ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಪ್ರಧಾನ ಮಂತ್ರಿ ಅಧ್ಯಕ್ಷತೆಯಲ್ಲಿ 43ನೇ ಪ್ರಗತಿ ಸಂವಾದ ಸಭೆ


7 ರಾಜ್ಯಗಳಿಗೆ ಸೇರಿದ ಸುಮಾರು 31,000 ಕೋಟಿ ರೂ. ಮೌಲ್ಯದ 8 ಪ್ರಮುಖ ಯೋಜನೆಗಳ ಪರಾಮರ್ಶೆ ನಡೆಸಿದ ಪ್ರಧಾನ ಮಂತ್ರಿ

ಸಾರ್ವತ್ರಿಕ ಸೇವಾ ಬಾಧ್ಯತೆ ನಿಧಿ(ಯುಎಸ್ಒಎಫ್) ಯೋಜನೆಗಳ ಅಡಿ, 'ಮೊಬೈಲ್ ಟವರ್‌ಗಳು ಮತ್ತು 4ಜಿ ತಂತ್ರಜ್ಞಾನ ಸೇರ್ಪಡೆ' ಯೋಜನೆಗಳ ಪರಿಶೀಲನೆ

Posted On: 25 OCT 2023 9:12PM by PIB Bengaluru

ಈ ಆರ್ಥಿಕ ವರ್ಷದೊಳಗೆ ಎಲ್ಲಾ ಬಯಲುಸೀಮೆ(ದೂರದ) ಗ್ರಾಮಗಳಲ್ಲಿ ಮೊಬೈಲ್ ಟವರ್‌ಗಳ ಸ್ಥಾಪನೆ ಖಚಿತಪಡಿಸಿಕೊಳ್ಳುವಂತೆ ಪ್ರಧಾನ ಮಂತ್ರಿ ಸೂಚನೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಜಾನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒಳಗೊಂಡಿರುವ ಸಕ್ರಿಯ ಆಡಳಿತ ಮತ್ತು ಸಮಯೋಚಿತ ಅನುಷ್ಠಾನಕ್ಕಾಗಿ ಐಸಿಟಿ(ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ) ಆಧಾರಿತ ಬಹುಮಾದರಿ ವೇದಿಕೆ ಪ್ರಗತಿಯ 43ನೇ ಆವೃತ್ತಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಒಟ್ಟು 8 ಪ್ರಮುಖ ಯೋಜನೆಗಳ ಪರಾಮರ್ಶೆ ನಡೆಸಲಾಯಿತು. ಇವುಗಳಲ್ಲಿ 4 ಯೋಜನೆಗಳು ನೀರು ಸರಬರಾಜು ಮತ್ತು ನೀರಾವರಿಗೆ ಸಂಬಂಧಿಸಿವೆ. 2 ರಾಷ್ಟ್ರೀಯ ಹೆದ್ದಾರಿಗಳು ಮತ್ತು ಸಂಪರ್ಕ ವಿಸ್ತರಿಸುವ ಯೋಜನೆಗಳು ಮತ್ತು ರೈಲು ಮತ್ತು ಮೆಟ್ರೋ ರೈಲು ಸಂಪರ್ಕದ 2 ಯೋಜನೆಗಳಾಗಿವೆ. ಈ ಯೋಜನೆಗಳು ಸುಮಾರು 31,000 ಕೋಟಿ ರೂ. ಸಂಚಿತ ವೆಚ್ಚ ಹೊಂದಿವೆ. 7 ರಾಜ್ಯಗಳಾದ ಬಿಹಾರ, ಜಾರ್ಖಂಡ್, ಹರಿಯಾಣ, ಒಡಿಶಾ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಮಹಾರಾಷ್ಟ್ರಗಳಿಗೆ ಈ ಯೋಜನೆಗಳು ಸಂಬಂಧಿಸಿವೆ.

ಪ್ರಧಾನ ಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಪೋರ್ಟಲ್ ಉಪಗ್ರಹ ಚಿತ್ರಣಗಳಂತಹ ತಂತ್ರಜ್ಞಾನಗಳ ಅಳವಡಿಕೆಯು ಯೋಜನೆಗಳಿಗೆ ಸ್ಥಳ ಮತ್ತು ಭೂಮಿಯ ಅವಶ್ಯಕತೆಗಳಿಗೆ ಸಂಬಂಧಿಸಿದ ಅನುಷ್ಠಾನ ಮತ್ತು ಯೋಜನೆಯ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು.

