ರಾಷ್ಟ್ರಪತಿಗಳ ಕಾರ್ಯಾಲಯ

ರಾಷ್ಟ್ರಪತಿಯವರ ಬಣ್ಣವನ್ನು ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜ್, ಪುಣೆಗೆ ಭಾರತದ ರಾಷ್ಟ್ರಪತಿಯವರು ಪ್ರದಾನಿಸಿದರು 

Posted On: 01 DEC 2023 11:33AM by PIB Bengaluru

ಪುಣೆಯಲ್ಲಿರುವ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿಗೆ ರಾಷ್ಟ್ರಪತಿಯವರ ಬಣ್ಣವನ್ನು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಡಿಸೆಂಬರ್ 1, 2023) ಪ್ರಸ್ತುತಪಡಿಸಿದರು. ವಿಡಿಯೊ ಸಮಾವೇಶ ಮೂಲಕ ಕಂಪ್ಯೂಟೇಶನಲ್ ಮೆಡಿಸಿನ್ ಸಶಸ್ತ್ರ ಪಡೆಗಳ ಕೇಂದ್ರ 'ಪ್ರಜ್ಞಾ'ವನ್ನು ರಾಷ್ಟ್ರಪತಿಯವರು ಉದ್ಘಾಟಿಸಿದರು.

ಸಮಾರಂಭದಲ್ಲಿ ಮಾತನಾಡಿದ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು, “ವೈದ್ಯಕೀಯ ಶಿಕ್ಷಣದಲ್ಲಿ ಅತ್ಯುನ್ನತ ಗುಣಮಟ್ಟದ ಸಂಸ್ಥೆಯಾಗಿ ಎ.ಎಫ್.ಎಂ.ಸಿ ಖ್ಯಾತಿ ಗಳಿಸಿದೆ. ಈ ಸಂಸ್ಥೆಯ ಪದವೀಧರರು ನಮ್ಮ ರಾಷ್ಟ್ರೀಯ ಗಡಿಗಳನ್ನು ಮೀರಿ ಯುದ್ಧ, ದಂಗೆ ವಿರುದ್ಧ ಕಾರ್ಯಾಚರಣೆಗಳು, ನೈಸರ್ಗಿಕ ವಿಪತ್ತುಗಳು ಮತ್ತು ಸಾಂಕ್ರಾಮಿಕ ರೋಗಗಳ ಮುಖಾಂತರ ತಮ್ಮ ಸಮರ್ಪಿತ ಸೇವೆಯ ಮೂಲಕ ಸಂಪೂರ್ಣ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ” ಎಂದು ಹೇಳಿದರು.

“ಎ.ಎಫ್.ಎಂ.ಸಿ.ಯಿಂದ ಪದವಿ ಪಡೆದ ಅನೇಕ ಮಹಿಳಾ ಕೆಡೆಟ್ಗಳು ಸಶಸ್ತ್ರ ಪಡೆಗಳ ವೈದ್ಯಕೀಯ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ ಮತ್ತು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರಿಂದ ಸ್ಫೂರ್ತಿ ಪಡೆದು ಹೆಚ್ಚಿನ ಮಹಿಳೆಯರು ಸಶಸ್ತ್ರ ಪಡೆಗಳಲ್ಲಿ ತಮ್ಮ ವೃತ್ತಿಪರ ಜೀವನವನ್ನು ಆಯ್ಕೆ ಮಾಡಲು ತೊಡಗಿದ್ದಾರೆ” ಎಂದು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ವಿಶ್ವಾಸ ವ್ಯಕ್ತಪಡಿಸಿದರು.

“ಔಷಧ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ, ನಿಖರ ಔಷಧ, 3ಡಿ ಪ್ರಿಂಟಿಂಗ್, ಟೆಲಿಮೆಡಿಸಿನ್ ಮತ್ತು ಇತರ ತಂತ್ರಜ್ಞಾನಗಳ ಬಳಕೆಯನ್ನು ಇಂದು ನಾವು ನೋಡುತ್ತಿದ್ದೇವೆ. ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು ಸೈನಿಕರನ್ನು ಉತ್ತಮ ಆರೋಗ್ಯದಲ್ಲಿರಿಸಲು ಮತ್ತು ಯಾವಾಗಲೂ ಯುದ್ಧಕ್ಕೆ ಸಿದ್ಧವಾಗಿರಲು ಪ್ರಮುಖ ಕೊಡುಗೆ ನೀಡುತ್ತವೆ. ಆದ್ದರಿಂದ, ನಮ್ಮ ಮೂರು ಸೈನಿಕ ಸೇವೆಗಳ ಎಲ್ಲಾ ಸಿಬ್ಬಂದಿಯ ವೈದ್ಯಕೀಯ ಚಿಕಿತ್ಸೆಯು ಅತ್ಯುನ್ನತ ಗುಣಮಟ್ಟದಲ್ಲಿದೆ ಎಂಬುದು ನಮಗೆಲ್ಲರಿಗೂ ಬಹಳ ಸಂತೋಷದ ವಿಷಯವಾಗಿದೆ” ಎಂದು ರಾಷ್ಟ್ರಪತಿಯವರು  ಹೇಳಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗೆ ಒತ್ತು ನೀಡುವಂತೆ ಮತ್ತು ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಅವರು ಎ.ಎಫ್.ಎಂ.ಸಿ ತಂಡಕ್ಕೆ ಸಲಹೆ ರಾಷ್ಟ್ರಪತಿಯವರು ನೀಡಿದರು.  ಎ.ಎಫ್.ಎಂ.ಸಿ. ತಂಡವು ತಮ್ಮ ಎಲ್ಲಾ ಕೆಲಸಗಳಲ್ಲಿ ಶ್ರೇಷ್ಠತೆಗಾಗಿ ಸದಾ ಶ್ರಮಿಸುವುದನ್ನು ಮುಂದುವರಿಸುತ್ತದೆ ಎಂದು ರಾಷ್ಟ್ರಪತಿಯವರು  ವಿಶ್ವಾಸ ವ್ಯಕ್ತಪಡಿಸಿದರು.

http://ಭಾರತದ ರಾಷ್ಟ್ರಪತಿಯವರ ಭಾಷಣವನ್ನು ವೀಕ್ಷಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ:- 



(Release ID: 1981533) Visitor Counter : 74