ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಮುಖ್ಯ ಅತಿಥಿಯಾಗಿ 'ರೈಸಿಂಗ್ ಇಂಡಿಯಾ: ಅಭೂತಪೂರ್ವ ಬೆಳವಣಿಗೆಯ ಅಮೃತ ಕಾಲ' ಕುರಿತು ಪಿಎಚ್ ಡಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ 118 ನೇ ವಾರ್ಷಿಕ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕಳೆದ 9 ವರ್ಷಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವನ್ನು ಬದಲಾಯಿಸಲು ಪ್ರಯತ್ನಿಸಿದ್ದಾರೆ ಮತ್ತು ಯಶಸ್ವಿಯಾಗಿದ್ದಾರೆ
ಕಳೆದ 9 ವರ್ಷಗಳಲ್ಲಿ ದೇಶದ ಆರ್ಥಿಕತೆಗೆ ಹೊಸ ದಿಕ್ಕು ಮತ್ತು ಬಲವನ್ನು ನೀಡಲು ಶ್ರೀ ಮೋದಿ ಕೆಲಸ ಮಾಡಿದ್ದಾರೆ, ಈ 9 ವರ್ಷಗಳು ಮೋದಿ ಸರ್ಕಾರದ ಭರವಸೆ, ಕಾರ್ಯಕ್ಷಮತೆ ಮತ್ತು ಫಲಿತಾಂಶಗಳದ್ದಾಗಿವೆ
ಭಾರತೀಯ ವ್ಯಾಪಾರ ಮತ್ತು ಉದ್ಯಮದ ಗಾತ್ರ ಮತ್ತು ಪ್ರಮಾಣವನ್ನು ಹೆಚ್ಚಿಸಲು ಇದು ಸರಿಯಾದ ಸಮಯ
ಅಮೃತ ಕಾಲದಲ್ಲಿ ದೇಶದ ಕೈಗಾರಿಕೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಪಿಎಚ್ ಡಿಸಿಸಿಐ ಮುಖ್ಯವಾದ ಪಾತ್ರವನ್ನು ಹೊಂದಿದೆ.
ಪಿಎಚ್ ಡಿಸಿಸಿಐ ಒಂದು ಪರಿಸರ ವ್ಯವಸ್ಥೆಯನ್ನು ರಚಿಸಬೇಕಾಗಿದೆ, ಇದರಿಂದ ಯುವಕರು, ಮಹಿಳೆಯರು ಮತ್ತು ಎಂಎಸ್ಎಂಇಗಳು ಮೋದಿ ಸರ್ಕಾರದ ನೀತಿಗಳ ಗರಿಷ್ಠ ಪ್ರಯೋಜನಗಳನ್ನು ಪಡೆಯಬಹುದು.
ಭಾರತವು ಅತ್ಯಂತ ಕಿರಿಯ ವಯಸ್ಸಿನ ದೇಶವಾಗಿದೆ ಹಾಗು ಪ್ರಜಾಪ್ರಭುತ್ವವನ್ನು ಹೊಂದಿದೆ ಮತ್ತು ಶ್ರೀ ಮೋದಿಯವರ ನಾಯಕತ್ವದಲ್ಲಿ ನೀತಿ ನಿರೂಪಣೆಯಲ್ಲಿ ಸ್ಪಷ್ಟತೆ ಇದೆ, ಅಮೃತ ಕಾಲಲ್ಲಿ ಭಾರತವು ಬಾಹ್ಯಾಕಾಶದಿಂದ ಹಿಡಿದು ಶಿಕ್ಷಣದವರೆಗೆ ಎಲ್ಲಾ ಕ್ಷೇತ್ರಗಳಲ್ಲಿ ಮೊದಲ ಸ್ಥಾನವನ್ನು ತಲುಪಲಿದೆ.
Posted On:
29 SEP 2023 3:56PM by PIB Bengaluru
ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಮುಖ್ಯ ಅತಿಥಿಯಾಗಿ 'ರೈಸಿಂಗ್ ಇಂಡಿಯಾ: ಅಭೂತಪೂರ್ವ ಬೆಳವಣಿಗೆಯ ಅಮೃತ ಕಾಲ' ಕುರಿತು ಪಿಎಚ್ ಡಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ118 ನೇ ವಾರ್ಷಿಕ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದಲ್ಲಿ ನಡೆದ ಜಿ 20 ಸಭೆಯ ನಂತರ, ವ್ಯಾಪಾರ ಮತ್ತು ಉದ್ಯಮದಲ್ಲಿ ಮಾತ್ರವಲ್ಲದೆ ದೇಶದ ಪ್ರತಿಯೊಂದು ಕ್ಷೇತ್ರಕ್ಕೂ ಹೊಸ ಶಕ್ತಿಯನ್ನು ತುಂಬಲಾಗಿದೆ ಎಂದು ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ಹೇಳಿದರು. ಜಿ 20, ಚಂದ್ರಯಾನ, ಮಿಷನ್ ಆದಿತ್ಯ ಮತ್ತು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ಮೀಸಲಾತಿಯ ಯಶಸ್ಸು ಇಡೀ ರಾಷ್ಟ್ರದಲ್ಲಿ ಹೊಸ ಶಕ್ತಿಯನ್ನು ತುಂಬಿದೆ ಎಂದು ಅವರು ಹೇಳಿದರು. ಅಮೃತಕಾಲದ ಆರಂಭದಲ್ಲಿ ಇಂದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಸ್ವಾತಂತ್ರ್ಯ ಬಂದ ನಂತರ ಇಲ್ಲಿಯವರೆಗೆ, ದೇಶವು 75 ವರ್ಷಗಳ ಪಯಣವನ್ನು ಪ್ರಾರಂಭಿಸಿದೆ ಹಾಗು ಪ್ರತಿಯೊಂದು ಕ್ಷೇತ್ರದಲ್ಲೂ ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದೆ. ಪ್ರಜಾಪ್ರಭುತ್ವದ ಬೇರುಗಳನ್ನು ಆಳವಾಗಿಸುವಲ್ಲಿ ನಾವು ಒಂದು ದೇಶವಾಗಿ ಯಶಸ್ವಿಯಾಗಿರುವುದು ಈ 75 ವರ್ಷಗಳಲ್ಲಿ ದೊಡ್ಡ ಸಾಧನೆಯಾಗಿದೆ ಎಂದು ಶ್ರೀ ಶಾ ಹೇಳಿದರು. ನೀತಿಯ ವಿಷಯದಲ್ಲಿ ಆಡಳಿತವು ಒಂದು ನಿರಂತರ ಪ್ರಕ್ರಿಯೆ ಎಂದು ಭಾರತವು ಜಗತ್ತಿಗೆ ತೋರಿಸಿದೆ ಎಂದು ಅವರು ಹೇಳಿದರು.
ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳೆದ 75 ವರ್ಷಗಳ ಸಾಧನೆಗಳನ್ನು ಆಚರಿಸುವುದರ ಜೊತೆಗೆ 2047 ರಲ್ಲಿ, ಭಾರತಕ್ಕೆ ಸ್ವಾತಂತ್ರ್ಯದ 100ನೇ ವರ್ಷಗಳಾದಾಗ ಗುರಿಗಳನ್ನು ಹೊಂದಿಸುವುದು ಮತ್ತು ದೇಶದ ಸ್ಥಾನ ಎಲ್ಲಿರಬೇಕು ಎನ್ನುವುದನ್ನು ಅರಿತುಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು.. ಅದಕ್ಕಾಗಿಯೇ ಪ್ರಧಾನಮಂತ್ರಿ ಮೋದಿ ಅವರು 75 ರಿಂದ 100 ವರ್ಷಗಳ ಪ್ರಯಾಣವನ್ನು "ಅಮೃತ ಕಾಲ" ಎಂದು ಕರೆದಿದ್ದಾರೆ, ಇದು ಸಂಕಲ್ಪಗಳನ್ನು ಮಾಡುವ ಮತ್ತು ಅವುಗಳನ್ನು ಸಾಧಿಸುವ ಸಮಯ (ಸಂಕಲ್ಪ್ ಸೇ ಸಿದ್ಧಿ) ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕನಸುಗಳ ಭಾರತವನ್ನು ನಿರ್ಮಿಸುವ ಗುರಿಯನ್ನು ನಾವು ಹೊಂದಿದ್ದೇವೆ ಆದ್ದರಿಂದ ದೇಶವು ತನ್ನ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸಿದಾಗ, ಭಾರತವು ಜಾಗತಿಕವಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆ ಸಾಧಿಸುತ್ತದೆ ಎಂದು ಅವರು ಹೇಳಿದರು. ಭಾರತವು ಅತ್ಯಂತ ಕಿರಿಯ ವಯಸ್ಸಿನ, ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ ಮತ್ತು ವಿಶ್ವದಲ್ಲೇ ಅತಿ ಹೆಚ್ಚು ಎಂಜಿನಿಯರ್ಗಳು, ವೈದ್ಯರು ಮತ್ತು ತಂತ್ರಜ್ಞರನ್ನು ಹೊಂದಿದೆ ಎಂದು ಅವರು ಹೇಳಿದರು. ಇದು ಪ್ರಜಾಪ್ರಭುತ್ವ, ಟೀಮ್ ವರ್ಕ್ ಹೊಂದಿರುವ ದೇಶವಾಗಿದ್ದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಉತ್ತಮ ನೀತಿಗಳನ್ನು ರೂಪಿಸಲಾಗುತ್ತಿದೆ.
ಮುಂಬರುವ ವರ್ಷಗಳಲ್ಲಿ ದೇಶದ ವ್ಯಾಪಾರ ಮತ್ತು ಉದ್ಯಮದ ಆಕಾರ ಮತ್ತು ದಿಕ್ಕನ್ನು ನಿರ್ಧರಿಸುವಲ್ಲಿ ಪಿಎಚ್ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಮುಖ್ಯವಾದ ನಿರ್ಣಾಯಕ ಪಾತ್ರ ವಹಿಸಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ಇಂದಿನ ಕಾರ್ಯಕ್ರಮದ ವಿಷಯವು ಸಮಕಾಲೀನ ಕಾಲಕ್ಕೆ ಬಹಳ ಪ್ರಸ್ತುತವಾಗಿದೆ ಎಂದು ಅವರು ಹೇಳಿದರು. ಪಿಎಚ್ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ದೇಶಾದ್ಯಂತ 1.5 ಲಕ್ಷ ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳನ್ನು ಪ್ರತಿನಿಧಿಸುತ್ತದೆ ಮತ್ತು ಒಂದು ರೀತಿಯಲ್ಲಿ ಕೈಗಾರಿಕೆ ಮತ್ತು ಉದ್ಯಮದ ಧ್ವನಿ ಎಂದು ಪರಿಗಣಿಸಲಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2047 ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಗುರಿಗಳನ್ನು ಹೊಂದಿದ್ದು, 2026 ರ ವೇಳೆಗೆ ಭಾರತಕ್ಕೆ $ 5 ಟ್ರಿಲಿಯನ್ ಆರ್ಥಿಕತೆಯನ್ನು ಸಾಧಿಸಲು ಮತ್ತು 2027 ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಗುರಿಗಳನ್ನು ಹೊಂದಿದ್ದಾರೆ. ಈ ಮೂರು ಗುರಿಗಳನ್ನು ಸಾಧಿಸಲು, ಉದ್ಯಮ ಮಹತ್ವದ ಪಾತ್ರವನ್ನು ವಹಿಸಬೇಕಾಗುತ್ತದೆ. ವ್ಯಾಪಾರ ಮತ್ತು ಉದ್ಯಮವು ದೇಶದ ಆರ್ಥಿಕತೆಯ ಹೃದಯವಾಗಿದೆ, ಅಲ್ಲಿಂದ ಇಡೀ ಆರ್ಥಿಕತೆಯು ಉತ್ತೇಜನವನ್ನು ಪಡೆಯುತ್ತದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೀತಿಗಳು