ಪ್ರಧಾನ ಮಂತ್ರಿಯವರ ಕಛೇರಿ
ಮೇರಿ ಮಾಟಿ-ಮೇರಾ ದೇಶ್ ಅಭಿಯಾನವು ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಪಂಚಪ್ರಾಣಗಳನ್ನು ಪೂರೈಸುತ್ತದೆ ಮತ್ತು ನಮ್ಮ ಹುತಾತ್ಮರ ಕನಸುಗಳನ್ನು ಈಡೇರಿಸುತ್ತದೆ: ಪ್ರಧಾನಿ
Posted On:
30 OCT 2023 8:49PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ‘ಮೇರಿ ಮಾಟಿ-ಮೇರಾ ದೇಶ್’ ಅಭಿಯಾನವು ಮುಂದಿನ 25 ವರ್ಷಗಳ ಅಮೃತ ಕಾಲದಲ್ಲಿ ಪಂಚಪ್ರಾಣಗಳನ್ನು ಈಡೇರಿಸುತ್ತದೆ ಮತ್ತು ನಮ್ಮ ಹುತಾತ್ಮರ ಕನಸುಗಳನ್ನು ನನಸಾಗಿಸುತ್ತದೆ ಎಂದು ಹೇಳಿದರು.
ಮೇರಿ ಮಾಟಿ-ಮೇರಾ ದೇಶ್ ಅಭಿಯಾನದ ಕುರಿತು ಕೇಂದ್ರ ಸಂಸ್ಕೃತಿ ಸಚಿವ ಶ್ರೀ ಜಿ ಕಿಶನ್ ರೆಡ್ಡಿ ಅವರು ಬರೆದ ಲೇಖನದ ಕುರಿತು ಪ್ರತಿಕ್ರಿಯಿಸಿದ ಶ್ರೀ ಮೋದಿ, ದೆಹಲಿಯಲ್ಲಿ ಈ ಅಭಿಯಾನದ ಅಡಿಯಲ್ಲಿ ನಿರ್ಮಿಸಲಾದ ಅಮೃತ ವಾಟಿಕಾ ನಮ್ಮ ಯುವ ಪೀಳಿಗೆಗೆ ಯಾವಾಗಲೂ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು.
ಈ ಸಂಬಂಧ ಸಾಮಾಜಿಕ ಜಾಲತಾಣ X ನಲ್ಲಿ ಸಂದೇಶ ನೀಡಲಾಗಿದೆ.
"ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸುವಲ್ಲಿ, 'ಮೇರಿ ಮಾಟಿ-ಮೇರಾ ದೇಶ್' ಅಭಿಯಾನದ ಅಡಿಯಲ್ಲಿ ನಿರ್ಮಿಸಲಾದ 'ಅಮೃತ ವಾಟಿಕಾ' ಮುಂದಿನ 25 ವರ್ಷಗಳಲ್ಲಿ ಅಮೃತ ಕಾಲದ ಐದು ಪ್ರತಿಜ್ಞೆಗಳನ್ನು ಪೂರೈಸುತ್ತದೆ ಎಂದು ಕೇಂದ್ರ ಸಚಿವ ಶ್ರೀ ಕಿಶನ್ ರೆಡ್ಡಿ ತಮ್ಮ ಲೇಖನದಲ್ಲಿ ಪ್ರಸ್ತುತಪಡಿಸಿದ್ದಾರೆ. ನಮ್ಮ ಹುತಾತ್ಮರ ಕನಸುಗಳನ್ನು ನನಸಾಗಿಸಲು ಇದು ಯುವ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ" ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.
********
(Release ID: 1973588)
Visitor Counter : 91
Read this release in:
Urdu
,
Bengali
,
English
,
Hindi
,
Marathi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam