ರಕ್ಷಣಾ ಸಚಿವಾಲಯ

ಜಿ20 ಥಿಂಕ್ ದಿ ಇಂಡಿಯನ್ ನೇವಿ ಕ್ವಿಜ್ - ಸೈಲ್ ಬಿಯಾಂಡ್ ಹಾರಿಜಾನ್


10ನೇ ಮತ್ತು 11ನೇ ಸೆಪ್ಟೆಂಬರ್ 2023 ರಂದು ಎರಡು ಸುತ್ತಿನ ಸ್ಪರ್ಧೆ

www.theindiannavyquiz.in

ಎಲ್ಲಾ ಸ್ಪರ್ಧಿಗಳಿಗೂ ಇಮೇಲ್ ಮೂಲಕ ನೋಂದಣಿ ವಿವರಗಳನ್ನು ಕಳುಹಿಸಲಾಗಿದೆ

Posted On: 09 SEP 2023 7:45PM by PIB Bengaluru

 ಜಿ20 ಸೆಕ್ರೆಟರಿಯೇಟ್, ಭಾರತೀಯ ನೌಕಾಪಡೆ ಮತ್ತು ನೌಕಾಪಡೆಯ ಕಲ್ಯಾಣ ಮತ್ತು ಕ್ಷೇಮ ಸಂಘ (ಎನ್.ಡಬ್ಲ್ಯೂ.ಡಬ್ಲ್ಯೂ.) ಜಂಟಿಯಾಗಿ ಆಯೋಜಿಸುತ್ತಿರುವ ಅಸಾಮಾನ್ಯ ಜಿ20 ಥಿಂಕ್ ಕಾರ್ಯಕ್ರಮ, ಸಾವಿರಾರು ಯುವ ಮನಸ್ಸುಗಳಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜಕ ಹಾಗೂ ಬೌದ್ಧಿಕ ಅನುಭವವನ್ನು ಒದಗಿಸುವ ಭರವಸೆ ನೀಡುತ್ತದೆ. ರಾಷ್ಟ್ರೀಯ ಸುತ್ತಿನ ರಸಪ್ರಶ್ನೆಯು 11700 ಕ್ಕೂ ಹೆಚ್ಚು ಶಾಲೆಗಳಿಂದ IX ರಿಂದ XII ತರಗತಿಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಶಾಲಾ ಮಕ್ಕಳ ಭಾಗವಹಿಸುವಿಕೆಯಲ್ಲಿ ಸ್ಪರ್ಧೆ ನಡೆಯಲಿದೆ.

ಈ ಬೌದ್ಧಿಕ ವಿಶೇಷ ಪ್ರಯಾಣವನ್ನು ಪ್ರಾರಂಭಿಸಲು, ಪೂರ್ವಭಾವಿಯಾಗಿ ಎರಡು ಸ್ಪರ್ಧಾ ಅಭ್ಯಾಸ ಸುತ್ತುಗಳನ್ನು ನಡೆಸಲಾಗುತ್ತದೆ, ಮೊದಲನೆಯದು ಸೆಪ್ಟೆಂಬರ್ 10, 2023 ರಂದು ಮತ್ತು ಎರಡನೆಯದು ಸೆಪ್ಟೆಂಬರ್ 11, 2023 ರಂದು ನಡೆಯಲಿದೆ . ಅದರ ಕೊಂಡಿ ಇಲ್ಲಿದೆ, 

https://www.pib.gov.in/PressReleasePage.aspx?PRID= 1954309 

ಈ ಸ್ಪರ್ಧಾ ಅಭ್ಯಾಸ ಸುತ್ತುಗಳನ್ನು ಸವಾಲಿನ ಅಂತಿಮ ನಿರ್ಗಮನ(ಎಲಿಮಿನೇಷನ್) ಸುತ್ತುಗಳಿಗೆ ಅಡಿಪಾಯ ಹಾಕಲು ವಿನ್ಯಾಸಗೊಳಿಸಲಾಗಿದೆ, ಭಾಗವಹಿಸುವವರಿಗೆ ಮುಂಬರುವ ಸ್ಪರ್ಧೆಯ ತಯಾರಿಯಲ್ಲಿ ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಅವಕಾಶವನ್ನು ಈ ಸ್ಪರ್ಧಾ ಅಭ್ಯಾಸ ಸುತ್ತುಗಳು ಒದಗಿಸುತ್ತವೆ.

