ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಅನಿಮೇಷನ್ ಸರಣಿಯ ಕ್ರಿಶ್, ತ್ರಿಶ್ ಮತ್ತು ಬಾಲ್ಟಿಬಾಯ್ - ಭಾರತ್ ಹೇ ಹಮ್ ಟ್ರೈಲರ್ ಬಿಡುಗಡೆ ಮಾಡಿದ ಸಚಿವ ಶ್ರೀ ಅನುರಾಗ್ ಠಾಕೂರ್


19 ಭಾಷೆಗಳಲ್ಲಿ ಬಿಡುಗಡೆಯಾಗುವ ಸರಣಿಯು ಭಾಷೆಯ ತಡೆಗೋಡೆ ದಾಟಿ, ವಿಶ್ವ ಪ್ರೇಕ್ಷಕರನ್ನು ತಲುಪುತ್ತದೆ - ಶ್ರೀ ಠಾಕೂರ್

ಈ ಸರಣಿ ಬಿಡುಗಡೆಯೊಂದಿಗೆ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್, ಮೊದಲ ಬಾರಿಗೆ ಆದಾಯ ಗಳಿಸುತ್ತಿದೆ - ಶ್ರೀ ಅಪೂರ್ವ ಚಂದ್ರ

Posted On: 11 OCT 2023 12:54PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ದೆಹಲಿಯಲ್ಲಿಂದು ಕೆಟಿಬಿ(ಕ್ರಿಶ್, ತ್ರಿಶ್ ಮತ್ತು ಬಾಲ್ಟಿಬಾಯ್) - ಭಾರತ್ ಹೇ ಹಮ್ ಟ್ರೇಲರ್ ಬಿಡುಗಡೆ ಮಾಡಿದರು. ಇದು 2 ಸೀಸನ್‌ಗಳನ್ನು ಒಳಗೊಂಡಿರುವ ಅನಿಮೇಟೆಡ್ ಸರಣಿಯಾಗಿದೆ. ಇದನ್ನು ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಗ್ರಾಫಿಟಿ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿವೆ. ಈ ಸರಣಿಯು ತಲಾ 11 ನಿಮಿಷಗಳ 52 ಸಂಚಿಕೆಗಳನ್ನು ಒಳಗೊಂಡಿದೆ.  1500ರಿಂದ 1947ರ ವರೆಗಿನ ಭಾರತೀಯ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಈ ಸಂಚಿಕೆ ಒಳಗೊಂಡಿದೆ. ಈ ಸರಣಿಯನ್ನು ಸಾಂಪ್ರದಾಯಿಕ ಅನಿಮೇಟೆಡ್ ಪಾತ್ರಗಳಾದ ಕ್ರಿಶ್, ಟ್ರಿಶ್ ಮತ್ತು ಬಾಲ್ಟಿ ಬಾಯ್ ಬಳಸಿ ತಯಾರಿಸಲಾಗಿದೆ.  ಗ್ರಾಫಿಟಿ ಸ್ಟುಡಿಯೋಸ್‌ ನ ಮುಂಜಾಲ್ ಶ್ರಾಫ್ ಮತ್ತು ತಿಲಕರಾಜ್ ಶೆಟ್ಟಿ ಜೋಡಿಯು ಈ ಸರಣಿಯನ್ನು ತಯಾರಿಸಿದ್ದಾರೆ.

https://static.pib.gov.in/WriteReadData/userfiles/image/image001Q7TB.jpg

 

 

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅನುರಾಗ್ ಠಾಕೂರ್, ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಪಾರ ಕೊಡುಗೆ ನೀಡಿದ ಧೀಮಂತ ನಾಯಕರು, ಹೋರಾಟಗಾರರು,  ಹಿಂದಿನ ಶಿಕ್ಷಣ ವ್ಯವಸ್ಥೆಯಿಂದ ಮರೆತುಹೋದ ನಾಯಕರು ಮತ್ತು ಸಮಾಜದಲ್ಲಿ ಬೆಳಕಿಗೆ ಬಾರದ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಯುವಜನರಿಗೆ ತಿಳಿಸುವ ಪ್ರಯತ್ನವೇ ಈ ಸರಣಿಯಾಗಿದೆ ಎಂದು ಹೇಳಿದರು.

