ಕೃಷಿ ಸಚಿವಾಲಯ

ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಆಹಾರ ನಷ್ಟ ಮತ್ತು ಪೋಲು ತಡೆ ಕುರಿತ ಅಂತಾರಾಷ್ಟ್ರೀಯ ಕಾರ್ಯಾಗಾರವನ್ನು ನವದೆಹಲಿಯಲ್ಲಿಂದು ಉದ್ಘಾಟಿಸಿದ ಸಚಿವೆ ಶೋಭಾ ಕರಂದ್ಲಾಜೆ


ದಕ್ಷಿಣ ಏಷ್ಯಾವು ಆಹಾರದ ಪ್ರಮುಖ ಉತ್ಪಾದಕ ಮತ್ತು ಗ್ರಾಹಕ ವಲಯವಾಗಿದೆ. ಆಹಾರದ ನಷ್ಟ ಮತ್ತು ಪೋಲಾಗುವುದನ್ನು ಕಡಿಮೆ ಮಾಡುವುದು ನಮ್ಮ ನೈತಿಕ ಜವಾಬ್ದಾರಿ ಮತ್ತು ಆರ್ಥಿಕ ಅಗತ್ಯವಾಗಿದೆ - ಶೋಭಾ ಕರಂದ್ಲಾಜೆ

ಆಹಾರ ಪೋಲು ಮಾಡುವುದು ಅಪರಾಧ ಎಂದು ಪ್ರತಿಪಾದಿಸಿದ ಶೋಭಾ ಕರಂದ್ಲಾಜೆ; ಆಹಾರ ಪೋಲು ಮಾಡುವುದರಿಂದ ಆಗುವ ನಷ್ಟದ ಮಹತ್ವವನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕಿದೆ: ಸಚಿವರ ಸಲಹೆ

Posted On: 30 OCT 2023 2:52PM by PIB Bengaluru

ಕೇಂದ್ರ ಕೃಷಿ ಮತ್ತು ಕೃಷಿಕರ ಕಲ್ಯಾಣ ಖಾತೆ ರಾಜ್ಯ ಸಚಿವೆ ಸುಶ್ರೀ ಶೋಭಾ ಕರಂದ್ಲಾಜೆ ಅವರು ನವದೆಹಲಿಯಲ್ಲಿಂದು ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಆಹಾರ ನಷ್ಟ ಮತ್ತು ಪೋಲು ತಡೆಗಟ್ಟುವಿಕೆಯ ಅಂತಾರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿದರು. ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ಜರ್ಮನಿಯ ಥೂನೆನ್ ಇನ್‌ಸ್ಟಿಟ್ಯೂಟ್ ಜಂಟಿಯಾಗಿ ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಆಹಾರ ನಷ್ಟ ಮತ್ತುಪೋಲು ತಡೆಗಟ್ಟುವಿಕೆಯ ಅಂತಾರಾಷ್ಟ್ರೀಯ ಕಾರ್ಯಾಗಾರ ಆಯೋಜಿಸಿದೆ. ಐಸಿಎಆರ್- ಎನ್ಆರ್ ಎಂ ಉಪನಿರ್ದೇಶಕ ಡಾ.ಎಸ್.ಕೆ. ಚೌಧರಿ, ಜರ್ಮನಿಯ ಥೂನೆನ್ ಇನ್‌ಸ್ಟಿಟ್ಯೂಟ್ ಸಂಶೋಧನಾ ನಿರ್ದೇಶಕ ಡಾ. ಸ್ಟೀಫನ್ ಲ್ಯಾಂಗ್, ಐಸಿಎಆರ್ ಅಗ್ರಿ ಎಂಜಿನಿಯರಿಂಗ್ ವಿಭಾಗದ ಮಹಾನಿರ್ದೇಶಕ ಡಾ. ಎಸ್.ಎನ್. ಝಾ, ಭಾರತ, ಬಾಂಗ್ಲಾದೇಶ, ಭೂತಾನ್, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ನೇಪಾಳ ಮತ್ತು ಶ್ರೀಲಂಕಾದ ಸುಮಾರು 120 ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