ತಂದ ಬದಲಾವಣೆಗಳಿಂದಾಗಿ ಎಲ್ಲೆಡೆ "ಭಾರತದ ಕ್ಷಣ" ಎನ್ನುವ ಮಾತು ಕೇಳಿಬರುತ್ತಿದೆ ಮತ್ತು ಭಾರತವು ಜಾಗತಿಕವಾಗಿ ಚೈತನ್ಯಯುತ ಕೇಂದ್ರ - "ವೈಬ್ರೆಂಟ್ ಸ್ಪಾಟ್" ಎಂದು ಗುರುತಿಸಲ್ಪಟ್ಟಿದೆ. ಹಿಂದಿನ ತ್ರೈಮಾಸಿಕದಲ್ಲಿ ನಮ್ಮ ಆರ್ಥಿಕತೆಯು 7.8%ರ ದರದಲ್ಲಿ ಬೆಳೆದಿದೆ ಮತ್ತು 40 ತಿಂಗಳವರೆಗೆ ಹಣದುಬ್ಬರವನ್ನು ಕನಿಷ್ಠ ಮಟ್ಟದಲ್ಲಿ ಇಡುವುದರಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ರತಿಪಾದಿಸಿದ "ವಸುಧೈವ ಕುಟುಂಬಕಂ" ತತ್ವದ ಪ್ರಕಾರ, ಎಲ್ಲಾ ಕ್ಷೇತ್ರಗಳಲ್ಲಿ ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಭಾರತವು ಜಗತ್ತನ್ನು ಮುನ್ನಡೆಸುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಭಯೋತ್ಪಾದನೆಯ ವಿರುದ್ಧದ ಹೋರಾಟ, ಸೌರ ಒಕ್ಕೂಟ, ಹಸಿರು ಇಂಧನ ಇತ್ಯಾದಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಈಗ ಜಗತ್ತು ಭಾರತದತ್ತ ನೋಡುತ್ತಿದೆ ಮತ್ತು ನಮ್ಮ ಅನೇಕ ಉಪಕ್ರಮಗಳು ಇಂದು ಜಗತ್ತಿಗೆ ಮಾರ್ಗದರ್ಶನ ನೀಡುತ್ತಿವೆ. ಕಳೆದ 9 ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಡೀ ಭಾರತವು ಎಲ್ಲಾ ಕ್ಷೇತ್ರಗಳಲ್ಲಿ ದೇಶವನ್ನು ಪರಿವರ್ತಿಸುವಲ್ಲಿ ಪ್ರಯತ್ನಗಳನ್ನು ಮಾಡಿದೆ ಮತ್ತು ಯಶಸ್ಸನ್ನು ಸಾಧಿಸಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 9 ವರ್ಷಗಳ ಆಡಳಿತವು ಭರವಸೆಗಳು, ಕಾರ್ಯಕ್ಷಮತೆ ಮತ್ತು ಫಲಿತಾಂಶಗಳಿಂದ ಗುರುತಿಸಲ್ಪಟ್ಟಿದೆ. 2014ರಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದ್ದು, ಈಗ ಅತ್ಯುತ್ತಮ ಫಲಿತಾಂಶ ನೀಡುತ್ತಿದೆ ಎಂದು ತಿಳಿಸಿದರು. ಭಾರತವು 10 ವರ್ಷಗಳ ಕಾಲ ವಿಶ್ವದ 11 ನೇ ಅತಿದೊಡ್ಡ ಆರ್ಥಿಕತೆಯಾಗಿಯೇ ಉಳಿದಿದ್ದಾಗ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ನಾವು ಕಳೆದ 9 ವರ್ಷಗಳಲ್ಲಿ ಆ ಮಟ್ಟದಿಂದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದೇವೆ ಮತ್ತು ಈಗ ನಾವು 2027 ರ ಹೊತ್ತಿಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ಸ್ಥಾನವನ್ನು ಹೊಂದಲು ಸಜ್ಜಾಗಿದ್ದೇವೆ. 2023-24 ರ ಆರ್ಥಿಕ ವರ್ಷದಲ್ಲಿ ಅಂದಾಜು ಒಟ್ಟು ದೇಶೀಯ ಉತ್ಪನ್ನ) ಬೆಳವಣಿಗೆಯ (ಜಿಡಿಪಿ) ದರವು 6.1% ಆಗಿದ್ದು, ಈ ಸಾಧನೆಯೊಂದಿಗೆ, ಭಾರತವು ಜಿ20 ದೇಶಗಳಲ್ಲಿಯೇ ಅತ್ಯಧಿಕ ಬೆಳವಣಿಗೆ ದರವನ್ನು ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ ಎಂದು ಅವರು ಹೇಳಿದರು. ಉತ್ಪಾದನಾ ಸಂಬಂಧಿತ ಪ್ರೋತ್ಸಾಹ (ಪಿಎಲ್ಐ) ಯೋಜನೆಯು 14 ಕ್ಷೇತ್ರಗಳಲ್ಲಿ “ಮೇಕ್ ಇನ್ ಇಂಡಿಯಾ” ಕನಸನ್ನು ನನಸಾಗಿಸಿದೆ ಎಂದು ಅವರು ಹೇಳಿದರು. ಈಗ, ಭಾರತವು ಜಾಗತಿಕ ಮಟ್ಟದಲ್ಲಿ ಉತ್ಪಾದನೆಗೆ ಲಾಭದಾಯಕ ತಾಣವಾಗಿ ಹೊರಹೊಮ್ಮಿದೆ ಮತ್ತು ಪ್ರಪಂಚದಾದ್ಯಂತದ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಬಯಸುತ್ತವೆ ಇದು ನಮಗೆ ಹಲವಾರು ಅವಕಾಶಗಳನ್ನು ಸೃಷ್ಟಿಸುತ್ತವೆ.
