ಪ್ರಧಾನ ಮಂತ್ರಿಯವರ ಕಛೇರಿ

​​​​​​​ಕಾಶಿಯ ಲಖಾ ಮೇಳದ ಭಾರತ್‌ ಮಿಲಾಪ್‌ನ ಆಚರಣೆ ಸೊಬಗಿನ ನೋಟಗಳನ್ನು ಹಂಚಿಕೊಂಡು ಪ್ರಧಾನ ಮಂತ್ರಿಗಳು

Posted On: 25 OCT 2023 7:41PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕಾಶಿಯ ಲಖಾ ಮೇಳದ ಭಾರತ್‌ ಮಿಲಾಪ್‌ನ ಆಚರಣೆ ಸಂಪ್ರದಾಯದ ವೈಭವದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಆಚರಣೆಯು ಭಾರತೀಯ ಸಂಸ್ಕೃತಿಯ ಅವಿಭಾವ್ಯ ಅಂಗ ಎಂದಿರುವ ಪ್ರಧಾನ ಮಂತ್ರಿ ಮೋದಿ ಅವರು ಇದು ಐದು ಶತಮಾನಗಳಿಂದ ಅನೂಚಾನವಾಗಿ ನಡೆದುಬಂದಿರುವ ಸಂಪ್ರದಾಯ ಎಂದು ಬಣ್ಣಿಸಿದ್ದಾರೆ. ಈ ಅನನ್ಯ ಸಂಪ್ರದಾಯದ ಆಚರಣೆಯಿರುವ ಕಾಶಿಯನ್ನು ಸಂಸತ್ತಿನಲ್ಲಿ ಪ್ರತಿನಿಧಿಸುವುದಕ್ಕೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದ್ದಾರೆ.

ಈ ಸಂಬಂಧ "ಎಕ್ಸ್‌" ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪೋಸ್ಟ್‌ ಮಾಡಿರುವ ಪ್ರಧಾನ ಮಂತ್ರಿಗಳು,

"ಕಾಶಿಯಲ್ಲಿ ಲಖಾ ಮೇಳದಡಿ ನಡೆದಿರುವ ಭಾರತ್‌ ಮಿಲಾಪ್‌ ಆಚರಣೆಯು ಭಾರತದ ಸನಾತನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಕಳೆದ ಐದು ಶತಮಾನಗಳಿಂದ ನಡೆಯುತ್ತಿರುವ ಈ ಪ್ರಸ್ತುತಿಯು ಶ್ರೀರಾಮನ ಭಕ್ತರನ್ನು ಮತ್ತೊಮ್ಮೆ ಭಾವುಕರನ್ನಾಗಿಸಿದೆ. ಕಾಶಿಯ ಪ್ರತಿನಿಧಿಸುವ ಸಂಸದನಾಗಿ ಇಂತಹ ಅಪೂರ್ವ ಆಚರಣೆ ಬಗ್ಗೆ ಹೆಮ್ಮೆಯ ಭಾವ ಮೂಡಿದೆ,ʼʼ ಎಂದು ಸಂತಸ ಹಂಚಿಕೊಂಡಿದ್ದಾರೆ.

***



(Release ID: 1971242) Visitor Counter : 66