ಪ್ರಧಾನ ಮಂತ್ರಿಯವರ ಕಛೇರಿ

ಸೆಪ್ಟೆಂಬರ್ 17 ರಂದು ಪ್ರಧಾನಮಂತ್ರಿಯವರಿಂದ ರಾಷ್ಟ್ರಕ್ಕೆ ನವದೆಹಲಿಯ ದ್ವಾರಕಾದಲ್ಲಿ 'ಯಶೋಭೂಮಿ' ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್ಪೋ ಸೆಂಟರ್ ನ 1 ನೇ ಹಂತದ  ಸಮರ್ಪಣೆ


'ಯಶೋಭೂಮಿ' ಯನ್ನು ಸುಮಾರು ರೂ. 5400 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಒಟ್ಟು 8.9 ಲಕ್ಷ ಚದರ ಮೀಟರ್ಗಳಷ್ಟು ಯೋಜನಾ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗಿದ್ದು,  ಇದು ವಿಶ್ವದ ಅತಿದೊಡ್ಡ ಎಂಐಸಿಇ (ಪ್ರದರ್ಶನಗಳು ಮತ್ತು ಸಮಾವೇಶಗಳು) ತಾಣಗಳಲ್ಲಿ ಒಂದಾಗಲಿದೆ.

'ಯಶೋಭೂಮಿ' ಭವ್ಯವಾದ ಕನ್ವೆನ್ಷನ್ ಸೆಂಟರ್, ಬಹು ಪ್ರದರ್ಶನ ಸಭಾಂಗಣಗಳು ಮತ್ತು ಇತರ ಸೌಲಭ್ಯಗಳನ್ನು ಹೊಂದಿದೆ.

ಕನ್ವೆನ್ಷನ್ ಸೆಂಟರ್, 11000 ಕ್ಕೂ ಹೆಚ್ಚು ಪ್ರತಿನಿಧಿಗಳ ಆಸನಗಳು, 15 ಕನ್ವೆನ್ಶನ್ ಕೊಠಡಿಗಳು, ಭವ್ಯವಾದ ಬಾಲ್ ರೂಂ ಮತ್ತು 13 ಸಭಾ ಕೊಠಡಿಗಳನ್ನು ಒಳಗೊಂಡಿದೆ.

ಕನ್ವೆನ್ಷನ್ ಸೆಂಟರ್ ದೇಶದ ಅತಿದೊಡ್ಡ ಎಲ್ಇಡಿ ಮಾಧ್ಯಮದ ಮುಂಭಾಗದ   ಮುಂಭಾಗದ ರಚನೆಯನ್ನು ಹೊಂದಿದೆ

ಅತ್ಯಾಧುನಿಕ ಆಸನ ಸೌಲಭ್ಯಗಳೊಂದಿಗೆ ಕನ್ವೆನ್ಷನ್ ಸೆಂಟರ್ನ ಪ್ಲೀನರಿ ಹಾಲ್ ಪ್ರವಾಸಿಗರಿಗೆ ವಿಶ್ವ ದರ್ಜೆಯ ಅನುಭವವನ್ನು ನೀಡುತ್ತದೆ

ಯಶೋಭೂಮಿಯು ದೆಹಲಿ ಏರ್ಪೋರ್ಟ್ ಮೆಟ್ರೋ ಎಕ್ಸ್ಪ್ರೆಸ್ ಲೈನ್ ಗೆ ಸಂಪರ್ಕ ಹೊಂದಲಿದೆ

ದ್ವಾರಕಾ ಸೆಕ್ಟರ್ 21 ರಿಂದ ಹೊಸ ಮೆಟ್ರೋ ಸ್ಟೇಷನ್ 'ಯಶೋಭೂಮಿ ದ್ವಾರಕಾ ಸೆಕ್ಟರ್ 25' ವರೆಗಿನ ದೆಹಲಿ ಏರ್ಪೋರ್ಟ್ ಮೆಟ್ರೋ ಎಕ್ಸ್ಪ್ರೆಸ್ ಮಾರ್ಗದ ವಿಸ್ತರಣೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ

Posted On: 15 SEP 2023 4:37PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 17ನೇ ಸೆಪ್ಟೆಂಬರ್ 2023 ರಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯ ದ್ವಾರಕಾದಲ್ಲಿ ‘ಯಶೋಭೂಮಿʼ ಎಂದು ಹೆಸರಿಡಲ್ಪಟ್ಟ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್ಪೋ ಸೆಂಟರ್ (ಐಐಸಿಸಿ) 1 ನೇ ಹಂತವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ದ್ವಾರಕಾ ಸೆಕ್ಟರ್ 21 ರಿಂದ ಹೊಸ ಮೆಟ್ರೋ ನಿಲ್ದಾಣ 'ಯಶೋಭೂಮಿ ದ್ವಾರಕಾ ಸೆಕ್ಟರ್ 25' ವರೆಗೆ ದೆಹಲಿ ಏರ್ಪೋರ್ಟ್ ಮೆಟ್ರೋ ಎಕ್ಸ್ಪ್ರೆಸ್ ಲೈನ್ನ ವಿಸ್ತರಣೆಯನ್ನು ಸಹ ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ.

ದ್ವಾರಕಾದಲ್ಲಿ ‘ಯಶೋಭೂಮಿ’ಕಾರ್ಯಾರಂಭ ಮಾಡುವುದರೊಂದಿಗೆ ದೇಶದಲ್ಲಿ ಸಭೆಗಳು, ಸಮ್ಮೇಳನಗಳು ಮತ್ತು ಪ್ರದರ್ಶನಗಳನ್ನು ಆಯೋಜಿಸಲು ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಹೊಂದುವ ಪ್ರಧಾನ ಮಂತ್ರಿಯವರ ಉದ್ದೇಶವನ್ನು ಬಲಪಡಿಸುತ್ತವೆ.

ಒಟ್ಟು 8.9 ಲಕ್ಷ ಚದರ ಮೀಟರ್ಗಳ ಯೋಜನಾ ಪ್ರದೇಶ ಮತ್ತು ಒಟ್ಟು 1.8 ಲಕ್ಷ ಚದರ ಮೀಟರ್ಗಿಂತಲೂ ಹೆಚ್ಚು ನಿರ್ಮಿಸಲಾದ ಪ್ರದೇಶದೊಂದಿಗೆ, 'ಯಶೋಭೂಮಿ' ವಿಶ್ವದ ಅತಿದೊಡ್ಡ ಎಂಐಸಿಇ (ಸಭೆಗಳು, ಪ್ರೋತ್ಸಾಹಕಗಳು, ಸಮ್ಮೇಳನಗಳು ಮತ್ತು ಪ್ರದರ್ಶನಗಳು) ಸೌಲಭ್ಯಗಳಿರುವ ಸ್ಥಳಗಳಲ್ಲಿ ಒಂದಾಗಲಿದೆ.  

 ಸುಮಾರು ರೂ. 5400 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ 'ಯಶೋಭೂಮಿ' ಭವ್ಯವಾದ ಸಮಾವೇಶ ಕೇಂದ್ರ (ಕನ್ವೆನ್ಷನ್ ಸೆಂಟರ್), ಬಹು ಪ್ರದರ್ಶನ ಸಭಾಂಗಣಗಳು ಮತ್ತು ಇತರ ಸೌಲಭ್ಯಗಳನ್ನು ಹೊಂದಿದೆ.

