ಸಹಕಾರ ಸಚಿವಾಲಯ

ನವದೆಹಲಿಯಲ್ಲಿ ನ್ಯಾಷನಲ್ ಕೋಆಪರೇಟಿವ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ (ಎನ್‌.ಸಿ.ಇ.ಎಲ್.) ಸಂಸ್ಥೆಯು ಇಂದು ಆಯೋಜಿಸಿದ್ದ 'ಸಹಕಾರಿ ರಫ್ತು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ'ದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಭಾಷಣ ಮಾಡಿದರು. ಎನ್‌ಸಿಇಎಲ್‌ನ ಲಾಂಛನ, ವೆಬ್‌ಸೈಟ್ ಮತ್ತು ಬ್ರೋಷರ್ ಅನ್ನು ಬಿಡುಗಡೆ ಮಾಡಿದರು ಮತ್ತು ಎನ್‌ಸಿಇಎಲ್ ಸದಸ್ಯರಿಗೆ ಸದಸ್ಯತ್ವ ಪ್ರಮಾಣಪತ್ರಗಳನ್ನು ವಿತರಿಸಿದರು.


ರಫ್ತು ಲಾಭದ ಕನಿಷ್ಟ ಕನಿಷ್ಠ 50% ರಷ್ಟು ರಾಷ್ಟ್ರೀಯ ಸಹಕಾರಿ ರಫ್ತು ನಿಯಮಿತ (ನ್ಯಾಷನಲ್ ಕೋಆಪರೇಟಿವ್ ಎಕ್ಸ್‌ಪೋರ್ಟ್ ಲಿಮಿಟೆಡ್ - ಎನ್‌ಸಿಇಎಲ್‌) ಮೂಲಕ ರೈತರ ಬ್ಯಾಂಕು ಖಾತೆಗೆ ಹೋಗಲಿದೆ

ರಫ್ತು ಹೆಚ್ಚಿಸುವುದರ ಜೊತೆಗೆ ಅದರ ಲಾಭವನ್ನು ರೈತರಿಗೆ ತಲುಪಿಸಲು ಸುಗಮ ವ್ಯವಸ್ಥೆಯನ್ನು ರಚಿಸುವ ನಿಟ್ಟಿನಲ್ಲಿ ಕೆಲಸವನ್ನು ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಾಡುತ್ತಿದೆ

ರಫ್ತು ಹೆಚ್ಚಿಸುವುದು, ರೈತರ ಏಳಿಗೆ, ಬೆಳೆ ಮಾದರಿ ಬದಲಾವಣೆ, ಸಾವಯವ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುವುದು, ಜೈವಿಕ ಇಂಧನಕ್ಕಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರತಕ್ಕೆ ಸ್ಥಾನ ಕಲ್ಪಿಸುವುದು ಮತ್ತು ಸಹಕಾರಿ ಕ್ಷೇತ್ರವನ್ನು ಬಲಪಡಿಸುವುದು ಮುಂತಾದ 6 ಉದ್ದೇಶಗಳೊಂದಿಗೆ, ಸಹಕಾರಿ ವಲಯದ ಕೇಂದ್ರ ಸಂಸ್ಥೆಯಾಗಿ ಎನ್‌.ಸಿ.ಇ.ಎಲ್. ಅನ್ನು ಪ್ರಾರಂಭಿಸಲಾಗಿದೆ.

ಎನ್‌ಸಿಇಎಲ್‌ ಗೆ ಸೇರ್ಪಡೆಗೊಳ್ಳುವ ಮೂಲಕ ದೇಶಾದ್ಯಂತ ಎಲ್ಲಾ ತಹಸಿಲ್‌ಗಳು ರೈತರ ಧ್ವನಿಯಾಗಬೇಕು

Posted On: 23 OCT 2023 5:02PM by PIB Bengaluru

ನವದೆಹಲಿಯಲ್ಲಿ ನ್ಯಾಷನಲ್ ಕೋಆಪರೇಟಿವ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ (ಎನ್‌.ಸಿ.ಇ.ಎಲ್.) ಸಂಸ್ಥೆ ಇಂದು ಆಯೋಜಿಸಿದ್ದ 'ಸಹಕಾರಿ ರಫ್ತು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ'ವನ್ನು ಉದ್ದೇಶಿಸಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಭಾಷಣ ಮಾಡಿದರು.

