ರಾಷ್ಟ್ರಪತಿಗಳ ಕಾರ್ಯಾಲಯ
ಗಣೇಶ ಚತುರ್ಥಿಯ ಮುನ್ನಾದಿನದಂದು ಭಾರತದ ರಾಷ್ಟ್ರಪತಿ ಅವರ ಶುಭಾಶಯಗಳು
प्रविष्टि तिथि:
18 SEP 2023 5:31PM by PIB Bengaluru
ಗಣೇಶ ಚತುರ್ಥಿಯ ಮುನ್ನಾದಿನದಂದು ಭಾರತದ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ತಮ್ಮ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ:-
"ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ, ಭಾರತ ಮತ್ತು ವಿದೇಶಗಳಲ್ಲಿ ವಾಸಿಸುವ ಎಲ್ಲಾ ಭಾರತೀಯರಿಗೆ ನನ್ನ ಆತ್ಮೀಯ ಶುಭಾಶಯಗಳು ಮತ್ತು ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ.
ಜ್ಞಾನ, ಬುದ್ಧಿವಂತಿಕೆ ಮತ್ತು ಸಮೃದ್ಧಿಯ ಸಾರಾಂಶವಾದ ಭಗವಾನ್ ಶ್ರೀ ಗಣೇಶನ ಜನ್ಮದಿನವಾಗಿ ಆಚರಿಸಲಾಗುವ ಗಣೇಶ ಚತುರ್ಥಿಯ ಈ ಹಬ್ಬವು ಉತ್ಸಾಹ, ಆನಂದ ಮತ್ತು ಸಂತೋಷದ ಹಬ್ಬವಾಗಿದೆ. ಈ ಹಬ್ಬವು ಒಟ್ಟಾಗಿ ಕೆಲಸ ಮಾಡುವ ಸಂದೇಶವನ್ನು ನೀಡುತ್ತದೆ ಮತ್ತು ಜೀವನದಲ್ಲಿ ವಿನಮ್ರವಾಗಿರಲು ಮತ್ತು ಸಮಾಜದಲ್ಲಿ ಸಾಮರಸ್ಯ ಮತ್ತು ಸಹೋದರತ್ವವನ್ನು ಉತ್ತೇಜಿಸಲು ನಮ್ಮನ್ನು ಪ್ರೇರೇಪಿಸುತ್ತದೆ.
ಅಡೆತಡೆಗಳನ್ನು ನಿವಾರಿಸಲು ಭಗವಾನ್ ಶ್ರೀ ಗಣೇಶ ನಮಗೆ ಸಹಾಯ ಮಾಡಲಿ, ಇದರಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ನಿರ್ಮಿಸುವಲ್ಲಿ ನಾವು ಅಪಾರ ಕೊಡುಗೆ ನೀಡಬಹುದು,’’ ಎಂದಿದ್ದಾರೆ.
http://Please click here to see the President's message -
****
(रिलीज़ आईडी: 1958801)
आगंतुक पटल : 131