ಗಣಿ ಸಚಿವಾಲಯ

​​​​​​​ಗಣಿ ಸಚಿವಾಲಯ ವತಿಯಿಂದ ಯಶಸ್ವಿ ವಿಶೇಷ ಅಭಿಯಾನ 3.0


ಮೊದಲ ವಾರದಲ್ಲೇ ಶೇ. 95ಕ್ಕಿಂತ ಹೆಚ್ಚು ಸಾರ್ವಜನಿಕ ಕುಂದುಕೊರತೆಗಳಿಗೆ ಪರಿಹಾರದ ಸ್ಪಂದನೆ

ಶೇ.100ರಷ್ಟು ಪರಿಹಾರಕ್ಕೆ ಒತ್ತು

Posted On: 10 OCT 2023 10:48AM by PIB Bengaluru

ಕೇಂದ್ರ ಗಣಿ ಸಚಿವಾಲಯ ಮತ್ತು ಸಂಬಂಧಪಟ್ಟ ಕ್ಷೇತ್ರ ರಚನೆ ಹಾಗೂ ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳು (ಸಿಪಿಎಸ್‌ಸಿ) ತಮ್ಮ ನಿಯಮ/ ಪ್ರಕ್ರಿಯೆಗಳ ಸರಳೀಕರಣ, ದಾಖಲೆಗಳ ನಿರ್ವಹಣೆ, ಸಾರ್ವಜನಿಕ ಕುಂದುಕೊರತೆಗಳ ಜತೆಗೆ ನನ್ನ ನೇರ ನಿಯಂತ್ರಣದಲ್ಲಿರುವ ಕಚೇರಿಗಳ ಕಾರ್ಯ ಸ್ಥಳದಲ್ಲಿ ದಕ್ಷತೆ ಹೆಚ್ಚಿಸುವುದು ಸೇರಿದಂತೆ ಬಾಕಿಯಿರುವ ವಿಚಾರಗಳ ತ್ವರಿತ ವಿಲೇವಾರಿಗೆ ವಿಶೇಷ ಅಭಿಯಾನ 3.0ರಡಿ ನಿರ್ದಿಷ್ಟ ಗುರಿಗಳನ್ನು ನಿಗದಿಪಡಿಸಿದೆ.

ಈ ವಿಶೇಷ ಅಭಿಯಾನ 3.0 ಇದೇ 2023ರ ಅಕ್ಟೋಬರ್‌ 2ರಂದು ಆರಂಭವಾಗಿದೆ. 2016ರ ಪರಮಾಣು ಖನಿಜ ವಿನಾಯಿತಿ ನಿಯಮಗಳ ತಿದ್ದುಪಡಿಯ ಮೂಲಕ ಸಂಬಂಧಪಟ್ಟ 27 ನಿಯಮಗಳನ್ನು ಅಪರಾಧರಹಿತಗೊಳಿಸುವ ಮೂಲಕ ಗಣಿ ಸಚಿವಾಲಯವು ತನ್ನ ನಿಯಮಗಳು/ ಕಾರ್ಯವಿಧಾನಗಳನ್ನು ಶೇ.100 ಸರಳಗೊಸುವ ಗುರಿ ಗೊತ್ತುಪಡಿಸಿದೆ.

F74x5nPXMAAQugv

ವಿಶೇಷ ಅಭಿಯಾನ 3.0ರ ಮೊದಲ ವಾರದಲ್ಲಿ ಸಚಿವಾಲಯವು ಸಾರ್ವಜನಿಕ ಕುಂದುಕೊರತೆ ಬಾಕಿ ಪ್ರಕರಣಗಳ ಪೈಕಿ ಶೇ. 95.45ರಷ್ಟು ಪರಿಹಾರವಾಗಿದೆ. ದಾಖಲೆಗಳ ನಿರ್ವಹಣೆಗಾಗಿ ಮೀಸಲಿಟ್ಟ ಶೇ.52ರಷ್ಟು ಕಾರ್ಯವೂ ಪೂರ್ಣಗೊಳ್ಳುವ ಜತೆಗೆ ಕಡತ ವಿಲೇವಾರಿಗೆ ನಿಗದಿಪಡಿಸಿದ್ದ ಗುರಿಯಲ್ಲಿ ಶೇ.43ರಷ್ಟು ಸಾಧನೆಯಾಗಿದೆ. ಆ ಮೂಲಕ ಸುಮಾರು 9212 ಚ.ಅಡಿಗಳಷ್ಟು ಕಚೇರಿ ಪ್ರದೇಶವನ್ನು ಕಡತ ಮುಕ್ತಗೊಳಿಸಿದೆ.

ಈವರೆಗೆ ನಡೆದ 344 ಸ್ವಚ್ಛತಾ ಅಭಿಯಾನಗಳ ಪೈಕಿ 103 ಅಭಿಯಾನವನ್ನು ರಾಷ್ಟ್ರವ್ಯಾಪಿ ನಡೆಸಲಾಗಿದ್ದು, ಅಭಿಯಾನದ ಮೂಲಕ ಸಚಿವಾಲಯವು ಹಂತ ಹಂತವಾಗಿ ಶೇ.100ರಷ್ಟು ಗುರಿ ಸಾಧಿಸುವ ಬದ್ಧತೆಯನ್ನು ಹೊಂದಿದೆ.

****



(Release ID: 1966301) Visitor Counter : 88