ಸಂಪುಟ

ಡಿಜಿಟಲ್ ತಂತ್ರಜ್ಞಾನ  ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕಾಗಿ ಭಾರತ ಮತ್ತು ಫ್ರಾನ್ಸ್ ನಡುವಿನ ತಿಳುವಳಿಕೆ ಒಪ್ಪಂದಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿತು

Posted On: 11 OCT 2023 3:19PM by PIB Bengaluru

ಪ್ರಧಾನ ಮಂತ್ರಿ ಶ್ರೀ  ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಡಿಜಿಟಲ್ ಟೆಕ್ನಾಲಜೀಸ್ ಕ್ಷೇತ್ರದಲ್ಲಿ ಸಹಕಾರದ ಕುರಿತು ಭಾರತ ಗಣರಾಜ್ಯದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಫ್ರೆಂಚ್ ಗಣರಾಜ್ಯದ ಆರ್ಥಿಕತೆ, ಹಣಕಾಸು ಮತ್ತು ಕೈಗಾರಿಕಾ ಮತ್ತು ಡಿಜಿಟಲ್ ಸಾರ್ವಭೌಮತ್ವ ಸಚಿವಾಲಯದ ನಡುವಿನ ತಿಳುವಳಿಕೆ ಒಪ್ಪಂದಕ್ಕೆ (ಎಂ.ಒ.ಯು) ಸಹಿ ಹಾಕಲು ಅನುಮೋದನೆ ನೀಡಿದೆ. 

ವಿವರಗಳು:

ಡಿಜಿಟಲ್ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಮಾಹಿತಿಯ ನಿಕಟ ಸಹಕಾರ ಮತ್ತು ವಿನಿಮಯವನ್ನು ಉತ್ತೇಜಿಸುವ ಉದ್ದೇಶ ಎಂಒಯು ಹೊಂದಿದೆ ಮತ್ತು ಎಂಒಯುಗೆ ಅನುಗುಣವಾಗಿ ತಮ್ಮ ದೇಶದಲ್ಲಿ ಡಿಜಿಟಲ್ ತಂತ್ರಜ್ಞಾನ ಕ್ಷೇತ್ರಕ್ಕೆ ಪ್ರವೇಶಿಸುವ ಪ್ರತಿಯೊಬ್ಬ ಭಾಗವಹಿಸುವವರನ್ನು ಪರಸ್ಪರ ಬೆಂಬಲಿಸುತ್ತದೆ.

ಪ್ರಮುಖ ಪರಿಣಾಮ:

ಡಿಜಿಟಲ್ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಜಿ2ಜಿಮತ್ತು ಬಿ2ಬಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲಾಗುವುದು. ಐಟಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳಿಗೆ ಕಾರಣವಾಗುವ ಸುಧಾರಿತ ಸಹಯೋಗವನ್ನು ಎಂಒಯು ಕಲ್ಪಿಸಲಿದೆ.

ಅನುಷ್ಠಾನ ತಂತ್ರ ಮತ್ತು ಗುರಿಗಳು:

ಭಾಗವಹಿಸುವವರಿಬ್ಬರೂ ಸಹಿ ಮಾಡಿದ ದಿನಾಂಕದಂದು ಈ ತಿಳುವಳಿಕಾ ಒಪ್ಪಂದದ ಅಡಿಯಲ್ಲಿನ ಸಹಕಾರವು  ಪ್ರಾರಂಭವಾಗುತ್ತದೆ ಮತ್ತು ಐದು (5) ವರ್ಷಗಳವರೆಗೆ ಇರುತ್ತದೆ.

