ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner
1 8

ಶಾಂತಿಯ ಆಚರಣೆ: 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್ಎಫ್ಐ-54) ಪ್ರತಿಷ್ಠಿತ ʻಐಸಿಎಫ್‌ಟಿ-ಯುನೆಸ್ಕೋ ಗಾಂಧಿ ಪದಕʼಕ್ಕಾಗಿ ಹತ್ತು ಚಲನಚಿತ್ರಗಳು ಸ್ಪರ್ಧೆಯಲ್ಲಿವೆ


ಮಹಾತ್ಮ ಗಾಂಧಿಯವರ ಕಾಲಾತೀತ ಆದರ್ಶಗಳನ್ನು ಒಳಗೊಂಡಿರುವ ʻಯುನೆಸ್ಕೋ ಐಸಿಎಫ್‌ಟಿʼ ಚಲನಚಿತ್ರಗಳು 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶಾಂತಿ, ಸಹಿಷ್ಣುತೆ, ಅಹಿಂಸೆ ಮತ್ತು ಸಹಾನುಭೂತಿಯ ಸಂದೇಶವಾಹಕವಾಗಿ ಹೊರಹೊಮ್ಮಲಿವೆ

ಗೋವಾ, 23 ನವೆಂಬರ್ 2023

 

54ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ(ಐಎಫ್ಎಫ್ಐ) ಪ್ರತಿಷ್ಠಿತ ʻಐಸಿಎಫ್‌ಟಿ- ಯುನೆಸ್ಕೋ ಗಾಂಧಿ ಪದಕʼಕ್ಕಾಗಿ ವಿಶ್ವದ ನಾನಾ ಭಾಗಗಳಿಂದ ನಾಮನಿರ್ದೇಶನಗೊಂಡ ಮತ್ತು ಸ್ಪರ್ಧಿಸುತ್ತಿರುವ ಹತ್ತು ಚಲನಚಿತ್ರಗಳನ್ನು ವಿವಿಧ ಸ್ಥಳಗಳಲ್ಲಿ ನಡೆಯುತ್ತಿರುವ ಚಲನಚಿತ್ರೋತ್ಸವ ಪ್ರದರ್ಶಿಸಲಾಗುತ್ತಿದೆ. ʻಐಸಿಎಫ್‌ಟಿ-ಯುನೆಸ್ಕೋ ಗಾಂಧಿ ಪದಕʼ ವಿಭಾಗವು ಮಹಾತ್ಮ ಗಾಂಧಿಯವರ ಕಾಲಾತೀತ ಆದರ್ಶಗಳನ್ನು ಒಳಗೊಂಡಿದೆ. ಯುನೆಸ್ಕೋ ಅನುಮೋದನೆ ಪಡೆದಿರುವ ಇದು, ಗಾಂಧಿಯವರ ತತ್ವಗಳನ್ನು ಪ್ರತಿಧ್ವನಿಸುವುದರ ಜೊತೆಗೆ ಸಾಮರಸ್ಯ, ತಿಳಿವಳಿಕೆ ಮತ್ತು ಶಾಂತಿಯು ನೆಲೆಯೂರಿರುವ ಪ್ರಪಂಚ ಇರಬೇಕೆಂದು ಪ್ರತಿಪಾದಿಸುತ್ತದೆ.

ಸ್ಪರ್ಧೆಯ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದ ಈ ಚಲನಚಿತ್ರ ಮೇರುಕೃತಿಗಳು ದಾರಿದೀಪಗಳಾಗಿ ಎದ್ದು ಕಾಣುತ್ತವೆ. ಶಾಂತಿ, ಸಹಿಷ್ಣುತೆ, ಅಹಿಂಸೆ ಮತ್ತು ಸಹಾನುಭೂತಿಯ ತತ್ವಗಳ ಕಡೆಗೆ ನಮ್ಮ ಪ್ರಜ್ಞೆಯನ್ನು ಸೆಳೆಯುತ್ತವೆ. ವಿಶೇಷವಾಗಿ ಸಂಘರ್ಷ ಮತ್ತು ಅವ್ಯವಸ್ಥೆಯಿಂದ ಸುತ್ತುವರೆದಿರುವ ಜಗತ್ತಿನಲ್ಲಿ ಇವುಗಳ ಪ್ರಾಶಸ್ತ್ಯ ಹೆಚ್ಚಿದೆ.

ಈ ವರ್ಷ, ವಿಶ್ವದ ವಿವಿಧ ಮೂಲೆಗಳಿಂದ ಹತ್ತು ಗಮನಾರ್ಹ ಚಲನಚಿತ್ರಗಳು ಈ ಪ್ರಶಸ್ತಿಗಾಗಿ ಸ್ಪರ್ಧಿಸುತ್ತವೆ:

1. ಮುಯಾದ್ ಅಲಯಾನ್ ಅವರ 'ಎ ಹೌಸ್ ಇನ್ ಜೆರುಸಲೇಮ್' (ಪ್ಯಾಲೆಸ್ತೀನ್‌, ಬ್ರಿಟನ್‌, ಜರ್ಮನಿ, ನೆದರ್ಲ್ಯಾಂಡ್ಸ್, ಕತಾರ್, 2022).

ಈ ಚಿತ್ರವು ಜೆರುಸಲೇಂನಲ್ಲಿನ ಸಂಘರ್ಷಾತ್ಮಕ ಸಂಸ್ಕೃತಿಗಳು ಮತ್ತು ನಂಬಿಕೆಗಳ ಹಿನ್ನೆಲೆಯಲ್ಲಿ ಮಾನವ ಸಂಬಂಧಗಳ ಸಂಕೀರ್ಣತೆಯನ್ನು ಅನ್ವೇಷಿಸುತ್ತದೆ.

ಈ ಚಿತ್ರವು ನಗರದ ಐತಿಹಾಸಿಕ ಮತ್ತು ರಾಜಕೀಯ ಉದ್ವಿಗ್ನತೆಗಳ ನಡುವೆ ವ್ಯಕ್ತಿಗಳ ಹೋರಾಟಗಳು ಮತ್ತು ಆಕಾಂಕ್ಷೆಗಳ ಮೇಲೆ ಬೆಳಕು ಚೆಲ್ಲುತ್ತದೆ.

 

2. ಟಿನಾಟಿನ್ ಕಜ್ರಿಶ್ವಿಲಿ ಅವರ 'ಸಿಟಿಜನ್ ಸೇಂಟ್' (ಜಾರ್ಜಿಯಾ, 2023).

ಜಾರ್ಜಿಯಾದಲ್ಲಿ ಆರಂಭವಾಗುವ ಈ ಚಿತ್ರವು ಸಾಮಾಜಿಕ ಸವಾಲುಗಳ ನಡುವೆ ನೈತಿಕ ಸಮಗ್ರತೆಯನ್ನು ಎತ್ತಿಹಿಡಿಯಲು ಪ್ರಯತ್ನಿಸುವ ವ್ಯಕ್ತಿಯ ಜೀವನದ ಕಥಾನಕವನ್ನು ಒಳಗೊಂಡಿದೆ.

ಇದು ವೈಯಕ್ತಿಕ ತ್ಯಾಗ ಮತ್ತು ನೀತಿಯ ಅನ್ವೇಷಣೆಯ ಮಾರ್ಮಿಕ ಚಿತ್ರಣವನ್ನು ನೀಡುತ್ತದೆ.

 

3. ಆಂಥೋನಿ ಚೆನ್ ಅವರ 'ಡ್ರಿಫ್ಟ್' (ಬ್ರಿಟನ್‌, ಫ್ರಾನ್ಸ್, ಗ್ರೀಸ್, 2023).

ವಿವಿಧ ದೇಶಗಳಲ್ಲಿನ ಜೀವನಗಳನ್ನು ಬೆಸೆಯುವ ನಿರೂಪಣೆಯನ್ನು ಒಳಗೊಂಡ ಈ ಚಿತ್ರವು ಅಸ್ಮಿತೆ, ಸಂಬಂಧಗಳು ಮತ್ತು ಸಂಪರ್ಕಕ್ಕಾಗಿ ಮಾನವ ಅನ್ವೇಷಣೆಯ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ.

ಜೀವನದ ಅನಿಶ್ಚಿತತೆಗಳ ನಡುವೆ ಸಾಗುವ ಪ್ರಯಾಣವು ಹೇಗೆ ಅನಿರೀಕ್ಷಿತ ಬಂಧಗಳನ್ನು ಮೂಡಿಸುತ್ತದೆ ಎಂಬುದನ್ನು ಈ ಚಿತ್ರವು ಸೆರೆ ಹಿಡಿಯುತ್ತದೆ

 

4. ಅಪೊಲಿನ್ ಟ್ರೋರೆ ಅವರ "ಇಟ್ಸ್ ಸಿರಾ" (ಫ್ರಾನ್ಸ್, ಜರ್ಮನಿ, ಸೆನೆಗಲ್, 2023).

ಭೌಗೋಳಿಕ ಮತ್ತು ಸಾಂಸ್ಕೃತಿಕ ಗಡಿಗಳನ್ನು ಮೀರಿದ ಪರಸ್ಪರ ಸಮಾನ ಮಾನವ ಅನುಭವಗಳನ್ನು ಎತ್ತಿ ಹಿಡಿಯುವ ಈ ಚಿತ್ರವು ಬಹು-ಸಾಂಸ್ಕೃತಿಕ ದೃಷ್ಟಿಕೋನದ ಮೂಲಕ ಸ್ಥಿತಿಸ್ಥಾಪಕತ್ವದ ಕಥಾನಕವನ್ನು ಬಿಚ್ಚಿಡುತ್ತದೆ.

.

 

5. ಓವ್ ಮಸ್ಟಿಂಗ್ ಅವರ 'ಕಾಲೆವ್' (ಎಸ್ಟೋನಿಯಾ, 2022).

ಎಸ್ಟೋನಿಯಾದಲ್ಲಿ ಆರಂಭವಾಗುವ ಈ ಚಿತ್ರವು ದೇಶದ ಸಾಂಸ್ಕೃತಿಕ ಸಾರದಲ್ಲಿ ಬೇರೂರಿರುವ ಕಥೆಯನ್ನು ಸಂಕೀರ್ಣವಾಗಿ ಹೆಣೆಯುತ್ತದೆ.

ಇದು ರಾಷ್ಟ್ರೀಯ ಇತಿಹಾಸದೊಂದಿಗೆ ಬೆಸೆದುಕೊಂಡಿರುವ ವೈಯಕ್ತಿಕ ಪ್ರಯಾಣಗಳನ್ನು ಚಿತ್ರಿಸುತ್ತದೆ, ವೈಯಕ್ತಿಕ ಮತ್ತು ಸಾಮೂಹಿಕ ಅಸ್ಮಿತೆಗಳ ಪರಸ್ಪರ ಹೆಣೆದುಕೊಂಡ ರಚನೆಯನ್ನು ಪ್ರತಿಬಿಂಬಿಸುತ್ತದೆ.

 

6. ಪಾಲ್ ಫೌಜಾನ್ ಅಗಸ್ಟಾ ಅವರ 'ದಿ ಪ್ರೈಜ್' (ಇಂಡೋನೇಷ್ಯಾ, 2022).

ಮಹತ್ವಾಕಾಂಕ್ಷೆಯ ಸಂಕೀರ್ಣತೆಗಳು ಮತ್ತು ಯಶಸ್ಸಿನ ಅನ್ವೇಷಣೆಗೆ ಧುಮುಕುವ ಇಂಡೋನೇಷ್ಯಾದ ಕಥಾನಕ ಇದಾಗಿದೆ.

ಅಸ್ಮಿತೆ ಮತ್ತು ಸಾಧನೆಯ ಅನ್ವೇಷಣೆಯಲ್ಲಿ ವ್ಯಕ್ತಿಗಳು ಎದುರಿಸುತ್ತಿರುವ ನೈತಿಕ ಸಂದಿಗ್ಧತೆಯ ಮೇಲೆ ಈ ಚಿತ್ರವು ಬೆಳಕು ಚೆಲ್ಲುತ್ತದೆ.

 

7. ಜಾನ್ ಟಾರ್ನ್‌ಬ್ಲಾಡ್ ಅವರ 'ದಿ ಶುಗರ್ ಎಕ್ಸ್‌ಪರಿಮೆಂಟ್' (ಸ್ವೀಡನ್, 2022).

ಸ್ವೀಡನ್‌ನಲ್ಲಿ ಆರಂಭವಾಗುವ ಈ ಚಿತ್ರವು ಸಾಮಾಜಿಕ ನಿಯಮಗಳು ಮತ್ತು ವೈಯಕ್ತಿಕ ಆಯ್ಕೆಗಳ ಮೇಲೆ ಬೆಳಕು ಚೆಲ್ಲುತ್ತದೆ.

ಸಾಮಾಜಿಕ ರಚನೆಗಳೊಂದಿಗಿನ ವೈಯಕ್ತಿಕ ಪ್ರಯೋಗಗಳು ಸ್ಥಾಪಿತ ಮಾದರಿಗಳಿಗೆ ಹೇಗೆ ಸವಾಲೊಡ್ಡಬಹುದು ಎಂಬುದನ್ನು ಇದು ಅನ್ವೇಷಿಸುತ್ತದೆ.

 

8. ರಾಕೇಶ್ ಚತುರ್ವೇದಿ ಓಂ ಅವರ 'ಮಂಡಲಿ' (ಭಾರತ, 2023).

ಭಾರತದ ಆಳ ಬೇರುಗಳನ್ನು ಒಳಗೊಂಡಿರುವ ಈ ಚಿತ್ರವು ಸ್ನೇಹ, ನಿಷ್ಠೆ ಮತ್ತು ವೈಯಕ್ತಿಕ ಬೆಳವಣಿಗೆಯ ಪರಧಿಗಳ ಮೂಲಕ ಹಾದುಹೋಗುತ್ತದೆ.