73 ಸಾವಿರ ಚದರ ಮೀಟರ್‌ ಗಿಂತಲೂ ಹೆಚ್ಚು ಪ್ರದೇಶದಲ್ಲಿ ನಿರ್ಮಿಸಲಾದ ಕನ್ವೆನ್ಷನ್ ಸೆಂಟರ್, ಮುಖ್ಯ ಸಭಾಂಗಣ, ಗ್ರ್ಯಾಂಡ್ ಬಾಲ್ ರೂಂ ಮತ್ತು 11,000 ಪ್ರತಿನಿಧಿಗಳಿಗೆ ಸ್ಥಳಾವಕಾಶ,  ಒಟ್ಟು ಸಾಮರ್ಥ್ಯದ 13 ಸಭೆ ಕೊಠಡಿಗಳನ್ನು ಒಳಗೊಂಡಂತೆ 15 ಕನ್ವೆನ್ಶನ್ ಕೊಠಡಿಗಳನ್ನು ಒಳಗೊಂಡಿದೆ. ಕನ್ವೆನ್ಷನ್ ಸೆಂಟರ್ ದೇಶದಲ್ಲೇ ಅತಿ ದೊಡ್ಡ ಎಲ್ಇಡಿ ಮಾಧ್ಯಮದ ಮುಂಭಾಗದ ರಚನೆಯನ್ನು ಹೊಂದಿದೆ. ಕನ್ವೆನ್ಷನ್ ಸೆಂಟರ್ನಲ್ಲಿರುವ ಪ್ಲೀನರಿ ಹಾಲ್ ಸುಮಾರು 6,000 ಅತಿಥಿಗಳು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಸಭಾಂಗಣವು ಅತ್ಯಾಧುನಿಕ ಸ್ವಯಂಚಾಲಿತ ಆಸನ ವ್ಯವಸ್ಥೆಗಳಲ್ಲಿ ಒಂದಾಗಿದೆ, ಇದರಿಂದ ಇದು ನೆಲವನ್ನು ಸಮತಟ್ಟಾದ ಅಥವಾ ವಿವಿಧ ಹಂತಗಳಲ್ಲಿ ಆಡಿಟೋರಿಯಂ ಶೈಲಿಯ ಆಸನಗಳಾಗಿ ಪರಿವರ್ತಿಸಬಹುದು.  ಆಡಿಟೋರಿಯಂನಲ್ಲಿ ಬಳಸಲಾದ ಮರದ ನೆಲಗಳು ಮತ್ತು ಅಕೌಸ್ಟಿಕ್ ಗೋಡೆಯ ಫಲಕಗಳು ಸಂದರ್ಶಕರಿಗೆ ವಿಶ್ವ ದರ್ಜೆಯ ಅನುಭವವನ್ನು ನೀಡುತ್ತದೆ. ಗ್ರ್ಯಾಂಡ್ ಬಾಲ್ ರೂಂ ವಿಶಿಷ್ಟವಾದ ಹೂದಳದ ವಿನ್ಯಾಸದ ಛಾವಣಿಯೊಂದಿಗೆ ಸುಮಾರು 2500 ಅತಿಥಿಗಳಿಗೆ ಅವಕಾಶ ಕಲ್ಪಿಸುತ್ತದೆ.   ಇದು 500 ಜನರು ಕುಳಿತುಕೊಳ್ಳಬಹುದಾದ ವಿಸ್ತೃತ ಬಯಲು ಪ್ರದೇಶವನ್ನು ಸಹ ಹೊಂದಿದೆ. ಎಂಟು ಮಹಡಿಗಳಲ್ಲಿ ಇರುವ 13 ಸಭಾ ಕೊಠಡಿಗಳನ್ನು ವಿವಿಧ ಪ್ರಮಾಣದ ವಿವಿಧ ರೀತಿಯ ಸಭೆಗಳನ್ನು ನಡೆಸಲು ಯೋಜಿಸಲಾಗಿದೆ.

