ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ರಾಷ್ಟ್ರೀಯ ಅರಿಶಿನ ಮಂಡಳಿಯ ಸ್ಥಾಪನೆಗೆ ಕೇಂದ್ರ ಸರ್ಕಾರದ ಅಧಿಸೂಚನೆ


ರಾಷ್ಟ್ರೀಯ ಅರಿಶಿನ ಮಂಡಳಿಯಿಂದ ಅರಿಶಿನದ ಅರಿವು ಮತ್ತು ಬಳಕೆಯನ್ನು ಹೆಚ್ಚಿಸಲು ಮತ್ತು ರಫ್ತು ಹೆಚ್ಚಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲು ಸಾಧ್ಯ

ಹೊಸ ಉತ್ಪನ್ನಗಳಿಗೆ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಮೌಲ್ಯವರ್ಧಿತ ಅರಿಶಿನ ಉತ್ಪನ್ನಗಳಿಗೆ ನಮ್ಮ ಜ್ಞಾನವನ್ನು ಅಭಿವೃದ್ಧಿಪಡಿಸಲಿದೆ ಈ ಮಂಡಳಿ

2030 ರ ವೇಳೆಗೆ ಭಾರತದಿಂದ ಅರಿಶಿನ ರಫ್ತು 1 ಬಿಲಿಯನ್ ಅಮೆರಿಕನ್ ಡಾಲರ್ ಗೆ ಏರುವ ನಿರೀಕ್ಷೆಯಿದೆ

Posted On: 04 OCT 2023 3:30PM by PIB Bengaluru

ರಾಷ್ಟ್ರೀಯ ಅರಿಶಿನ ಮಂಡಳಿಯ ರಚನೆಗೆ ಕೇಂದ್ರ ಸರ್ಕಾರ ಇಂದು ಅಧಿಸೂಚನೆ ಹೊರಡಿಸಿದೆ. ರಾಷ್ಟ್ರೀಯ ಅರಿಶಿನ ಮಂಡಳಿಯು ದೇಶದಲ್ಲಿ ಅರಿಶಿನ ಮತ್ತು ಅರಿಶಿನ ಉತ್ಪನ್ನಗಳ ಅಭಿವೃದ್ಧಿ ಮತ್ತು ಬೆಳವಣಿಗೆಯ ಮೇಲೆ ಹೆಚ್ಚು ಕೇಂದ್ರೀಕರಿಸುತ್ತದೆ.

ರಾಷ್ಟ್ರೀಯ ಅರಿಶಿನ ಮಂಡಳಿಯು ಅರಿಶಿನ ಸಂಬಂಧಿತ ವಿಷಯಗಳಲ್ಲಿ ಪ್ರಮುಖ ಸೂಚನೆ, ಮಾರ್ಗದಂಡ ನಿಗದಿಪಡಿಸುತ್ತದೆ ಮತ್ತು ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ವರ್ಧಿಸುತ್ತದೆ ಮತ್ತು ಅರಿಶಿನ ಕ್ಷೇತ್ರದ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಮಸಾಲೆ ಮಂಡಳಿ ಮತ್ತು ಇತರ ಸರ್ಕಾರಿ ಏಜೆನ್ಸಿಗಳೊಂದಿಗೆ ಹೆಚ್ಚಿನ ಸಮನ್ವಯವನ್ನು ಸುಗಮಗೊಳಿಸುತ್ತದೆ.

ಅರಿಶಿನದಿಂದ ಆರೋಗ್ಯ ಮತ್ತು ಸ್ವಾಸ್ಥ್ಯದ ಪ್ರಯೋಜನಗಳು ಹೆಚ್ಚಿದೆ. ಪ್ರಪಂಚದಾದ್ಯಂತ ಗಮನಾರ್ಹ ಸಾಮರ್ಥ್ಯ ಮತ್ತು ಆಸಕ್ತಿ ಹೊಂದಿದೆ. ಮಂಡಳಿಯು ಅರಿಶಿನದ ಬಗೆಗಿನ ಅರಿವು ಮತ್ತು ಬಳಕೆಯನ್ನು ಹೆಚ್ಚಿಸಲು, ರಫ್ತುಗಳನ್ನು ಹೆಚ್ಚಿಸಲು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲು, ಹೊಸ ಉತ್ಪನ್ನಗಳಾಗಿ ಸಂಶೋಧನೆ ಮತ್ತು ಉತ್ತೇಜಿಸಲು ಮತ್ತು ನಮ್ಮ ಸಾಂಪ್ರದಾಯಿಕ ವಸ್ತು ಅಭಿವೃದ್ಧಿಪಡಿಸಲು ನೆರವು ಒದಗಿಸುತ್ತದೆ. ಮೌಲ್ಯವರ್ಧನೆಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು ಅರಿಶಿನ ಬೆಳೆಗಾರರ ಸಾಮರ್ಥ್ಯ ವೃದ್ಧಿ ಮತ್ತು ಕೌಶಲ್ಯ ಅಭಿವೃದ್ಧಿಗೆ ಇದು ವಿಶೇಷವಾಗಿ ಗಮನಹರಿಸುತ್ತದೆ. ಮಂಡಳಿಯು ಗುಣಮಟ್ಟ ಮತ್ತು ಆಹಾರ ಸುರಕ್ಷತಾ ಮಾನದಂಡಗಳನ್ನು ಮತ್ತು ಅಂತಹ ಮಾನದಂಡಗಳ ಅನುಸರಣೆಗೆ ಆದ್ಯತೆ ನೀಡುತ್ತದೆ. ಮಂಡಳಿಯು ಅರಿಶಿನ ಉಪಯುಕ್ತವಾಗಿ ಬಳಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

ಅರಿಶಿನ ಬೆಳೆಗಾರರ ಹಿತಾಸಕ್ತಿ ಮತ್ತು ಸಮೃದ್ಧಿಯ ಕಡೆಗೆ ಮಂಡಳಿಯು ಕೇಂದ್ರೀಕೃತ ಮತ್ತು ಸಮರ್ಪಿತ ಗಮನ ನೀಡುತ್ತವೆ, ಮೌಲ್ಯವರ್ಧನೆಯು ಬೆಳೆಗಾರರಿಗೆ, ಅವರ ಉತ್ಪನ್ನಗಳಿಗೆ ಉತ್ತಮ ಪ್ರಯೋಜನವನ್ನು ನೀಡುತ್ತದೆ. ಸಂಶೋಧನೆ, ಮಾರುಕಟ್ಟೆ ಅಭಿವೃದ್ಧಿ, ಹೆಚ್ಚುತ್ತಿರುವ ಬಳಕೆ ಮತ್ತು ಮೌಲ್ಯವರ್ಧನೆಯಲ್ಲಿನ ಚಟುವಟಿಕೆಗಳು, ನಮ್ಮ ಬೆಳೆಗಾರರು ಮತ್ತು ಸಂಸ್ಕಾರಕರು ಉತ್ತಮ ಗುಣಮಟ್ಟದ ಅರಿಶಿನ ಮತ್ತು ಅರಿಶಿನ ಉತ್ಪನ್ನಗಳ ರಫ್ತುದಾರರಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿಸುವುದನ್ನು ಖಚಿತಪಡಿಸುತ್ತದೆ.

ಕೇಂದ್ರ ಸರ್ಕಾರದಿಂದ ನೇಮಕವಾಗುವ ಈ ಮಂಡಳಿಯಲ್ಲಿ, ಅಧ್ಯಕ್ಷರು, ಆಯುಷ್ ಸಚಿವಾಲಯದ ಸದಸ್ಯರು, ಔಷಧೀಯ ಇಲಾಖೆಗಳು, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಗಳು, ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆಗಳ ಸದಸ್ಯರು, ಮೂರು ರಾಜ್ಯಗಳ ಸರ್ಕಾರದ ಹಿರಿಯ ಪ್ರತಿನಿಧಿಗಳು (ಸರದಿ ಆಧಾರದ ಮೇಲೆ) , ಸಂಶೋಧನೆಯಲ್ಲಿ ತೊಡಗಿರುವ ರಾಷ್ಟ್ರೀಯ/ರಾಜ್ಯ ಸಂಸ್ಥೆಗಳನ್ನು ಆಯ್ಕೆಮಾಡಲಾಗುತ್ತದೆ. ಅರಿಶಿನ ರೈತರು ಮತ್ತು ರಫ್ತುದಾರರ ಪ್ರತಿನಿಧಿಗಳು ಇರುತ್ತಾರೆ. ವಾಣಿಜ್ಯ ಇಲಾಖೆಯಿಂದ ಕಾರ್ಯದರ್ಶಿಯನ್ನು ನೇಮಕ ಮಾಡಲಾಗುತ್ತದೆ.

ಭಾರತವು ಪ್ರಪಂಚದಲ್ಲಿ ಅರಿಶಿನದ ಅತಿದೊಡ್ಡ ಉತ್ಪಾದಕ ಮತ್ತು ರಫ್ತುದಾರ. 2022-23 ರಲ್ಲಿ 3.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 11.61 ಲಕ್ಷ ಟನ್ ಗಳಷ್ಟು (ಜಾಗತಿಕ ಅರಿಶಿನ ಉತ್ಪಾದನೆಯ ಶೇಕಡ 75 ಕ್ಕಿಂತ ಹೆಚ್ಚು) ಉತ್ಪಾದನೆ ಮಾಡಲಾಗಿತ್ತು. ಭಾರತದಲ್ಲಿ 30ಕ್ಕೂ ಹೆಚ್ಚು ಬಗೆಯ ಅರಿಶಿನವನ್ನು ಬೆಳೆಯಲಾಗುತ್ತದೆ ಮತ್ತು ಇದನ್ನು ದೇಶದ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ಅರಿಶಿನವನ್ನು ಅತಿ ಹೆಚ್ಚು ಉತ್ಪಾದಿಸುವ ರಾಜ್ಯಗಳೆಂದರೆ ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು.

ಅರಿಶಿನದ ವಿಶ್ವ ವ್ಯಾಪಾರದಲ್ಲಿ ಭಾರತವು ಶೇಕಡ 62 ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. 2022-23 ರ ಅವಧಿಯಲ್ಲಿ, 207.45 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ 1.534 ಲಕ್ಷ ಟನ್ ಅರಿಶಿನ ಮತ್ತು ಅರಿಶಿನ ಉತ್ಪನ್ನಗಳನ್ನು 380ಕ್ಕೂ ಹೆಚ್ಚು ರಫ್ತುದಾರರು ರಫ್ತು ಮಾಡಿದ್ದಾರೆ. ಭಾರತೀಯ ಅರಿಶಿನದ ಪ್ರಮುಖ ರಫ್ತು ಮಾರುಕಟ್ಟೆಗಳು ಬಾಂಗ್ಲಾದೇಶ, ಯುಎಇ, ಅಮೆರಿಕ ಮತ್ತು ಮಲೇಷ್ಯಾ. ಮಂಡಳಿಯ ಕೇಂದ್ರೀಕೃತ ಚಟುವಟಿಕೆಗಳೊಂದಿಗೆ, ಅರಿಶಿನ ರಫ್ತು 2030 ರ ವೇಳೆಗೆ USD 1 ಬಿಲಿಯನ್ ತಲುಪುವ ನಿರೀಕ್ಷೆಯಿದೆ.

*****



(Release ID: 1964187) Visitor Counter : 254