“ಅದೇ ವೇಳೆ, ಈ ಸರಣಿಯು ಆಧುನಿಕ ಭಾರತವನ್ನು ರೂಪಿಸಿದ ಜನರ ಯಶೋಗಾಥೆಯನ್ನು ಮುಂದಿಡುವ ಮೂಲಕ ಯುವ ಪೀಳಿಗೆಯನ್ನು ಪ್ರೇರೇಪಿಸುವ ಪ್ರಯತ್ನವನ್ನು ಮಾಡುತ್ತಿದೆ. ವಿದೇಶಿ ಭಾಷೆಗಳು ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗುವ ಈ ಸರಣಿಯು ಭಾಷೆಯ ಅಡೆತಡೆಗಳನ್ನು ದಾಟಿ, ಇಡೀ ಜಗತ್ತಿಗೆ ಅವರ ಕಥೆಗಳನ್ನು ಕೊಂಡೊಯ್ಯುತ್ತದೆ” ಎಂದು ಅವರು ಹೇಳಿದರು.

ದೂರದರ್ಶನ, ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಈ ಅನಿಮೇಟೆಡ್ ಸರಣಿಯನ್ನು ಒಂದೇ ಸಮಯದಲ್ಲಿ ಪ್ರಸಾರ ಮಾಡುತ್ತವೆ. ಇದು ಹಿಂದೆಂದೂ ನಡೆಯದ ಪ್ರಯತ್ನವಾಗಿದೆ. ವಿದೇಶಿ ವಸಾಹತುಶಾಹಿಗಳ ವಿರುದ್ಧದ ಹೋರಾಟದಲ್ಲಿ ಮಹಿಳೆಯರು ಮತ್ತು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ ಸರಣಿಯ ಪ್ರಮುಖ ಕೇಂದ್ರಬಿಂದುವಾಗಿದೆ ಎಂದು ಸಚಿವರು ತಿಳಿಸಿದರು.

ಮುಂದಿನ ಸಂಸತ್ ಅಧಿವೇಶನದಲ್ಲಿ ಎಲ್ಲಾ ಸಂಸದರಿಗೆ ಈ ಸರಣಿಯನ್ನು ತೋರಿಸಲಾಗುವುದು ಎಂದು ಸಚಿವರು ಘೋಷಿಸಿದರು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪಂಚಪ್ರಾಣ(ಸಂಕಲ್ಪ)ಗಳನ್ನು ಪುನರುಚ್ಚರಿಸಿದ ಸಚಿವರು, ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ತಮ್ಮನ್ನು ಸಂಪೂರ್ಣ ಅರ್ಪಿಸಿಕೊಂಡಿದ್ದರೆ, ಇಂದಿನ ಯುವಜನರು ಈ ದೇಶವನ್ನು ಅಮೃತಕಾಲದಿಂದ ಸ್ವರ್ಣಕಾಲಕ್ಕೆ ಕೊಂಡೊಯ್ಯಲು ತಮ್ಮ ಪ್ರಯತ್ನಗಳ ಮೂಲಕ ಅಪಾರ ಕೊಡುಗೆ ನೀಡಬೇಕಾಗಿದೆ. ದೇಶ ಕಟ್ಟಲು ಯುವ ಜನರು ತಮ್ಮ ಗುರುತರ ಪಾತ್ರ ವಹಿಸಬೇಕೆಂದು ಕರೆ ನೀಡಿದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಮಾತನಾಡಿ, ಸಚಿವಾಲಯಕ್ಕೆ ಇದು ಒಂದು ಮಹತ್ವದ ಸಂದರ್ಭವಾಗಿದೆ. ಏಕೆಂದರೆ ಸಚಿವಾಲಯವು ಮೊದಲ ಬಾರಿಗೆ ಅನಿಮೇಟೆಡ್ ಸರಣಿ ಪ್ರಾರಂಭಿಸುತ್ತಿದೆ. ಇದು ಸಾಮಾನ್ಯವಾಗಿ ಭಾರತದ ಜನರನ್ನು ಮತ್ತು ನಿರ್ದಿಷ್ಟವಾಗಿ ದೇಶದ ಮಕ್ಕಳನ್ನು ಗುರಿಯಾಗಿಸಿ, ತಯಾರಿಸಲಾಗಿದೆ. ಇದೇ ಮೊದಲ ಬಾರಿಗೆ ಅನಿಮೇಟೆಡ್ ಸರಣಿ ಯತಯಾರಿಸಲು ವೆಚ್ಚ ಭರಿಸುತ್ತಿರುವ “ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್” ಸಂಸ್ಥೆಯು ಆದಾಯ ಗಳಿಸುವ ಕ್ಷೇತ್ರಕ್ಕೆ ಪ್ರವೇಶಿಸುತ್ತಿದೆ ಎಂದು ಅವರು ತಿಳಿಸಿದರು.