ಹಿನ್ನೆಲೆ:

ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಸಹಕಾರದ ಚೌಕಟ್ಟಿನ ಅಡಿಯಲ್ಲಿ ಮಾಹಿತಿ ತಂತ್ರಜ್ಞಾನದ ಉದಯೋನ್ಮುಖ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸಲು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪಾಲ್ಗೊಳ್ಳುವಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಡಿಜಿಟಲ್ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ಬೆಳೆಸುವ ತನ್ನ ಪ್ರಯತ್ನದಲ್ಲಿ, ದ್ವಿಪಕ್ಷೀಯ ಅಥವಾ ಬಹುಪಕ್ಷೀಯವಾಗಿ ವಿವಿಧ ದೇಶಗಳ ಪರಸ್ಪರ ಸಂಸ್ಥೆಗಳು/ಏಜೆನ್ಸಿಗಳೊಂದಿಗೆ ಎಂಒಯುಗಳು/ಒಪ್ಪಂದಗಳನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಾಡಿಕೊಂಡಿದೆ. ಬದಲಾಗುತ್ತಿರುವ ಈ ಮಾದರಿಯಲ್ಲಿ, ವ್ಯಾಪಾರದ ಅವಕಾಶಗಳನ್ನು ಅನ್ವೇಷಿಸುವ ಮತ್ತು ಅಂತಹ ಪರಸ್ಪರ ಸಹಕಾರದ ಮೂಲಕ ಡಿಜಿಟಲ್ ವಲಯದಲ್ಲಿ ಹೂಡಿಕೆಯನ್ನು ಆಕರ್ಷಿಸುವ ಅವಶ್ಯಕತೆ ಉಭಯ ದೇಶಗಳಿಗೂ ಇವೆ.

ಭಾರತ ಮತ್ತು ಫ್ರಾನ್ಸ್ ಇಂಡೋ-ಯುರೋಪಿಯನ್ ಪ್ರದೇಶದಲ್ಲಿ ದೀರ್ಘಕಾಲದ ಕಾರ್ಯತಂತ್ರದ ಪಾಲುದಾರರಾಗಿದ್ದಾರೆ. ಭಾರತ ಮತ್ತು ಫ್ರಾನ್ಸ್ ಅಭಿವೃದ್ಧಿ ಹೊಂದುತ್ತಿರುವ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಪೋಷಿಸಲು ಮತ್ತು ತಮ್ಮ ನಾಗರಿಕರನ್ನು ಸಶಕ್ತಗೊಳಿಸುವ ಮತ್ತು ಡಿಜಿಟಲ್ ಶತಮಾನದಲ್ಲಿ ಅವರ ಸಂಪೂರ್ಣ ಭಾಗವಹಿಸುವಿಕೆಯನ್ನು ಖಚಿತಪಡಿಸುವ ಸಹಯೋಗವನ್ನು ನಿರ್ಮಿಸಲು ಬದ್ಧವಾಗಿವೆ.

2019 ರಲ್ಲಿ ಘೋಷಿಸಲಾದ ಸೈಬರ್ ಭದ್ರತೆ ಮತ್ತು ಡಿಜಿಟಲ್ ತಂತ್ರಜ್ಞಾನದ ಕುರಿತು ಇಂಡೋ-ಫ್ರೆಂಚ್ ಹಾಕಿರುವ ನೀಲ ನಕ್ಷೆಯ ಚೌಕಟ್ಟಿನ ಆಧಾರದ ಮೇಲೆ, ವಿಶೇಷವಾಗಿ ಸೂಪರ್ ಕಂಪ್ಯೂಟಿಂಗ್, ಕ್ಲೌಡ್ ಕಂಪ್ಯೂಟಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಕ್ವಾಂಟಮ್ ತಂತ್ರಜ್ಞಾನಗಳು ಸೇರಿದಂತೆ ಕೃತಕ ಬುದ್ಧಿಮತ್ತೆಯ ಮೇಲಿನ ಜಾಗತಿಕ ಪಾಲುದಾರಿಕೆಯ ಚೌಕಟ್ಟು (ಜಿಪಿಎಐ) ಕ್ಷೇತ್ರಗಳಲ್ಲಿ ಭಾರತ ಮತ್ತು ಫ್ರಾನ್ಸ್ ಸುಧಾರಿತ ಡಿಜಿಟಲ್ ತಂತ್ರಜ್ಞಾನಗಳಲ್ಲಿ ಮಹತ್ವಾಕಾಂಕ್ಷೆಯ ದ್ವಿಪಕ್ಷೀಯ ಸಹಕಾರವನ್ನು ಅನುಸರಿಸುತ್ತಿವೆ, 

*****



(Release ID: 1966618) Visitor Counter : 101