ವಾರ್ತಾ ಮತ್ತು ಪ್ರಸಾರ ಸಚಿವಾಲಯ

54ನೇ ಐ ಎಫ್‌ ಎಫ್‌ ಐ ನ ಭಾರತೀಯ ಪನೋರಮಾ ಫೀಚರ್ ಫಿಲ್ಮ್ ವಿಭಾಗದ ಪ್ರದರ್ಶನ ಮಲಯಾಳಂ ಚಲನಚಿತ್ರ ಆಟ್ಟಂ ಮೂಲಕ ಆರಂಭ


ಐ ಎಫ್‌ ಎಫ್‌ ಐ ನಲ್ಲಿ ಉದ್ಘಾಟನಾ ಚಿತ್ರದ ನಿರ್ದೇಶಕನಾಗಿ ಅದ್ಭುತ ಗೌರವ ದೊರಕಿದೆ: ನಿರ್ದೇಶಕ ಆನಂದ್ ಏಕರ್ಶಿ

ಆಟ್ಟಂ ತುಂಬಾ ವೈಯಕ್ತಿಕವಾದುದು, ಇದೊಂದು ಕುಟುಂಬದ ಯೋಜನೆಯಾಗಿದೆ, ನನ್ನ ಹೃದಯಕ್ಕೆ ಹತ್ತಿರವಾದುದು: ನಟ ವಿನಯ್ ಫೋರ್ಟ್

Posted On: 22 NOV 2023 2:43PM by PIB Bengaluru

54 ನೇ ಐ ಎಫ್‌ ಎಫ್‌ ಐ ನ ಭಾರತೀಯ ಪನೋರಮಾ ವಿಭಾಗವು ಚಲನಚಿತ್ರ-ಪ್ರೇಮಿಗಳಿಗೆ ಅತ್ಯುತ್ತಮವಾದ ಸಿನಿಮೀಯ ಅನುಭವವನ್ನು ನೀಡುತ್ತದೆ, ಇದು ನಿನ್ನೆ ಮಲಯಾಳಂ ಚಲನಚಿತ್ರ ಆಟ್ಟಂನೊಂದಿಗೆ ಪ್ರಾರಂಭವಾಯಿತು. ಆನಂದ್ ಏಕರ್ಶಿ ಅವರ ನಿರ್ದೇಶನದ ಆಟ್ಟಂ ಕೆಲವು ಅಹಿತಕರ ಸಂದರ್ಭಗಳಲ್ಲಿ ವ್ಯಕ್ತಿ ಮತ್ತು ಗುಂಪಿನ ನಡುವಿನ ಸಂಘರ್ಷಗಳನ್ನು ವಿವರಿಸುತ್ತದೆ.

ಗೋವಾದಲ್ಲಿ ನಡೆಯುತ್ತಿರುವ ಭಾರತದ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ಆಟ್ಟ ಚಿತ್ರದ ನಿರ್ದೇಶಕ ಆನಂದ್ ಏಕರ್ಶಿ, “ಚಿತ್ರದ ವಿಷಯವು ನಿರ್ದಿಷ್ಟವಾಗಿ ಯಾವುದೇ ಲಿಂಗ ಅಥವಾ ಪಿತೃಪ್ರಧಾನ ವ್ಯವಸ್ಥೆಗೆ ಸಂಬಂಧಿಸಿಲ್ಲ. ಇದು ವ್ಯಕ್ತಿ ಮತ್ತು ಗುಂಪಿನ ನಡುವಿನ ಸಂಘರ್ಷಗಳನ್ನು ಹೇಳುತ್ತದೆ. ಇಲ್ಲಿ ಗುಂಪು ಪುರುಷರದ್ದಾಗಿದೆ ಮತ್ತು ವ್ಯಕ್ತಿಯು ಮಹಿಳೆಯಾಗಿದ್ದಾರೆ.” ಎಂದು ಹೇಳಿದರು. ಕಥಾಹಂದರವು ಲಿಂಗ ಅಧ್ಯಯನಕ್ಕೆ ತೆರೆದುಕೊಳ್ಳುತ್ತದೆ, ಆದರೆ ಚಿತ್ರವು ಯಾವುದೇ ಪ್ರದೇಶ ಅಥವಾ ಲಿಂಗ ನಿರ್ದಿಷ್ಟವಾಗಿಲ್ಲ ಎಂದೂ ಅವರು ಹೇಳಿದರು.

