ಗೃಹ ವ್ಯವಹಾರಗಳ ಸಚಿವಾಲಯ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಇಂದು ಲೋಕಸಭೆಯಲ್ಲಿ ನಾರಿ ಶಕ್ತಿ ವಂದನ್ ಮಸೂದೆಯನ್ನು ಮಂಡಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಕೃತಜ್ಞತೆ ಸಲ್ಲಿಸಿದರು.


ಇಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಸನಾತನ ಸಂಸ್ಕೃತಿಗೆ ಅನುಗುಣವಾಗಿ ದೇಶದ ಪ್ರಜಾಪ್ರಭುತ್ವದಲ್ಲಿ “ಯತ್ರ ನಾರ್ಯಸ್ತು ಪೂಜ್ಯಂತೇ, ರಮಂತೇ ತತ್ರ ದೇವತಾ” ತತ್ವವನ್ನು ಜಾರಿಗೆ ತಂದಿದ್ದಾರೆ.

ಇಂದು ಲೋಕಸಭೆಯಲ್ಲಿ ಮಂಡಿಸಲಾದ 'ನಾರಿ ಶಕ್ತಿ ವಂದನ್ ಮಸೂದೆ' ದೇಶದ ಮಹಿಳೆಯರಿಗೆ ನಿಜವಾದ ಅರ್ಥದಲ್ಲಿ ಅವರ ಹಕ್ಕುಗಳನ್ನು ನೀಡುವ ನಿರ್ಧಾರವಾಗಿದೆ.

'ಮಹಿಳಾ ನೇತೃತ್ವದ ಸಬಲೀಕರಣ' ಎಂಬುದು ಮೋದಿ ಸರ್ಕಾರದ ಘೋಷವಾಕ್ಯವಲ್ಲ, ಆದರೆ ಒಂದು ನಿರ್ಣಯ ಎಂದು ಮೋದಿ ಜೀ ತೋರಿಸಿದ್ದಾರೆ, ಕೋಟ್ಯಂತರ ದೇಶವಾಸಿಗಳ ಪರವಾಗಿ, ಈ ಐತಿಹಾಸಿಕ ನಿರ್ಧಾರಕ್ಕಾಗಿ ನಾನು ಮೋದಿ ಜೀಯನ್ನು ಅಭಿನಂದಿಸುತ್ತೇನೆ.

ನೀತಿಯಾಗಲಿ ಅಥವಾ ನಾಯಕತ್ವವಾಗಲಿ, ಭಾರತದ ಮಹಿಳಾ ಶಕ್ತಿಯು ಯಾವುದೇ ಕ್ಷೇತ್ರದಲ್ಲಿ ಯಾರಿಗೂ ಕಡಿಮೆಯಿಲ್ಲ ಎಂಬುದನ್ನು ಸಾಬೀತುಪಡಿಸಿದೆ

ಮಹಿಳಾ ಶಕ್ತಿಯ ಬೆಂಬಲ ಮತ್ತು ಬಲವಿಲ್ಲದೆ ಬಲಿಷ್ಠ ಮತ್ತು ಸ್ವಾವಲಂಬಿ ಭಾರತ ನಿರ್ಮಾಣ ಸಾಧ್ಯವಿಲ್ಲ ಎಂದು ಮೋದಿ ಸರ್ಕಾರ ನಂಬಿದೆ.

ದೇಶದ ಮಹಿಳೆಯರಿಗೆ ಅವರ ಹಕ್ಕುಗಳನ್ನು ನೀಡುವ ಮೋದಿ ಸರ್ಕಾರದ ಈ ನಿರ್ಧಾರವು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಹೊಂದಿದ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸುವ ಪ್ರಮುಖ ಆಧಾರಸ್ತಂಭವಾಗಲಿದೆ.