'ಯಶೋಭೂಮಿ' ವಿಶ್ವದ ಅತಿದೊಡ್ಡ ಎಕ್ಸಿಬಿಷನ್ ಹಾಲ್ಗಳಲ್ಲಿ ಒಂದಾಗಿದೆ. ಈ ಪ್ರದರ್ಶನ ಸಭಾಂಗಣಗಳನ್ನು 1.07 ಲಕ್ಷ ಚದರ ಮೀಟರ್ಗಳಲ್ಲಿ ನಿರ್ಮಿಸಲಾಗಿದೆ, ಪ್ರದರ್ಶನಗಳು, ವ್ಯಾಪಾರ ಮೇಳಗಳು ಮತ್ತು ವ್ಯಾಪಾರ ಕಾರ್ಯಕ್ರಮಗಳನ್ನು ಆಯೋಜಿಸಲು ಬಳಸಿಕೊಳ್ಳಲಾಗುತ್ತದೆ ಮತ್ತು ದಿನದ ಬೆಳಕು ವಿವಿಧ ಸ್ಕೈಲೈಟುಗಳಿಂದ ಹಾದು ಹೋಗುವಂತೆ ತಾಮ್ರದ ಛಾವಣಿಯಿಂದ  ಅನನ್ಯವಾಗಿ ವಿನ್ಯಾಸಗೊಳಿಸಲಾದ ಭವ್ಯವಾದ ಫೋಯರ್ (ಪ್ರವೇಶ ಹಜಾರ) ಗೆ ಸಂಪರ್ಕ ಹೊಂದಿದೆ.  ಮಾಧ್ಯಮ ಕೊಠಡಿಗಳು, ವಿವಿಐಪಿ ಲಾಂಜ್ಗಳು, ಕ್ಲೋಕ್ ರೂಂ ಸೌಲಭ್ಯಗಳು, ಸಂದರ್ಶಕರ ಮಾಹಿತಿ ಕೇಂದ್ರ, ಟಿಕೆಟಿಂಗ್ ಮುಂತಾದ ವಿವಿಧ  ಪೂರಕವಾದ  ಸೌಲಭ್ಯಗಳ ಪ್ರದೇಶಗಳನ್ನು ಫೋಯರ್ ಹೊಂದಿದೆ.

'ಯಶೋಭೂಮಿ' ಯಲ್ಲಿನ ಎಲ್ಲಾ ಸಾರ್ವಜನಿಕ ಪ್ರಸರಣ ಪ್ರದೇಶಗಳನ್ನು ಸಮಾವೇಶ ಕೇಂದ್ರಗಳ ಹೊರಾಂಗಣ ಸ್ಥಳದೊಂದಿಗೆ ನಿರಂತರತೆಯನ್ನು ಪ್ರತಿನಿಧಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.. ಟೆರಾಝೋ ಮಹಡಿಗಳ ರೂಪದಲ್ಲಿ ರಂಗೋಲಿ ಮಾದರಿಗಳನ್ನು ಪ್ರತಿನಿಧಿಸುವ ಹಿತ್ತಾಳೆ ಕೆತ್ತನೆ,  ಮೇಲಿನಿಂದ ಇಳಿಬಿಟ್ಟ ಧ್ವನಿ ಹೀರಿಕೊಳ್ಳುವ ಲೋಹದ ಸಿಲಿಂಡರ್ಗಳು ಮತ್ತು ಮಾದರಿಯ ಗೋಡೆಗಳ ದೀಪಗಳ ವ್ಯವಸ್ಥೆಗಳನ್ನು ಭಾರತೀಯ ಸಂಸ್ಕೃತಿಯಿಂದ ಪ್ರೇರಿತವಾದ ವಸ್ತುಗಳಿಂದ ಮಾಡಲ್ಪಟ್ಟಿದೆ

100% ತ್ಯಾಜ್ಯನೀರಿನ ಮರುಬಳಕೆಯೊಂದಿಗೆ ಅತ್ಯಾಧುನಿಕ ತ್ಯಾಜ್ಯನೀರಿನ ಸಂಸ್ಕರಣಾ ವ್ಯವಸ್ಥೆಯನ್ನು ಹೊಂದಿರುವ 'ಯಶೋಭೂಮಿ'  ಪರಿಸರ ಸುಸ್ಥಿರತೆಗೆ ಬಲವಾದ ಬದ್ಧತೆಯನ್ನು ಪ್ರದರ್ಶಿಸುತ್ತದೆ, ಮತ್ತು ಅದರ ಕ್ಯಾಂಪಸ್  ಸಿಐಐ (CII) ನ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ನಿಂದ ಪ್ಲಾಟಿನಂ (ಐಜಿಬಿಸಿ) ಪ್ರಮಾಣೀಕರಣವನ್ನು ಪಡೆದಿದೆ..

