ಕಲ್ಲಿದ್ದಲು ಸಚಿವಾಲಯ
ನವೆಂಬರ್ ನಲ್ಲಿ ಕ್ಯಾಪ್ಟಿವ್ (ಬಂಧಿತ) ಮತ್ತು ಕಮರ್ಷಿಯಲ್ ಕಲ್ಲಿದ್ದಲು ಬ್ಲಾಕ್ ಗಳಿಂದ ಅತಿ ಹೆಚ್ಚು ಕಲ್ಲಿದ್ದಲು ರವಾನೆ
ಉತ್ಪಾದನೆ ಮತ್ತು ರವಾನೆ ಕ್ರಮವಾಗಿ ಶೇ.37 ರಷ್ಟು ಮತ್ತು ಶೇ.55 ರಷ್ಟು ಹೆಚ್ಚಳ
प्रविष्टि तिथि:
02 DEC 2023 12:37PM by PIB Bengaluru
ನವೆಂಬರ್ 2023 ರಲ್ಲಿ ಕ್ಯಾಪ್ಟಿವ್ / ವಾಣಿಜ್ಯ ಕಲ್ಲಿದ್ದಲು ಗಣಿಗಳಿಂದ ಕಲ್ಲಿದ್ದಲು ಉತ್ಪಾದನೆ 11.94 ದಶಲಕ್ಷ ಟನ್ (ಎಂಟಿ) ಆಗಿದ್ದು, 2022 ರ ನವೆಂಬರ್ ನಲ್ಲಿ 8.74 ಮೆಟ್ರಿಕ್ ಟನ್ ಗೆ ಹೋಲಿಸಿದರೆ ಶೇ. 37 ಬೆಳವಣಿಗೆಯಾಗಿದೆ. ಅದೇ ಸಮಯದಲ್ಲಿ, 2023 ರ ನವೆಂಬರ್ ನಲ್ಲಿ ಕ್ಯಾಪ್ಟಿವ್ / ವಾಣಿಜ್ಯ ಕಲ್ಲಿದ್ದಲು ಗಣಿಗಳಿಂದ ಕಲ್ಲಿದ್ದಲು ರವಾನೆ 12.92 ಮೆಟ್ರಿಕ್ ಟನ್ ಆಗಿದ್ದು, ಹಿಂದಿನ ವರ್ಷದ 8.36 ಮೆಟ್ರಿಕ್ ಟನ್ ಗೆ ಹೋಲಿಸಿದರೆ ಶೇ.55 ರಷ್ಟು ಬೆಳವಣಿಗೆಯಾಗಿದೆ. 2023 ರ ನವೆಂಬರ್ ತಿಂಗಳಲ್ಲಿ ಅಂತಹ ಗಣಿಗಳಿಂದ ಸರಾಸರಿ ದೈನಂದಿನ ಕಲ್ಲಿದ್ದಲು ರವಾನೆಯು ದಿನಕ್ಕೆ 4.3 ಲಕ್ಷ ಟನ್ ಗಳೊಂದಿಗೆ ಅತ್ಯಧಿಕವಾಗಿದೆ.
2023 ರ ಏಪ್ರಿಲ್ ನಿಂದ ನವೆಂಬರ್ ಅವಧಿಯಲ್ಲಿ ಕಲ್ಲಿದ್ದಲು ಉತ್ಪಾದನೆ ಮತ್ತು ಕ್ಯಾಪ್ಟಿವ್ ಮತ್ತು ವಾಣಿಜ್ಯ ಕಲ್ಲಿದ್ದಲು ನಿಕ್ಷೇಪಗಳಿಂದ ರವಾನೆ ಗಮನಾರ್ಹ ಬೆಳವಣಿಗೆಯನ್ನು ತೋರಿಸಿದೆ. 2023 ರ ಏಪ್ರಿಲ್ 1 ರಿಂದ 2023 ರ ನವೆಂಬರ್ 30 ರ ಅವಧಿಯಲ್ಲಿ ಕ್ಯಾಪ್ಟಿವ್ ಮತ್ತು ವಾಣಿಜ್ಯ ಕಲ್ಲಿದ್ದಲು ಗಣಿಗಳಿಂದ ಒಟ್ಟು ಕಲ್ಲಿದ್ದಲು ಉತ್ಪಾದನೆ ಸುಮಾರು 83.90 ಮೆಟ್ರಿಕ್ ಟನ್ ಆಗಿದ್ದರೆ, ಒಟ್ಟು ಕಲ್ಲಿದ್ದಲು ರವಾನೆ 89.67 ಮೆಟ್ರಿಕ್ ಟನ್ ಆಗಿದ್ದು, ಇದು 2022-23 ರ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಕ್ರಮವಾಗಿ ಶೇ.24 ರಷ್ಟು ಮತ್ತು ಶೇ.31 ರಷ್ಟು ಬೆಳವಣಿಗೆಯನ್ನು ಸೂಚಿಸುತ್ತದೆ. ಕಲ್ಲಿದ್ದಲು ಉತ್ಪಾದನೆಯಲ್ಲಿ ಅತ್ಯಧಿಕ ಹೆಚ್ಚಳವು ನಿಯಂತ್ರಿತವಲ್ಲದ ವಲಯ ಮತ್ತು ವಾಣಿಜ್ಯ ಕಲ್ಲಿದ್ದಲು ಗಣಿಗಳಿಂದ ಕ್ರಮವಾಗಿ ಶೇ.101 ರಷ್ಟು ಮತ್ತು ಶೇ.98 ರಷ್ಟು ಬೆಳವಣಿಗೆಯೊಂದಿಗೆ ಕಂಡುಬಂದಿದೆ.
ಕಲ್ಲಿದ್ದಲು ಉತ್ಪಾದನೆ ಮತ್ತು ರವಾನೆಯ ಗುರಿಯನ್ನು ಸಾಧಿಸಲು ಸಚಿವಾಲಯ ಬದ್ಧವಾಗಿದೆ, ಇದು ಭಾರತದ ಇಂಧನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ನಿರ್ಣಾಯಕ ಹೆಜ್ಜೆಯಾಗಿದೆ.
***
(रिलीज़ आईडी: 1981955)
आगंतुक पटल : 134