ಇದು ಸಂಬಂಧಗಳ ಪರಿವರ್ತಕ ಶಕ್ತಿ ಮತ್ತು ಅವುಗಳಿಂದ ವೇಗ ಪಡೆಯುವ ಪ್ರಯಾಣಗಳನ್ನು ಒಳಗೊಂಡಿದೆ.

 

9. ವಿಷ್ಣು ಶಶಿ ಶಂಕರ್ ಅವರ 'ಮಾಲಿಕಾಪುರಂ' (ಭಾರತ, 2022).

ಭಾರತದ ಕೇರಳದ ಸಾಂಸ್ಕೃತಿಕ ಪರಿಸರದಲ್ಲಿ ನೆಲೆಗೊಂಡಿರುವ ಈ ಚಿತ್ರವು ಸಾಮಾಜಿಕ ನಿರೀಕ್ಷೆಗಳ ನಡುವೆ ಸಂಬಂಧಗಳ ಜಟಿಲತೆಯನ್ನು ಚಿತ್ರಿಸುತ್ತದೆ.

ಇದು ಮಾನವ ಸಂಪರ್ಕಗಳ ಭಾವನಾತ್ಮಕ ವಿಚಾರ  ಮತ್ತು ಅವುಗಳೊಳಗೆ ಉದ್ಭವಿಸುವ ಸಂಘರ್ಷಗಳನ್ನು ಅನ್ವೇಷಿಸುತ್ತದೆ.

 

10. ಸಯಂತನ್ ಘೋಸನ್ ಅವರ 'ರವೀಂದ್ರ ಕಬ್ಯಾ ರಹಸ್ಯ' (ಭಾರತ, 2023).

ಭಾರತದ ಬಂಗಾಳದ ಹಿನ್ನೆಲೆಯಲ್ಲಿ ನಿರ್ಮಿಸಲಾದ ಈ ಚಿತ್ರವು ರವೀಂದ್ರನಾಥ ಟ್ಯಾಗೋರ್ ಅವರ ಕಾವ್ಯದ ಸಾರವನ್ನು ಒಳಗೊಂಡಿದೆ,

ಮಾನವ ಭಾವನೆಗಳು ಮತ್ತು ಸಂಬಂಧಗಳಲ್ಲಿ ಅಂತರ್ಗತವಾಗಿರುವ ರಹಸ್ಯಗಳನ್ನು ಅನಾವರಣಗೊಳಿಸುತ್ತದೆ.

 

ಈ ಚಿತ್ರ ರತ್ನಗಳು ಪ್ರೇಕ್ಷಕರನ್ನು ಆಕರ್ಷಿಸುವ ಭರವಸೆ ಮೂಡಿಸಿವೆ. ಜೊತೆಗೆ, ಸಾಮೂಹಿಕ ಕ್ರಿಯೆಗಳನ್ನು ಪ್ರೇರೇಪಿಸಲು, ಉತ್ತಮ ಜಗತ್ತನ್ನು ಹೊಂದಲು ಮತ್ತು ಮಾನವೀಯತೆಯ ಸಾರವನ್ನು ಆಚರಿಸಲು ನಮ್ಮ ಜಗತ್ತಿನಲ್ಲಿ "ಶಾಂತಿ"ಯ ಮಹತ್ವವನ್ನು ಆಳವಾಗಿ ಬಲಪಡಿಸುತ್ತವೆ.

ʻಐಸಿಎಫ್‌ಟಿ ಪ್ಯಾರಿಸ್ʼ ಮತ್ತು ಯುನೆಸ್ಕೋ ಸ್ಥಾಪಿಸಿದ ʻಗಾಂಧಿ ಪದಕʼವು ಮಹಾತ್ಮ ಗಾಂಧಿಯವರ ಶಾಂತಿ ಮತ್ತು ಅಹಿಂಸೆಯ ದೃಷ್ಟಿಕೋನವನ್ನು ಅತ್ಯುತ್ತಮವಾಗಿ ಪ್ರತಿಬಿಂಬಿಸುವ ಚಲನಚಿತ್ರಕ್ಕೆ ʻಐಎಫ್ಎಫ್ಐʼನಲ್ಲಿ ನೀಡುವ ವಾರ್ಷಿಕ ಗೌರವವಾಗಿದೆ. 1994ರಲ್ಲಿ ಪ್ರಾರಂಭವಾದಾಗಿನಿಂದ, ಈ ಶಾಶ್ವತ ಮೌಲ್ಯಗಳನ್ನು ಸಾಕಾರಗೊಳಿಸುವ ಚಲನಚಿತ್ರಗಳಿಗೆ ಈ ಪ್ರಶಸ್ತಿಯು ಸಂದಿದೆ.

 

* * *




(Release ID: 1979415) Visitor Counter : 133