ಸಂದರ್ಶಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ‘ಯಶೋಭೂಮಿ’ ಹೈಟೆಕ್ ಭದ್ರತಾ ವ್ಯವಸ್ಥೆಗಳನ್ನು ಸಹ ಹೊಂದಿದೆ. 3,000 ಕ್ಕೂ ಹೆಚ್ಚು ಕಾರುಗಳಿಗೆ ಭೂಗತ ಕಾರ್ ಪಾರ್ಕಿಂಗ್ ಸೌಲಭ್ಯವನ್ನು 100 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟುಗಳನ್ನು ಹೊಂದಿದೆ.

ಹೊಸ ಮೆಟ್ರೋ ಸ್ಟೇಷನ್ 'ಯಶೋಭೂಮಿ ದ್ವಾರಕಾ ಸೆಕ್ಟರ್ 25' ಅನ್ನು ತೆರೆಯುವುದರೊಂದಿಗೆ 'ಯಶೋಭೂಮಿ' ದೆಹಲಿ ಏರ್ಪೋರ್ಟ್ ಮೆಟ್ರೋ ಎಕ್ಸ್ಪ್ರೆಸ್ ಲೈನ್ಗೆ ಸಂಪರ್ಕಗೊಳ್ಳುತ್ತದೆ.  ಹೊಸ ಮೆಟ್ರೋ ನಿಲ್ದಾಣವು ಮೂರು ಸುರಂಗಮಾರ್ಗಗಳನ್ನು ಹೊಂದಿರುತ್ತದೆ - 735 ಮೀ ಉದ್ದದ ಸುರಂಗಮಾರ್ಗವು ನಿಲ್ದಾಣವನ್ನು ಪ್ರದರ್ಶನ ಸಭಾಂಗಣಗಳು, ಕನ್ವೆನ್ಶನ್ ಸೆಂಟರ್ ಮತ್ತು ಸೆಂಟ್ರಲ್ ಅರೆನಾಗೆ ಸಂಪರ್ಕಿಸುತ್ತದೆ; ಇನ್ನೊಂದು ದ್ವಾರಕಾ ಎಕ್ಸ್ಪ್ರೆಸ್ವೇ ಪ್ರವೇಶ ಹಾಗು ನಿರ್ಗಮನವನ್ನು ಸಂಪರ್ಕಿಸುತ್ತದೆ; ಮೂರನೆಯದು ಮೆಟ್ರೋ ನಿಲ್ದಾಣವನ್ನು 'ಯಶೋಭೂಮಿ' ಭವಿಷ್ಯದ ಪ್ರದರ್ಶನ ಸಭಾಂಗಣಗಳ ಮುಂಭಾಗಕ್ಕೆ ಸಂಪರ್ಕಿಸುತ್ತದೆ.

ದೆಹಲಿ ಮೆಟ್ರೋ ಸಹ ಏರ್ಪೋರ್ಟ್ ಎಕ್ಸ್ಪ್ರೆಸ್ ಲೈನ್ನಲ್ಲಿ ಮೆಟ್ರೋ ರೈಲುಗಳ ಕಾರ್ಯಾಚರಣೆಯ ವೇಗವನ್ನು 90 ರಿಂದ 120 ಕಿಮೀ ಪ್ರತಿಗಂಟೆಗೆ ಹೆಚ್ಚಿಸಿ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. 'ನವದೆಹಲಿ'ಯಿಂದ 'ಯಶೋಭೂಮಿ ದ್ವಾರಕಾ ಸೆಕ್ಟರ್ 25' ಗೆ ಒಟ್ಟು ಪ್ರಯಾಣದ ಸಮಯವು ಸುಮಾರು 21 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.


***(Release ID: 1957832) Visitor Counter : 83