2004 ರಿಂದ 2014 ರ ಅವಧಿಯಲ್ಲಿ ದೇಶವು ನೀತಿಯ ವಿಫಲತೆಗೆ ತುತ್ತಾಗಿದೆ ಎಂದು ಆಗಾಗ್ಗೆ ಹೇಳಲಾಗುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಆದರೆ, ಕಳೆದ ಒಂಬತ್ತು ವರ್ಷಗಳಲ್ಲಿ, ನಾವು ಹಲವಾರು ನೀತಿಗಳನ್ನು ರೂಪಿಸಿದ್ದೇವೆ ಮತ್ತು ಇದರ ಪರಿಣಾಮವಾಗಿ, ನಮ್ಮ ಜಿಡಿಪಿಯನ್ನು $2.03 ಟ್ರಿಲಿಯನ್ನಿಂದ $3.75 ಟ್ರಿಲಿಯನ್ಗೆ ಹೆಚ್ಚಿಸುವಲ್ಲಿ ನಾವು ಯಶಸ್ಸನ್ನು ಸಾಧಿಸಿದ್ದೇವೆ. 2013-14ರಲ್ಲಿ ನಮ್ಮ ತಲಾ ಆದಾಯ ರೂ. 68,000 ಆಗಿತ್ತು, ಈಗ 2022-23ರಲ್ಲಿ ರೂ.1,80,000 ಆಗಿದೆ. 2014ರಲ್ಲಿ ಬಂಡವಾಳ ವೆಚ್ಚ ರೂ. 3.9 ಲಕ್ಷ ಕೋಟಿಗಳಾಗಿದ್ದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು 2023 ರ ವೇಳೆಗೆ ಇದನ್ನು ರೂ. 10 ಲಕ್ಷ ಕೋಟಿಯಷ್ಟು ಮಾಡಿದೆ. ನಾವು ಸಂಯುಕ್ತ ರಾಜ್ಯ (ಫೆಡರಲ್) ರಚನೆಯಲ್ಲಿ ವಾಸಿಸುತ್ತಿದ್ದೇವೆ ಮತ್ತು ಟೀಮ್ ಇಂಡಿಯಾ ಪರಿಕಲ್ಪನೆಯನ್ನು ಅನುಸರಿಸದ ಹೊರತು ಈ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟೀಂ ಇಂಡಿಯಾ ಪರಿಕಲ್ಪನೆಯನ್ನು ಉತ್ತೇಜಿಸಿದ್ದಾರೆ ಮತ್ತು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹಂಚಿಕೆಯನ್ನು 2004 ರಿಂದ 2014 ರ ಅವಧಿಯಲ್ಲಿ ಇದ್ದ ರೂ. 30 ಲಕ್ಷ ಕೋಟಿಯಿಂದ. 2014 ರಿಂದ 2023 ರವರೆಗಿನ ಒಂಬತ್ತು ವರ್ಷಗಳಲ್ಲಿ 100 ಲಕ್ಷ ಕೋಟಿಯಷ್ಟು ಮಾಡಿದೆ. 2004 ಮತ್ತು 2014 ರ ನಡುವೆ ತೆರಿಗೆ ಸಂಗ್ರಹವು ರೂ. 19 ಲಕ್ಷ ಕೋಟಿ ಇದ್ದು, ಈಗ 2014 ರಿಂದ 2023 ರವರೆಗಿನ ಒಂಬತ್ತು ವರ್ಷಗಳಲ್ಲಿ ರೂ.70 ಲಕ್ಷ ಕೋಟಿ ಆಗಿದೆ. 2004 ಮತ್ತು 2014 ರ ನಡುವೆ, 610 ಕಿಲೋಮೀಟರ್ ರೈಲು ಮಾರ್ಗಗಳನ್ನು ನಿರ್ಮಿಸಲಾಗಿತ್ತು, ಆದರೆ ಕಳೆದ ಒಂಬತ್ತು ವರ್ಷಗಳಲ್ಲಿ ನಾವು 6,565 ಕಿಲೋಮೀಟರ್ ರೈಲು ಮಾರ್ಗಗಳನ್ನು ನಿರ್ಮಿಸಿದ್ದೇವೆ. 2014 ರಲ್ಲಿ, ದೇಶದಲ್ಲಿ ಒಟ್ಟು 91,000 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳಿದ್ದವು, ಆದರೆ ಕಳೆದ ಒಂಬತ್ತು ವರ್ಷಗಳಲ್ಲಿ ನಾವು 50,000 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಿದ್ದೇವೆ. ಇಂದು, ದೇಶದಲ್ಲಿ ಜಾಲತಾಣ (ಇಂಟರ್ನೆಟ್) ಇಲ್ಲದೆ ಉದ್ಯಮವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಈ ಹಿಂದೆ ಪ್ರತಿ ಜಿಬಿ ಇಂಟರ್ನೆಟ್ನ ಬೆಲೆ ರೂ. 