https://static.pib.gov.in/WriteReadData/userfiles/image/image001NJOQ.jpg

ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಸಚಿವೆ ಶೋಭಾ ಕರಂದ್ಲಾಜೆ, ಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐಸಿಎಆರ್) ಮತ್ತು ಜರ್ಮನಿಯ ಥೂನೆನ್ ಸಂಸ್ಥೆಯು ರೈತರು ಮತ್ತು ಗ್ರಾಹಕರಿಗೆ ಸಂಬಂಧಿಸಿದ ಪ್ರಮುಖ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಯನ್ನು ಪರಿಹರಿಸಲು ಮಾಡಿರುವ ಪ್ರಯತ್ನಗಳನ್ನು ಶ್ಲಾಘಿಸಿದರು. ಜಗತ್ತಿನಾದ್ಯಂತ ಸರಿಸುಮಾರು 3 ಬಿಲಿಯನ್ ಟನ್ ಆಹಾರ ವ್ಯರ್ಥವಾಗುತ್ತಿದೆ. ಆಹಾರ ನಷ್ಟ ಮತ್ತು ಪೋಲಿನ ಪ್ರಮಾಣವನ್ನು ಅವರು ವಿವರಿಸಿದರು. ಸಮಾಜದ ಸ್ವೀಕಾರಾರ್ಹ ವಿಧಾನಗಳನ್ನು ಬಳಸಿಕೊಂಡು ಜಗತ್ತಿನಾದ್ಯಂತ ಆಗುತ್ತಿರುವ ಆಹಾರ ನಷ್ಟ ಮತ್ತು ಪೋಲು ಕಡಿಮೆ ಮಾಡಲು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಸಾಬೀತಾದ ತಂತ್ರಜ್ಞಾನಗಳು ಮತ್ತು ಅಭ್ಯಾಸಗಳನ್ನು ಮುಂದಕ್ಕೆ ತರಬೇಕು. ಸಾಮಾಜಿಕ ಸಂಸ್ಥೆಗಳು ವಿವಿಧ ಪಾಲುದಾರರಿಗೆ ಜಾಗೃತಿ ಮೂಡಿಸಲು ಪ್ರಮುಖ ಪಾತ್ರ ವಹಿಸಬೇಕು. ಆಹಾರ ವ್ಯರ್ಥ(ಪೋಲು)ವನ್ನು ಕಡಿಮೆ ಮಾಡುವ ವಿಧಾನಗಳನ್ನು ಅಭ್ಯಾಸ ಮಾಡಬೇಕು. ಆಹಾರ ನಷ್ಟವು ಗ್ರಾಹಕರಿಗೆ ನೇರ ನಷ್ಟ ಮಾತ್ರವಲ್ಲದೆ, ಪರಿಸರ ಮತ್ತು ಬೆಂಬಲ ನೀಡುವ ಆರ್ಥಿಕತೆಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಗಮನ ಸೆಳೆದರು.

ದಕ್ಷಿಣ ಏಷ್ಯಾವು ಆಹಾರದ ಪ್ರಮುಖ ಉತ್ಪಾದಕ ಮತ್ತು ಗ್ರಾಹಕ ವಲಯವಾಗಿದೆ. ಆಹಾರದ ನಷ್ಟ ಮತ್ತು ಪೋಲು ಕಡಿಮೆ ಮಾಡುವುದು ನಮ್ಮ ನೈತಿಕ ಜವಾಬ್ದಾರಿ ಮತ್ತು ಆರ್ಥಿಕ ಅಗತ್ಯವಾಗಿದೆ. ಆಹಾರ ನಷ್ಟ ಮತ್ತು ಪೋಲಿನ ಪ್ರಾಥಮಿಕ ಕಾರಣಗಳನ್ನು ಗುರುತಿಸುವುದು ಇಂದಿನ ಅಗತ್ಯವಾಗಿದೆ. ಎಲ್ಲಾ ಪಾಲುದಾರರಲ್ಲಿ ಶಿಕ್ಷಣ ಮತ್ತು ಅರಿವು, ಸಮರ್ಥ ಕೊಯ್ಲು ಮತ್ತು ಸಂಗ್ರಹಣೆ, ಸ್ಮಾರ್ಟ್ ವಿತರಣೆ, ಉದ್ಯಮಗಳ ಪಾಲ್ಗೊಳ್ಳುವಿಕೆ, ದೇಣಿಗೆ ಮತ್ತು ಆಹಾರ ಬ್ಯಾಂಕುಗಳು, ಆಹಾರ ಪ್ಯಾಕೇಜಿಂಗ್ ನಲ್ಲಿ ನಾವೀನ್ಯತೆ ಮತ್ತು ಗ್ರಾಹಕರ ಜವಾಬ್ದಾರಿ ಇತ್ಯಾದಿ ಕಾರ್ಯಗಳನ್ನು ತುರ್ತಾಗಿ ಕೈಗೊಳ್ಳಬೇಕು. ಆಹಾರ ವ್ಯರ್ಥ ಮಾಡುವುದು ಅಪರಾಧ. ಆಹಾರ ಪೋಲು ಮಾಡುವುದರಿಂದ ಎದುರಾಗುವ ನಷ್ಟಗಳ ಮಹತ್ವವನ್ನು ನಮ್ಮ ಮಕ್ಕಳಿಗೆ ಕಲಿಸಬೇಕು ಎಂದುಸಲಹೆ ನೀಡಿದರು. 3 ದಿನಗಳ ಕಾರ್ಯಾಗಾರವು ಕೆಲವು ಅರ್ಥಪೂರ್ಣ ನೀತಿಗಳನ್ನು ಅಳವಡಿಸಿಕೊಳ್ಳಲು, ಒಟ್ಟಿಗೆ ಯೋಜಿಸಲು ಮತ್ತು ಕಾರ್ಯ ನಿರ್ವಹಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಅವರು ಭರವಸೆ ನೀಡಿದರು.