 

https://static.pib.gov.in/WriteReadData/userfiles/image/image001GEAT.jpg

 

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಎನ್‌.ಸಿ.ಇ.ಎಲ್. ಲಾಂಛನ, ವೆಬ್‌ಸೈಟ್ ಮತ್ತು ಬ್ರೋಷರ್ ಅನ್ನು ಬಿಡುಗಡೆ ಮಾಡಿದರು ಮತ್ತು ಎನ್‌ಸಿಇಎಲ್ ಸದಸ್ಯರಿಗೆ ಸದಸ್ಯತ್ವ ಪ್ರಮಾಣಪತ್ರಗಳನ್ನು ವಿತರಿಸಿದರು.

 

https://static.pib.gov.in/WriteReadData/userfiles/image/image002OF86.jpg

 

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಮತ್ತು ಕೇಂದ್ರ ಸಹಕಾರ ರಾಜ್ಯ ಸಚಿವರಾದ ಶ್ರೀ ಬಿ ಎಲ್ ವರ್ಮಾ ಸೇರಿದಂತೆ ಹಲವಾರು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

 

https://static.pib.gov.in/WriteReadData/userfiles/image/image003D8NJ.jpg

 

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ “ಇಂದು ಮಹಾನವಮಿಯ ಶುಭ ದಿನದಂದು ನ್ಯಾಷನಲ್ ಕೋಆಪರೇಟಿವ್ ಎಕ್ಸ್‌ಪೋರ್ಟ್ ಲಿಮಿಟೆಡ್ ಅನ್ನು ಔಪಚಾರಿಕವಾಗಿ ಪ್ರಾರಂಭಿಸಲಾಗುತ್ತಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಸಹಕಾರ ಸಚಿವಾಲಯವನ್ನು ಸ್ಥಾಪಿಸಿದ್ದಾರೆ, ಈ ನಿಟ್ಟಿನಲ್ಲಿ ಅವರ “ಸಹಕಾರಿ ಸೇ ಸಮೃದ್ಧಿ”ಯ ದೃಷ್ಟಿಕೋನವನ್ನು ಸಾಕಾರಗೊಳಿಸುವ ಹಾದಿಯಲ್ಲಿ ನಾವು ಇಂದು ಅತ್ಯಂತ ಮಹತ್ವದ ಮೈಲಿಗಲ್ಲನ್ನು ದಾಟುತ್ತಿದ್ದೇವೆ” ಎಂದು ಹೇಳಿದರು.

“ರಾಷ್ಟ್ರೀಯ ಸಹಕಾರಿ ರಫ್ತು ನಿಯಮಿತ (ಎನ್‌ಸಿಇಎಲ್) ಅನ್ನು ವಿವಿಧ ಉದ್ದೇಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸಾಕಷ್ಟು ಚರ್ಚೆಯ ನಂತರ ಸ್ಥಾಪಿಸಲಾಗಿದೆ. ವಿಶೇಷವಾಗಿ ಕೃಷಿ ರಫ್ತುಗಳನ್ನು ಹೆಚ್ಚಿಸುವುದು, ರೈತರನ್ನು ಸಮೃದ್ಧಗೊಳಿಸುವುದು, ಬೆಳೆ ಮಾದರಿಗಳನ್ನು ಬದಲಾಯಿಸುವುದು ಮತ್ತು 2027 ರ ವೇಳೆಗೆ ದೇಶದ 2 ಕೋಟಿ ರೈತರು ತಮ್ಮ ಭೂಮಿಯನ್ನು ನೈಸರ್ಗಿಕವೆಂದು ಘೋಷಿಸಲು ಅನುವು ಮಾಡಿಕೊಡುವುದು, ಮುಂತಾದ ಹಲವು ಉದ್ಧೇಶಗಳು ಎನ್‌ಸಿಇಎಲ್ ಸ್ಥಾಪನೆಯ ಹಿಂದಿನ ನಮ್ಮ ಗುರಿಗಳಲ್ಲಿ ಸೇರಿವೆ” ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.

“ದೇಶದಲ್ಲಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ಅನೇಕ ಉಪಕ್ರಮಗಳ ಅನುಷ್ಠಾನಗೊಳಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರು ಬಹುರಾಜ್ಯ ಸಹಕಾರ ಸಂಘವನ್ನು ರಚಿಸಿದ್ದಾರೆ. ನೈಸರ್ಗಿಕ ಕೃಷಿಯನ್ನು ಪ್ರಾಥಮಿಕ ಹಂತದಲ್ಲಿ ಅಭ್ಯಾಸ ಮಾಡುವ ಭಾರತದ 2 ಕೋಟಿಗೂ ಹೆಚ್ಚು ರೈತರ ಸಾವಯವ ಉತ್ಪನ್ನಗಳನ್ನು ಉತ್ತಮ ಪ್ಯಾಕೇಜಿಂಗ್, ವಿಶ್ವಾಸಾರ್ಹ ಬ್ರ್ಯಾಂಡಿಂಗ್ ಮತ್ತು ಉತ್ತಮ ಗುಣಮಟ್ಟದ ಪ್ರಮಾಣಪತ್ರಗಳೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದು. ಇದರೊಂದಿಗೆ, ರೈತರು ತಮ್ಮ ಸಾವಯವ ಉತ್ಪನ್ನಗಳಿಗೆ ಪ್ರಸ್ತುತ ಪಡೆಯುತ್ತಿರುವ ಬೆಲೆಗೆ ಹೋಲಿಸಿದರೆ ನೇರವಾಗಿ ಒಂದೂವರೆಯಿಂದ ಎರಡು ಪಟ್ಟು ಹೆಚ್ಚು ಬೆಲೆಯನ್ನು ಪಡೆಯಲಿದ್ದಾರೆ, ಮತ್ತು ಇದು ರೈತರ ಸಮೃದ್ಧಿಯ ಹಾದಿಯನ್ನು ತೆರೆಯಲಿದೆ.” ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.

https://static.pib.gov.in/WriteReadData/userfiles/image/image004X572.jpg

“ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೈವಿಕ ಇಂಧನ ಮೈತ್ರಿಯನ್ನು ಘೋಷಿಸಿದ್ದಾರೆ” ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. “ಏಕಕಾಲದಲ್ಲಿ 4 ಬೆಳೆಗಳನ್ನು ಬೆಳೆಯುವ ಏಕೈಕ ದೇಶ ಭಾರತವಾಗಿದ್ದು, ಇವುಗಳಲ್ಲಿ ಒಂದನ್ನು ಜೈವಿಕ ಇಂಧನಕ್ಕೆ ಬಳಸಬಹುದಾದರೆ, ನಾವು ಭಾರತದ ಜೈವಿಕ ಇಂಧನ ಅಗತ್ಯಗಳನ್ನು ಪೂರೈಸಬಹುದು ಮತ್ತು ಅದನ್ನು ರಫ್ತು ಮಾಡಬಹುದು. ಎನ್‌ಸಿಇಎಲ್ ಸ್ಥಾಪನೆಯ ಮತ್ತೊಂದು ಉದ್ದೇಶವೆಂದರೆ ಗ್ರಾಮೀಣ ಪ್ರದೇಶಗಳು ಮತ್ತು ಕೃಷಿಯ ಮೇಲೆ ಅವಲಂಬಿತವಾಗಿರುವ ಜನಸಂಖ್ಯೆ ಸೇರಿದಂತೆ ದೇಶದಲ್ಲಿ ಸಹಕಾರಿ ಕ್ಷೇತ್ರವನ್ನು ಬಲಪಡಿಸುವುದು. ಗ್ರಾಮೀಣ ಭಾಗದ ಕೃಷಿ ಉತ್ಪಾದನೆಗಳು ಮತ್ತು ಇತರೇ ಉತ್ಪನ್ನಗಳು ದೇಶದ ಜಿಡಿಪಿಗೆ ಶೇ 15ರಷ್ಟು ಕೊಡುಗೆ ನೀಡಿದರೆ, ಆ ಮೂಲಕ ಒಟ್ಟು ಜನಸಂಖ್ಯೆಯ ಶೇ 60ರಷ್ಟು ಜನರು ಅವಲಂಬಿತರಾಗಿ ಇತರೇ ಕೊಡುಗೆ ನೀಡುತ್ತಿದ್ದಾರೆ” ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.