270, ಇದು ಈಗ ಪ್ರತಿ ಜಿಬಿಗೆ 10 ರೂಪಾಯಿ ದರದಲ್ಲಿ ಲಭ್ಯವಿದೆ. 2014 ರಲ್ಲಿ, ದೇಶದಲ್ಲಿ ಕೇವಲ 4 ಯುನಿಕಾರ್ನ್ ನವೋದ್ಯಮಗಳು (ಸ್ಟಾರ್ಟ್ಅಪ್) ಗಳು ಇದ್ದವು. ಇಂದು, 115 ಯುನಿಕಾರ್ನ್ ನವೋದ್ಯಮಗಳೊಂದಿಗೆ, ಭಾರತವು ಜಾಗತಿಕವಾಗಿ ಮುಂಚೂಣಿಯಲ್ಲಿದೆ. 2014ರಲ್ಲಿ 350 ನವೋದ್ಯಮಗಳು, ಇಂದು ಒಂದು ಲಕ್ಷಕ್ಕೂ ಹೆಚ್ಚು ನವೋದ್ಯಮಗಳು ನಮ್ಮ ಆರ್ಥಿಕತೆಗೆ ಕೊಡುಗೆ ನೀಡುತ್ತಿವೆ. 2004 ಮತ್ತು 2014 ರ ನಡುವೆ, ದೇಶದಲ್ಲಿ ಎಫ್ಡಿಐ $ 45 ಶತಕೋಟಿ ಆಗಿತ್ತು, ಅದು ಈಗ $ 85 ಶತಕೋಟಿ ದಾಟಿದೆ.
ನಮ್ಮ ಆಟಿಕೆಗಳ ರಫ್ತು 96 ಮಿಲಿಯನ್ ಡಾಲರ್ ಆಗಿತ್ತು, 2022 ರ ವೇಳೆಗೆ ಅದನ್ನು 326 ಮಿಲಿಯನ್ ಡಾಲರ್ಗೆ ಹೆಚ್ಚಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. ಜಿಎಸ್ಟಿ ಐನ್ನು ಜಾರಿಗೆ ತರಬಹುದೆಂದು ಯಾರೂ ನಂಬುವಂತಿರಲಿಲ್ಲ ಎಂದು ಹೇಳಿದರು. ಆದರೆ ಜಿಎಸ್ ಟಿಯನ್ನು ಜಾರಿಗೊಳಿಸುವ ನಮ್ಮ ಕನಸು ನನಸಾಯಿತು ಮತ್ತು ಟೀಮ್ ಇಂಡಿಯಾದ ವಿಧಾನದಿಂದಾಗಿ, ಜಿಎಸ್ಟಿ ಮಂಡಳಿಯಲ್ಲಿ ಒಂದೇ ಒಂದು ನಿರ್ಧಾರವನ್ನು ಮತದಾನದ ಮೂಲಕ ತೆಗೆದುಕೊಳ್ಳಲಾಗಿದೆ, ಉಳಿದೆಲ್ಲ ನಿರ್ಧಾರಗಳನ್ನು ಪಕ್ಷಾತೀತವಾಗಿ ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ. ಪ್ರಧಾನ ಮಂತ್ರಿ ಮೋದಿಯವರು ಅಭಿವೃದ್ಧಿಪಡಿಸಿದ ಸಹಕಾರಿ ಚಿಂತನೆಯ ರಾಜಕೀಯ ಸಂಸ್ಕೃತಿಯಿಂದಾಗಿ, ಏಪ್ರಿಲ್, 2023 ರಲ್ಲಿ ಜಿಎಸ್ಟಿ ಸಂಗ್ರಹವು 1.87 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ ಮತ್ತು ಮಾಸಿಕ ಸರಾಸರಿ ಜಿಎಸ್ಟಿ ಸಂಗ್ರಹವು 1.69 ಲಕ್ಷ ಕೋಟಿ ರೂಪಾಯಿಯಾಗಿದೆ ಎಂದು ಶ್ರೀ ಶಾ ಹೇಳಿದರು. ನಮ್ಮ ವಿದೇಶಿ ವಿನಿಮಯ ಮೀಸಲು $309 ಶತಕೋಟಿ, ಇಂದು $593 ಶತಕೋಟಿಯಾಗುದೆ. ಇಂದು ನಮ್ಮ ರಫ್ತು ಹೆಚ್ಚಿದೆ, ವ್ಯಾಪಾರ ಮತ್ತು ಉದ್ಯಮಕ್ಕೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಸುಲಭವಾದ ವ್ಯವಹಾರವನ್ನು ಹೆಚ್ಚಿಸುವ ಮೂಲಕ ವಿವಿಧ ಕಾನೂನುಗಳ ಅಡಿಯಲ್ಲಿ 39,000 ಕ್ಕೂ ಹೆಚ್ಚು ಅನುಸರಣೆಯ ಅವಶ್ಯಕತೆಗಳನ್ನು ರದ್ದುಪಡಿಸಲಾಗಿದೆ ಮತ್ತು 3400 ಕಾನೂನು ನಿಬಂಧನೆಗಳನ್ನು ಅಪರಾಧದಿಂದ ಸಿವಿಲ್ ಆಗಿ (criminal to civil) ಪರಿವರ್ತಿಸುವ ಕೆಲಸ ನರೇಂದ್ರ ಮೋದಿ ಸರ್ಕಾರದಿಂದ ಮಾಡಲಾಗಿದೆ. ವ್ಯಾಪಾರ, ಕೈಗಾರಿಕೆಗಳಿಗೆ ದೇಶದಲ್ಲಿ ಇದಕ್ಕಿಂತ ಉತ್ತಮ ವಾತಾವರಣ ಇರಲಾರದು ಎಂದು ಹೇಳಿದರು. 2013-14ರಲ್ಲಿ ದೇಶದಲ್ಲಿ 127 ಕೋಟಿ ಡಿಜಿಟಲ್ ವಹಿವಾಟು ನಡೆದಿದ್ದು, 2022ರಲ್ಲಿ 12,735 ಕೋಟಿಗೆ ಏರಿಕೆಯಾಗಿದೆ ಎಂದು ಶ್ರೀ ಷಾ ಹೇಳಿದರು. ಪ್ರಪಂಚದಲ್ಲಿ ನೈಜ-ಸಮಯದ (ರಿಯಲ್ ಟೈಮ್) ಡಿಜಿಟಲ್ ಪಾವತಿಗಳಲ್ಲಿ ಭಾರತವು ಕೇವಲ 40% ನಷ್ಟಿದೆ. 2014 ರಲ್ಲಿ, ಭಾರತದಲ್ಲಿ 50 ಕೋಟಿ ತಮ್ಮ ಕುಟುಂಬದಲ್ಲಿ ಒಂದೇ ಒಂದು ಬ್ಯಾಂಕ್ ಖಾತೆಯನ್ನು ಹೊಂದಿಲ್ಲದ ಜನರಿದ್ದರು. ಅವರಿಗೆ ಬ್ಯಾಂಕ್ ಖಾತೆ ನೀಡುವ ಮೂಲಕ 50 ಕೋಟಿ ಜನರನ್ನು ದೇಶದ ಆರ್ಥಿಕತೆಯೊಂದಿಗೆ ಜೋಡಿಸುವ ಕೆಲಸವನ್ನು ಪ್ರಧಾನಮಂತ್ರಿ ಮೋದಿ ಮಾಡಿದ್ದಾರೆ. ಮೂಲಸೌಕರ್ಯಗಳನ್ನು ನೋಡಿದರೆ ಈ ಹಿಂದೆ ಒಂದು ದಿನದಲ್ಲಿ 11 ಕಿಲೋಮೀಟರ್ ರಸ್ತೆ ನಿರ್ಮಾಣವಾಗುತ್ತಿತ್ತು, ಈಗ ಒಂದು ದಿನದಲ್ಲಿ 37 ಕಿಲೋಮೀಟರ್ ನಿರ್ಮಾಣವಾಗಿದೆ ಎಂದು ಹೇಳಿದರು. ʼವಂದೇ ಭಾರತ್ʼ ರೈಲು ಪ್ರಯಾಣದ ಸಂಪೂರ್ಣ ಪರಿಕಲ್ಪನೆಯನ್ನು ಬದಲಾಯಿಸಿದೆ, ಮೊದಲು 3 ನಗರಗಳಲ್ಲಿ ಮೆಟ್ರೋ ಇತ್ತು, ಈಗ ಅದು 27 ನಗರಗಳಲ್ಲಿದೆ. 10 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ರಸ್ತೆಗಿಳಿದಿವೆ. ಭಾರತ್-ನೆಟ್ ಅಡಿಯಲ್ಲಿ, ಈ ಹಿಂದೆ ಕೇವಲ 30,000 ಕಿಲೋಮೀಟರ್ ಕೇಬಲ್ ಹಾಕಲಾಗಿತ್ತು, ಮೋದಿ ಜಿ 6,20,000 ಕಿಲೋಮೀಟರ್ ಆಪ್ಟಿಕಲ್ ಫೈಬರ್ ಕೇಬಲ್ಗಳನ್ನು ಹಾಕುವ ಮೂಲಕ ಪ್ರತಿ ಪಂಚಾಯತಿಗೆ ಆಪ್ಟಿಕಲ್ ಫೈಬರ್ ಒದಗಿಸುವ ಕೆಲಸವನ್ನು ಮಾಡಿದ್ದಾರೆ. ಕಳೆದ 8 ವರ್ಷಗಳಲ್ಲಿ ಜಾಲತಾಣ ಸಂಪರ್ಕಗಳು 230% ರಷ್ಟು ಹೆಚ್ಚಾಗಿದೆ ಮತ್ತು 2027 ರ ವೇಳೆಗೆ ಎಂಟು ಈಶಾನ್ಯ ರಾಜ್ಯಗಳ ರಾಜಧಾನಿಗಳು ರೈಲು, ರಸ್ತೆ ಮತ್ತು ವಿಮಾನದ ಮೂಲಕ ದೇಶಕ್ಕೆ ಸಂಪರ್ಕ ಹೊಂದಲಿವೆ.
