ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ದಾಖಲೆಯ 43 ಕ್ರೀಡಾ ವಿಭಾಗಗಳೊಂದಿಗೆ 37 ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಗೋವಾ ಆಯೋಜಿಸಲಿದೆ

Posted On: 06 OCT 2023 6:53PM by PIB Bengaluru

ಪಣಜಿ | ಅಕ್ಟೋಬರ್ 6, 2023

“ದಾಖಲೆಯ 43 ಕ್ರೀಡಾ ವಿಭಾಗಗಳನ್ನು ಒಳಗೊಂಡ ರಾಷ್ಟ್ರೀಯ ಕ್ರೀಡಾಕೂಟದ 37 ನೇ ಆವೃತ್ತಿಯನ್ನು ಆಯೋಜಿಸುವ ಮೂಲಕ ಇತಿಹಾಸ ನಿರ್ಮಿಸಲು ಗೋವಾ ಸಜ್ಜಾಗಿದೆ” ಎಂದು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಮತ್ತು ಗೋವಾ ಕ್ರೀಡಾ ಸಚಿವರು ಇಂದು ಜಂಟಿಯಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಕ್ರೀಡಾಕೂಟವು ಸಾಹಸ, ಪರಾಕ್ರಮ, ಸೌಹಾರ್ದತೆಗಳ ವಿಶೇಷ ಆಚರಣೆಯಾಗಿದೆ, ಹಲವಾರು ರೋಮಾಂಚಕಾರಿ ಕ್ರೀಡಾ ವಿಭಾಗಗಳನ್ನು ನೂತನವಾಗಿ ಪರಿಚಯಿಸುತ್ತಿದೆ, ಗುಜರಾತ್‌ನಲ್ಲಿ ಜರುಗಿದ 36 ವಿಭಾಗಗಳನ್ನು ಒಳಗೊಂಡಿರುವ ಈ ಹಿಂದಿನ ಆವೃತ್ತಿಗೆ ಹೋಲಿಸಿದರೆ ಮತ್ತು 2015 ರ ಕೇರಳದಲ್ಲಿ ನಡೆದ 33 ಆವೃತ್ತಿಗಳ ಕ್ರೀಡಾಕೂಟಕ್ಕೆ ಹೋಲಿಸಿದರೆ, ಈ ವರ್ಷದ ರಾಷ್ಟ್ರೀಯ ಕ್ರೀಡಾಕೂಟವು ಇದುವರೆಗೆ ಕಾಣದಂತಹ ಅತ್ಯಂತ ದೊಡ್ಡ ಕ್ರೀಡಾಕೂಟವಾಗಲಿದೆ” ಎಂದು ಅವರುಗಳು ಹೇಳಿದರು.

https://static.pib.gov.in/WriteReadData/userfiles/image/IMG_2890YLVB.jpg

"ನಾವು ಗೋವಾದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಬಯಸುತ್ತೇವೆ. ಪ್ರವಾಸಿಗರು ನಮ್ಮ ಸುಂದರವಾದ ಬೀಚ್‌ಗಳನ್ನು ದೀರ್ಘಕಾಲ ಆನಂದಿಸಿದಂತೆ, ನಾವು ಈಗ ಜಗತ್ತಿನಾದ್ಯಂತದ ಕ್ರೀಡಾ ಉತ್ಸಾಹಿಗಳನ್ನು ಆಕರ್ಷಿಸುವ ಗುರಿಯನ್ನು ಕೂಡಾ ಹೊಂದಿದ್ದೇವೆ. ಐರನ್‌ಮ್ಯಾನ್ ಮತ್ತು ವರ್ಲ್ಡ್ ಟೇಬಲ್ ಟೆನ್ನಿಸ್ ಮುಂತಾದ ಅಂತರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸುವಲ್ಲಿ ನಮ್ಮ ಸಾಮರ್ಥ್ಯಗಳನ್ನು ಗೋವಾ ಈಗಾಗಲೇ ಪ್ರದರ್ಶಿಸಿದೆ. ರಾಷ್ಟ್ರೀಯ ಕ್ರೀಡಾಕೂಟಕ್ಕಾಗಿ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಮೂಲಸೌಕರ್ಯಗಳೊಂದಿಗೆ, ಈ ಸೌಲಭ್ಯಗಳನ್ನು ವರ್ಷಪೂರ್ತಿ ಬಳಸಿಕೊಳ್ಳಲು ನಾವು ಕ್ರೀಡಾ ಸಂಘಗಳು ಮತ್ತು ರಾಷ್ಟ್ರೀಯ ಒಕ್ಕೂಟಗಳನ್ನು ಗೋವಾಕ್ಕೆ ಆಹ್ವಾನಿಸುತ್ತೇವೆ. ನಮ್ಮ ಉದ್ದೇಶ ಗೋವಾದಲ್ಲಿ ಕ್ರೀಡೆಯನ್ನು ಹೊಸ ಎತ್ತರಕ್ಕೆ ಏರಿಸಲು ಸಕಾರಾತ್ಮಕ ವ್ಯವಸ್ಥೆ ರೂಪಿಸುವುದಾಗಿದೆ." ಎಂದು ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಗೋವಾದ ಬಗ್ಗೆ ತಮ್ಮ ದೃಷ್ಟಿಕೋನವನ್ನು ವಿವರಿಸಿದರು.

28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಭಾಗವಹಿಸುವ ಒಲಿಂಪಿಕ್ ಶೈಲಿಯ ಬಹುಕ್ರೀಡಾವಿಭಾಗಗಳ ಈ ರಾಷ್ಟ್ರೀಯ ಕಾರ್ಯಕ್ರಮವು ಅಕ್ಟೋಬರ್ 26 ರಿಂದ ನವೆಂಬರ್ 9 ರವರೆಗೆ ನಡೆಯಲಿದೆ. ರಾಜ್ಯದಾದ್ಯಂತ ಅನೇಕ ಸ್ಥಳಗಳು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ, ಜೊತೆಗೆ, ಸೈಕ್ಲಿಂಗ್ ಮತ್ತು ಗಾಲ್ಫ್ ಅನ್ನು ದೆಹಲಿಯಲ್ಲಿ ನಡೆಸಲಾಗುತ್ತದೆ.

37 ನೇ ರಾಷ್ಟ್ರೀಯ ಕ್ರೀಡಾಕೂಟವು ಬೀಚ್ ಫುಟ್‌ಬಾಲ್, ರೋಲ್ ಬಾಲ್, ಗಾಲ್ಫ್, ಸೆಪಕ್ಟಕ್ರಾ, ಸ್ಕೆಯ್ ಮಾರ್ಷಲ್ ಆರ್ಟ್ಸ್, ಕಳ್ಳಿಯರಪಟ್ಟು ಮತ್ತು ಪೆನ್‌ಕಾಕ್ ಸಿಲಾಟ್ ಸೇರಿದಂತೆ ಹಲವಾರು ಹೊಸ ಕ್ರೀಡಾ ವಿಭಾಗಗಳ ಸೇರ್ಪಡೆ ಮೂಲಕ ವೇದಿಕೆಯಲ್ಲಿ ಪದಕಗಳು ತಮ್ಮ ಚೊಚ್ಚಲ ಪ್ರವೇಶವನ್ನು ಕಾಣಲಿವೆ. ಹೆಚ್ಚುವರಿಯಾಗಿ, ಕಳೆದ ಆವೃತ್ತಿಯಲ್ಲಿ ಹೊರಗಿಟ್ಟ ವಿಹಾರ ನೌಕೆ ಮತ್ತು ಟೇಕ್ವಾಂಡೋ ವರ್ಷಗಳ ನಂತರ ಕ್ರೀಡಾಕೂಟಕ್ಕೆ ವಿಜಯೋತ್ಸಾಹದ ಮರಳುವಿಕೆಯನ್ನು ಮಾಡುತ್ತಿದೆ. ಸಂಪ್ರದಾಯವನ್ನು ಆಚರಿಸಲು, ಲಗೋರಿ ಮತ್ತು ಗಟ್ಕಾ ಕ್ರೀಡೆಗಳನ್ನು ಪ್ರಾತ್ಯಕ್ಷಿಕೆ ಕ್ರೀಡೆಗಳಾಗಿ ಸೇರಿಸಲಾಗಿದ್ದು, ಕಾರ್ಯಕ್ರಮಕ್ಕೆ ವಿಶಿಷ್ಟ ಮತ್ತು ಸಾಂಸ್ಕೃತಿಕ ಆಯಾಮವನ್ನು ಸೇರಿಸಿದೆ.