ಶ್ರೀ ಮುಂಜಾಲ್ ಶ್ರೋಲ್ ಮಾತನಾಡಿ, ಈ ಸರಣಿ ತಯಾರಿಸಲು 1 ಸಾವಿರಕ್ಕೂ ಹೆಚ್ಚು ಜನರೊಂದಿಗೆ ಬೃಹತ್ ಪ್ರಯತ್ನ ಮಾಡಲಾಗಿದೆ. ಇದರಲ್ಲಿ ನಡೆದಿರುವ ಕೆಲಸಗಾರಿಕೆಯ ಪ್ರಮಾಣ ವಿವರಿಸಿದ ಅವರು, ಸಾಮಾನ್ಯ ಅನಿಮೇಷನ್ ಪ್ರದರ್ಶನವು ಸುಮಾರು 40 ಹಿನ್ನೆಲೆಗಳೊಂದಿಗೆ 25ರಿಂದ 30 ಪಾತ್ರಗಳನ್ನು ಹೊಂದಿದ್ದರೆ, ಭಾರತ್ ಹೇ ಹಮ್‌ನ ಒಂದು ಸಂಚಿಕೆಯು ಸುಮಾರು 50ರಿಂದ 100 ಪಾತ್ರಗಳನ್ನು ಹೊಂದಿದೆ. ಇದು  ಸರಾಸರಿ 50 ಹಿನ್ನೆಲೆಗಳನ್ನು ಹೊಂದಿದೆ ಎಂದರು.

 

https://static.pib.gov.in/WriteReadData/userfiles/image/image002AMQB.jpg

 

ಕೆಟಿಬಿ-ಭಾರತ್ ಹೇ ಹಮ್ ಕುರಿತು

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಮ್ಮ ಅದ್ಭುತ ಸ್ವಾತಂತ್ರ್ಯ ಹೋರಾಟದ ಬಗ್ಗೆ ಮತ್ತು ನಮ್ಮ ದೇಶಕ್ಕಾಗಿ ಪರಮ ತ್ಯಾಗ ಮಾಡಿದ ದೇಶಾದ್ಯಂತದ ಹಲವಾರು ವೀರ ಹೋರಾಟಗಾರರ ಬಗ್ಗೆ ಭಾರತದ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ  ಅಭಿಯಾನ ರೂಪಿಸಲು ನಿರ್ಧರಿಸಿದೆ.

ಪ್ರತಿ ಸಂಚಿಕೆಯು ಜನಪ್ರಿಯ ಪಾತ್ರಗಳಾದ ಕ್ರಿಶ್, ತ್ರಿಶ್ ಮತ್ತು ಬಾಲ್ಟಿಬಾಯ್ ಹೊಂದಿರುತ್ತದೆ - ಈ ಹಿಂದೆ ಮೆಚ್ಚುಗೆ ಪಡೆದ ಕೆಟಿಬಿ ಚಲನಚಿತ್ರ ಸರಣಿಯಿಂದ ಹೆಸರುವಾಸಿಯಾಗಿದೆ." ಇದು ಸಮಾಜದಲ್ಲಿ ಹೆಚ್ಚು ಬೆಳಕಿಗೆ ಬಾರದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಧೀಮಂತ ನಾಯಕರ ಯಶೋಗಾಥೆಗಳನ್ನು ಪರಿಶೀಲಿಸುವ ಸಂಭಾಷಣೆಗಳನ್ನು ಪ್ರಾರಂಭಿಸುತ್ತದೆ.