https://static.pib.gov.in/WriteReadData/userfiles/image/22-3-1T6TV.jpg

ಡೈನಾಮಿಕ್ ಜೋಡಿಯಾದ ವಿನಯ್ ಫೋರ್ಟ್ ಮತ್ತು ಝರಿನ್ ಶಿಹಾಬ್ ನೇತೃತ್ವದ ತಾರಾಗಣದ 140 ನಿಮಿಷಗಳ ಅವಧಿಯ ಈ ಸಿನಿಮಾದ ನಿರ್ದೇಶನದ ಚುಕ್ಕಾಣಿಯನ್ನು ಏಕರ್ಶಿ ತೆಗೆದುಕೊಂಡಿದ್ದಾರೆ. ಚಿತ್ರದ ಕಥಾವಸ್ತುವಿನ ಬಗ್ಗೆ ಮಾತನಾಡಿದ ಅವರು, ಇದು ವ್ಯಕ್ತಿ ಮತ್ತು ಗುಂಪಿನ ನಡುವೆ ವಿಕಾಸಗೊಳ್ಳುತ್ತಿರುವ ಡೈನಾಮಿಕ್ ಅನ್ನು ಪ್ರಸ್ತುತಪಡಿಸುತ್ತದೆ ಎಂದು ಹೇಳಿದರು. "ಇದು 12 ಆಂಗ್ರಿ ಮೆನ್‌ ಸಿನಿಮಾದಿಂದ ಸ್ಫೂರ್ತಿ ಪಡೆದಿಲ್ಲ, ಬದಲಿಗೆ ಇದೊಂದು ಸಹಜ ಪ್ರಗತಿಯಾಗಿದೆ ಆದರೆ ಆ ಚಲನಚಿತ್ರಕ್ಕೆ ಹೋಲಿಸುವುದು ಒಂದು ಗೌರವವಾಗಿದೆ" ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಕೋವಿಡ್ ಸಾಂಕ್ರಾಮಿಕ ಅವಧಿಯಲ್ಲಿ ಸ್ನೇಹಿತರೊಂದಿಗೆ ಪ್ರವಾಸದಲ್ಲಿದ್ದಾಗ ಸಾಮಾನ್ಯ ಮಾತುಕತೆಯ ಸಮಯದಲ್ಲಿ ಚಿತ್ರದ ಕಲ್ಪನೆ ಮೂಡಿಬಂತು ಎಂದು ಈ ಚಲನಚಿತ್ರದ ಕಲ್ಪನೆ ಹುಟ್ಟಿಕೊಂಡ ಬಗೆಯನ್ನು ಅವರು ವಿವರಿಸಿದರು.

ಈ ಚಿತ್ರದ ಪರಿಕಲ್ಪನೆಯ ಕುರಿತು ಮಾತನಾಡಿದ ನಾಯಕ ನಟ ವಿನಯ್ ಫೋರ್ಟ್, ತಮ್ಮ 20 ವರ್ಷಗಳ ರಂಗಭೂಮಿ ಸ್ನೇಹಿತರ ಜೊತೆಗೆ ಪ್ರವಾಸದಲ್ಲಿದ್ದೆ,  ಅಲ್ಲಿ ನಾವು ನಮ್ಮ ಸ್ನೇಹ, ಒಗ್ಗಟ್ಟು ಮತ್ತು ಕಲೆಯನ್ನು ಯಾವುದಾದರೂ ರೀತಿಯಲ್ಲಿ ಹೇಳಲು ನಿರ್ಧರಿಸಿದೆವು ಮತ್ತು ಅದು ಒಂದು ಹಂತದಲ್ಲಿ ಸಿನಿಮಾ ಮಾಡುವ ನಿರ್ಧಾರಕ್ಕೆ ಕಾರಣವಾಯಿತು ಎಂದು ಹೇಳಿದರು. ನಮ್ಮ ಗುಂಪಿನಲ್ಲಿ ಅತ್ಯಂತ "ಸೃಜನಶೀಲ ಮತ್ತು ಚೆನ್ನಾಗಿ ಓದಿಕೊಂಡಿರುವ" ಆನಂದ್ ಅವರ ಮೇಲೆ ಅದರ ಜವಾಬ್ದಾರಿ ಬಿತ್ತು ಎಂದು ಫೋರ್ಟ್ ಹೇಳಿದರು. ಈ ಕಲ್ಪನೆಯು ಅಂತಿಮವಾಗಿ ಆಟ್ಟ ಚಿತ್ರದ ರೂಪವನ್ನು ಪಡೆಯಿತು,ಅಟ್ಟಂ ತುಂಬಾ ವೈಯಕ್ತಿಕವಾದುದು ಮತ್ತು ಇದು ನನ್ನ ಹೃದಯಕ್ಕೆ ಹತ್ತಿರವಾದ ಒಂದು ಕುಟುಂಬ ಯೋಜನೆಯಾಗಿದೆ ಎಂದು ಅವರು ಹೇಳಿದರು.

