ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಭಾರತ-ಬ್ರೆಜಿಲ್-ದಕ್ಷಿಣ ಆಫ್ರಿಕಾ-ಅಮೇರಿಕ ಜಂಟಿ ಹೇಳಿಕೆ

प्रविष्टि तिथि: 09 SEP 2023 8:45PM by PIB Bengaluru

ನಾವು ಹಂಚಿಕೊಳ್ಳುವ ಪ್ರಪಂಚಕ್ಕೆ ಪರಿಹಾರಗಳನ್ನು ನೀಡಲು ಅಂತಾರರಾಷ್ಟ್ರೀಯ ಆರ್ಥಿಕ ಸಹಕಾರಕ್ಕಾಗಿ ಪ್ರಧಾನ ವೇದಿಕೆಯಾಗಿರುವ ಜಿ 20 ಯಲ್ಲಿ ನಮ್ಮ ಸಹಭಾಗಿತ್ವದ  ಬದ್ಧತೆಯನ್ನು ಪುನರುಚ್ಚರಿಸಲು ನಾವು, ಭಾರತ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಮತ್ತು ಅಮೇರಿಕದ ನಾಯಕರು, ನವದೆಹಲಿಯಲ್ಲಿ ಜಿ 20 ನಾಯಕರ ಶೃಂಗಸಭೆಯ ವೇದಿಕೆಯಲ್ಲಿ ಭೇಟಿಯಾಗಿದ್ದೇವೆ.

ಜಾಗತಿಕ ಸವಾಲುಗಳನ್ನು ಎದುರಿಸಲು ಪ್ರಸ್ತುತ ಮತ್ತು ಮುಂದಿನ ಮೂರು ಜಿ 20 ಅಧ್ಯಕ್ಷತೆಗಳಲ್ಲಿ, ನಾವು ಭಾರತದ ಜಿ 20 ಅಧ್ಯಕ್ಷತೆಯ ಐತಿಹಾಸಿಕ ಪ್ರಗತಿಯ ನಿಟ್ಟಿನಲ್ಲೆ ಮುಂದುವರಿಯುತ್ತೇವೆ. ವಿಶ್ವ ಬ್ಯಾಂಕ್ ಅಧ್ಯಕ್ಷರ ಜೊತೆಗೂಡಿ ಇದೇ ಉತ್ಸಾಹದಲ್ಲಿ, ಮತ್ತಷ್ಟು ಉತ್ತಮ, ಬೃಹತ್ ಮತ್ತು ಹೆಚ್ಚು ಪರಿಣಾಮಕಾರಿಯಾದ ಬಹು ಆಯಾಮದ ಅಭಿವೃದ್ಧಿಯ ಬ್ಯಾಂಕ್‌ಗಳನ್ನು ನಿರ್ಮಿಸುವ ಜಿ 20 ರ ಬದ್ಧತೆಯನ್ನು ನಾವು ಸ್ವಾಗತಿಸುತ್ತೇವೆ. ನಮ್ಮ ಜನರನ್ನು ಉತ್ತಮ ಭವಿಷ್ಯದೆಡೆಗೆ ಕೊಂಡೊಯ್ಯಲು ಸಹಕಾರಿಯಾಗುವಂತೆ ಜಿ 20 ಮೂಲಕ ನಾವು ಒಗ್ಗೂಡಿ ಕಾರ್ಯನಿರ್ವಹಿಸುವ ಮೂಲಕ ನಾವು ಏನು ಮಾಡಬಹುದು ಎಂಬುದನ್ನು ಈ ಬದ್ಧತೆಯು ಒತ್ತಿಹೇಳುತ್ತದೆ.

****


(रिलीज़ आईडी: 1955916) आगंतुक पटल : 217
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam