ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರು ಗೂಗಲ್ ಸಿ.ಇ.ಒ. ಶ್ರೀ ಸುಂದರ್ ಪಿಚೈ ಅವರೊಂದಿಗೆ ಸಂವಾದ ನಡೆಸಿದರು
ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ವಿಸ್ತರಿಸುವ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಗೂಗಲ್ ಸಿ.ಇ.ಒ. ಶ್ರೀ ಸುಂದರ್ ಪಿಚೈ ಅವರು ಚರ್ಚಿಸಿದರು
ಯು.ಪಿ.ಐ. ಮೂಲಕ ಭಾರತದಲ್ಲಿ ಆರ್ಥಿಕ ಸೇರ್ಪಡೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಗೂಗಲ್ ಯೋಜನೆಗಳ ಕುರಿತು ಮತ್ತು ಗೂಗಲ್ ಸಿ.ಇ.ಒ. ಶ್ರೀ ಸುಂದರ್ ಪಿಚೈ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ತಿಳಿಸಿದರು.
Posted On:
16 OCT 2023 10:02PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಜಾನೆ ಗೂಗಲ್ ಮತ್ತು ಆಲ್ಫಾಬೆಟ್ ಸಿ.ಇ.ಒ. ಶ್ರೀ ಸುಂದರ್ ಪಿಚೈ ಅವರೊಂದಿಗೆ ವಿಡಿಯೊ ಮೂಲಕ (ವಾಸ್ತವಿಕವಾಗಿ ) ಸಂವಾದ ನಡೆಸಿದರು.
ಸಂವಾದದ ಸಮಯದಲ್ಲಿ, ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ವಿಸ್ತರಿಸುವಲ್ಲಿ ಭಾಗವಹಿಸುವ ಗೂಗಲ್ ಸಂಸ್ಥೆಯ ಯೋಜನೆಯನ್ನು ಪ್ರಧಾನಮಂತ್ರಿ ಮತ್ತು ಶ್ರೀ ಸುಂದರ್ ಪಿಚೈ ಅವರು ಚರ್ಚಿಸಿದರು. ಭಾರತದಲ್ಲಿ ಕ್ರೊಮ್ ಬುಕ್ ಗಳನ್ನು ತಯಾರಿಸಲು ಹೆಚ್.ಪಿ.ಯೊಂದಿಗೆ ಗೂಗಲ್ ನ ಪಾಲುದಾರಿಕೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.
ಗೂಗಲ್ ನ 100 ಭಾಷೆಗಳ ಉಪಕ್ರಮವನ್ನು ಪ್ರಧಾನಮಂತ್ರಿಯವರು ಗಮನಿಸಿದರು. ಭಾರತೀಯ ಭಾಷೆಗಳಲ್ಲಿ ಎ.ಐ. ಪರಿಕರಗಳನ್ನು ಲಭ್ಯವಾಗುವಂತೆ ಮಾಡುವ ಈ ಪ್ರಯತ್ನಗಳನ್ನು ಹಾಗೂ ಉತ್ತಮ ಆಡಳಿತಕ್ಕಾಗಿ ಎ.ಐ. ಪರಿಕರಗಳಲ್ಲಿ ಕೆಲಸ ಮಾಡಲು ಯೋಜನೆ ಪ್ರಾರಂಭಿಸಿದ್ದಕ್ಕಾಗಿ ಗೂಗಲ್ ಸಂಸ್ಥೆಯನ್ನು ಅವರು ಪ್ರೋತ್ಸಾಹಿಸಿದರು.
ಗಾಂಧಿನಗರದಲ್ಲಿರುವ ಗುಜರಾತ್ ಇಂಟರ್ನ್ಯಾಶನಲ್ ಫೈನಾನ್ಸ್ ಟೆಕ್-ಸಿಟಿ(ಜಿ.ಐ.ಎಫ್.ಟಿ)ಯಲ್ಲಿ ತನ್ನ ಜಾಗತಿಕ ಫಿನ್ಟೆಕ್ ಕಾರ್ಯಾಚರಣೆ ಕೇಂದ್ರವನ್ನು ತೆರೆಯುವ ಗೂಗಲ್ ನ ನೂತನ ಯೋಜನೆಯನ್ನು ಪ್ರಧಾನಮಂತ್ರಿಯವರು ಸ್ವಾಗತಿಸಿದರು.
ಜಿಪೇ ಮತ್ತು ಯು.ಪಿ.ಐ.ಯ ಸಾಮರ್ಥ್ಯ ಮತ್ತು ವ್ಯಾಪ್ತಿಯನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಭಾರತದಲ್ಲಿ ಆರ್ಥಿಕ ಸೇರ್ಪಡೆಯನ್ನು ಸುಧಾರಿಸುವ ಗೂಗಲ್ ನ ಯೋಜನೆಗಳ ಕುರಿತು ಶ್ರೀ ಪಿಚೈ ಅವರು ಪ್ರಧಾನಮಂತ್ರಿಯವರಿಗೆ ಮಾಹಿತಿ ತಿಳಿಸಿದರು. ಭಾರತದ ಅಭಿವೃದ್ಧಿ ಪಥಕ್ಕೆ ಕೊಡುಗೆ ನೀಡಲು ಗೂಗಲ್ ನ ಬದ್ಧತೆಯನ್ನು ಅವರು ಈ ಸಂದರ್ಭದಲ್ಲಿ ವಿವರಿಸಿ ಹೇಳಿದರು.
2023 ರ ಡಿಸೆಂಬರ್ ನಲ್ಲಿ ನವದೆಹಲಿಯಲ್ಲಿ ಭಾರತವು ಆಯೋಜಿಸುವ ಮುಂಬರುವ ಎ.ಐ. ಶೃಂಗಸಭೆಯಲ್ಲಿ ಜಾಗತಿಕ ಪಾಲುದಾರಿಕೆ ಮೂಲಕ ಕೊಡುಗೆ ನೀಡುವಂತೆ ಪ್ರಧಾನಮಂತ್ರಿ ಅವರು ಗೂಗಲ್ ಸಂಸ್ಥೆಗೆ ಆಹ್ವಾನ ನೀಡಿದರು.
*****
(Release ID: 1968413)
Visitor Counter : 100
Read this release in:
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam