಕಾಗಿ ನಾಯಕರಿಗೆ ಧನ್ಯವಾದ ಅರ್ಪಿಸಿದರು ಮತ್ತು ಎಲ್ಲಾ ವಿಷಯಗಳ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಹೇಳಿ, ಸಂಸತ್ತಿನ ಆಯಾ ಸದನಗಳ ನಿಯಮಗಳ ಪ್ರಕಾರ ಮತ್ತು ಸಂಬಂಧಪಟ್ಟ ಸಭಾಧ್ಯಕ್ಷರ ಅನುಮತಿಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಿದರು. ಒಟ್ಟು ಇಪ್ಪತ್ಮೂರು ರಾಜಕೀಯ ಪಕ್ಷಗಳ ಮೂವತ್ತು(30) ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

17ನೇ ಲೋಕಸಭೆಯ 14ನೇ ಅಧಿವೇಶನ ಮತ್ತು ರಾಜ್ಯಸಭೆಯ 262ನೇ ಅಧಿವೇಶನದಲ್ಲಿ ಕೈಗೆತ್ತಿಕೊಳ್ಳಬಹುದಾದ ಮಸೂದೆಗಳ ಪಟ್ಟಿ ಹೀಗಿದೆ.

(ಎ) - ಶಾಸಕಾಂಗ ವ್ಯವಹಾರ:-

1. ರದ್ದತಿ ಮತ್ತು ತಿದ್ದುಪಡಿ ಮಸೂದೆ, 2023, ಲೋಕಸಭೆಯು ಅಂಗೀಕರಿಸಿದಂತೆ.

2. ವಕೀಲರ (ತಿದ್ದುಪಡಿ) ಮಸೂದೆ, 2023, ರಾಜ್ಯಸಭೆಯು ಅಂಗೀಕರಿಸಿದಂತೆ.

3. ನಿಯತಕಾಲಿಕಗಳ ಪತ್ರಿಕಾ ಮತ್ತು ನೋಂದಣಿ ಮಸೂದೆ, 2023, ರಾಜ್ಯಸಭೆಯು ಅಂಗೀಕರಿಸಿದಂತೆ.

4. ಸಂವಿಧಾನ (ಜಮ್ಮು ಮತ್ತು ಕಾಶ್ಮೀರ) ಪರಿಶಿಷ್ಟ ಜಾತಿಗಳ ಆದೇಶ (ತಿದ್ದುಪಡಿ) ಮಸೂದೆ, 2023

5. ಸಂವಿಧಾನ (ಜಮ್ಮು ಮತ್ತು ಕಾಶ್ಮೀರ) ಪರಿಶಿಷ್ಟ ಪಂಗಡಗಳ ಆದೇಶ (ತಿದ್ದುಪಡಿ) ಮಸೂದೆ, 2023

6. ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ, 2023

7. ಜಮ್ಮು ಮತ್ತು ಕಾಶ್ಮೀರ ಮರುರೂಪಿಸುವಿಕೆ (ತಿದ್ದುಪಡಿ) ಮಸೂದೆ, 2023

8. ಭಾರತೀಯ ನ್ಯಾಯ ಸಂಹಿತಾ, 2023

9. ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023

10. ಭಾರತೀಯ ಸಾಕ್ಷಿ ಅಧಿನಿಯಮ್, 2023

11. ಅಂಚೆ ಕಚೇರಿ ಮಸೂದೆ( ಪೋಸ್ಟ್ ಆಫೀಸ್ ಬಿಲ್), 2023

12. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರು (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ, 2023

13. ಬಾಯ್ಲರ್ ಬಿಲ್, 2023

14. ತೆರಿಗೆಗಳ ತಾತ್ಕಾಲಿಕ ಸಂಗ್ರಹ ಮಸೂದೆ, 2023

15. ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಎರಡನೇ ತಿದ್ದುಪಡಿ) ಮಸೂದೆ 2023

16. ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ, 2023

17. ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ, 2023

18. ದೆಹಲಿ ಕಾನೂನುಗಳ ರಾಷ್ಟ್ರೀಯ ರಾಜಧಾನಿ ಪ್ರದೇಶ (ವಿಶೇಷ ನಿಬಂಧನೆಗಳು) ಎರಡನೇ (ತಿದ್ದುಪಡಿ) ಮಸೂದೆ, 2023

19. ಕೇಂದ್ರೀಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಮಸೂದೆ, 2023

(ಬಿ) – ಹಣಕಾಸಿನ ವ್ಯವಹಾರ:-

1. 2023-24ರ ಅನುದಾನಕ್ಕಾಗಿ ಪೂರಕ ಬೇಡಿಕೆಗಳ ಮೊದಲ ಬ್ಯಾಚ್‌ ನ ಪ್ರಸ್ತುತಿ, ಚರ್ಚೆ ಮತ್ತು ಮತದಾನ ಮತ್ತು ಸಂಬಂಧಿತ ವಿನಿಯೋಗ ಮಸೂದೆಯ ಪರಿಚಯ, ಪರಿಗಣನೆ ಮತ್ತು ಅಂಗೀಕಾರ.

2. 2020-21 ರ ಹೆಚ್ಚುವರಿ ಅನುದಾನಕ್ಕಾಗಿ ಬೇಡಿಕೆಗಳ ಪ್ರಸ್ತುತಿ, ಚರ್ಚೆ ಮತ್ತು ಮತದಾನ ಮತ್ತು ಸಂಬಂಧಿತ ವಿನಿಯೋಗ ಮಸೂದೆಯ ಪರಿಚಯ, ಪರಿಗಣನೆ ಮತ್ತು ಅಂಗೀಕಾರ.

 

*****

 


(Release ID: 1981979) Visitor Counter : 154