ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ (ಪಿ.ಎಲ್‌.ಐ.) ಯೋಜನೆ - 2.0 ಇದರ ಅಡಿಯಲ್ಲಿ ಐಟಿ ಹಾರ್ಡ್‌ ವೇರ್‌ ಗಾಗಿ 27 ಉತ್ಪಾದಕರಿಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

Posted On: 18 NOV 2023 4:33PM by PIB Bengaluru

ಮೊಬೈಲ್ ಫೋನ್‌ ಗಳಿಗೆ ನೀಡಲಾದ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ (ಪಿಎಲ್‌ಐ) ಇದರ ಯಶಸ್ಸಿನ ಆಧಾರದ ಮೇಲೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸಚಿವ ಸಂಪುಟವು 17 ಮೇ 2023 ರಂದು ಐಟಿ ಹಾರ್ಡ್‌ವೇರ್‌ ಗಾಗಿ ನೂತನ ಪಿಎಲ್‌ಐ ಸ್ಕೀಮ್ - 2.0 ಅನ್ನು ಅನುಮೋದಿಸಿತ್ತು. ಈ ಯೋಜನೆಯು ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ ಗಳು, ಆಲ್- ಇನ್- ಒನ್ ಪಿಸಿಗಳು, ಸರ್ವರ್‌ ಗಳು ಮತ್ತು ಅಲ್ಟ್ರಾ ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಸಾಧನಗಳು ಮುಂತಾದವುಗಳ ಉತ್ಪಾದನೆಯನ್ನು ಒಳಗೊಂಡಿದೆ.

ಈ ಯೋಜನೆಯಡಿಯಲ್ಲಿ, 27 ಐಟಿ ಹಾರ್ಡ್‌ವೇರ್ ತಯಾರಕರ ಅರ್ಜಿಗಳನ್ನು ಇಂದು ಅನುಮೋದಿಸಲಾಗಿದೆ. ಇನ್ನುಮುಂದೆ , ಏಸರ್, ಎಸುಸ್, ಡೆಲ್, ಹೆಚ್.ಪಿ., ಲೆನೊವೊ ಮುಂತಾದ ಪ್ರಸಿದ್ಧ ಬ್ರಾಂಡ್‌ ಗಳ ಐಟಿ ಹಾರ್ಡ್‌ ವೇರ್‌ ಗಳನ್ನು ಭಾರತದಲ್ಲಿ ತಯಾರಿಸಲಾಗುವುದು. ನೂತನ ಅನುಮೋದನೆ ಮೂಲಕ ಯೋಜನೆಯ ಅವಧಿಯಲ್ಲಿ ಆಗಬಹುದಾದ ನಿರೀಕ್ಷಿತ ಫಲಿತಾಂಶಗಳು ಈ ಕೆಳಗಿನಂತಿವೆ:

  • ಉದ್ಯೋಗ ಸೃಷ್ಟಿ: ಒಟ್ಟು ಸುಮಾರು 02 ಲಕ್ಷಗಳು
  • ಸುಮಾರು 50,000 (ನೇರ) ಮತ್ತು ಸುಮಾರು 1.5 ಲಕ್ಷ (ಪರೋಕ್ಷ) ಉದ್ಯೋಗ ಅವಕಾಶ
  • ಐಟಿ ಹಾರ್ಡ್‌ವೇರ್ ಉತ್ಪಾದನೆಯ ಮೌಲ್ಯ: 3 ಲಕ್ಷ 50 ಸಾವಿರ ಕೋಟಿ ರೂಪಾಯಿಗಳು (42 ಬಿಲಿಯನ್ ಯು.ಎಸ್. ಡಾಲರ್)
  • ಕಂಪನಿಗಳಿಂದ ಹೂಡಿಕೆ: 3,000 ಕೋಟಿ ರೂಪಾಯಿಗಳು (360 ಮಿಲಿಯನ್ ಯು.ಎಸ್. ಡಾಲರ್)

ಉದ್ಯಮ ಕ್ಷೇತ್ರದ ನಾಯಕರು ಮತ್ತು ಮಾಧ್ಯಮವನ್ನು ಉದ್ದೇಶಿಸಿ, ಕೇಂದ್ರ ರೈಲ್ವೆ, ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು "27 ಅನುಮೋದಿತ ಅರ್ಜಿದಾರ ಸಂಸ್ಥೆಗಳಲ್ಲಿ 23 ಜನರು ಶೂನ್ಯ ದಿನದಲ್ಲಿ (ಇಂದಿನಿಂದಲೇ) ಉತ್ಪಾದನೆಯನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ" ಎಂದು ತಿಳಿಸಿದರು.

 

https://static.pib.gov.in/WriteReadData/userfiles/image/20231118_142737LBTA.jpg

 

***



(Release ID: 1977882) Visitor Counter : 104