“ಯಾವುದೇ ದೇಶವು ತನ್ನ ಜನಸಂಖ್ಯೆಯ 60 ಪ್ರತಿಶತವನ್ನು ನಿರ್ಲಕ್ಷಿಸುವ ಮೂಲಕ ತನ್ನ ಆರ್ಥಿಕತೆಯನ್ನು ಬಲಪಡಿಸಲು ಸಾಧ್ಯವಿಲ್ಲ ಮತ್ತು ದೇಶದ ಜನಸಂಖ್ಯೆಯ 60 ಪ್ರತಿಶತದಷ್ಟು ಜನರಿಗೆ ಸ್ಥಾನವಿಲ್ಲದ ಆರ್ಥಿಕತೆಯು ಎಂದಿಗೂ ಯಶಸ್ವಿಯಾಗುವುದಿಲ್ಲ. ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಿಡಿಪಿಯನ್ನು ಹೆಚ್ಚಿಸಲು ಶ್ರಮಿಸುತ್ತಿದೆ ಮತ್ತು ಈ 60 ಪ್ರತಿಶತದಷ್ಟು ಜನರಿಗೆ ಉದ್ಯೋಗವನ್ನು ಒದಗಿಸುವ ಮೂಲಕ ಅವರ ಏಳಿಗೆಯನ್ನು ಖಾತ್ರಿಪಡಿಸುತ್ತದೆ ಮತ್ತು ಇದಕ್ಕೆ ಏಕೈಕ ಮಾರ್ಗವೆಂದರೆ ಸಹಕಾರಿ ಕ್ಷೇತ್ರವನ್ನು ಬಲಪಡಿಸುವುದು. ಈ ನಿಟ್ಟಿನಲ್ಲಿ, ರಾಷ್ಟ್ರೀಯ ಸಹಕಾರಿ ರಫ್ತು ನಿಯಮಿತವು ದೇಶದ ಸಂಪೂರ್ಣ ಸಹಕಾರಿ ರಚನೆಯನ್ನು ಬಲಪಡಿಸಲು ಕೆಲಸ ಮಾಡಲಿದೆ” ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.

“ರಫ್ತು ಹೆಚ್ಚಿಸುವುದು, ರೈತರ ಏಳಿಗೆ, ಬೆಳೆ ಮಾದರಿ ಬದಲಾವಣೆ, ಸಾವಯವ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುವುದು, ಜೈವಿಕ ಇಂಧನಕ್ಕಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರತಕ್ಕೆ ಸ್ಥಾನ ದೊರಕಿಸಿಕೊಡುವುದು ಮತ್ತು ಸಹಕಾರವನ್ನು ಬಲಪಡಿಸುವುದು ಮುಂತಾದ ರೈತರ ಕಲ್ಯಾಣದ ಸಹಕಾರಿ ವಲಯದ ಅನನ್ಯ 6 ಉದ್ದೇಶಗಳೊಂದಿಗೆ ರಾಷ್ಟ್ರೀಯ ಸಹಕಾರಿ ರಫ್ತು ನಿಯಮಿತ(ಎನ್‌.ಸಿ.ಇ.ಎಲ್.)ವನ್ನು ಪ್ರಾರಂಭಿಸಲಾಗಿದೆ. ಈ ಹೊಸ ಆರಂಭದೊಂದಿಗೆ, ಸಹಕಾರಿ ವ್ಯವಸ್ಥೆಯು ರೈತರು ಮತ್ತು ಹಾಲಿನ ಉತ್ಪನ್ನದ ಜಾಗತಿಕ ಬೇಡಿಕೆಯ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸಲಿವೆ.“ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.

