ಸಂಪುಟ

ಡಿಜಿಟಲ್ ಪರಿವರ್ತನೆಗಾಗಿ ಜನಸಂಖ್ಯೆಯ ಮಟ್ಟದಲ್ಲಿ ಜಾರಿಗೊಳಿಸಲಾದ ಯಶಸ್ವಿ ಡಿಜಿಟಲ್ ಪರಿಹಾರಗಳನ್ನು ಹಂಚಿಕೊಳ್ಳುವ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ ಮತ್ತು ಅರ್ಮೇನಿಯಾ ನಡುವಿನ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಸಚಿವ ಸಂಪುಟದ ಅನುಮೋದನೆ

Posted On: 13 SEP 2023 3:27PM by PIB Bengaluru

ಡಿಜಿಟಲ್ ಪರಿವರ್ತನೆಗಾಗಿ ಜನಸಂಖ್ಯೆಯ ಮಟ್ಟದಲ್ಲಿ ಅಳವಡಿಸಲಾಗಿರುವ ಯಶಸ್ವಿ ಡಿಜಿಟಲ್ ಪರಿಹಾರಗಳನ್ನು ಹಂಚಿಕೊಳ್ಳುವ ಕ್ಷೇತ್ರದಲ್ಲಿ ಸಹಕಾರದ ಕುರಿತು ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಅರ್ಮೇನಿಯಾ ದೇಶಧ ಹೈಟೆಕ್ ಕೈಗಾರಿಕಾ ಸಚಿವಾಲಯದ ನಡುವೆ 2023 ರ ಜೂನ್ 12 ರಂದು ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿರುವುದನ್ನು ಗೌರವಾನ್ವಿತ ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟವು ಅನುಮೋದಿಸಿತು.

ಎರಡೂ ದೇಶದ ಡಿಜಿಟಲ್ ಪರಿವರ್ತನಾ ಉಪಕ್ರಮಗಳ ಅನುಷ್ಠಾನದಲ್ಲಿ ನಿಕಟ ಸಹಕಾರ ಮತ್ತು ಅನುಭವಗಳ ವಿನಿಮಯ ಮತ್ತು ಡಿಜಿಟಲ್ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು (ಅಂದರೆ ಇಂಡಿಯಾ ಸ್ಟಾಕ್) ಉತ್ತೇಜಿಸಲು ತಿಳುವಳಿಕೆ ಒಪ್ಪಂದವು ಉದ್ದೇಶಿಸಿದೆ. ಈ ಒಪ್ಪಂದವು ಐಟಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳಿಗೆ ಕಾರಣವಾಗುವ ಸುಧಾರಿತ ಸಹಯೋಗವನ್ನು ಕಲ್ಪಿಸುತ್ತದೆ.

ತಿಳುವಳಿಕೆ ಒಪ್ಪಂದವು  ಎರಡೂ ದೇಶಗಳು  ಸಹಿ ಮಾಡಿದ  ದಿನಾಂಕದಿಂದ ಜಾರಿಗೆ ಬಂದಿರುತ್ತದೆ ಮತ್ತು 3 ವರ್ಷಗಳ ಅವಧಿಗೆ ಜಾರಿಯಲ್ಲಿರುತ್ತದೆ.

ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಕ್ಷೇತ್ರದಲ್ಲಿ G2G ಮತ್ತು B2B ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲಾಗುವುದು. ಈ ಒಪ್ಪಂದದಲ್ಲಿ ಪರಿಗಣಿಸಲಾದ ಚಟುವಟಿಕೆಗಳಿಗೆ ಅವುಗಳ ಆಡಳಿತದ ನಿಯಮಿತ ಕಾರ್ಯಾಚರಣೆ ಹಂಚಿಕೆಗಳ ಮೂಲಕ ಹಣಕಾಸು ಒದಗಿಸಲಾಗುತ್ತದೆ.

ಐಸಿಟಿ ಡೊಮೇನ್ ನಲ್ಲಿ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಕಾರವನ್ನು ಉತ್ತೇಜಿಸಲು  ವಿಧ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಹಲವಾರು ದೇಶಗಳು ಮತ್ತು ಬಹುಪಕ್ಷೀಯ ಏಜೆನ್ಸಿಗಳೊಂದಿಗೆ ಸಹಯೋಗವನ್ನು ಹೊಂದಿದೆ. ಈ ಅವಧಿಯಲ್ಲಿ, ಸಚಿವಾಲಯವು ಐಸಿಟಿ ಡೊಮೇನ್ ನಲ್ಲಿ ಸಹಕಾರ ಮತ್ತು ಮಾಹಿತಿಯ ವಿನಿಮಯವನ್ನು ಉತ್ತೇಜಿಸಲು ವಿವಿಧ ದೇಶಗಳ ತನ್ನ ಪ್ರತಿರೂಪ ಸಂಸ್ಥೆಗಳು/ಏಜೆನ್ಸಿಗಳೊಂದಿಗೆ ಎಂಒಯುಗಳು, ಎಂಒಸಿಗಳು ಮತ್ತುಒಪ್ಪಂದಗಳನ್ನು ಮಾಡಿಕೊಂಡಿದೆ. ಇದು ಡಿಜಿಟಲ್ ಇಂಡಿಯಾ, ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ ಮುಂತಾದ ಭಾರತ ಸರ್ಕಾರವು ದೇಶವನ್ನು ಡಿಜಿಟಲ್ ಸಶಕ್ತ ಸಮಾಜ ಮತ್ತು ಜ್ಞಾನದ ಆರ್ಥಿಕತೆಯಾಗಿ ಪರಿವರ್ತಿಸಲು ಕೈಗೊಂಡಿರುವ ವಿವಿಧ ಉಪಕ್ರಮಗಳಿಗೆ ಅನುಗುಣವಾಗಿದೆ. ಬದಲಾಗುತ್ತಿರುವ ಈ ವ್ಯವಸ್ಥೆಯಲ್ಲಿ, ಪರಸ್ಪರ ಸಹಕಾರವನ್ನು ಹೆಚ್ಚಿಸುವ ಉದ್ದೇಶದಿಂದ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸುವ, ಉತ್ತಮ ಅಭ್ಯಾಸಗಳ ಹಂಚಿಕೆ ಮತ್ತು ಡಿಜಿಟಲ್ ವಲಯದಲ್ಲಿ ಹೂಡಿಕೆಗಳನ್ನು ಆಕರ್ಷಿಸುವ   ಅವಶ್ಯಕತೆಯಿದೆ.

ಕಳೆದ ಕೆಲವು ವರ್ಷಗಳಿಂದ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಅನುಷ್ಠಾನದಲ್ಲಿ ಭಾರತವು ತನ್ನ ಮುಂದಾಳತ್ವವನ್ನು ಪ್ರದರ್ಶಿಸಿದೆ ಮತ್ತು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿಯೂ ಸಾರ್ವಜನಿಕರಿಗೆ ಸೇವೆಗಳನ್ನು ಯಶಸ್ವಿಯಾಗಿ ತಲುಪಿಸಿದೆ. ಪರಿಣಾಮವಾಗಿ  ಭಾರತದ ಅನುಭವಗಳಿಂದ ಕಲಿಯಲು ಭಾರತದೊಂದಿಗೆ ಎಂಒಯು ಒಪ್ಪಂದಗಳನ್ನು ಮಾಡಿಕೊಳ್ಳಲು ಅನೇಕ ದೇಶಗಳು ಆಸಕ್ತಿಯನ್ನು ತೋರಿಸಿವೆ.

ಇಂಡಿಯಾ ಸ್ಟಾಕ್ ಸೊಲ್ಯೂಷನ್ ಗಳು ಸಾರ್ವಜನಿಕ ಸೇವೆಗಳ ಪ್ರವೇಶ ಮತ್ತು ವಿತರಣೆಯನ್ನು ಒದಗಿಸಲು ಜನಸಂಖ್ಯೆಯ ಪ್ರಮಾಣದಲ್ಲಿ ಭಾರತವು ಅಭಿವೃದ್ಧಿಪಡಿಸಿದ ಮತ್ತು ಜಾರಿಗೊಳಿಸಿದ ಡಿಪಿಎಲ್ ಗಳಾಗಿವೆ, ಇದು ಅರ್ಥಪೂರ್ಣ ಸಂಪರ್ಕವನ್ನು ಒದಗಿಸಲು, ಡಿಜಿಟಲ್ ಸೇರ್ಪಡೆಯನ್ನು ಉತ್ತೇಜಿಸಲು ಮತ್ತು ಸಾರ್ವಜನಿಕ ಸೇವೆಗಳಿಗೆ ತಡೆರಹಿತ ಲಭ್ಯತೆಯನ್ನು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿದೆ. ಇವುಗಳನ್ನು ಮುಕ್ತ ತಂತ್ರಜ್ಞಾನಗಳ ಮೇಲೆ ನಿರ್ಮಿಸಲಾಗಿದೆ, ಪರಸ್ಪರ ಕಾರ್ಯ ನಿರ್ವಹಿಸಬಹುದಾಗಿದೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಉದ್ಯಮ ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಬಳಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ.  ಪ್ರತಿ ದೇಶವು ಡಿಪಿಐ ಅನ್ನು ನಿರ್ಮಿಸುವಲ್ಲಿ ವಿಶಿಷ್ಟವಾದ ಅಗತ್ಯತೆಗಳು ಮತ್ತು ಸವಾಲುಗಳನ್ನು ಹೊಂದಿದೆ, ಆದರೂ ಮೂಲಭೂತ ಕಾರ್ಯಚಟುವಟಿಕೆಯು ಒಂದೇ ರೀತಿ ಇದ್ದು ಜಾಗತಿಕ ಸಹಕಾರಕ್ಕೆ ಅವಕಾಶ ನೀಡುತ್ತದೆ.

****



(Release ID: 1957018) Visitor Counter : 95