ದೇಶಕ್ಕೆ ಸ್ವಾತಂತ್ರ್ಯ ಗಳಿಸಲು ಭಾರತ ನಡೆಸಿದ ಹೋರಾಟಗಳ ವೈವಿಧ್ಯತೆಯನ್ನು ಅಳವಡಿಸಿಕೊಳ್ಳುವ ಈ ಸರಣಿಯು ಹಿಮಾಂಚಲ್ ಪ್ರದೇಶ, ಬಂಗಾಳ, ಪಂಜಾಬ್, ಕೇರಳ ಮತ್ತು ಅದಕ್ಕೂ ದಾಟಿ ದೇಶಾದ್ಯಂತದ ವಿವಿಧ ಪ್ರದೇಶಗಳ ಸ್ವಾತಂತ್ರ್ಯ ಹೋರಾಟಗಾರರನ್ನು ಯುವ ಸಮುದಾಯಕ್ಕೆ ಪರಿಚಯಿಸಲಿದೆ. ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಶನ್ ಮತ್ತು ಗ್ರಾಫಿಟಿ ಸ್ಟುಡಿಯೋ ನಿರ್ಮಿಸಿದ ಈ ಸರಣಿಯು ಧಾರ್ಮಿಕ ಅಡೆತಡೆಗಳನ್ನು ಮೀರಿದ ನಂಬಿಕೆಗಳು ಮತ್ತು ಏಕತೆಯ ಚಿತ್ತಾರವುಳ್ಳ ಕಲಾಕೃತಿ ಅಥವಾ ವಸ್ತ್ರ ರೂಪವಾಗಿದೆ, ಇದು ದೇಶದ ಧಾರ್ಮಿಕ ನಂಬಿಕೆಗಳು ಮತ್ತು ವಿಶ್ವಾಸಗಳನ್ನು ಏಕೀಕರಿಸುತ್ತದೆ.

ರಾಣಿ ಅಬ್ಬಕ್ಕ, ತಿಲ್ಕಾ ಮಾಂಝಿ, ತಿರೋತ್ ಸಿಂಗ್, ಪೀರ್ ಅಲಿ, ತಾತ್ಯಾ ಟೋಪೆ, ಕೊತ್ವಾಲ್ ಧನ್ ಸಿಂಗ್, ಕುನ್ವರ್ ಸಿಂಗ್ (80 ವರ್ಷ ವಯಸ್ಸಿನ ಸ್ವಾತಂತ್ರ್ಯ ಹೋರಾಟಗಾರ), ರಾಣಿ ಚೆನ್ನಮ್ಮ, ಟಿಕೇಂದ್ರ ಜೀತ್ ಸಿಂಗ್ ಮತ್ತಿತರ ಅಸಂಖ್ಯಾತ ವೀರ ಹೋರಾಟಗಾರರು ಅಂತಿಮವಾಗಿ ಈ ಅನಿಮೇಟೆಡ್ ಮೇರುಕೃತಿಯ ಮೂಲಕ ಇತಿಹಾಸದಲ್ಲಿ ತಮ್ಮ ಗಟ್ಟಿಯಾದ ಅಥವಾ ಸದೃಢವಾದ ಸ್ಥಾನವನ್ನು ಪಡೆದುಕೊಳ್ಳಲಿ.

ಮುಂಜಾಲ್ ಶ್ರಾಫ್ ಮತ್ತು ತಿಲಕ್ ಶೆಟ್ಟಿ ಅವರ ಪ್ರತಿಭಾವಂತ ಮನಸ್ಸಿನಿಂದ ರೂಪಿಸಲಾದ ಈ ಸರಣಿಯು ಸೀಸನ್ 1ರಲ್ಲಿ 26 ಆಕರ್ಷಕ ಸಂಚಿಕೆಗಳನ್ನು ಒಳಗೊಂಡಿದೆ. ಪ್ರತಿಯೊಂದು ಸಹ 11 ನಿಮಿಷಗಳ ಅನಿಮೇಟೆಡ್ ನಿರೂಪಣೆ ಒಳಗೊಂಡಿರುತ್ತದೆ.

