ಹಣಕಾಸು ಸಚಿವಾಲಯ
2023-24ರ ಹಣಕಾಸು ವರ್ಷದಲ್ಲಿ (2023.16.09 ರಂತೆ) ಒಟ್ಟು ನೇರ ತೆರಿಗೆ ಸಂಗ್ರಹವು ಶೇ. 18.29 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ
2023-24ರ ಹಣಕಾಸು ವರ್ಷದಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹವು (2023.16.09 ರಂತೆ) ಶೇ. 23.51 ಕ್ಕಿಂತ ಹೆಚ್ಚಾಗಿದೆ
2023-24ರ ಹಣಕಾಸು ವರ್ಷದಲ್ಲಿ (2023. 16.09 ರಂತೆ) ಮುಂಗಡ ತೆರಿಗೆ ಸಂಗ್ರಹವು 3,55,481 ಕೋಟಿ ರೂ.ಗಳಾಗಿದ್ದು, ಶೇ. 20.73 ರಷ್ಟು ಬೆಳವಣಿಗೆಯಾಗಿದೆ.
2023ರ 09. 16 ರವರೆಗೆ ಒಟ್ಟು 1,21,944 ಕೋಟಿ ರೂ.ಗಳ ಮರುಪಾವತಿಯನ್ನು ನೀಡಲಾಗಿದೆ
Posted On:
18 SEP 2023 4:20PM by PIB Bengaluru
2023-24ರ ಹಣಕಾಸು ವರ್ಷದ ನೇರ ತೆರಿಗೆ ಸಂಗ್ರಹದ ತಾತ್ಕಾಲಿಕ ಅಂಕಿಅಂಶಗಳು (2023.16.09 ರಂತೆ) ನಿವ್ವಳ ಸಂಗ್ರಹವು 8,65,117 ಕೋಟಿ ರೂ.ಗಳಷ್ಟಿದೆ ಎಂದು ಬಿಂಬಿಸುತ್ತದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ (ಅಂದರೆ 2022-23ರ ಹಣಕಾಸು ವರ್ಷ) 7,00,416 ಕೋಟಿ ರೂ.ಗೆ ಹೋಲಿಸಿದರೆ, ಇದು ಶೇ.23.5 ರಷ್ಟು ಹೆಚ್ಚಳವನ್ನು ಪ್ರತಿನಿಧಿಸುತ್ತದೆ.
ನಿವ್ವಳ ನೇರ ತೆರಿಗೆ ಸಂಗ್ರಹ 8,65,117 ಕೋಟಿ ರೂ. (16.09.2023 ರಂತೆ) ಕಾರ್ಪೊರೇಷನ್ ತೆರಿಗೆ (ಸಿಐಟಿ) 4,16,217 ಕೋಟಿ ರೂ. (ನಿವ್ವಳ ಮರುಪಾವತಿ) ಮತ್ತು ಸೆಕ್ಯುರಿಟೀಸ್ ವಹಿವಾಟು ತೆರಿಗೆ (ಎಸ್ ಟಿಟಿ) ಸೇರಿದಂತೆ ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) 4,47,291 ಕೋಟಿ (ನಿವ್ವಳ ಮರುಪಾವತಿ).
2023-24ರ ಹಣಕಾಸು ವರ್ಷದಲ್ಲಿ ನೇರ ತೆರಿಗೆಗಳ ಒಟ್ಟು ಸಂಗ್ರಹದ ತಾತ್ಕಾಲಿಕ ಅಂಕಿಅಂಶಗಳು (ಮರುಪಾವತಿಗೆ ಸರಿಹೊಂದಿಸುವ ಮೊದಲು) 9,87,061 ಕೋಟಿ ರೂ.ಗಳಾಗಿದ್ದು, ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ 8,34,469 ಕೋಟಿ ರೂ.ಗೆ ಹೋಲಿಸಿದರೆ, ಇದು ಶೇ. 18.29 ರಷ್ಟು ಬೆಳವಣಿಗೆಯನ್ನು ಬಿಂಬಿಸುತ್ತದೆ.
ಕಾರ್ಪೊರೇಷನ್ ತೆರಿಗೆ (ಸಿಐಟಿ) 4,71,692 ಕೋಟಿ ರೂ., ಸೆಕ್ಯುರಿಟೀಸ್ ವಹಿವಾಟು ತೆರಿಗೆ (ಎಸ್ ಟಿಟಿ) ಸೇರಿದಂತೆ ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) ಸೇರಿ ಒಟ್ಟು 9,87,061 ಕೋಟಿ ರೂ. ಸಣ್ಣ ತಲೆವಾರು ಸಂಗ್ರಹವು 3,55,481 ಕೋಟಿ ರೂ.ಗಳ ಮುಂಗಡ ತೆರಿಗೆಯನ್ನು ಒಳಗೊಂಡಿದೆ. ಮೂಲದಲ್ಲಿ 5,19,696 ಕೋಟಿ ರೂ.ಗಳ ತೆರಿಗೆ ಕಡಿತ; ಸ್ವಯಂ ಮೌಲ್ಯಮಾಪನ ತೆರಿಗೆ 82,460 ಕೋಟಿ ರೂ. ನಿಯಮಿತ ಮೌಲ್ಯಮಾಪನ ತೆರಿಗೆ 21,175 ಕೋಟಿ ರೂ. ಮತ್ತು ಇತರ ಸಣ್ಣ ಶೀರ್ಷಿಕೆಗಳ ಅಡಿಯಲ್ಲಿ ತೆರಿಗೆ 8, 248 ಕೋಟಿ ರೂ. ಆಗಿದೆ.
2023-24ರ ಹಣಕಾಸು ವರ್ಷದಲ್ಲಿ (16.09.2023 ರಂತೆ) ಮುಂಗಡ ತೆರಿಗೆ ಸಂಗ್ರಹದ ತಾತ್ಕಾಲಿಕ ಅಂಕಿಅಂಶಗಳು 3,55,481 ಕೋಟಿ ರೂ.ಗಳಾಗಿದ್ದು, ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಅಂದರೆ 2022-23ರ ಇದೇ ಅವಧಿಯಲ್ಲಿ ಮುಂಗಡ ತೆರಿಗೆ ಸಂಗ್ರಹವು 2,94,433 ಕೋಟಿ ರೂ.ಗಳಾಗಿದ್ದು, ಇದು ಶೇ. 20.73 ರಷ್ಟು ಬೆಳವಣಿಗೆಯನ್ನು ತೋರಿಸುತ್ತದೆ. 2023ರ 09.16 ರವರೆಗೆ 3,55,481 ಕೋಟಿ ರೂ.ಗಳ ಮುಂಗಡ ತೆರಿಗೆ ಸಂಗ್ರಹವು ಕಾರ್ಪೊರೇಷನ್ ತೆರಿಗೆ (ಸಿಐಟಿ) 2,80,620 ಕೋಟಿ ರೂ., ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) 74,858 ಕೋಟಿ ರೂ. ಆಗಿದೆ.
2023-24ರ ಹಣಕಾಸು ವರ್ಷದಲ್ಲಿ 2023 ರ 09.16 ರವರೆಗೆ 1,21,944 ಕೋಟಿ ರೂ.ಗಳ ಮರುಪಾವತಿಯನ್ನು ಸಹ ನೀಡಲಾಗಿದೆ.
****
(Release ID: 1958793)
Visitor Counter : 123