ಹೆಚ್ಚಿನ ಜನಸಾಂದ್ರತೆಯ ನಗರ ಪ್ರದೇಶಗಳಲ್ಲಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಎಲ್ಲಾ ಪಾಲುದಾರರು ನೋಡಲ್ ಅಧಿಕಾರಿಗಳನ್ನು ನೇಮಿಸಬಹುದು, ಉತ್ತಮ ಸಮನ್ವಯಕ್ಕಾಗಿ ತಂಡಗಳನ್ನು ರಚಿಸಬಹುದು ಎಂದು ಪ್ರಧಾನಿ ಅವರು ಸೂಚನೆ ನೀಡಿದರು.

ನೀರಾವರಿ ಯೋಜನೆಗಳಿಗಾಗಿ, ಯಶಸ್ವಿ ಪುನರ್ವಸತಿ ಮತ್ತು ಪುನರ್ನಿರ್ಮಾಣ ಕಾರ್ಯಗಳನ್ನು ನಡೆಸುವಾಗ ಪಾಲುದಾರರ ಭೇಟಿಗಳನ್ನು ಆಯೋಜಿಸುವಂತೆ ಪ್ರಧಾನಮಂತ್ರಿ ಸಲಹೆ ನೀಡಿದರು. ಅಂತಹ ಯೋಜನೆಗಳ ರೂಪಾಂತರದ ಪರಿಣಾಮವನ್ನು ಸಹ ತೋರಿಸಬಹುದು. ಇದು ಯೋಜನೆಗಳ ಆರಂಭಿಕ ಕಾರ್ಯಗತಗೊಳಿಸಲು ಪಾಲುದಾರರನ್ನು ಪ್ರೇರೇಪಿಸಬಹುದು ಎಂದರು.

ಸಂವಾದ ಸಮಯದಲ್ಲಿ ಪ್ರಧಾನ ಮಂತ್ರಿ ಅವರು ಸಾರ್ವತ್ರಿಕ ಸೇವಾ ಬಾಧ್ಯತೆ ನಿಧಿ(ಯುಎಸ್ಒಎಫ್) ಯೋಜನೆಗಳ ಅಡಿ, ಮೊಬೈಲ್ ಟವರ್‌ಗಳು ಮತ್ತು 4-ಜಿ ತಂತ್ರಜ್ಞಾನ ಸೇರ್ಪಡೆ ಪ್ರಸ್ತಾವನೆಗಳನ್ನು ಸಹ ಪರಿಶೀಲಿಸಿದರು. ಸಾರ್ವತ್ರಿಕ ಸೇವಾ ಬಾಧ್ಯತೆ ನಿಧಿ(ಯುಎಸ್ಒಎಫ್) ಯೋಜನೆಗಳ ಅಡಿ,, 24,149 ಮೊಬೈಲ್ ಟವರ್‌ಗಳನ್ನು ಹೊಂದಿರುವ 33,573 ಹಳ್ಳಿಗಳನ್ನು ಸಂಪೂರ್ಣ ಮೊಬೈಲ್  ಒಳಪಡಿಸಲಾಗುತ್ತದೆ. ಈ ಹಣಕಾಸು ವರ್ಷದೊಳಗೆ ಎಲ್ಲಾ ಪಾಲುದಾರರೊಂದಿಗೆ ನಿಯಮಿತ ಸಭೆ ನಡೆಸಿ, ಎಲ್ಲಾ ಬಯಲುಸೀಮೆ ಗ್ರಾಮಗಳಲ್ಲಿ ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವುದನ್ನು ಖಚಿತಪಡಿಸಿಕೊಳ್ಳಲು ಪ್ರಧಾನ ಮಂತ್ರಿ ಹೇಳಿದರು. ಇದು ದೂರದ ಪ್ರದೇಶಗಳಲ್ಲಿ ಮೊಬೈಲ್ ಕವರೇಜ್‌ನ ಸಂತೃಪ್ತಿ ಮಟ್ಟವನ್ನು ಖಚಿತಪಡಿಸುತ್ತದೆ.

43 ನೇ ಆವೃತ್ತಿಯ ಪ್ರಗತಿ ಸಂವಾದ ಸಭೆಯ ತನಕ, ಒಟ್ಟು 17.36 ಲಕ್ಷ ಕೋಟಿ ರೂ. ಮೊತ್ತದ 348 ಯೋಜನೆಗಳ ಪರಾಮರ್ಶೆ ನಡೆಸಲಾಗಿದೆ.

 

***

 


(Release ID: 1971324) Visitor Counter : 114