ಪ್ರಧಾನ ಮಂತ್ರಿಯವರ ಕಛೇರಿ

ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನದಂದು ಪ್ರಧಾನಮಂತ್ರಿಯವರಿಂದ  ಗೌರವಾರ್ಪಣೆ 

Posted On: 11 OCT 2023 9:36AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿದರು

ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸಲು ಅವರ ಪ್ರಯತ್ನಗಳನ್ನು ಸ್ಮರಿಸಿದ ಪ್ರಧಾನಮಂತ್ರಿಯವರು ಅವರ ನಿಸ್ವಾರ್ಥ ಸೇವೆಯ ಮನೋಭಾವವು ದೇಶವಾಸಿಗಳಿಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು.

X ಪೋಸ್ಟ್‌ ನಲ್ಲಿ,  ಪ್ರಧಾನಮಂತ್ರಿಯವರು ಹೀಗೆ  ಹೇಳಿದ್ದಾರೆ:

"ಸಂಪೂರ್ಣ ಕ್ರಾಂತಿಯ ಪಿತಾಮಹ ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರಿಗೆ ಅವರ ಜನ್ಮದಿನದಂದು ನಮ್ಮ ಶತ ಶತ ನಮನಗಳು. ಅವರು ತಮ್ಮ ಜೀವನದುದ್ದಕ್ಕೂ ಭಾರತೀಯ ಪ್ರಜಾಪ್ರಭುತ್ವವನ್ನು ಬಲಪಡಿಸಲು ಶ್ರಮಿಸಿದರು. ಅವರ ನಿಸ್ವಾರ್ಥ ಸೇವೆಯ ಮನೋಭಾವವು ಯಾವಾಗಲೂ ಭಾರತೀಯರನ್ನು ಪ್ರೇರೇಪಿಸುತ್ತದೆ.”

 

***(Release ID: 1966549) Visitor Counter : 97