 

"37 ನೇ ರಾಷ್ಟ್ರೀಯ ಕ್ರೀಡಾಕೂಟವು ಕೇವಲ ಒಂದು ಕಾರ್ಯಕ್ರಮವಲ್ಲ; ಇದು ಭಾರತದಾದ್ಯಂತ ಕ್ರೀಡಾ ಉತ್ಸಾಹಿಗಳು ಮತ್ತು ಕ್ರೀಡಾಪಟುಗಳಿಗೆ ಸ್ಫೂರ್ತಿಯ ಚಿಲುಮೆಯಾಗಿದೆ. ನಾವು ಮಹತ್ವದ ಕಾರ್ಯಕ್ರಮವನ್ನು ಆಯೋಜಿಸಲು ತಯಾರಿ ನಡೆಸುತ್ತಿದ್ದೇವೆ. ಗೋವಾದ ಹೃದಯಭಾಗದ ಜೊತೆಗೆ, ಎಲ್ಲಡೆಯೂ ನಾವು ಕ್ರೀಡೆಗಳನ್ನು ಮಾತ್ರ ಆಚರಿಸುತ್ತಿಲ್ಲ, ಏಷ್ಯನ್ ಕ್ರೀಡಾಕೂಟದ ಪರಂಪರೆಯನ್ನು ಉಳಿಸುತ್ತಿದ್ದೇವೆ. ನಮ್ಮ ಗುರಿ ಕೇವಲ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಮಾತ್ರವಲ್ಲದೆ ನಮ್ಮ ವೈವಿಧ್ಯಮಯ ರಾಷ್ಟ್ರದ ಪ್ರತಿಯೊಂದು ಮೂಲೆಯಿಂದ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಕ್ರೀಡೆಯ ಬಗ್ಗೆ ಉತ್ಸಾಹವನ್ನು ಪ್ರೇರೇಪಿಸುವುದು. 37 ನೇ ರಾಷ್ಟ್ರೀಯ ಕ್ರೀಡಾಕೂಟವು ಏಕತೆಯ ಸಂಕೇತವಾಗಿದೆ ಮತ್ತು ಭಾರತದಲ್ಲಿ ಕ್ರೀಡೆಯ ಭವಿಷ್ಯದ ಮೆಟ್ಟಿಲು ಆಗಲಿದೆ, ನೆನಪಿಡುವ ರಾಷ್ಟ್ರೀಯ ಕ್ರೀಡಾ ಮಹೋತ್ಸವವಾಗಲಿದೆ." ಎಂದು ಗೋವಾ ಕ್ರೀಡಾ ಸಚಿವ ಶ್ರೀ ಗೋವಿಂದ್ ಗೌಡೆ ಅವರು ಐತಿಹಾಸಿಕ ಘಟನೆಯ ಮಹತ್ವವನ್ನು ತಿಳಿಸಿದರು.

"ಗೋವಾದಲ್ಲಿ 2023 ರ ರಾಷ್ಟ್ರೀಯ ಕ್ರೀಡಾಕೂಟಕ್ಕಾಗಿ ಮಾಡಿರುವ ವ್ಯವಸ್ಥೆಯು ನಮ್ಮ ದೃಷ್ಟಿಕೋನದ ಕ್ರೀಡಾ ಶ್ರೇಷ್ಠತೆಯನ್ನು ಮೀರಿ ವಿಸ್ತರಿಸಿದೆ. ಇದು ಶಾಶ್ವತವಾದ ಸ್ನೇಹವನ್ನು ಬೆಳೆಸುವ ಮತ್ತು ನಿಜವಾದ ಕ್ರೀಡಾ ಮನೋಭಾವವನ್ನು ಅಳವಡಿಸಿಕೊಳ್ಳುವ ವ್ಯವಸ್ಥೆಯಾಗಿದೆ. ಕ್ರೀಡಾಸಕ್ತಿ ವರ್ಧಿಸಲು ನಮ್ಮೊಂದಿಗೆ ಸೇರಲು ನಾವು ಮಾಧ್ಯಮಗಳನ್ನು ಆಹ್ವಾನಿಸುತ್ತೇವೆ. ಗೋವಾದ ವಿಶೇಷ ಕ್ರೀಡಾ ಮನೋಭಾವ, ಸಾಹಸ ಮತ್ತು ಪರಾಕ್ರಮ ಪ್ರವೃತ್ತಿಗಳಿಂದ ನಾವೆಲ್ಲರೂ ಒಟ್ಟಾಗಿ, ಭಾರತೀಯ ಕ್ರೀಡೆಯಲ್ಲಿ ಐತಿಹಾಸಿಕ ಅಧ್ಯಾಯವನ್ನು ಬರೆಯೋಣ." ಎಂದು ಕ್ರೀಡಾ ಕಾರ್ಯದರ್ಶಿ ಮತ್ತು ಎನ್‌.ಜಿ.ಒ.ಸಿ.ದ ಸಿ.ಇ.ಒ. ಶ್ರೀಮತಿ ಶ್ವೇತಿಕಾ ಸಚನ್ ಅವರು ಮುಂಬರುವ ಕ್ರೀಡಾಕೂಟಕ್ಕಾಗಿ ನಡೆದಿರುವ ವ್ಯವಸ್ಥೆಗಳ ಹಿನ್ನೋಟ ವಿವರಿಸಿದರು

