ಸಂಪುಟ
ಡಿಜಿಟಲ್ ಪರಿವರ್ತನೆಗಾಗಿ ಜನಸಂಖ್ಯೆಗೆ ಅನುಗುಣವಾಗಿ ಜಾರಿಗೊಳಿಸಿರುವ ಯಶಸ್ವಿ ಡಿಜಿಟಲ್ ಪರಿಹಾರಗಳನ್ನು ವಿನಿಮಯ ಮಾಡಿಕೊಳ್ಳುವ ವಲಯದಲ್ಲಿ ಸಹಕಾರಕ್ಕಾಗಿ ಭಾರತ ಮತ್ತು ಟ್ರಿನಿಡಾಡ್ ಮತ್ತು ಟೊಬ್ಯಾಗೋ ನಡುವೆ ಒಪ್ಪಂದಕ್ಕೆ ಸಚಿವ ಸಂಪುಟ ಅನುಮೋದನೆ
Posted On:
11 OCT 2023 3:17PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ಭಾರತದ ಗಣರಾಜ್ಯದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಟ್ರಿನಿಡಾಡ್ ಮತ್ತು ಟೊಬ್ಯಾಗೋ ಗಣರಾಜ್ಯದ ಡಿಜಿಟಲ್ ಪರಿವರ್ತನಾ ತಂತ್ರಜ್ಞಾನ ಸಚಿವಾಲಯದ ನಡುವೆ 2023ರ ಆಗಸ್ಟ್ 11ರಂದು ಡಿಜಿಟಲ್ ಪರಿವರ್ತನೆಗೆ ಜನಸಂಖ್ಯೆಗೆ ಅನುಗುಣವಾಗಿ ಜಾರಿಗೊಳಿಸಿರುವ ಯಶಸ್ವಿ ಡಿಜಿಟಲ್ ಪರಿಹಾರಗಳನ್ನು ವಿನಿಮಯ ಮಾಡಿಕೊಳ್ಳುವ ವಲಯದಲ್ಲಿ ಸಹಕಾರಕ್ಕಾಗಿ ಮಾಡಿಕೊಂಡ ಒಪ್ಪಂದಕ್ಕೆ ಅನುಮೋದನೆ ನೀಡಿತು.
ವಿವರಗಳು:
ಎರಡೂ ದೇಶದ ಡಿಜಿಟಲ್ ಪರಿವರ್ತನಾ ಉಪಕ್ರಮಗಳ ಅನುಷ್ಠಾನದಲ್ಲಿ ನಿಕಟ ಸಹಕಾರ ಮತ್ತು ಅನುಭವಗಳ ವಿನಿಮಯ ಮತ್ತು ಡಿಜಿಟಲ್ ತಂತ್ರಜ್ಞಾನ-ಆಧರಿತ ಪರಿಹಾರಗಳನ್ನು (ಅಂದರೆ INDIS STACK) ಉತ್ತೇಜಿಸಲು ಒಡಂಬಡಿಕೆ (ಎಂಒಯು) ಉದ್ದೇಶಿಸಿದೆ.
ಎಂಒಯು ಉಭಯ ದೇಶಗಳು ಸಹಿ ಹಾಕಿದ ದಿನಾಂಕದಿಂದ ಜಾರಿಗೆ ಬರುತ್ತದೆ ಮತ್ತು 3 ವರ್ಷಗಳ ಅವಧಿಗೆ ಜಾರಿಯಲ್ಲಿರುತ್ತದೆ.
ಪರಿಣಾಮ:
ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಕ್ಷೇತ್ರದಲ್ಲಿ ಜಿ2ಜಿ ಮತ್ತು ಬಿ2ಬಿ ದ್ವಿಪಕ್ಷೀಯ ಸಹಕಾರವನ್ನು ವೃದ್ಶಿಸಲಾಗುವುದು.
ಎಂಒಯು ಐಟಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಗೆ ಕಾರಣವಾಗುವ ಸುಧಾರಿತ ಸಹಯೋಗವನ್ನು ಕಲ್ಪಿಸುತ್ತದೆ.