“ಈ ಹೊಸ ಆರಂಭದೊಂದಿಗೆ, ಸಹಕಾರಿ ರಂಗವು ರೈತರು ಮತ್ತು ಹಾಲಿನ ಉತ್ಪನ್ನಗಳು, ಇಸಾಬ್ಗೋಲ್ (ಸೈಲಿಯಮ್), ಜೀರಿಗೆ, ಎಥೆನಾಲ್ ಮತ್ತು ವಿವಿಧ ಸಾವಯವ ಉತ್ಪನ್ನಗಳಿಗೆ ಜಾಗತಿಕ ಬೇಡಿಕೆಯ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ಇದುವರೆಗೆ ಸುಮಾರು 1500 ಸಹಕಾರಿ ಸಂಘಗಳು ಎನ್‌.ಸಿ.ಇ.ಎಲ್‌.ನ ಸದಸ್ಯತ್ವ ಪಡೆದಿದ್ದು, ಮುಂದಿನ ದಿನಗಳಲ್ಲಿ ಪ್ರತಿಯೊಂದೂ ತಹಸಿಲ್‌ಗಳ ಸಹಕಾರಿ ಸಂಘಟನೆಗಳು ಸೇರಿ ರೈತರ ಧ್ವನಿಯಾಗುವ ನಿರೀಕ್ಷೆ ಇದೆ. ಇಲ್ಲಿಯವರೆಗೆ ಎನ್‌.ಸಿ.ಇ.ಎಲ್‌. ಸಂಸ್ಥೆಯು ರೂ. 7,000 ಕೋಟಿ ಮೌಲ್ಯದ ಆರ್ಡರ್‌ಗಳನ್ನು ಸ್ವೀಕರಿಸಿದೆ ಮತ್ತು ರೂ. 15,000 ಕೋಟಿ ಮೌಲ್ಯದ ಬೇಡಿಕೆಯ ಆದೇಶಗಳ ಮಾತುಕತೆ ನಡೆಸುತ್ತಿದೆ. ಮುಂಬರುವ ದಿನಗಳಲ್ಲಿ ಇಫ್ಕೊ, ಕ್ರಿಭ್ಕೊ ಮತ್ತು ಅಮುಲ್‌ ನಂತೆ ರಾಷ್ಟ್ರೀಯ ಸಹಕಾರಿ ರಫ್ತು ನಿಯಮಿತ (ಎನ್‌.ಸಿ.ಇ.ಎಲ್. - ನ್ಯಾಷನಲ್ ಕೋಆಪರೇಟಿವ್ ಎಕ್ಸ್‌ಪೋರ್ಟ್ ಲಿಮಿಟೆಡ್ ) ಸಂಸ್ಥೆ ಕೂಡ ಅತ್ಯಂತ ದೊಡ್ಡ ಮತ್ತು ಯಶಸ್ವಿ ಸಹಕಾರಿ ಉದ್ಯಮವಾಗಿ ಹೊರಹೊಮ್ಮಲಿದೆ” ಎಂದು ಕೇಂದ್ರ ಸಹಕಾರ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

 

