ಪ್ರಧಾನ ಮಂತ್ರಿಯವರ ಕಛೇರಿ

​​​​​​​ನಾರಿ ಶಕ್ತಿ ವಂದನ್ ಅಧಿನಿಯಮಕ್ಕೆ ಮತ ಹಾಕಿದ ಎಲ್ಲಾ ರಾಜ್ಯಸಭಾ ಸಂಸದರಿಗೆ ಪ್ರಧಾನಮಂತ್ರಿ ಧನ್ಯವಾದ 

Posted On: 21 SEP 2023 10:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾರಿ ಶಕ್ತಿ ವಂದನ್ ಅಧಿನಿಯಮಕ್ಕೆ ಮತ ಹಾಕಿದ ಎಲ್ಲಾ ರಾಜ್ಯಸಭಾ ಸಂಸದರಿಗೆ ಧನ್ಯವಾದ ಅರ್ಪಿಸಿದರು. ಇದು ನಮ್ಮ ರಾಷ್ಟ್ರದ ಪ್ರಜಾಸತ್ತಾತ್ಮಕ ಪಯಣದಲ್ಲಿ ನಿರ್ಣಾಯಕ ಕ್ಷಣವಾಗಿದೆ. ದೇಶದ 140 ಕೋಟಿ ನಾಗರಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಇದು ಕೇವಲ ಶಾಸನವಲ್ಲ ಆದರೆ ನಮ್ಮ ರಾಷ್ಟ್ರವನ್ನು ನಿರ್ಮಿಸಿದ ಅಸಂಖ್ಯಾತ ಮಹಿಳೆಯರಿಗೆ ಗೌರವವಾಗಿದೆ ಮತ್ತು ಅವರ ಧ್ವನಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕೇಳುವ ಬದ್ಧತೆಯ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಅವರು ತಿಳಿಸಿದರು.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಂದೇಶ ನೀಡಿದ್ದಾರೆ.

“ನಮ್ಮ ರಾಷ್ಟ್ರದ ಪ್ರಜಾಸತ್ತಾತ್ಮಕ ಪಯಣದಲ್ಲಿ ನಿರ್ಣಾಯಕ ಕ್ಷಣ! 140 ಕೋಟಿ ಭಾರತೀಯರಿಗೆ ಅಭಿನಂದನೆಗಳು. ನಾರಿ ಶಕ್ತಿ ವಂದನ್ ಅಧಿನಿಯಮಕ್ಕೆ ಮತ ಹಾಕಿದ ಎಲ್ಲಾ ರಾಜ್ಯಸಭಾ ಸಂಸದರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಇಂತಹ ಒಮ್ಮತದ ಬೆಂಬಲ ನಿಜಕ್ಕೂ ಸಂತಸ ತಂದಿದೆ. ಸಂಸತ್ತಿನಲ್ಲಿ ನಾರಿ ಶಕ್ತಿ ವಂದನ್ ಅಧಿನಿಯಮ ಅಂಗೀಕಾರದೊಂದಿಗೆ, ನಾವು ಭಾರತದ ಮಹಿಳೆಯರಿಗೆ ಬಲವಾದ ಪ್ರಾತಿನಿಧ್ಯ ಮತ್ತು ಸಬಲೀಕರಣದ ಯುಗವನ್ನು ಪ್ರಾರಂಭಿಸುತ್ತೇವೆ. ಇದು ಕೇವಲ ಶಾಸನವಲ್ಲ. ಇದು ನಮ್ಮ ದೇಶವನ್ನು ನಿರ್ಮಿಸಿದ ಅಸಂಖ್ಯಾತ ಮಹಿಳೆಯರಿಗೆ ಗೌರವವಾಗಿದೆ. ಅವರ ಸ್ಥಿತಿಸ್ಥಾಪಕತ್ವ ಮತ್ತು ಕೊಡುಗೆಗಳಿಂದ ಭಾರತವನ್ನು ಶ್ರೀಮಂತಗೊಳಿಸಲಾಗಿದೆ ಎಂದು ತಿಳಿಸಿದರು.

ನಮ್ಮ ರಾಷ್ಟ್ರದ ಎಲ್ಲಾ ಮಹಿಳೆಯರ ಶಕ್ತಿ, ಧೈರ್ಯ ಮತ್ತು ಅದಮ್ಯ ಮನೋಭಾವವನ್ನು ನಾವು ಸದಾ ನೆನಪಿಸಿಕೊಳ್ಳುತ್ತೇವೆ. ಈ ಐತಿಹಾಸಿಕ ಹೆಜ್ಜೆ ಅವರ ಧ್ವನಿಯನ್ನು ಇನ್ನಷ್ಟು ಪರಿಣಾಮಕಾರಿಯಾಗುತ್ತದೆ. ಮಹಿಳೆಯರ ಸಬಲೀಕರಣಕ್ಕೆ ನಾವು ಸದಾ ಬದ್ಧವಾಗಿದ್ದೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ.

 

***



(Release ID: 1959570) Visitor Counter : 95