ಜಿ20 ಥಿಂಕ್ ಸ್ಪರ್ಧಾ ಕಾರ್ಯಕ್ರಮದ ವೇಳಾಪಟ್ಟಿ ಈ ಕೆಳಗಿನಂತಿವೆ: - 

 

ಜಿ20 ಥಿಂಕ್ ಸ್ಪರ್ಧಾ ಕಾರ್ಯಕ್ರಮದ ವೇಳಾಪಟ್ಟಿ ಈ ಕೆಳಗಿನಂತಿವೆ: -

ಕ್ರ.ಸ

ಸ್ಪರ್ಧಾ ಕಾರ್ಯಕ್ರಮದ ಹೆಸರು

ದಿನಾಂಕ

ಸ್ಪರ್ಧಾ ಅಭ್ಯಾಸ ಸುತ್ತುಗಳು‌

10 ಮತ್ತು 11 ಸೆಪ್ಟೆಂಬರ್ 2023

ಬಿ

ಎಲಿಮಿನೇಷನ್ ರೌಂಡ್ 1

12 ಸೆಪ್ಟೆಂಬರ್ 2023

ಸಿ

ಎಲಿಮಿನೇಷನ್ ರೌಂಡ್ 2

03 ಅಕ್ಟೋಬರ್ 2023

ಡಿ

ಆನ್ಲೈನ್ ಕ್ವಾರ್ಟರ್-ಫೈನಲ್ ಪಂದ್ಯಗಳು

10ನೇ ಅಕ್ಟೋಬರ್ 2023

ರಾಷ್ಟ್ರೀಯ ಸೆಮಿ ಫೈನಲ್ @ಏನ್.ಸಿ.ಪಿ.ಎ, ಮುಂಬೈ

17 ನವೆಂಬರ್ 2023

ಎಫ್

ನ್ಯಾಷನಲ್ ಫೈನಲ್ಸ್ @ ಗೇಟ್ವೇ ಆಫ್ ಇಂಡಿಯಾ, ಮುಂಬೈ

18 ನವೆಂಬರ್ 2023

ಜಿ

ಅಂತಾರಾಷ್ಟ್ರೀಯ ಸೆಮಿ ಫೈನಲ್ @ ಜಿ20 ಭವನ 

21 ನವೆಂಬರ್ 2023

ಹೆಚ್

ಇಂಟರ್ನ್ಯಾಷನಲ್ ಫೈನಲ್ಸ್ @ಇಂಡಿಯಾ ಗೇಟ್, ನವದೆಹಲಿ

22 ನವೆಂಬರ್ 2023

 

ಜಿ20 ಥಿಂಕ್ ನ ಅಂತಾರಾಷ್ಟ್ರೀಯ ಸುತ್ತು ಒಟ್ಟಾರೆ ಜಿ20+9 ರಾಷ್ಟ್ರಗಳ ಪ್ರತಿಭಾವಂತ ಯುವ ಮನಸ್ಸುಗಳನ್ನು ಒಟ್ಟುಗೂಡಿಸುತ್ತದೆ, ಪ್ರತಿ ತಂಡವು ಇಬ್ಬರು ವಿದ್ಯಾರ್ಥಿಗಳನ್ನು ಒಳಗೊಂಡಿರುತ್ತದೆ. ಈ ಜಾಗತಿಕ ಕೂಟವು ಹಂಚಿದ ಜ್ಞಾನ ಮತ್ತು ಸೌಹಾರ್ದತೆಯ ಮೂಲಕ ಎಲ್ಲಾ ಜಿ20 ಪಾಲುದಾರ ರಾಷ್ಟ್ರಗಳ ಯುವ ನಾಗರಿಕರ ನಡುವೆ ಸ್ನೇಹ ಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

ಶಾಲೆಗಳಿಗೆ ನಿರ್ಬಂಧ – ಅಡೆತಡೆ ರಹಿತ ನೋಂದಣಿಯನ್ನು ಸಕ್ರಿಯಗೊಳಿಸಲು ಮತ್ತು ಪ್ರಕ್ರಿಯೆಯನ್ನು ಸುಗಮಗೊಳಿಸಲು ಹಾಗೂ ಸಮಗ್ರ ಕಾರ್ಯಕ್ರಮ ಸಂಬಂಧಿತ ಸಂಪೂರ್ಣ ಮಾಹಿತಿಯನ್ನು ಒದಗಿಸಲು, ಜಿ20 ಥಿಂಕ್ ಗಾಗಿ ಮೀಸಲಾದ ವೆಬ್ಸೈಟ್ [http://www.theindiannavyquiz.in ] ಅನ್ನು ಕೂಡಾ  ಪ್ರಾರಂಭಿಸಲಾಗಿದೆ.

 

****



(Release ID: 1955905) Visitor Counter : 155