https://static.pib.gov.in/WriteReadData/userfiles/image/image005PO7N.jpg\

“ನಮ್ಮ ದೇಶದ ಒಟ್ಟು ಆಹಾರ ಉತ್ಪಾದನೆಯಲ್ಲಿ ಸಹಕಾರಿ ರಂಗದ ಪಾಲು ಶೇ.30ರಷ್ಟು, ಇದರಲ್ಲಿ ಸಕ್ಕರೆ ಉತ್ಪಾದನೆಯ ಸಹಕಾರಿ ರಂಗದ ಪಾಲು ಶೇ.30ರಷ್ಟಿದೆ, ಹಾಗೂ ಹಾಲಿನ ಉತ್ಪಾದನೆಯ ಸಹಕಾರಿ ಸಂಸ್ಥೆಗಳ ಪಾಲು ಶೇ.17ರಷ್ಟು ಇದೆ. ದೇಶದ ರೈತರಿಗೆ ಒದಗಿಸುವ ಒಟ್ಟು ಹಣಕಾಸಿನ ಶೇಕಡ 42 ರಷ್ಟನ್ನು ಸಹಕಾರಿ ಸಂಘಗಳ ಮೂಲಕ ಮಾಡಲಾಗುತ್ತದೆ. ಇದಲ್ಲದೆ, ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಸಕ್ಕರೆ ಉತ್ಪಾದನೆಯಲ್ಲಿ ಸಹಕಾರಿ ಸಂಘಗಳ ಕೊಡುಗೆ ಶೇ.30ರಷ್ಟಿದ್ದರೂ, ಸಕ್ಕರೆ ರಫ್ತಿನಲ್ಲಿ ಸಹಕಾರಿ ರಂಗದ ಪಾಲು ಕೇವಲ ಶೇ 01ರಷ್ಟು ಮಾತ್ರವಿದೆ. ಹಾಲು ಉತ್ಪಾದನೆಯಲ್ಲಿ ಸಹಕಾರಿಗಳ ಕೊಡುಗೆ 17% ಆಗಿದ್ದರೂ ಕೂಡಾ ಹಾಲಿನ ಉತ್ಪನ್ನಗಳ ರಫ್ತಿನಲ್ಲಿ ಸಹಕಾರಿ ರಂಗದ ಪಾಲು ಕೇವಲ ಶೇ 02% ಕ್ಕಿಂತ ಕಡಿಮೆ ಇದೆ. ಇದು ಸಹಕಾರಿ ಕ್ಷೇತ್ರದಲ್ಲಿ ಈಗ ಇರುವ ಕೊರತೆಯನ್ನು ಮತ್ತು ಮುಂದಿನ ದಿನಗಳಲ್ಲಿ ಸಾಧ್ಯವಿರುವ ಅಪಾರ ಅವಕಾಶಗಳನ್ನು ಸೂಚಿಸುತ್ತದೆ. ಅವುಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು, ರೈತರು, ಸಹಕಾರಿ ಸಂಘಟನೆಗಳು ಮತ್ತು ಜಾಗತಿಕ ಮಾರುಕಟ್ಟೆಯ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸಲು ಒಂದು ಸಾಧನದ ಅಗತ್ಯವಿದೆ ಮತ್ತು ಈಗ ನ್ಯಾಷನಲ್ ಕೋಆಪರೇಟಿವ್ ಎಕ್ಸ್‌ಪೋರ್ಟ್ ಲಿಮಿಟೆಡ್ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ನ್ಯಾಶನಲ್ ಕೋಆಪರೇಟಿವ್ ಎಕ್ಸ್‌ಪೋರ್ಟ್ ಲಿಮಿಟೆಡ್ ಸಣ್ಣ ರೈತ ಸಮಾಜಗಳಿಗೆ ಅಗತ್ಯವಾದ ಹಣಕಾಸು ಮತ್ತು ಮಾಹಿತಿಯನ್ನು ಒದಗಿಸುತ್ತದೆ, ರಫ್ತು ಮಾಡುವಾಗ ಅಗತ್ಯವಿರುವ ಸೂಕ್ಷ್ಮತೆಗಳು ಮತ್ತು ಅಗತ್ಯ ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ ಮತ್ತು ರಫ್ತು ಸ್ನೇಹಿ ವಸ್ತುಗಳ ಉತ್ಪಾದನೆಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತದೆ. ಇದರ ಹೊರತಾಗಿ, ಎನ್‌.ಸಿ.ಇ.ಎಲ್‌. ಸಂಸ್ಥೆಯು ಸಣ್ಣ ರೈತರಿಗೆ ಉತ್ಪನ್ನಗಳ ಬ್ರಾಂಡ್ ಅರಿವು, ಗುಣಮಟ್ಟದ ಅರಿವು, ಅಗತ್ಯ ಮೂಲಸೌಕರ್ಯ ಮತ್ತು ಉತ್ಪನ್ನದ ಪ್ರಮಾಣೀಕರಣಕ್ಕಾಗಿ ನಿಯತಾಂಕ ( ಮಾನದಂಡ) ಗಳನ್ನು ನಿಗದಿಪಡಿಸುವಂತಹ ಕೆಲಸವನ್ನು ಅತ್ಯಲ್ಪ ಶುಲ್ಕದಲ್ಲಿ ಮಾಡಲಿದೆ” ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.

