ಹಣಕಾಸು ಸಚಿವಾಲಯ
azadi ka amrit mahotsav g20-india-2023

ರಾಜ್ಯ ಸರ್ಕಾರಗಳಿಗೆ ತೆರಿಗೆ ಹಂಚಿಕೆ ಮಾಡುವ ಸಾಮಾನ್ಯ ದಿನಾಂಕವಾದ ನವೆಂಬರ್ 10ಕ್ಕೆ ಮೂರು ದಿನಗಳ ಮುಂಚಿತವಾಗಿ, ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಗಳಿಗೆ ನವೆಂಬರ್, 2023ರ ತೆರಿಗೆ ಹಂಚಿಕೆಯ ಮೊತ್ತ ₹72,961.21 ಕೋಟಿಯನ್ನು ಬಿಡುಗಡೆ ಮಾಡವುದನ್ನು ಅಧಿಕೃತಗೊಳಿಸಿದೆ.

Posted On: 07 NOV 2023 5:30PM by PIB Bengaluru

ಕೇಂದ್ರ ಸರ್ಕಾರದ ಈ ಮುಂಗಡ ಬಿಡುಗಡೆಯು ಹಬ್ಬದ ಋತುವಿನಲ್ಲಿ ಸಮಯೋಚಿತವಾಗಿ ಹಣ ಬಿಡುಗಡೆ ಮಾಡಲು ರಾಜ್ಯ ಸರ್ಕಾರಗಳಿಗೆ ಅನುವು ಮಾಡಿಕೊಡುತ್ತದೆ.

ಮುಂಬರುವ ಹಬ್ಬದ ಋತುವಿನ ದೃಷ್ಟಿಯಿಂದ, ಕೇಂದ್ರ ಸರ್ಕಾರವು 2023 ರ ನವೆಂಬರ್ ತಿಂಗಳಿಗೆ ರಾಜ್ಯ ಸರ್ಕಾರಗಳಿಗೆ ₹ 72,961.21 ಕೋಟಿ ತೆರಿಗೆ ಹಂಚಿಕೆಯನ್ನು ಸಾಮಾನ್ಯ ದಿನಾಂಕ ನವೆಂಬರ್ 10 ಕ್ಕೆ ಮುಂಚಿತವಾಗಿ ನವೆಂಬರ್ 7, 2023 ರಂದು ಬಿಡುಗಡೆ ಮಾಡಿದೆ.

ಇದು ರಾಜ್ಯ ಸರ್ಕಾರಗಳಿಗೆ ಸಮಯೋಚಿತ ಹಣ ಬಿಡುಗಡೆ ಮಾಡಲು ಮತ್ತು ಆ ಮೂಲಕ ಜನರಲ್ಲಿ ಹಬ್ಬಗಳು ಮತ್ತು ಆಚರಣೆಗಳನ್ನು ಹೆಚ್ಚಿಸಲು ಅನುವು ಮಾಡಿಕೊಟ್ಟಿದೆ. ಬಿಡುಗಡೆಯಾದ ಮೊತ್ತಗಳ ರಾಜ್ಯವಾರು ವಿವರಗಳನ್ನು ಈ ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ:

ನವೆಂಬರ್, 2023 ಕ್ಕೆ ಸಂಬಂಧಿಸಿದಂತೆ ಕೇಂದ್ರ ತೆರಿಗೆಗಳು ಮತ್ತು ಸುಂಕಗಳ ನಿವ್ವಳ ಆದಾಯದ ರಾಜ್ಯವಾರು ವಿತರಣೆ ಹೀಗಿದೆ,

 

ಕ್ರ.ಸಂ

ರಾಜ್ಯಗಳ ಹೆಸರು

ಮೊತ್ತ (ಕೋಟಿ ರೂ. ಗಳಲ್ಲಿ)

1

ಆಂಧ್ರಪ್ರದೇಶ

2952.74

2

ಅರುಣಾಚಲ ಪ್ರದೇಶ

1281.93

3

ಅಸ್ಸಾಂ

2282.24

4

ಬಿಹಾರ

7338.44

5

ಛತ್ತೀಸ್‌ಗಢ

2485.79

6

ಗೋವಾ

281.63

7

ಗುಜರಾತ್

2537.59

8

ಹರಿಯಾಣ

797.47

9

ಹಿಮಾಚಲ ಪ್ರದೇಶ

605.57

10

ಜಾರ್ಖಂಡ್

2412.83

11

ಕರ್ನಾಟಕ

2660.88

12

ಕೇರಳ

1404.50

13

ಮಧ್ಯ ಪ್ರದೇಶ

5727.44

14

ಮಹಾರಾಷ್ಟ್ರ

4608.96

15

ಮಣಿಪುರ

522.41

16

ಮೇಘಾಲಯ

559.61

17

ಮಿಜೋರಾಮ್

364.80

18

ನಾಗಾಲ್ಯಾಂಡ್

415.15

19

ಒಡಿಶಾ

3303.69

20

ಪಂಜಾಬ್

1318.40

21

ರಾಜಸ್ಥಾನ

4396.64

22

ಸಿಕ್ಕಿಂ

283.10

23

ತಮಿಳುನಾಡು

2976.10

24

ತೆಲಂಗಾಣ

1533.64

25

ತ್ರಿಪುರ

516.56

26

ಉತ್ತರ ಪ್ರದೇಶ

13088.51

27

ಉತ್ತರಾಖಂಡ

815.71

28

ಪಶ್ಚಿಮ ಬಂಗಾಳ

5488.88

 

ಒಟ್ಟು ಮೊತ್ತ

72961.21

 

****



(Release ID: 1975506) Visitor Counter : 112