ಹಿಂದೆ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಿಂಚಿ ಮೆರೆದ ಭಾರತದ ಪ್ರಮುಖ ಕ್ರೀಡಾಪಟುಗಳಾದ ಶ್ರೀ ನೀರಜ್ ಚೋಪ್ರಾ, ಶ್ರೀಮತಿ ಸಾನಿಯಾ ಮಿರ್ಜಾ, ಶ್ರೀಮತಿ ಮೀರಾಬಾಯಿ ಚಾನು, ಶ್ರೀ ಸಜನ್ ಪ್ರಕಾಶ್ ಮತ್ತು ಮನು ಭಾಕರ್ ಅವರು ಈ ಸಭೆಯಲ್ಲಿ ಭಾಗವಹಿಸಿದ್ದರು.

 

“10,000 ಕ್ಕೂ ಹೆಚ್ಚು ಕ್ರೀಡಾಳುಗಳು ಶ್ರೇಷ್ಠತೆಗಾಗಿ ಇಲ್ಲಿ ಒಮ್ಮುಖವಾಗಿರುವುದರಿಂದ ಇನ್ನೂ ಅತ್ಯಂತ ಮಹತ್ವದ ಕ್ರೀಡಾ ಸಂಭ್ರಮದ ಮಹೋತ್ಸವಕ್ಕೆ ಸಿದ್ಧರಾಗಬೇಕು, ಈ ಕ್ರೀಡಾಕೂಟವು ಪ್ರತಿಭಾನ್ವಿತರ ಮಹಾನ್ ಸಮ್ಮಿಲನವನ್ನು ಪ್ರತಿನಿಧಿಸುತ್ತದೆ, ಉದ್ಘಾಟನಾ ಹಂತದಲ್ಲಿ, ಕರಾವಳಿ ರೋಯಿಂಗ್ ಈವೆಂಟ್ ಭಾರತದಲ್ಲಿ ಇತಿಹಾಸವನ್ನು ನಿರ್ಮಿಸುತ್ತದೆ. ಕ್ರೀಡಾಮನೋಭಾವ ಮತ್ತು ವೈವಿಧ್ಯತೆಯ ಅಸಾಮಾನ್ಯ ದೃಶ್ಯವನ್ನು ವೀಕ್ಷಿಸಲು ನಾವು ರಾಷ್ಟ್ರವನ್ನು ಆಹ್ವಾನಿಸುತ್ತೇವೆ." ಎಂದು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್‌ ನ ರಾಷ್ಟ್ರೀಯ ಕ್ರೀಡಾಕೂಟದ ತಾಂತ್ರಿಕ ನಡವಳಿಕೆ ಸಮಿತಿಯ (ಜಿಟಿಸಿಸಿ) ಅಧ್ಯಕ್ಷರಾದ ಶ್ರೀ ಅಮಿತಾಭ್ ಶರ್ಮಾ ಅವರು ತಿಳಿಸಿದರು.

ಸಿದ್ಧತೆಗಳು ವೇಗಗತಿಯನ್ನು ಪಡೆದುಕೊಳ್ಳುತ್ತಿದ್ದಂತೆ, ಈ ಅಸಾಮಾನ್ಯ ಕ್ರೀಡಾ ಮಹೋತ್ಸವದ ಭಾಗವಾಗಲು ಸಂಪೂರ್ಣ ಜಗತ್ತಿಗೆ ನಮ್ಮ ರಾಷ್ಟ್ರದ ಪರವಾಗಿ ಗೋವಾ ರಾಜ್ಯವು ಮುಕ್ತ ಆಹ್ವಾನವನ್ನು ನೀಡುತ್ತಿದೆ

***

 



(Release ID: 1965192) Visitor Counter : 136