https://static.pib.gov.in/WriteReadData/userfiles/image/image002DUNG.jpg

ಜರ್ಮನಿಯ ಥೂನೆನ್ ಇನ್‌ಸ್ಟಿಟ್ಯೂಟ್ ಸಂಶೋಧನಾ ನಿರ್ದೇಶಕ ಡಾ. ಸ್ಟೀಫನ್ ಲ್ಯಾಂಗ್ ಮಾತನಾಡಿ, ಆಹಾರದ ನಷ್ಟ ಮತ್ತು ಪೋಲು ತಗ್ಗಿಸುವುದು ಮತ್ತು ತಡೆಗಟ್ಟುವುದರಿಂದ ಅಗತ್ಯವಿರುವವರಿಗೆ ಅಥವಾ ಹಸಿದವರಿಗೆ ಆಹಾರ ತಲುಪುವುದನ್ನು ಖಚಿತಪಡಿಸುವ ಅತ್ಯಂತ ದೊಡ್ಡ ಮತ್ತು ಪರಿಣಾಮಕಾರಿ ಕಾರ್ಯವಿಧಾನವಾಗಿದೆ. "ಆಹಾರ ನಷ್ಟ ಮತ್ತು ಆಹಾರ ಪೋಲು ತಡೆಯ  ಸಹಭಾಗಿತ್ವದ ಉಪಕ್ರಮ"ವು ಸಂಶೋಧನೆಯ ಫಲಿತಾಂಶಗಳ ಜಾಗತಿಕ ವಿನಿಮಯ ಅಥವಾ ಹಂಚಿಕೆ ಉತ್ತೇಜಿಸಲು ಮತ್ತು ಆಹಾರ ನಷ್ಟ ಮತ್ತು ವ್ಯರ್ಥದ ವಿರುದ್ಧ ಹೋರಾಡುವ ಪ್ರಾಯೋಗಿಕ ಅನುಭವ ಉತ್ತೇಜಿಸಲು ಕಾರ್ಯ ನಿರ್ವಹಿಸುತ್ತಾ ಬಂದಿದೆ. ಆಹಾರ ನಷ್ಟ ಮತ್ತು ಪೋಲು ತಡೆಯಲು ವೈಯಕ್ತಿಕ ಮತ್ತು ಸಹಭಾಗಿತ್ವದ ಪ್ರಯತ್ನಗಳನ್ನು ಪ್ರಾರಂಭಿಸುವಂತೆ ಎಲ್ಲಾ ನೆರೆ ರಾಷ್ಟ್ರಗಳ ಮೇಲೆ ಪ್ರಭಾವ ಬೀರೃಲು ಭಾರತ ಸರ್ಕಾರವು ಪ್ರಮುಖ ಪಾತ್ರ ವಹಿಸಲಿದೆ ಎಂದರು.