“ ಇಂದು ಕೃಷಿ ಉತ್ಪನ್ನಗಳ ರಫ್ತಿನ ಲಾಭ ರೈತರಿಗೆ ತಲುಪುತ್ತಿಲ್ಲ, ಆದರೆ ನ್ಯಾಷನಲ್ ಕೋಆಪರೇಟಿವ್ ಎಕ್ಸ್‌ಪೋರ್ಟ್ ಲಿಮಿಟೆಡ್ ಮೂಲಕ ಕನಿಷ್ಠ 50% ರಫ್ತು ಲಾಭವು ನೇರವಾಗಿ ರೈತರಿಗೆ (ರೈತರ ಬ್ಯಾಂಕು ಖಾತೆಗೆ) ಹೋಗಲಿದೆ. ರೈತರಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಖರೀದಿ ಮಾಡಲಾಗುವುದು ಮತ್ತು ನಂತರ 6 ತಿಂಗಳ ಆಯವ್ಯಯ ಪಟ್ಟಿಯನ್ನು ಸಿದ್ಧಪಡಿಸಿದ ನಂತರ, ಎಂಎಸ್‌ಪಿ ಪ್ರಕಾರ ಮಾಡಿದ ಪಾವತಿಯ ಜೊತೆಗೆ ಶೇಕಡಾ 50 ರಷ್ಟು ಲಾಭವು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹೋಗುತ್ತದೆ. ಇದು ರಫ್ತು ಮಾಡಬಹುದಾದ ಉತ್ಪಾದನೆಯನ್ನು ಹೆಚ್ಚಿಸುವತ್ತ ರೈತರ ಉತ್ಸಾಹವನ್ನು ಹೆಚ್ಚಿಸುತ್ತದೆ. ನ್ಯಾಷನಲ್ ಕೋಆಪರೇಟಿವ್ ಎಕ್ಸ್‌ಪೋರ್ಟ್ ಲಿಮಿಟೆಡ್ ಕೇವಲ ಲಾಭದತ್ತ ಮಾತ್ರ ಗಮನಹರಿಸದೆ, ರೈತರನ್ನು ಕೇಂದ್ರೀಕರಿಸುವುದು ಅದರ ಪ್ರಾಥಮಿಕ ಗುರಿಯಾಗಿದೆ. ರಫ್ತು ಹೆಚ್ಚಿಸಲು ರೈತರಲ್ಲಿ ರಫ್ತು ಮನೋಭಾವನೆಯನ್ನು ಬೆಳೆಸಬೇಕು, ಬೆಳೆ ಮಾದರಿಯನ್ನು ಬದಲಾಯಿಸಬೇಕು ಮತ್ತು ರೈತರಲ್ಲಿ ಜಾಗೃತಿ ಮೂಡಿಸುವ ಮೂಲಕ ಬ್ರ್ಯಾಂಡಿಂಗ್, ಪ್ಯಾಕೇಜಿಂಗ್ ಮತ್ತು ಮಾರುಕಟ್ಟೆಯ ಸಂಪೂರ್ಣ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ. ನ್ಯಾಷನಲ್ ಕೋಆಪರೇಟಿವ್ ಎಕ್ಸ್‌ಪೋರ್ಟ್ ಲಿಮಿಟೆಡ್ ವ್ಯವಸ್ಥೆಯನ್ನು ಸ್ಥಾಪಿಸಬೇಕಾಗುತ್ತದೆ, ಆಗ ಮಾತ್ರ ನಾವು ಈ ಹಿಂದೆ ಸೂಚಿಸಿದ ರೈತರ ಕ್ಷೇಮದ 6 ಉದ್ದೇಶಗಳನ್ನು ಸಾಧಿಸುವತ್ತ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ.” ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.