ಹಿನ್ನೆಲೆ:
ಐಸಿಸಿ ವಿಭಾಗದಲ್ಲಿ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಕಾರವನ್ನು ಉತ್ತೇಜಿಸಲು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಹಲವಾರು ದೇಶಗಳು ಮತ್ತು ಬಹುಪಕ್ಷೀಯ ಸಂಸ್ಥೆಗಳೊಂದಿಗೆ ಸಹಯೋಗವನ್ನು ಹೊಂದಿದೆ. ಕಾಲಾನುಕ್ರಮೇಣ MeitY, ಐಸಿಟಿ ವಿಭಾಗನಲ್ಲಿ ಸಹಕಾರ ಮತ್ತು ಮಾಹಿತಿಯ ವಿನಿಮಯವನ್ನು ಉತ್ತೇಜಿಸಲು ವಿವಿಧ ದೇಶಗಳ ಅದರ ಸಹವರ್ತಿ ಸಂಸ್ಥೆಗಳು/ಏಜೆನ್ಸಿಗಳೊಂದಿಗೆ ಎಂಒಯುಗಳು/ ಎಂಒಸಿಗಳು/ಒಪ್ಪಂದಗಳನ್ನು ಮಾಡಿಕೊಂಡಿದೆ. ಇದು ಭಾರತ ಸರ್ಕಾರವು ದೇಶವನ್ನು ಡಿಜಿಟಲ್ ಸಶಕ್ತ ಸಮಾಜ ಮತ್ತು ಜ್ಞಾನದ ಆರ್ಥಿಕತೆಯನ್ನಾಗಿ ಪರಿವರ್ತಿಸಲು ಕೈಗೊಂಡಿರುವ ಡಿಜಿಟಲ್ ಇಂಡಿಯಾ, ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ ಮತ್ತಿತರ ವಿವಿಧ ಉಪಕ್ರಮಗಳಿಗೆ ಅನುಗುಣವಾಗಿದೆ. ಬದಲಾಗುತ್ತಿರುವ ಈ ಆಯಾಮದಲ್ಲಿ, ಪರಸ್ಪರ ಸಹಕಾರವನ್ನು ಹೆಚ್ಚಿಸುವ ಉದ್ದೇಶದಿಂದ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸುವ, ಉತ್ತಮ ಪದ್ದತಿಗಳ ವಿನಿಮಯ ಮತ್ತು ಡಿಜಿಟಲ್ ವಲಯದಲ್ಲಿ ಹೂಡಿಕೆಗಳನ್ನು ಆಕರ್ಷಿಸುವ ಅವಶ್ಯಕತೆಯಿದೆ.
ಕಳೆದ ಕೆಲವು ವರ್ಷಗಳಿಂದ, ಭಾರತವು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಜಾರಿಯಲ್ಲಿ ತನ್ನ ನಾಯಕತ್ವವನ್ನು ಪ್ರದರ್ಶಿಸಿದೆ ಮತ್ತು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿಯೂ ಸಾರ್ವಜನಿಕರಿಗೆ ಸೇವೆಗಳನ್ನು ಯಶಸ್ವಿಯಾಗಿ ತಲುಪಿಸಿದೆ. ಇದರ ಪರಿಣಾಮವಾಗಿ, ಅನೇಕ ದೇಶಗಳು ಭಾರತದ ಅನುಭವಗಳಿಂದ ಕಲಿಯಲು ಮತ್ತು ಭಾರತದೊಂದಿಗೆ ಎಂಒಯುಗಳನ್ನು ಮಾಡಿಕೊಳ್ಳಲು ಆಸಕ್ತಿಯನ್ನು ತೋರುತ್ತಿವೆ.
ಸಾರ್ವಜನಿಕ ಸೇವೆಗಳ ಲಭ್ಯತೆ ಮತ್ತು ವಿತರಣೆಯನ್ನು ಒದಗಿಸಲು ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಭಾರತವು ಅಭಿವೃದ್ಧಿಪಡಿಸಿದ ಮತ್ತು ಜಾರಿಗೊಳಿಸಿದ ಡಿಪಿಐಗಳಲ್ಲಿ ಭಾರತ ಪರಿಹಾರಗಳು ಅಡಗಿವೆ. ಇದು ಸಂಪರ್ಕವನ್ನು ಹೆಚ್ಚಿಸಲು, ಡಿಜಿಟಲ್ ಸೇರ್ಪಡೆಯನ್ನು ಉತ್ತೇಜಿಸಲು ಮತ್ತು ಸಾರ್ವಜನಿಕ ಸೇವೆಗಳನ್ನು ತಡೆರಹಿತ ಲಭ್ಯತೆ ಸಕ್ರಿಯಗೊಳಿಸುವ ಗುರಿಯನ್ನು ಹೊಂದಿದೆ. ಇವುಗಳನ್ನು ಮುಕ್ತ ತಂತ್ರಜ್ಞಾನಗಳ ಮೇಲೆ ನಿರ್ಮಿಸಲಾಗಿದೆ, ಪರಸ್ಪರ ಕಾರ್ಯಸಾಧ್ಯವಾಗಿದೆ ಮತ್ತು ನವೀನ ಮತ್ತು ಅಂತರ್ಗತ ಪರಿಹಾರಗಳನ್ನು ಉತ್ತೇಜಿಸುವ ಉದ್ಯಮ ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಬಳಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಆದರೂ, ಪ್ರತಿ ದೇಶವು ಡಿಪಿಐ ಅನ್ನು ರೂಪಿಸುವಲ್ಲಿ ವಿಶಿಷ್ಟವಾದ ಅಗತ್ಯತೆಗಳು ಮತ್ತು ಸವಾಲುಗಳನ್ನು ಹೊಂದಿದ್ದು, ಮೂಲಭೂತ ಕಾರ್ಯಚಟುವಟಿಕೆಯು ಜಾಗತಿಕ ಸಹಕಾರಕ್ಕೆ ಅವಕಾಶ ನೀಡುತ್ತದೆ.
***
(Release ID: 1966634)
Visitor Counter : 146
Read this release in:
English
,
Urdu
,
Hindi
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam