ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಪೊಲೀಸ್ ಸ್ಮರಣಾರ್ಥ ದಿನದಂದು (ಶನಿವಾರ, 21 ಅಕ್ಟೋಬರ್ 2023) ನವದೆಹಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು


ಅಕ್ಟೋಬರ್ 21, 1959 ರಂದು, ಲಡಾಖ್ ನ ಹಾಟ್ ಸ್ಪ್ರಿಂಗ್ಸ್ ನಲ್ಲಿ ಭಾರೀ ಶಸ್ತ್ರಸಜ್ಜಿತ ಚೀನೀ ಪಡೆಗಳು ನಡೆಸಿದ ಹೊಂಚುದಾಳಿಯಲ್ಲಿ ಹತ್ತು ಮಂದಿ ಧೀರ ಪೊಲೀಸರು ತಮ್ಮ ಪ್ರಾಣವನ್ನು ಅರ್ಪಿಸಿದರು, ಈ ಹುತಾತ್ಮರು ಮತ್ತು ಕರ್ತವ್ಯದಲ್ಲಿ ಕೊಲ್ಲಲ್ಪಟ್ಟ ಇತರ ಎಲ್ಲಾ ಪೊಲೀಸ್ ಸಿಬ್ಬಂದಿಗಳ ಸ್ಮರಣಾರ್ಥವಾಗಿ ಪ್ರತಿವರ್ಷವೂ ಅಕ್ಟೋಬರ್ 21 ರಂದು ಪೊಲೀಸ್ ಸ್ಮರಣಾರ್ಥ ದಿನವಾಗಿ ಆಚರಿಸಲಾಗುತ್ತದೆ.

ಪೊಲೀಸ್ ಸಿಬ್ಬಂದಿಯ ತ್ಯಾಗ ಮತ್ತು ರಾಷ್ಟ್ರೀಯ ಭದ್ರತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಅವರ ಪ್ರಮುಖ ಪಾತ್ರವನ್ನು ಗುರುತಿಸಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರು ಪೊಲೀಸ್ ಸ್ಮರಣಾರ್ಥ ದಿನ-2018 ರಂದು ನವದೆಹಲಿಯ ಚಾಣಕ್ಯಪುರಿಯಲ್ಲಿ “ರಾಷ್ಟ್ರೀಯ ಪೊಲೀಸ್ ಸ್ಮಾರಕ” ವನ್ನು ದೇಶಕ್ಕೆ ಸಮರ್ಪಿಸಿದರು.

Posted On: 20 OCT 2023 5:00PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಪೊಲೀಸ್ ಸ್ಮರಣಾರ್ಥ ದಿನದಂದು (ಶನಿವಾರ, 21 ಅಕ್ಟೋಬರ್ 2023) ನವದೆಹಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಹುತಾತ್ಮರಿಗೆ ಗೌರವ ನಮನ ಸಲ್ಲಿಸಲಿದ್ದಾರೆ.

ಅಕ್ಟೋಬರ್ 21, 1959 ರಂದು, ಲಡಾಖ್ನ ಹಾಟ್ ಸ್ಪ್ರಿಂಗ್ಸ್ನಲ್ಲಿ ಭಾರಿ ಶಸ್ತ್ರಸಜ್ಜಿತ ಚೀನೀ ಪಡೆಗಳು ಹೊಂಚುದಾಳಿಯಲ್ಲಿ ಹತ್ತು ವೀರ ಪೊಲೀಸರು ತಮ್ಮ ಪ್ರಾಣವನ್ನು ಅರ್ಪಿಸಿದರು. ಅಕ್ಟೋಬರ್ 21 ರಂದು ಈ ಹುತಾತ್ಮರ ಮತ್ತು ಕರ್ತವ್ಯದಲ್ಲಿ ಹುತಾತ್ಮರಾದ ಇತರ ಎಲ್ಲಾ ಪೊಲೀಸ್ ಸಿಬ್ಬಂದಿಯ ಸ್ಮರಣಾರ್ಥವಾಗಿ ರಾಷ್ಟ್ರೀಯ ಪೊಲೀಸ್ ಸ್ಮರಣಾರ್ಥ ದಿನವಾಗಿ ಆಚರಿಸಲಾಗುತ್ತದೆ. ಪೊಲೀಸ್ ಸಿಬ್ಬಂದಿಯ ತ್ಯಾಗ ಮತ್ತು ರಾಷ್ಟ್ರೀಯ ಭದ್ರತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಅವರ ಪ್ರಮುಖ ಪಾತ್ರವನ್ನು ಗುರುತಿಸಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರು ಪೊಲೀಸ್ ಸ್ಮರಣಾರ್ಥ ದಿನ-2018 ರಂದು ರಾಷ್ಟ್ರೀಯ ಪೊಲೀಸ್ ಸ್ಮಾರಕ ( ಚಾಣಕ್ಯಪುರಿ, ನವದೆಹಲಿ) ವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