ಫ್ರಾನ್ಸ್ ನ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಶ್ರೀಮತಿ  ಕ್ಲೆಮೆಂಟೈನ್ ಒ'ಕಾನ್ನರ್ ಮಾತನಾಡಿ, ಆಹಾರ ನಷ್ಟ ಮತ್ತು ವ್ಯರ್ಥ ತಡೆಯ ಮಾಪನಗಳು ಕೃಷಿ ಮತ್ತು ಪರಿಸರದ ಸುಸ್ಥಿರತೆಯ ಮೇಲೆ ಹೇಗೆ ಪರಿಣಾಮ ಬೀರುತ್ತಿವೆ ಎಂಬುದರ ಬಗ್ಗೆ ಮೌಲ್ಯಮಾಪನ ಮಾಡಿದರು. ಸಾಂಕ್ರಾಮಿಕ, ಹವಾಮಾನ ಬದಲಾವಣೆ ಮತ್ತು ಯುದ್ಧಗಳು ಆಹಾರದ ನಷ್ಟ ಮತ್ತು ವ್ಯರ್ಥದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂದು ಅವರು ಗಮನ ಸೆಳೆದರು. ಜಗತ್ತಿನಾದ್ಯಂತ ಉತ್ತಮ ಅಭ್ಯಾಸಗಳ ಕಲಿಕೆ ಮತ್ತು ಹಂಚಿಕೆ ಅಥವಾ ವಿನಿಮಯ ಖಚಿತಪಡಿಸಿಕೊಳ್ಳಲು ಮತ್ತು ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ನೀತಿ ರೂಪಿಸಬೇಕು ಎಂದು ಅವರು ಒತ್ತು ನೀಡಿದರು. 2030ರ ವೇಳೆಗೆ ಆಹಾರ ನಷ್ಟವನ್ನು ಅರ್ಧಕ್ಕೆ ಅಂದರೆ 12.3ಕ್ಕೆ ಇಳಿಸುವ ಗುರಿ ತಲುಪಿ ಸುಸ್ಥಿರ ಅಭಿವೃದ್ಧಿ ಸಾಧಿಸಲು ಕೆಲವೇ ವರ್ಷಗಳು ಬಾಕಿ ಉಳಿದಿವೆ ಎಂದು ಅವರು ನೆನಪಿಸಿದರು.

https://static.pib.gov.in/WriteReadData/userfiles/image/image003P7X5.jpg

ಐಸಿಎಆರ್-ಪಿಇ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ(ಎಡಿಜಿ) ಡಾ. ಕೆ. ನರಸಯ್ಯ  ಅವರು ಆಹಾರ ನಷ್ಟದ ಐತಿಹಾಸಿಕ ದೃಷ್ಟಿಕೋನದ ಪ್ರಾಸ್ತಾವಿಕ ಪ್ರಸ್ತುತಿ ಮಾಡಿದರು. ಜಗತ್ತಿನಾದ್ಯಂತ ವಿವಿಧ ಸಮಾಜಗಳು ಅಭ್ಯಾಸ ಮಾಡುವ ಆಹಾರ ನಷ್ಟ ಮತ್ತು ಪೋಲು ತಡೆಗಟ್ಟಲು ಇರುವ ಸ್ಥಳೀಯ ವಿಧಾನಗಳ ಉದಾಹರಣೆಗಳನ್ನು ನೀಡಿದರು. ಕುಟುಂಬಗಳು, ಕಚೇರಿಗಳು, ಕೈಗಾರಿಕೆಗಳು, ಸಮಾಜ ಮತ್ತು ಸಮುದಾಯಗಳಲ್ಲಿ ಆಹಾರ ನಷ್ಟ ಮತ್ತು ಪೋಲು ತಡೆಗಟ್ಟಲು ಈ ಅಧಿವೇಶನದಲ್ಲಿ ಎಲ್ಲಾ ಪ್ರತಿನಿಧಿಗಳು ಸಂಕಲ್ಪ ಮಾಡಿದರು.