ಈ ಸರಣಿಯನ್ನು ಈ ಕೆಳಗಿನ 12 ಭಾಷೆಗಳಲ್ಲಿ ನಿರ್ಮಿಸಲಾಗುತ್ತಿದೆ:

ಹಿಂದಿ (ಮಾಸ್ಟರ್), ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ, ಗುಜರಾತಿ, ಪಂಜಾಬಿ, ಬೆಂಗಾಲಿ, ಅಸ್ಸಾಮಿ, ಒಡಿಯಾ ಮತ್ತು ಇಂಗ್ಲಿಷ್.

ಈ ಸರಣಿಯನ್ನು ಈ ಕೆಳಗಿನ ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಡಬ್ ಮಾಡಲಾಗುತ್ತದೆ:

ಫ್ರೆಂಚ್, ಸ್ಪ್ಯಾನಿಷ್, ರಷ್ಯನ್, ಅರೇಬಿಕ್, ಚೈನೀಸ್, ಜಪಾನೀಸ್ ಮತ್ತು ಕೊರಿಯನ್.

 

ಚಾನಲ್

ಸೀಸನ್

ಪ್ರಸಾರ ಆರಂಭ ದಿನಾಂಕ

ಪ್ರಸಾರ ಅಂತ್ಯದ ದಿನಾಂಕ

ದೂರದರ್ಶನ

ಸೀಸನ್ 1

ಭಾನುವಾರ ಅಕ್ಟೋಬರ್ 15, 2023

ಭಾನುವಾರ ಜನವರಿ 7, 2024

ಸೀಸನ್ 2

ಭಾನುವಾರ ಜನವರಿ 28, 2024

ಭಾನುವಾರ ಏಪ್ರಿಲ್ 21, 2024

 

ಒಟಿಟಿಯಲ್ಲಿ ಈ ಸರಣಿಯು ಐತಿಹಾಸಿಕ ಅನಾವರಣಕ್ಕೆ ಸಾಕ್ಷಿಯಾಗಲಿದೆ, ಮೊದಲ ಬಾರಿಗೆ ಸರಣಿಯನ್ನು 2 ದೊಡ್ಡ ಒಟಿಟಿ ವೇದಿಕೆಗಳಲ್ಲಿ ಅಂದರೆ ನೆಟ್ ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವೀಡಿಯೊಗಳಲ್ಲಿ ಸಮಾನಾಂತರವಾಗಿ ಪ್ರಾರಂಭಿಸಲಾಗುವುದು. ಜಾಗತಿಕ ಮಟ್ಟದಲ್ಲಿ 12 ಭಾರತೀಯ ಮತ್ತು 7 ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಬಿಡುಗಡೆ ಕಾಣಲಿದೆ.

 

ಪ್ಲಾಟ್ ಫಾರ್ಮ್

ಸೀಸನ್

ಅನಾವರಣ ದಿನಾಂಕ

ಪ್ರದೇಶ ಅಥವಾ ಪ್ರಾಂತ್ಯ

ನೆಟ್ ಫ್ಲಿಕ್ಸ್

ಸೀಸನ್ 1

ಭಾನುವಾರ ಅಕ್ಟೋಬರ್ 15, 2023

ವಿಶ್ವಾದ್ಯಂತ

ಸೀಸನ್ 2

ಭಾನುವಾರ ಜನವರಿ 28, 2024

ಅಮೆಜಾನ್ ಪ್ರೈಮ್ ವೀಡಿಯೊ

ಸೀಸನ್ 1

ಭಾನುವಾರ ಅಕ್ಟೋಬರ್ 15, 2023

ವಿಶ್ವಾದ್ಯಂತ

ಸೀಸನ್ 2

ಭಾನುವಾರ ಜನವರಿ 28, 2024

 

 

*******

 



(Release ID: 1966606) Visitor Counter : 98