"ಪ್ರತಿಯೊಬ್ಬ ನಟನ ಸಾಮರ್ಥ್ಯ ಮತ್ತು ಮಿತಿಯನ್ನು ಅವರು ಅರ್ಥಮಾಡಿಕೊಂಡಿದ್ದಾರೆ ಮತ್ತು ವೀಕ್ಷಕರಾಗಿ ಅದನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ" ಎಂದು ಆನಂದ್‌ ನಿರ್ದೇಶನ ಕೌಶಲ್ಯವನ್ನು ಫೋರ್ಟ್ ಶ್ಲಾಘಿಸಿದರು. ನಟನಾಗಿ ಅವರನ್ನು ಪ್ರೇರೇಪಿಸಿದ್ದು ಯಾವುದು ಎಂಬ ಪ್ರಶ್ನೆಗೆ, "ಅದ್ಭುತವಾದ ಚಿತ್ರಕಥೆ, ಸವಾಲಿನ ಪಾತ್ರ ಮತ್ತು ಇತರ ಅಂಶಗಳು ಮುಖ್ಯವಾಗಿವೆ" ಎಂದು ಫೋರ್ಟ್ ಹೇಳಿದರು.

ಚಿತ್ರದ ಬಗ್ಗೆ ಮಾತನಾಡಿದ ನಟಿ ಝರಿನ್ ಶಿಹಾಬ್, "ಚಿತ್ರಕ್ಕೆ ಅದ್ಭುತವಾದ ಪ್ರತಿಕ್ರಿಯೆ ಬಂದಿದೆ" ಎಂದು ಹೇಳಿದರು. "ಚಿತ್ರಕ್ಕಾಗಿ ರಂಗಭೂಮಿ ಕಲಾವಿದರು ಒಟ್ಟಿಗೆ ಸೇರಿದ್ದು ಅದ್ಭುತವಾಗಿದೆ ಮತ್ತು ಆನಂದ್ ಅವರು ಪರದೆಯ ಮೇಲೆ ಕಥಾಹಂದರವನ್ನು ಹೆಚ್ಚಿಸಲು ನಾಟಕೀಯ ಸಾಧನಗಳು ಮತ್ತು ಅಂಶಗಳನ್ನು ಬಹಳ ಚೆನ್ನಾಗಿ ಬಳಸಿದ್ದಾರೆ." ಎಂದು ಹೇಳಿದರು.

ಒಂಬತ್ತು ನಟರಿಗೆ ಇದು ಚೊಚ್ಚಲ ಚಿತ್ರವಾಗಿದೆ ಮತ್ತು ರಂಗಭೂಮಿಯಿಂದ ಚಿತ್ರರಂಗಕ್ಕೆ ಪರಿವರ್ತನೆಯಾಗುವುದು ಒಂದು ಸವಾಲಿನ ಕೆಲಸ ಮತ್ತು ಒಂದು ಶಾಟ್‌ ಗಾಗಿ ನಟಿಸುವುದು ರಂಗಭೂಮಿ ನಟರಿಗೆ ಸವಾಲಾಗಿರುತ್ತದೆ. ಕ್ಯಾಮೆರಾ ಮತ್ತು ಸೆಟ್‌ ಗೆ ಒಗ್ಗಿಕೊಳ್ಳಲು ಚಿತ್ರೀಕರಣದ ಮೊದಲು 35 ದಿನಗಳು ರಿಹರ್ಸಲ್‌ ಮಾಡಲಾಯಿತು, ಆದ್ದರಿಂದ ರಿಹರ್ಸಲ್‌ ಗಳು ಅತ್ಯಂತ ಮುಖ್ಯವಾದ ವಿಷಯವಾದವು ಎಂದು ನಿರ್ದೇಶಕ ಏಕರ್ಶಿ ತಿಳಿಸಿದರು.

ಚಿತ್ರದ ಧ್ವನಿ ವಿನ್ಯಾಸಕ ರಂಗನಾಥ್ ರವಿ ಅವರು, ಒಂದೇ ಸ್ಥಳದಲ್ಲಿ 13 ನಟರೊಂದಿಗೆ ಚಿತ್ರೀಕರಣ ಮಾಡುವ ಸವಾಲುಗಳ ಬಗ್ಗೆ ಮಾತನಾಡಿದರು. ಆದರೆ ಧ್ವನಿ ವಿನ್ಯಾಸವು ಹೇಗೆ ಆಸಕ್ತಿದಾಯಕವಾಗಿತ್ತು, ಚಿತ್ರಕ್ಕೆ ಸೂಕ್ಷ್ಮವಾದ ಪದರವನ್ನು ಹೇಗೆ ಸೇರಿಸಿತು ಎಂಬ ಬಗ್ಗೆಯೂ ಅವರು ಹೇಳಿದರು.

ಆಟ್ಟ: ಈ ಡ್ರಾಮಾ ಚಲನಚಿತ್ರವು ಅರಂಗು ಎಂಬ ನಾಟಕ ತಂಡದ ಮಹಿಳೆ ಮತ್ತು ಹನ್ನೆರಡು ಪುರುಷರ ಸುತ್ತ ಸುತ್ತುತ್ತದೆ. ಈ ಹಿಂದೆ ವಿನಯ್ ನಿರ್ವಹಿಸಿದ ಪ್ರಮುಖ ಪಾತ್ರದಿಂದ ಬದಲಿಯಾಗಿದ್ದ ಹರಿಯ ಸ್ನೇಹಿತರಾದ ಕ್ರಿಸ್ ಮತ್ತು ಎಮಿಲಿ ಅವರಿಗೆ ಅವಕಾಶ ನೀಡಿದಾಗ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಅವಕಾಶವನ್ನು ಪಡೆಯುತ್ತಾರೆ. ನಾಟಕದ ಏಕೈಕ ಮಹಿಳಾ ಕಲಾವಿದೆ ಅಂಜಲಿ ವಿನಯ್‌ ನನ್ನು ಪ್ರೀತಿಸುತ್ತಾಳೆ ಮತ್ತು ಕ್ರಿಸ್ ಮತ್ತು ಎಮಿಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ಹರಿ ತನ್ನನ್ನು ಕೆಟ್ಟದಾಗಿ ನಡೆಸಿಕೊಂಡ ಎಂದು ತಿಳಿಸುತ್ತಾಳೆ. ವಿನಯ್ ಈ ಮಾಹಿತಿಯನ್ನು ಮದನ್‌ ನೊಂದಿಗೆ ಹಂಚಿಕೊಳ್ಳುವ ಮೂಲಕ ಹರಿಯ ನಿಜವಾದ ಬಣ್ಣವನ್ನು ಹೊರತರಲು ಪ್ರಯತ್ನಿಸುತ್ತಾನೆ, ಅವನು ಇದನ್ನು ತಂಡದ ಉಳಿದವರೊಂದಿಗೆ ಚರ್ಚಿಸಲು ಒಪ್ಪುತ್ತಾನೆ ಮತ್ತು ಅಂತಿಮವಾಗಿ ಹರಿಯನ್ನು ಹೊರಹಾಕುತ್ತಾನೆ. ಸ್ನೇಹವು ಅಪಾಯದಲ್ಲಿರುತ್ತದೆ, ಆದರೆ ಹಣಕಾಸಿನ ಪ್ರಯೋಜನಗಳು ಮತ್ತು ಯಶಸ್ಸನ್ನು ಬಹುಮಾನ ಮತ್ತು ಲಂಚ ನೀಡುವ ಸಾಧನವಾಗಿ ಬಳಸಲಾಗುತ್ತದೆ. ಘಟನೆಗಳು ಮುಂದುವರೆದಂತೆ, ಸತ್ಯಗಳು ಬಿಚ್ಚಿಕೊಳ್ಳುತ್ತಾ ವಾಸ್ತವವು ವಿಚಿತ್ರವಾಗಿ ಕಾಣುತ್ತದೆ.

https://static.pib.gov.in/WriteReadData/userfiles/image/22-3-2TPD6.jpg

ಪಾತ್ರವರ್ಗ ಮತ್ತು ಸಿಬ್ಬಂದಿ

ನಿರ್ದೇಶಕ: ಆನಂದ್ ಏಕರ್ಶಿ

ನಿರ್ಮಾಪಕ: ಜಾಯ್ ಮೂವಿ ಪ್ರೊಡಕ್ಷನ್ಸ್ ಎಲ್ ಎಲ್ ಪಿ

ಕಥೆ: ಆನಂದ್ ಏಕರ್ಶಿ

ಡಿಒಪಿ: ಅನುರುದ್ಧ್ ಅನೀಶ್

ಸಂಕಲನ: ಮಹೇಶ್ ಭುವನೇಂದ್ರ

ಪಾತ್ರವರ್ಗ: ವಿನಯ್ ಫೋರ್ಟ್, ಝರಿನ್ ಶಿಹಾಬ್

*****

 



(Release ID: 1978777) Visitor Counter : 119