ಐಸಿಎಆರ್-ಎನ್ಆರ್ ಎಂ ಉಪಮಹಾನಿರ್ದೇಶಕ ಡಾ. ಎಸ್ ಕೆ ಚೌಧರಿ ಮತ್ತು ಅಗ್ರಿ ಎಂಜಿನಿಯರಿಂಗ್ ವಿಭಾಗದ ಉಪಮಹಾನಿರ್ದೇಶಕ ಡಾ. ಎಸ್ ಎನ್ ಝಾ ಅವರು ಎಲ್ಲಾ ಅತಿಥಿಗಳು ಮತ್ತು ಪ್ರತಿನಿಧಿಗಳನ್ನು ಸ್ವಾಗತಿಸಿದರು. ಸುಗ್ಗಿಯ ನಂತರದ ಆಹಾರ ನಷ್ಟ ಮತ್ತು ವ್ಯರ್ಥ ಪ್ರಮಾಣವು ಜಾಗತಿಕ ಭೌಗೋಳಿಕತೆಯಲ್ಲಿ ವ್ಯತ್ಯಾಸಗೊಳ್ಳುತ್ತದೆ. ಇದು ಹೆಚ್ಚಾಗಿ ಬೆಳೆಗಳು ಮತ್ತು ಸರಕುಗಳು, ಸಂಗ್ರಹಣೆಯ ಅವಧಿ, ಹವಾಮಾನ, ತಾಂತ್ರಿಕ ಮಧ್ಯಸ್ಥಿಕೆಗಳು, ಮಾನವ ನಡವಳಿಕೆ, ಸಂಪ್ರದಾಯಗಳು ಇತ್ಯಾದಿಗಳನ್ನು ಅವಲಂಬಿಸಿರುತ್ತದೆ. 2023 ಏಪ್ರಿಲ್ ನಲ್ಲಿ ವಾರಾಣಸಿಯಲ್ಲಿ ನಡೆದ ಜಿ-20-ಎಂಎಸಿಎಸ್ ಸಮಯದಲ್ಲಿ, ಭಾರತ ಮತ್ತು ಜರ್ಮನಿ ನಡುವೆ ದ್ವಿಪಕ್ಷೀಯ ಸಭೆ ನಡೆಯಿತು, ಇದರಲ್ಲಿ ಆಹಾರ ನಷ್ಟ ಮತ್ತು ಪೋಲು ತಡೆಯ ತಿಳುವಳಿಕೆಯ ಸವಾಲುಗಳನ್ನು ಪರಿಹರಿಸಲು ಪ್ರಾದೇಶಿಕ ಕಾರ್ಯಾಗಾರ  ಆಯೋಜಿಸಲು ಎರಡೂ ದೇಶಗಳು ನಿರ್ಧರಿಸಿದ್ದವು. ಹೇರಳವಾದ ಕೃಷಿ ಉತ್ಪಾದನೆಯ ಹೊರತಾಗಿಯೂ, ಆಹಾರ ಪೂರೈಕೆಯಲ್ಲಿ ಉತ್ಪಾದನೆಯಿಂದ ಹಿಡಿದು ಬಳಕೆಯ  ಸರಪಳಿ ಉದ್ದಕ್ಕೂ ಗಣನೀಯ ಪ್ರಮಾಣದ ಆಹಾರ ನಷ್ಟವಾಗುತ್ತದೆ ಅಥವಾ ವ್ಯರ್ಥವಾಗುತ್ತದೆ. ಇದುಆಹಾರ ಭದ್ರತೆ ಮತ್ತು ಲಭ್ಯತೆ, ಪರಿಸರ, ಆರ್ಥಿಕತೆ ಮತ್ತು ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಪ್ರಮುಖ ಆಹಾರ ಉತ್ಪಾದಕ ಮತ್ತು ಗ್ರಾಹಕ ವಲಯಲಾಗಿರುವ ದಕ್ಷಿಣ ಏಷ್ಯಾದ ಪ್ರದೇಶಕ್ಕೆ ಇದು ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 74 ದಶಲಕ್ಷ ಟನ್ ಆಹಾರ ನಷ್ಟವಾಗುತ್ತಿದೆ. ಅದನ್ನು ಉಳಿಸಿದರೆ, ಅನೇಕ ಜನರನ್ನು ಶ್ರೀಮಂತರನ್ನಾಗಿ ಮಾಡಬಹುದು ಎಂದು ಅವರು ವಿಷಯ ಹಂಚಿಕೊಂಡರು.

 

****

 



(Release ID: 1973107) Visitor Counter : 94