Posted On: 19 SEP 2023 4:57PM by PIB Bengaluru

ಪ್ರಧಾನಮಂತ್ರಿ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಇಂದು ಲೋಕಸಭೆಯಲ್ಲಿ ನಾರಿ ಶಕ್ತಿ ವಂದನ್ ಮಸೂದೆಯನ್ನು ಮಂಡಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂಬಂಧ ಸಾಮಾಜಿಕ ಜಾಲತಾಣ X ನಲ್ಲಿನ ತಮ್ಮ ಸಂದೇಶ ನೀಡಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಸನಾತನ ಸಂಸ್ಕೃತಿಗೆ ಅನುಗುಣವಾಗಿ ದೇಶದ ಪ್ರಜಾಪ್ರಭುತ್ವದಲ್ಲಿ “ಯತ್ರ ನಾರ್ಯಸ್ತು ಪೂಜ್ಯಂತೆ, ರಮಂತೇ ತತ್ರ ದೇವತಾ:” ತತ್ವವನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಿದರು. ಇಂದು ಲೋಕಸಭೆಯಲ್ಲಿ ಮಂಡಿಸಿರುವ ‘ನಾರಿ ಶಕ್ತಿ ವಂದನ ಮಸೂದೆ’ ದೇಶದ ಮಹಿಳೆಯರಿಗೆ ನಿಜವಾದ ಅರ್ಥದಲ್ಲಿ ಅವರ ಹಕ್ಕುಗಳನ್ನು ನೀಡುವ ನಿರ್ಧಾರವಾಗಿದೆ ಎಂದು ಹೇಳಿದರು. 'ಮಹಿಳಾ ನೇತೃತ್ವದ ಸಬಲೀಕರಣ' ಎಂಬುದು ಮೋದಿ ಸರ್ಕಾರದ ಘೋಷವಾಕ್ಯವಲ್ಲ, ಆದರೆ ಒಂದು ನಿರ್ಣಯ ಎಂದು ಮೋದಿ ಜೀ ತೋರಿಸಿಕೊಟ್ಟಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು, ಕೋಟ್ಯಂತರ ದೇಶವಾಸಿಗಳ ಪರವಾಗಿ, ಈ ಐತಿಹಾಸಿಕ ನಿರ್ಧಾರಕ್ಕಾಗಿ ನಾನು ಮೋದಿ ಜೀಯನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ನೀತಿಯಾಗಲಿ ಅಥವಾ ನಾಯಕತ್ವವಾಗಲಿ, ಭಾರತದ ಮಹಿಳಾ ಶಕ್ತಿ ಯಾವುದೇ ಕ್ಷೇತ್ರದಲ್ಲೂ ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಮಹಿಳಾ ಶಕ್ತಿಯ ಬೆಂಬಲ ಮತ್ತು ಬಲವಿಲ್ಲದೆ ಬಲಿಷ್ಠ ಮತ್ತು ಸ್ವಾವಲಂಬಿ ಭಾರತ ನಿರ್ಮಾಣ ಸಾಧ್ಯವಿಲ್ಲ ಎಂದು ಮೋದಿ ಸರ್ಕಾರ ನಂಬಿದೆ ಎಂದು ಹೇಳಿದರು. ದೇಶದ ಮಹಿಳೆಯರಿಗೆ ಅವರ ಹಕ್ಕುಗಳನ್ನು ನೀಡುವ ಮೋದಿ ಸರ್ಕಾರದ ಈ ನಿರ್ಧಾರವು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಹೊಂದಿದ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸುವ ಪ್ರಮುಖ ಆಧಾರಸ್ತಂಭವಾಗಲಿದೆ ಎಂದು ಶ್ರೀ ಅಮಿತ್  ಶಾ ಹೇಳಿದರು.

.

प्रधानमंत्री @narendramodi जी ने आज भारत की सनातन संस्कृति के अनुरूप “यत्र नार्यस्तु पूज्यन्ते, रमन्ते तत्र देवता:” को देश के लोकतंत्र में चरितार्थ करके दिखाया है। आज लोकसभा में पेश हुआ 'नारी शक्ति वंदन अधिनियम' एक ऐसा निर्णय है, जिससे हमारी नारी शक्ति को सही मायने में उनका…

— Amit Shah (@AmitShah) September 19, 2023

चाहे नीति हो या नेतृत्व, भारत की नारी शक्ति ने साबित किया है कि वे किसी भी क्षेत्र में किसी से कम नहीं हैं। मोदी सरकार का मानना है कि नारी शक्ति के सहयोग और सामर्थ्य के बिना एक सशक्त और आत्मनिर्भर भारत का निर्माण संभव नहीं है।

देश की महिला शक्ति को उनका अधिकार देने वाला मोदी…

— Amit Shah (@AmitShah) September 19, 2023

*****



(Release ID: 1958969) Visitor Counter : 99