ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ನಿನ್ನೆ ಮುಕ್ತಾಯವಾದ ಜಿ-20 ಭಾರತ ಶೃಂಗಸಭೆಯು ಭಾರತದ ತಂತ್ರಜ್ಞಾನ ಸಾಮರ್ಥ್ಯಗಳು ಮತ್ತು ಆರ್ಥಿಕ ಶಕ್ತಿಯನ್ನು ಪ್ರದರ್ಶಿಸಿದೆ: ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಹೇಳಿಕೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ತಂತ್ರಜ್ಞಾನದ ಅತ್ಯಾಧುನಿಕತೆಯ ಬೆಸುಗೆಯನ್ನು ಸಾಂಸ್ಥಿಕಗೊಳಿಸಿದೆ: ಡಾ ಜಿತೇಂದ್ರ ಸಿಂಗ್
'ಒಂದು ವಾರ ಒಂದು ಪ್ರಯೋಗಾಲಯ' ಕಾರ್ಯಕ್ರಮದ ಯಶಸ್ಸಿನ ನಂತರ, ವಿವಿಧ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(ಸಿಎಸ್ಐಆರ್) ಪ್ರಯೋಗಾಲಯಗಳ ಪ್ರಯತ್ನಗಳನ್ನು ಏಕೀಕರಿಸುವ ನಿಟ್ಟಿನಲ್ಲಿ 'ಒಂದು ತಿಂಗಳು ಒಂದು ಥೀಮ್' ಕಾರ್ಯಕ್ರಮ ಆಚರಣೆ: ಡಾ ಜಿತೇಂದ್ರ ಸಿಂಗ್ ಪ್ರಸ್ತಾಪ
ಪ್ರತಿಯೊಂದು ಸಿಎಸ್ಐಆರ್ ಪ್ರಯೋಗಾಲಯಗಳು ಅನನ್ಯ ಮಾರಾಟ ಬಿಂದು(USP) ಹೊಂದಿದ್ದರೂ, ಅವು ಸಾಮಾನ್ಯ ವಿಷಯ ವಸ್ತು ಹೊಂದಿವೆ. ಮುಂದಿನ ಹಂತದಲ್ಲಿ ನಾವು ಥೀಮ್‌ಗಳ ಆಧಾರದ ಮೇಲೆ ವ್ಯಾಪಕ ಏಕೀಕರಣ ಹೊಂದಬಹುದು: ಡಾ ಜಿತೇಂದ್ರ ಸಿಂಗ್ ಹೇಳಿಕೆ
ಸಿಎಸ್ಐಆರ್ ಪ್ರಯೋಗಾಲಯಗಳು ತಲಾ 10 ಯಶೋಗಾಥೆಗಳನ್ನು ಪ್ರಚಾರ ಮಾಡಬಹುದು: ಡಾ ಜಿತೇಂದ್ರ ಸಿಂಗ್ ಹೇಳಿಕೆ
Posted On:
11 SEP 2023 4:50PM by PIB Bengaluru
ನಿನ್ನೆ ಮುಕ್ತಾಯವಾದ ಜಿ-20 ಭಾರತ ಶೃಂಗಸಭೆಯು ಭಾರತದ ತಂತ್ರಜ್ಞಾನ(ತಾಂತ್ರಿಕ) ಸಾಮರ್ಥ್ಯಗಳು ಮತ್ತು ಆರ್ಥಿಕ ಪ್ರದರ್ಶಿಸಿತು ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಪ್ರಧಾನ ಮಂತ್ರಿಗಳ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಬಾಹ್ಯಾಕಾಶ ಮತ್ತು ಪರಮಾಣು ಶಕ್ತಿ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಡಾ ಜಿತೇಂದ್ರ ಸಿಂಗ್ ಹೇಳಿದ್ದಾರೆ,
“ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ತಂತ್ರಜ್ಞಾನದ ಅತ್ಯಾಧುನಿಕತೆಯ ಬೆಸುಗೆಯನ್ನು ಸಾಂಸ್ಥಿಕಗೊಳಿಸಿದೆ. ನಾವು ಸಾಂಪ್ರದಾಯಿಕ ಜ್ಞಾನದ ಗ್ರಂಥಾಲಯ ಹೊಂದಿದ್ದೇವೆ. ಅದನ್ನು ಈಗ ಟಿಕೆಡಿಎಲ್ ಎಂದು ಕರೆಯಲಾಗುತ್ತದೆ (ಪ್ರಾಥಮಿಕ ಜ್ಞಾನ ಡಿಜಿಟಲ್ ಲೈಬ್ರರಿ ಅಡಿಯ ಸಂಪ್ರದಾಯ). ಭಾರತ ಮಂಟಪ ಅಥವಾ ಈ ಸರ್ಕಾರದಿಂದ ನಿರ್ಮಿಸಲಾದ ಕೆಲವು ಇತ್ತೀಚಿನ ಸ್ಮಾರಕಗಳು ಸಹ ನಮ್ಮ ಪೀಳಿಗೆಯಿಂದ ಪರಂಪರೆಯಾಗಿ ಬಂದಿರುವ ಸಾಂಪ್ರದಾಯಿಕ ಪರಂಪರೆಯೊಂದಿಗೆ ಇತ್ತೀಚಿನ ವೈಜ್ಞಾನಿಕ ಕುಶಾಗ್ರಮತಿಯಾಗಿವೆ. ತಂತ್ರಜ್ಞಾನ ಮತ್ತು ವಾಸ್ತುಶಿಲ್ಪದ ಅತ್ಯುತ್ತಮ ಸಮ್ಮಿಳನವನ್ನು ಇವು ಪ್ರತಿನಿಧಿಸುತ್ತಿವೆ ಎಂದು ಅವರು ನವದೆಹಲಿಯಲ್ಲಿಂದು ಸಿಎಸ್ಐಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಕಮ್ಯುನಿಕೇಶನ್ ಅಂಡ್ ಪಾಲಿಸಿ ರಿಸರ್ಚ್ ನ 'ಒಂದು ವಾರ ಒಂದು ಪ್ರಯೋಗಾಲಯ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿ-20 ಶೃಂಗಸಭೆಯಲ್ಲಿ ಅಂಗೀಕರಿಸಲಾದ ಹೊಸ ದೆಹಲಿ ಘೋಷಣೆಯು 'ಜೀವನಶೈಲಿಗಾಗಿ ಪರಿಸರ ಮಿಷನ್'ನ ಭಾರತದ ಉಪಕ್ರಮ ಕಾರ್ಯಗತಗೊಳಿಸಲು ಮತ್ತು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಉತ್ತೇಜಿಸಲು ಸ್ವತಃ ಬದ್ಧವಾಗಿದೆ. 'ಹಸಿರು ಅಭಿವೃದ್ಧಿ ಒಪ್ಪಂದ' ಅಳವಡಿಸಿಕೊಳ್ಳುವ ಮೂಲಕ, ಜಿ-20 ಸುಸ್ಥಿರ ಮತ್ತು ಹಸಿರು ಬೆಳವಣಿಗೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ ಎಂದರು.
ಜಿ-20 ಶೃಂಗಸಭೆಯು ಜಾಗತಿಕ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಭಂಡಾರ (ಜಿಡಿಪಿಐಆರ್) ನಿರ್ಮಿಸುವ ಮತ್ತು ನಿರ್ವಹಿಸುವ ಭಾರತದ ಯೋಜನೆಯನ್ನು ಬೆಂಬಲಿಸಿತು. ವಿಶ್ವ ಆರೋಗ್ಯ ಸಂಘಟನೆ(ಡಬ್ಲ್ಯುಎಚ್ಒ) ನಿರ್ವಹಿಸಿದ ಮಾರ್ಗಸೂಚಿ ಅಥವಾ ಚೌಕಟ್ಟಿನೊಳಗೆ ಡಿಜಿಟಲ್ ಆರೋಗ್ಯದ ಜಾಗತಿಕ ಉಪಕ್ರಮ(ಜಿಐಡಿಎಚ್)ದ ಸ್ಥಾಪನೆಯನ್ನು ಸ್ವಾಗತಿಸಿದೆ.
ಜಿ-20 ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಉಪಕ್ರಮದಲ್ಲಿ ಸಿಂಗಾಪುರ, ಬಾಂಗ್ಲಾದೇಶ, ಇಟಲಿ, ಯುಎಸ್‌ಎ, ಬ್ರೆಜಿಲ್, ಅರ್ಜೆಂಟೀನಾ, ಮಾರಿಷಸ್ ಮತ್ತು ಯುಎಇ ನಾಯಕರು ಜಾಗತಿಕ ಜೈವಿಕ ಇಂಧನ ಒಕ್ಕೂಟ (ಜಿಬಿಎ) ಪ್ರಾರಂಭಿಸಿರುವುದು ಹೆಗ್ಗುರುತಿನ ಸಾಧನೆಯಾಗಿದೆ. ಜಿಬಿಎ ವೇಗವರ್ಧಕ ವೇದಿಕೆಯಾಗಿ ಕಾರ್ಯ ನಿರ್ವಹಿಸುವ ಗುರಿ ಹೊಂದಿದೆ. ಇದು ಜೈವಿಕ ಇಂಧನಗಳ ಪ್ರಗತಿ ಮತ್ತು ವ್ಯಾಪಕ ಅಳವಡಿಕೆಗಾಗಿ ಜಾಗತಿಕ ಸಹಯೋಗವನ್ನು ಉತ್ತೇಜಿಸುತ್ತದೆ ಎಂದು ಸಚಿವರು ತಿಳಿಸಿದರು.
“ಪ್ರಧಾನ ಮಂತ್ರಿ ಮೋದಿ ಅವರ ನೇತೃತ್ವದಲ್ಲಿ ಭಾರತವು ಹಾಗೆ ಮಾಡುವಲ್ಲಿ ಮುನ್ನಡೆ ಸಾಧಿಸಿದೆ ಎಂದು ನನಗೆ ಖುಷಿಯಾಗಿದೆ. ನಾವು ಹಲವು ವರ್ಷಗಳಿಂದ ಅನುಸರಿಸಿದ ಕಾರ್ಯ ವಿಧಾನದಿಂದ ಪರಿವರ್ತನೆಮಾಡುತ್ತಿರುವ ಸಂದರ್ಭವೂ ಇದಾಗಿದೆ, ”ಎಂದು ಡಾ ಜಿತೇಂದ್ರ ಸಿಂಗ್ ಅವರು ಅನುಸಂಧಾನ್ ನ್ಯಾಷನಲ್ ರಿಸರ್ಚ್ ಫೌಂಡೇಶನ್ ಉಲ್ಲೇಖಿಸಿ, ಇದು ಸರ್ಕಾರೇತರ ಸಂಘ ಸಂಸ್ಥೆಗಳಿಂದ 70%ವರೆಗೆ ಹಣ ಕ್ರೋಡೀಕರಿಸಲಿದೆ ಎಂದರು.
‘ಒಂದು ವಾರ ಒಂದು ಪ್ರಯೋಗಾಲಯ’ (ಒಡಬ್ಲ್ಯುಒಎಲ್) ಕಾರ್ಯಕ್ರಮದ ಯಶಸ್ಸಿನ ನಂತರ, ಡಾ ಜಿತೇಂದ್ರ ಸಿಂಗ್ ಅವರು, ವಿವಿಧ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(ಸಿಎಸ್ಐಆರ್) ಪ್ರಯೋಗಾಲಯಗಳ ಪ್ರಯತ್ನಗಳನ್ನು ಸಂಯೋಜಿಸುವ ನಿಟ್ಟಿನಲ್ಲಿ ‘ಒಂದು ತಿಂಗಳು ಒಂದು ವಿಷಯ ವಸ್ತು(ಥೀಮ್)’ ಕಾರ್ಯಕ್ರಮ ಆಚರಿಸಬೇಕು ಎಂದು ಪ್ರಸ್ತಾಪಿಸಿದರು.
"ಪ್ರತಿಯೊಂದು ಸಿಎಸ್ಐಆರ್ ಪ್ರಯೋಗಾಲಯಗಳು ವಿಭಿನ್ನವಾದ ವಿಶಿಷ್ಟ ಅಥವಾ ಅನನ್ಯ ಮಾರಾಟ ಬಿಂದು(ಯುಎಸ್ ಪಿ) ಹೊಂದಿದ್ದರೂ, ಅವು ಸಾಮಾನ್ಯ ವಿಷಯ ವಸ್ತು ಹೊಂದಿವೆ. ಆದ್ದರಿಂದ, ಮುಂದಿನ ಹಂತದಲ್ಲಿ, ನಾವು ಥೀಮ್‌ಗಳ ಆಧಾರದ ಮೇಲೆ ವ್ಯಾಪಕವಾದ ಏಕೀಕರಣ ಹೊಂದಬಹುದು. ಆದಿತ್ಯ ಇಸ್ರೋ, ಡಿಎಸ್ ಟಿ, ಸಿಎಸ್ಐಆರ್ ನ ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್, ಟಾಟಾ ಇನ್‌ಸ್ಟಿಟ್ಯೂಟ್ ಸೇರಿದಂತೆ ವಿವಿಧ ಕಂಪನಿಗಳು ಮತ್ತು ಇಲಾಖೆಗಳು ಸಂಪನ್ಮೂಲಗಳನ್ನು ಸಂಗ್ರಹಿಸುವ ಸಮಗ್ರ ವಿಜ್ಞಾನ(ಹೋಲ್ ಆಫ್ ಸೈನ್ಸ್) ಕಾರ್ಯ ವಿಧಾನವನ್ನು ಈ ಕಾರ್ಯಕ್ರಮ(ಮಿಷನ್) ವಿವರಿಸುತ್ತದೆ.
