ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

​​​​​​​ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ಏರ್ಪಟ್ಟ ವಿಬಿಎಸ್ ವೈ ಕಾರ್ಯಕ್ರಮಗಳಲ್ಲಿ ಕೃಷಿ ತಜ್ಞರ ಅನುಭವ ಆಲಿಸಲು ಮತ್ತು ಉಜ್ವಲ ಯೋಜನೆಗೆ ಆಧಾರ್ ದೃಢೀಕರಣ ಸೇವೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಮಹಿಳಾ ಫಲಾನುಭವಿಗಳು 


​​​​​​​ಡ್ರೋನ್‌ಗಳ ಮೂಲಕ ಕೀಟನಾಶಕ ಸಿಂಪಡಣೆಯ ಪ್ರದರ್ಶನ 

Posted On: 21 NOV 2023 3:50PM by PIB Bengaluru

ಕೇಂದ್ರ ಸರ್ಕಾರವು ಬಡತನ ಅಂಚಿನಲ್ಲಿರುವ ಮಹಿಳೆಯರನ್ನು ಸಬಲೀಕರಣಗೊಳಿಸುವ ಉತ್ಸುಕತೆಯಲ್ಲಿದ್ದು, ಅವರ ಜೀವನಮಟ್ಟವನ್ನು ಸುಲಭಗೊಳಿಸಲು ಪ್ರಧಾನಮಂತ್ರಿ ಉಜ್ವಲ ಯೋಜನೆಯ ಮೂಲಕ ಸಬ್ಸಿಡಿಸಹಿತ ಅಡುಗೆ ಅನಿಲ ಸಂಪರ್ಕವನ್ನು ಒದಗಿಸುತ್ತದೆ. ಅದಕ್ಕಾಗಿ ಆಧಾರ್ ದೃಢೀಕರಣದ ಮಾಡುವ ಅಗತ್ಯತೆಯನ್ನು ಹೊಂದಿದೆ. ಅದಲ್ಲದೆ, ವಿವಿಧ ಜಿಲ್ಲೆಗಳಲ್ಲಿ ಐಸಿಎಆರ್‌ನ ಕೃಷಿ ವಿಜ್ಞಾನ ಕೇಂದ್ರಗಳು ಮಹಿಳಾ ರೈತರ ಆದಾಯವನ್ನು ಹೆಚ್ಚಿಸಲು ಮುಂದೆ ಬಂದಿವೆ. ಅದು ಬಂಕುರಾ, ಪಶ್ಚಿಮ ಮೇದಿನಿಪುರ್, ಅಲಿಪುರ್ದೂರ್‌ನ ವಿವಿಧ ಸ್ಥಳಗಳಲ್ಲಿ ನಡೆದ ವಿಕಾಸ್ ಭಾರತ್ ಸಂಕಲ್ಪ್ ಯಾತ್ರೆ (VBSY) ಕಾರ್ಯಕ್ರಮ ಪೂರಕವಾಗಿತ್ತು. 

 

ಅಲ್ಲದೆ, ರೈತರು ಡ್ರೋನ್‌ಗಳ ಮೂಲಕ ಹೊಲಗಳಲ್ಲಿ ಬೆಳೆಗಳಿಗೆ ಕೀಟನಾಶಕ ಸಿಂಪಡಣೆಗೆ ಹೆಚ್ಚು ಆಸಕ್ತಿ ವಹಿಸಿದರು.

ಇಂದು, ಬಿಸಿವಿಕೆ, ಐಸಿಎಆರ್ ಜಾರ್‌ಗ್ರಾಮ್ ಜಿಲ್ಲೆಯ ಲೋಧಸುಲಿಯಲ್ಲಿ ಆದಾಯವನ್ನು ಹೆಚ್ಚಿಸುವ ಯೋಜನೆಗಳ ಕುರಿತು ಸ್ವಸಹಾಯ ಗುಂಪು ಸದಸ್ಯರಿಗೆ ವಿವರಿಸಿದರು. ಇಲ್ಲಿಯೂ ಸಹ, ಕೃಷಿಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಯತ್ತ ಗಮನ ಹರಿಸುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

 

ನಿನ್ನೆ ಸೋಮವಾರ, ಎರಡನೇ ಹಂತದ ವಿಬಿಎಸ್‌ವೈ ಕಾರ್ಯಕ್ರಮವು ಅಲಿಪುರದವಾರ್ 1ರ ಟಾಪ್ಶಿಖಾತಾ ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು. ಅಲ್ಲದೆ, ವಿಬಿಎಸ್‌ವೈ ಮೊದಲ ಹಂತದ ಕಾರ್ಯಕ್ರಮವು ಇಂದು ಆಲಿಪುರದವಾರ್ 1ರ ಸಲ್ಕುಮಾರ್-2 ಗ್ರಾಮ ಪಂಚಾಯಿತಿಯಲ್ಲಿ ನಡೆಯಿತು. ಇದರ ಹೊರತಾಗಿ, ವಿಬಿಎಸ್‌ವೈ ಕಾರ್ಯಕ್ರಮಗಳು ಡೆಬ್ರಾ ಬ್ಲಾಕ್‌ನ ದಬಾದರಿ ಗ್ರಾಮ ಪಂಚಾಯಿತಿ, ಪಶ್ಚಿಮ ಮೇದಿನಿಪುರ್, ಧರ್ಗ್ರಾಮ್ ಖತ್ರಾ ಬ್ಲಾಕ್‌ನ ದಹಾಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಕುರಾದಲ್ಲಿ ನಡೆದವು.

 


ದೇಶೀಯ ಅಡುಗೆ ಅನಿಲ ವಲಯದಲ್ಲಿ ತೊಡಗಿಸಿಕೊಂಡಿರುವ ತೈಲ ಮಾರುಕಟ್ಟೆ ಕಂಪನಿಗಳು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ ವರ್ಗಾವಣೆಗೆ ಅನುಕೂಲವಾಗುವಂತೆ ಆಧಾರ್ ದೃಢೀಕರಣ ಸೇವೆಗಳನ್ನು ಒದಗಿಸುತ್ತಿದ್ದು, ವಿಶೇಷವಾಗಿ ಹೆಚ್ಚಿನ ವಿಬಿಎಸ್ ವೈ ಕೇಂದ್ರಗಳಲ್ಲಿ ಹೆಚ್ಚಿನ ಮಹಿಳಾ ಫಲಾನುಭವಿಗಳು ಬಂದಿದ್ದರು. 

ಅದಲ್ಲದೆ, ಅಡುಗೆ ಅನಿಲ ಸಂಪರ್ಕದ ಬಗ್ಗೆ ವೈಯಕ್ತಿಕ ವಿವರಗಳಲ್ಲಿ ಬದಲಾವಣೆ ಸೇವೆಗಳನ್ನು ಒದಗಿಸುತ್ತಿದ್ದು, ವಿಬಿಎಸ್‌ವೈ ಚಟುವಟಿಕೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಹಲವಾರು ಮಹಿಳಾ ಫಲಾನುಭವಿಗಳನ್ನು ಆಕರ್ಷಿಸಿತು.

****


(Release ID: 1978691) Visitor Counter : 98