ಸ್ಮಾರಕವು ಪೊಲೀಸ್ ಪಡೆಗಳಿಗೆ ರಾಷ್ಟ್ರೀಯ ಗುರುತು, ಹೆಮ್ಮೆ, ಉದ್ದೇಶದ ಏಕತೆ, ಸಾಮಾನ್ಯ ಇತಿಹಾಸ ಮತ್ತು ಹಣೆಬರಹವನ್ನು ನೀಡುತ್ತದೆ, ಜೊತೆಗೆ ಅವರ ಜೀವನದ ಹಂಗು ತೊರೆದು ರಾಷ್ಟ್ರವನ್ನು ರಕ್ಷಿಸುವ ಅವರ ಬದ್ಧತೆಯನ್ನು ಬಲಪಡಿಸುತ್ತದೆ. ಸ್ಮಾರಕವು ಕೇಂದ್ರ ಶಿಲ್ಪ, 'ವಾಲ್ ಆಫ್ ಶೌರ್ಯ' ಮತ್ತು ವಸ್ತುಸಂಗ್ರಹಾಲಯವನ್ನು ಒಳಗೊಂಡಿದೆ. 30 ಅಡಿ ಎತ್ತರದ ಗ್ರಾನೈಟ್ ಏಕಶಿಲೆಯ ಸಮಾಧಿಯಾಗಿರುವ ಕೇಂದ್ರ ಶಿಲ್ಪವು ಪೊಲೀಸ್ ಸಿಬ್ಬಂದಿಯ ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ನಿಸ್ವಾರ್ಥ ಸೇವೆಯನ್ನು ಪ್ರತಿನಿಧಿಸುತ್ತದೆ. ಹುತಾತ್ಮರ ಹೆಸರನ್ನು ಕೆತ್ತಲಾಗಿರುವ ಶೌರ್ಯದ ಗೋಡೆಯು ಸ್ವಾತಂತ್ರ್ಯದ ನಂತರ ಕರ್ತವ್ಯದ ಸಾಲಿನಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಪೊಲೀಸ್ ಸಿಬ್ಬಂದಿಯ ಶೌರ್ಯ ಮತ್ತು ತ್ಯಾಗದ ದೃಢವಾದ ಅಂಗೀಕಾರವಾಗಿದೆ. ಮ್ಯೂಸಿಯಂ ಅನ್ನು ಭಾರತದಲ್ಲಿ ಪೊಲೀಸಿಂಗ್ ಕುರಿತು ಐತಿಹಾಸಿಕ ಮತ್ತು ವಿಕಸನಗೊಳ್ಳುತ್ತಿರುವ ಪ್ರದರ್ಶನವೆಂದು ಪರಿಗಣಿಸಲಾಗಿದೆ. ಸ್ಮಾರಕವು ಯಾತ್ರಾ ಸ್ಥಳವಾಗಿದೆ, ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕರಿಗೆ ಸಮಾನವಾಗಿ ಪೂಜ್ಯ ಸ್ಥಳವಾಗಿದೆ. ಸೋಮವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ರಾಷ್ಟ್ರೀಯ ಪೊಲೀಸ್ ಸ್ಮಾರಕ ಸಾರ್ವಜನಿಕರಿಗೆ ತೆರೆದಿರುತ್ತದೆ. ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ ಸೂರ್ಯಾಸ್ತದ ಒಂದು ಗಂಟೆ ಮೊದಲು ರಾಷ್ಟ್ರೀಯ ಪೊಲೀಸ್ ಸ್ಮಾರಕ ನಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿ.ಎ.ಪಿ.ಎಫ್) ಗಳು ಬ್ಯಾಂಡ್ ಪ್ರದರ್ಶನ, ಮೆರವಣಿಗೆ ಮತ್ತು ವೈರಿಗಳನ್ನು ಹಿಮ್ಮೆಟ್ಟುವಿಕೆ ಪ್ರಾತ್ಯಕ್ಷಿಕೆ ಸಮಾರಂಭವನ್ನು ಆಯೋಜಿಸುತ್ತಿದೆ.

ಪ್ರತಿವರ್ಷವೂ ಅಕ್ಟೋಬರ್ 21 ರನ್ನು ದೇಶಾದ್ಯಂತ ಪೊಲೀಸ್ ಸ್ಮರಣಾರ್ಥ ದಿನವಾಗಿ ಆಚರಿಸಲಾಗುತ್ತದೆ ಮತ್ತು ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಆಯೋಜಿಸಲಾದ ಮುಖ್ಯ ಸಮಾರಂಭದೊಂದಿಗೆ ಪೊಲೀಸ್ ಹುತಾತ್ಮರಿಗೆ ಗೌರವ ಸಲ್ಲಿಸಲಾಗುತ್ತದೆ. ಸಾಮಾನ್ಯವಾಗಿ ಕೇಂದ್ರ ಗೃಹ ಸಚಿವರು ಸಮಾರಂಭದ ಅಧ್ಯಕ್ಷತೆ ವಹಿಸುತ್ತಾರೆ. ದೆಹಲಿ ಪೊಲೀಸರೊಂದಿಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿ.ಎ.ಪಿ.ಎಫ್) ಜಂಟಿ ಪರೇಡ್ ಅನ್ನು ಕೂಡಾ ನಡೆಸಲಾಗುತ್ತದೆ. ಕೇಂದ್ರ ಗೃಹ ಸಚಿವರು, ರಾಜ್ಯ ಖಾತೆ ಸಚಿವರು, ಸಂಸದರು, ಸಿ.ಎ.ಪಿ.ಎಫ್ /ಸಿಪಿಒಗಳ ಮುಖ್ಯಸ್ಥರು ಮುಂತಾದವರು ಹುತಾತ್ಮರಿಗೆ ಪುಷ್ಪಗುಚ್ಛಗಳನ್ನು ಹಾಕುವ ಮೂಲಕ ಗೌರವ ನಮನ ಸಲ್ಲಿಸುತ್ತಾರೆ. ನಂತರ, ಕೇಂದ್ರ ಗೃಹ ಸಚಿವರು ಹುತಾತ್ಮರನ್ನು ಸ್ಮರಿಸುತ್ತಾ ಸಭೆಯನ್ನು ಉದ್ದೇಶಿಸಿ ಪೊಲೀಸಿಂಗ್ ನ ಸವಾಲುಗಳನ್ನು ವಿವರಿಸುತ್ತಾರೆ. ನಿವೃತ್ತ ಡಿಜಿಗಳು, ಪೊಲೀಸ್ ಭ್ರಾತೃತ್ವದ ಅಧಿಕಾರಿಗಳು ಮತ್ತು ಇತರ ಗಣ್ಯರು ಭಾಗವಹಿಸುತ್ತಾರೆ. ಕೇಂದ್ರ ಗೃಹ ಸಚಿವರು ಹಾಟ್ ಸ್ಪ್ರಿಂಗ್ಸ್ ನ ಹುತಾತ್ಮರಿಗೆ ಸಮರ್ಪಿತವಾದ ಬಲಿಪೀಠಕ್ಕೆ ಪುಷ್ಪಾಂಜಲಿ ಸಲ್ಲಿಸುವುದರೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಳ್ಳುತ್ತದೆ. ಈ ಕಾರ್ಯಕ್ರಮವನ್ನು ದೂರದರ್ಶನದಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ, ಪೊಲೀಸ್ ವೆಬ್ಸೈಟ್ಗಳಲ್ಲಿ ವೆಬ್ಕಾಸ್ಟ್ ಮಾಡಲಾಗುತ್ತದೆ, ಜೊತೆಗೆ ಆಕಾಶವಾಣಿ ವಾರ್ತೆ(ಏಐಆರ್) ಮತ್ತು ಇತರ ಮಾಧ್ಯಮಗಳು ಕೂಡಾ ನೇರ ಪ್ರಸಾರ ಮಾಡುತ್ತವೆ.

ತರುವಾಯ, ಸಿ.ಎ.ಪಿ.ಎಫ್ /ಸಿಪಿಒಗಳು ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಅಕ್ಟೋಬರ್ 22 ರಿಂದ 30 ರವರೆಗೆ ಹುತಾತ್ಮರ ಕುಟುಂಬ ಸದಸ್ಯರ ಭೇಟಿ, ಪೊಲೀಸ್ ಬ್ಯಾಂಡ್ ಪ್ರದರ್ಶನ, ಮೋಟಾರ್ಸೈಕಲ್ ಪಥಸಂಚಲನಗಳು, ಹುತಾತ್ಮರಿಗೆ ಓಟ, ರಕ್ತದಾನ ಶಿಬಿರ, ಪ್ರಬಂಧ/ ಚಿತ್ರಕಲೆ ಸ್ಪರ್ಧೆಗಳು, ವಿಡಿಯೋ ಚಲನಚಿತ್ರಗಳ ಪ್ರದರ್ಶನ ಪೊಲೀಸ್ ಸಿಬ್ಬಂದಿಯ ತ್ಯಾಗ, ಶೌರ್ಯ ಮತ್ತು ಸೇವೆ ಮುಂತಾದ ವಿವಿಧ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಈ ಅವಧಿಯಲ್ಲಿ ದೇಶದಾದ್ಯಂತ ಎಲ್ಲಾ ಪೊಲೀಸ್ ಪಡೆಗಳಿಂದ ಇದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

 

https://static.pib.gov.in/WriteReadData/userfiles/image/image001L314.jpg
ರಾಷ್ಟ್ರೀಯ ಪೊಲೀಸ್ ಸ್ಮಾರಕ ( ಚಾಣಕ್ಯಪುರಿ, ನವದೆಹಲಿ)


(Release ID: 1969586) Visitor Counter : 250