ಒಡಬ್ಲ್ಯುಒಎಲ್ ನ ಹಿಂದಿನ ಪರಿಕಲ್ಪನೆಯು ವೈಜ್ಞಾನಿಕ ಸಮುದಾಯದೊಳಗೆ ಏಕೀಕರಣ ಮತ್ತು ದೊಡ್ಡ ಸಮಾಜದೊಳಗೆ ಏಕೀಕರಣವಾಗಿದೆ. ಒಡಬ್ಲ್ಯುಒಎಲ್ ಸಂಶೋಧನಾ ಪ್ರಯೋಗಾಲಯಗಳಿಗೆ ಸಹಾಯ ಮಾಡುತ್ತದೆ, ಸಮಾಜವನ್ನು ತಲುಪುತ್ತದೆ ಮತ್ತು ಅವರು ಮಾಡುತ್ತಿರುವುದು ಸಾರ್ವಜನಿಕ ಒಳಿತಿಗಾಗಿ ಎಂಬುದನ್ನು ಸಾರ್ವಜನಿಕರಿಗೆ ತೋರಿಸುತ್ತದೆ ಎಂದರು.
ಸಿಎಸ್ಐಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಕಮ್ಯುನಿಕೇಶನ್ ಅಂಡ್ ಪಾಲಿಸಿ ರಿಸರ್ಚ್(ಎನ್‌ಐಎಸ್‌ಸಿಪಿಆರ್) ಜ್ಯೋತಿಧಾರಕ(ಟಾರ್ಚ್ ಬೇರರ್) ಆಗಿದೆ. ಹಾಗಾಗಿ, ಸಿಎಸ್‌ಐಆರ್ ಲ್ಯಾಬ್‌ಗಳು ತಲಾ 10 ಯಶಸ್ಸಿನ ಕಥೆಗಳನ್ನು ಪ್ರಚಾರ ಮಾಡಬಹುದು ಎಂದು ಹೇಳಿದರು.
“ಸಂಭಾವ್ಯ ಫಲಾನುಭವಿಗಳನ್ನು ತಲುಪುವುದೇ ಪರಿಕಲ್ಪನೆ. ಪ್ರಯೋಗವು ಎಷ್ಟೇ ಮೌಲ್ಯಯುತವಾಗಿದ್ದರೂ, ಅದು ಯಾರಿಗೆ ತಲುಪಬೇಕೊ ಅವರನ್ನು ತಲುಪದಿದ್ದರೆ ಅದರ ಉದ್ದೇಶವೇ ವ್ಯರ್ಥವಾಗುತ್ತದೆ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಡಾ ಜಿತೇಂದ್ರ ಸಿಂಗ್ ಅವರು ವಿಜ್ಞಾನ ಮಾಧ್ಯಮ ಸಂವಹನ ಕೋಶವನ್ನು ಉದ್ಘಾಟಿಸಿದರು. ಹಲವಾರು ಎನ್‌ಐಎಸ್‌ಸಿಪಿಆರ್ ಪ್ರಕಟಣೆಗಳು ಮತ್ತು ನಿಯತಕಾಲಿಕೆಗಳನ್ನು ಬಿಡುಗಡೆ ಮಾಡಿದರು. ಡಿಎಸ್‌ಐಆರ್ ಕಾರ್ಯದರ್ಶಿ ಮತ್ತು ಸಿಎಸ್‌ಐಆರ್ ಡಿಜಿ ಡಾ. ಎನ್. ಕಲೈಸೆಲ್ವಿ, ಸಿಎಸ್‌ಐಆರ್-ಎನ್‌ಪಿಎಲ್ ನಿರ್ದೇಶಕ ಪ್ರೊ.ವೇಣು ಗೋಪಾಲ್ ಅಚಂತಾ ಮತ್ತು ಸಿಎಸ್‌ಐಆರ್-ಎನ್‌ಐಎಸ್‌ಸಿಪಿಆರ್ ನಿರ್ದೇಶಕಿ ಪ್ರೊ.ರಂಜನಾ ಅಗರ್ ವಾಲ ಸೇರಿದಂತೆ ಹಲವುಗಣ್ಯರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
*****
(Release ID: 1956587)
Visitor Counter : 143