 

https://static.pib.gov.in/WriteReadData/userfiles/image/image006NPX6.jpg

 

“ಎನ್‌ಸಿಇಎಲ್ ಸಂಪೂರ್ಣ ಸಹಕಾರಿ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸ್ಥೆಯಾಗಲಿದೆ ಮತ್ತು ಮುಂದಿನ ದಿನಗಳಲ್ಲಿ ಖರೀದಿ, ಸಂಗ್ರಹಣೆ, ಸಂಸ್ಕರಣೆ, ಮಾರುಕಟ್ಟೆ, ಬ್ರ್ಯಾಂಡಿಂಗ್‌ನಂತಹ - ಲೇಬಲಿಂಗ್, ಪ್ಯಾಕೇಜಿಂಗ್, ಪ್ರಮಾಣೀಕರಣ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಮುಂತಾದ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಸಂಪೂರ್ಣ ರಫ್ತು ಪರಿಸರ ಪೂರಕ ವ್ಯವಸ್ಥೆಯಾಗಿ ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುವುದು. ಎನ್‌ಸಿಇಎಲ್ ಮಾರುಕಟ್ಟೆ ಸಂಪರ್ಕಕ್ಕಾಗಿ ಕೇಂದ್ರ ಸರ್ಕಾರದ ವಿಧಾನದೊಂದಿಗೆ ಸಂಪರ್ಕ ಸಾಧಿಸಲು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ವಿದೇಶದಲ್ಲಿರುವ ನಮ್ಮ ರಾಯಭಾರ ಕಚೇರಿಗಳೊಂದಿಗೆ ಸಂಪೂರ್ಣ ಸಹಐೋಗದಲ್ಲಿ ಕೆಲಸ ಮಾಡಲಿದೆ. ಇದಲ್ಲದೆ, ರೈತರ ಉತ್ಪಾದಕರ ಸಂಸ್ಥೆಗಳು (ಎಫ್‌ಪಿಒಗಳು) ಮತ್ತು ಪ್ರಾಥಮಿಕ ಕೃಷಿ ಸಹಕಾರಿ ಸಾಲ ಸಂಘಗಳನ್ನು (ಪಿಎಸಿಎಸ್) ಮುಂತಾದ ಪ್ರಾಥಮಿಕ ಸಹಕಾರಿ ಸಂಘಟನೆಗಳನ್ನು ಒಟ್ಟಿಗೆ ಸೇರಿಸಿಕೊಂಡು ಸಂಪೂರ್ಣ ವಿನ್ಯಾಸವನ್ನು ಸಿದ್ಧಪಡಿಸಲಾಗುತ್ತದೆ, ಇದರಿಂದ ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಯಾಗಲಿದೆ.” ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ರಫ್ತು ಹೆಚ್ಚಿಸುವುದರ ಜೊತೆಗೆ ಅದರ ಲಾಭವನ್ನು ರೈತರಿಗೆ ತಲುಪಿಸಲು ಸುಗಮ ವ್ಯವಸ್ಥೆಯನ್ನು ರಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ರಾಷ್ಟ್ರಮಟ್ಟದಲ್ಲಿ ಬೀಜ ಉತ್ಪಾದನೆಗೆ ಪ್ರೋತ್ಸಾಹ, ಸಾವಯವ ಉತ್ಪನ್ನಗಳ ಪ್ರಮಾಣೀಕರಣ ಹಾಗೂ ಬ್ರ್ಯಾಂಡಿಂಗ್ ಮತ್ತು ರಫ್ತಿಗಾಗಿ ಸಹಕಾರಿ ವ್ಯವಸ್ಥೆ ನಿರ್ಮಾಣ – ಹೀಗೆ ಮೂರು ಮಹತ್ತರ ಉದ್ದೇಶಗಳ ಬಹು-ರಾಜ್ಯ ಸಹಕಾರ ಸಂಘಗಳ ವ್ಯವಸ್ಥೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಚಿಸಿದ್ದಾರೆ.

 

 



(Release ID: 1970303) Visitor Counter : 77