ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜರ್ಮನಿ ದೇಶದ ಚಾನ್ಸೆಲರ್ ಅವರೊಂದಿಗೆ ಪ್ರಧಾನಮಂತ್ರಿಯವರ ಸಭೆ

Posted On: 10 SEP 2023 8:01PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜರ್ಮನಿಯ ಚಾನ್ಸೆಲರ್ ಶ್ರೀ ಓಲಾಫ್ ಸ್ಕೋಲ್ಜ್ ಅವರನ್ನು 10 ಸೆಪ್ಟೆಂಬರ್ 2023 ರಂದು, ಜಿ20 ಶೃಂಗಸಭೆಯ ಸಂದರ್ಭದಲ್ಲಿ ನವದೆಹಲಿಯಲ್ಲಿ ಭೇಟಿ ಮಾಡಿದರು. ಫೆಬ್ರವರಿ 2023 ರಲ್ಲಿ ಭಾರತಕ್ಕೆ ನೀಡಿದ  ಭೇಟಿಯ ನಂತರ ಇದು ಈ ವರ್ಷ ಭಾರತಕ್ಕೆ ಚಾನ್ಸೆಲರ್ ಅವರ ಎರಡನೇ ಭೇಟಿಯಾಗಿದೆ.

ಜಿ20 ಅಧ್ಯಕ್ಷತೆಯ ಯಶಸ್ಸಿಗೆ ಪ್ರಧಾನ ಮಂತ್ರಿಯವರನ್ನು ಚಾನ್ಸೆಲರ್ ಸ್ಕೋಲ್ಜ್ ಅಭಿನಂದಿಸಿದರು. ವಿವಿಧ ಜಿ20 ಸಭೆಗಳು ಮತ್ತು ಕಾರ್ಯಕ್ರಮಗಳಲ್ಲಿ ಉನ್ನತ ಮಟ್ಟದ ಭಾಗವಹಿಸುವಿಕೆಯಿಂದ ಗುರುತಿಸಲ್ಪಟ್ಟ ಭಾರತದ ಜಿ20 ಅಧ್ಯಕ್ಷತೆಯ ಅವಧಿಯಲ್ಲಿ ಜರ್ಮನಿಯ ಬೆಂಬಲವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು.

ಎರಡೂ ದೇಶದ ನಾಯಕರು ತಮ್ಮ ದ್ವಿಪಕ್ಷೀಯ ಕಾರ್ಯತಂತ್ರದ ಸಹಭಾಗಿತ್ವದ ಪ್ರಗತಿಯನ್ನು ಪರಿಶೀಲಿಸಿದರು. ರಕ್ಷಣೆ, ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ,  ಪ್ರಮುಖ ಖನಿಜಗಳು, ನುರಿತ ಸಿಬ್ಬಂದಿಗಳ ಆಯೋಜನೆ  ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಅವರು ಚರ್ಚಿಸಿದರು.

ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

ಪ್ರಧಾನಮಂತ್ರಿಯವರು ಚಾನ್ಸೆಲರ್ ಸ್ಕೋಲ್ಜ್ ಅವರನ್ನು ಮುಂದಿನ ವರ್ಷ ʼಇಂಟರ್ ಗವರ್ನಮೆಂಟಲ್ ಕಮಿಷನ್ʼನ (ಅಂತರ ಸರ್ಕಾರಿ ಆಯೋಗ) ಮುಂದಿನ ಸುತ್ತಿಗೆ ಭಾರತಕ್ಕೆ ಆಹ್ವಾನಿಸಿದರು.
 

****


(Release ID: 1956144) Visitor Counter : 133