ಲ್ಯಾಂಡ್ ಪೋರ್ಟ್ ಅಥಾರಿಟಿಯನ್ನು ನಾವು ಪುನರುಜ್ಜೀವನಗೊಳಿಸಿದ್ದೇವೆ ಮತ್ತು ಇಂದು ನಮ್ಮ ಎಲ್ಲಾ ನೆರೆಯ ದೇಶಗಳೊಂದಿಗೆ ಲ್ಯಾಂಡ್ ಪೋರ್ಟ್ ಅಥಾರಿಟಿಯ ಮೂಲಕ 42,000 ಕೋಟಿ ರೂಪಾಯಿಗಳ ವ್ಯಾಪಾರವನ್ನು ನಡೆಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. 2004 ರಿಂದ 2014 ರವರೆಗೆ ಈ ದೇಶವು ನೀತಿ ನೀತಿಯ ವಿಫಲತೆಯನ್ನು ಅನುಭವಿಸಿದೆ ಎಂದು ಹೇಳಿದರು. 2014 ರಲ್ಲಿ ಪ್ರಧಾನ ಮಂತ್ರಿಯಾದ ನಂತರ ಶ್ರೀ ನರೇಂದ್ರ ಮೋದಿ ಅವರು ಎಲೆಕ್ಟ್ರಾನಿಕ್ಸ್, ಮೇಕ್ ಇನ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ, ಜಿಎಸ್ಟಿ, ಡಿಜಿಟಲ್ ಇಂಡಿಯಾ, ಉಡಾನ್ ಯೋಜನೆ, ರಾಷ್ಟ್ರೀಯ ಕ್ವಾಂಟಮ್ ಮಿಷನ್, ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಹಲವು ನೀತಿಗಳನ್ನು ರೂಪಿಸಿದರು. ಮುಂದಿನ 10 ವರ್ಷಗಳಲ್ಲಿ ಜಗತ್ತಿನ ಎಲ್ಲ ವಿದ್ಯಾರ್ಥಿಗಳಿಗೆ ಭಾರತವು ಅತ್ಯುತ್ತಮ ಶಿಕ್ಷಣದ ತಾಣವಾಗಲಿದೆ ಎಂದು ಹೇಳಿದರು. ಸ್ವಾತಂತ್ರ್ಯದ ನಂತರ ಯಾರೂ ವಿರೋಧಿಸದ ಮೊದಲ ಶಿಕ್ಷಣ ನೀತಿ ಇದಾಗಿದೆ ಎಂದು ಶ್ರೀ ಶಾ ಹೇಳಿದರು. ನಾವು ಭಾರತೀಯ ಬಾಹ್ಯಾಕಾಶ ನೀತಿಯಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡಿದ್ದೇವೆ, ಡ್ರೋನ್ ನೀತಿಯನ್ನು ರೂಪಿಸಿದ್ದೇವೆ ಮತ್ತು ಆಯುಷ್ಮಾನ್ ಭಾರತ್ ಮೂಲಕ ಸಂಪೂರ್ಣ ಆರೋಗ್ಯ ರಚನೆಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಮಾಡಿದ್ದೇವೆ, ಸ್ಮಾರ್ಟ್ ಸಿಟಿ ನೀತಿಯ ಮೂಲಕ ನಮ್ಮ ನಗರ ವಲಯವನ್ನು ಬಲಪಡಿಸಲು ನಾವು ಕೆಲಸ ಮಾಡಿದ್ದೇವೆ, ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ತೆರೆದಿದೆ. ನಮ್ಮ ಸಂಪನ್ಮೂಲಗಳ ಅನ್ವೇಷಣೆಗೆ ಹಲವು ಸಾಧ್ಯತೆಗಳು, ಗ್ರೀನ್ ಇಂಡಿಯಾ ರಾಷ್ಟ್ರೀಯ ಮಿಷನ್ ಇಂದು ಇಡೀ ಜಗತ್ತನ್ನು ಆಕರ್ಷಿಸುತ್ತಿದೆ ಮತ್ತು ಸ್ವಚ್ಛ ಭಾರತ್ ಮೂಲಕ, ನಾವು ದೇಶದಲ್ಲಿ 11 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸುವ ಮೂಲಕ ದೇಶದ ಆರೋಗ್ಯದಲ್ಲಿ ಭಾರಿ ಸುಧಾರಣೆಯನ್ನು ಮಾಡಿದ್ದೇವೆ.
ಮುಂದಿನ 25 ವರ್ಷಗಳಲ್ಲಿ ವಿಶ್ವ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಎಲ್ಲಾ ಕ್ಷೇತ್ರಗಳಲ್ಲಿ ಭಾರತವು ತನ್ನ ಸ್ಥಾನವನ್ನು ಪಡೆದುಕೊಂಡಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಹಸಿರು ಜಲಜನಕ, ಸೆಮಿಕಂಡಕ್ಟರ್, ಎಲೆಕ್ಟ್ರಿಕ್ ವಾಹನ, ಸೌರಶಕ್ತಿ, ರಕ್ಷಣೆ, ಡ್ರೋನ್ಗಳು, ಬಾಹ್ಯಾಕಾಶ, ಗಣಿಗಾರಿಕೆ ಮತ್ತು ಹಸಿರು ಇಂಧನ ಎಥೆನಾಲ್ನಂತಹ ವಲಯಗಳು ಮುಂದಿನ 25 ವರ್ಷಗಳವರೆಗೆ ವಿಶ್ವ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿವೆ. ಕಳೆದ 9 ವರ್ಷಗಳಲ್ಲಿ, ಮೋದಿ ಸರ್ಕಾರವು ಈ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾದ ಬುನಾದಿಯನ್ನು ಹಾಕಿದೆ ಮತ್ತು ಈಗ ನಾವು ಈ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಜಗತ್ತಿನಲ್ಲಿ ನಮ್ಮದೇ ಆದ ಸ್ಥಾನವನ್ನು ಗಳಿಸಬೇಕಾಗಿದೆ. ಮುಂಬರುವ 25 ವರ್ಷಗಳ ಕಾಲ ವಿಶ್ವ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಎಲ್ಲಾ ಕ್ಷೇತ್ರಗಳಲ್ಲಿ ಭಾರತಕ್ಕೆ ಬಲವಾದ ಬುನಾದಿಯನ್ನು ಹಾಕುವ ದೂರದೃಷ್ಟಿಯೊಂದಿಗೆ ಪ್ರಧಾನಮಂತ್ರಿ ಮೋದಿಯವರು ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು. ನಮ್ಮ ವ್ಯಾಪಾರ ಮತ್ತು ಉದ್ಯಮಕ್ಕೆ ಮುಂದಿನ 25 ವರ್ಷಗಳು ಬಹಳ ಮುಖ್ಯ ಎಂದು ಶ್ರೀ ಶಾ ಹೇಳಿದರು. ಭಾರತೀಯ ಉದ್ಯಮದ ಗಾತ್ರ ಮತ್ತು ಪ್ರಮಾಣ ಎರಡನ್ನೂ ಬದಲಾಯಿಸುವ ಸಮಯ ಬಂದಿದೆ ಮತ್ತು ಪಿಎಚ್ ಡಿ ಚೇಂಬರ್ ಆಫ್ ಕಾಮರ್ಸ್ ಈ ಉಪಕ್ರಮದ ದಿಕ್ಕಿನಲ್ಲಿ ಯೋಚಿಸಬೇಕು. ನಮ್ಮ ಕಂಪನಿಗಳು ಬಹುರಾಷ್ಟ್ರೀಯವಾಗಲು ಕೆಲಸ ಮಾಡಬೇಕಾಗುತ್ತದೆ ಮತ್ತು ಈಗ ಭಾರತೀಯ ಕಂಪನಿಗಳು ಬಹುರಾಷ್ಟ್ರೀಯವಾಗುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು. ಇದರೊಂದಿಗೆ ನಾವು ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಯಲ್ಲಿ ಹೂಡಿಕೆಯನ್ನು ಹೆಚ್ಚಿಸಬೇಕಾಗಿದೆ. ಇಂದು ನಾವು ಬೇಳೆಕಾಳುಗಳು, ಹಾಲು ಮತ್ತು ಸೆಣಬು ಉತ್ಪಾದನೆಯಲ್ಲಿ ವಿಶ್ವದಲ್ಲಿ ಮೊದಲ ಸ್ಥಾನದಲ್ಲಿದೆ ಮತ್ತು ಗರಿಷ್ಠ ಸಂಖ್ಯೆಯ ರೈಲ್ವೆ ಎಂಜಿನ್ಗಳನ್ನು ಉತ್ಪಾದಿಸುವ ಯಾವುದೇ ದೇಶವಿದ್ದರೆ ಅದು ಭಾರತವಾಗಿದೆ. ಇದಲ್ಲದೇ ಇಂದು ನಾವು ಮೊಬೈಲ್ ಹ್ಯಾಂಡ್ಸೆಟ್ ಉತ್ಪಾದನೆ, ಸಿಮೆಂಟ್, ಸ್ಟೀಲ್ ಮತ್ತು ಹತ್ತಿ ಉತ್ಪಾದನೆಯಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದ್ದು, ಚಹಾ ಉತ್ಪಾದನೆಯಲ್ಲೂ ನಾವು ಎರಡನೇ ಸ್ಥಾನವನ್ನು ತಲುಪಿದ್ದೇವೆ. ಸ್ಟಾರ್ಟ್ಅಪ್ಗಳು ಮತ್ತು ಮೋಟಾರು ವಾಹನಗಳಲ್ಲಿ ನಾವು ಮೂರನೇ ಸ್ಥಾನವನ್ನು ತಲುಪಿದ್ದೇವೆ. ನಾವು ನಿರ್ಧರಿಸಿದರೆ, ನಾವು ಮಾಡಿ ಮುಗಿಸುತ್ತೇವೆ ಎನ್ನುವುದನ್ನು ಇದು ತೋರಿಸುತ್ತದೆ.
ನಮ್ಮ ಬ್ಯಾಂಕಿಂಗ್ ಕ್ಷೇತ್ರವನ್ನು ನಾವು ಜಾಣ್ಮೆಯಿಂದ ಅನುತ್ಪಾದಕ ಆಸ್ತಿಗಳ (ಎನ್ಪಿಎ) ವರ್ಗದಿಂದ ಹೊರತಂದಿದ್ದೇವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಅತಿ ಸಣ್ಣ, ಸಣ್ಣ, ಮಧ್ಯಮ ಉದ್ದಿಮೆಗಳನ್ನು (ಎಂಎಸ್ ಎಂಇ) ಗಳನ್ನು ಉತ್ತೇಜಿಸಲು ರೂ. 9000 ಕೋಟಿಗಳ ಒಂದು ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಅನ್ನು ಸಹ ರಚಿಸಲಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟೀಂ ಇಂಡಿಯಾ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ ಮತ್ತು ಕೇವಲ ಇದು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಎಂದಲ್ಲ, ದೇಶದ ಪ್ರತಿಯೊಬ್ಬ ರೈತರು ಮತ್ತು ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳು ಒಟ್ಟಾಗಿ ಟೀಮ್ ಇಂಡಿಯಾದವರಾಗಿರುವರು ಮತ್ತು ಆಗ ಮಾತ್ರ ನಾವು 2047 ರಲ್ಲಿ ನಮ್ಮ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ. ಇಂದು ಅಮೃತಕಾಲ ಪ್ರಾರಂಭವಾಗುತ್ತಿದೆ, ಇದು ಸಂಕಲ್ಪದಿಂದ ಸಿಧ್ದಿಗಾಗಿ (ಸಂಕಲ್ಪ್ ಸೇ ಸಿದ್ಧಿ) ಯೋಜಿಸುವ ಸರಿಯಾದ ಸಮಯವಾಗಿದೆ ಎಂದು ಹೇಳಿದರು.
***
(Release ID: 1962427)
Visitor Counter : 140