ಬಾಹ್ಯಾಕಾಶ ವಿಭಾಗ

ಬಾಹ್ಯಾಕಾಶದಲ್ಲಿ ದೇಶದ ಸಾಧನೆಯೊಂದಿಗೆ ಭಾರತದ ಜಿ 20 ಅಧ್ಯಕ್ಷತೆಯು ಒಡಗೂಡಿದೆ ಎಂದು ಹೇಳಿದ ಡಾ ಜಿತೇಂದ್ರ ಸಿಂಗ್



"ಪ್ರಧಾನಮಂತ್ರಿ ಮೋದಿಯವರು ವಿಶ್ವದ ಅಗ್ರಮಾನ್ಯ ನಾಯಕರಾಗಿ ಹೊರಹೊಮ್ಮಿದ ಪರಿಣಾಮವಾಗಿ ಭಾರತದಲ್ಲಿ ಜಿ 20 ಶೃಂಗಸಭೆ ನಡೆಯುತ್ತಿದೆ": ಡಾ ಜಿತೇಂದ್ರ ಸಿಂಗ್

ಭಾರತವು ಒಂದಕ್ಕಿಂತ ಹೆಚ್ಚು ಮಾರ್ಗಗಳಲ್ಲಿ ಜಗತ್ತನ್ನು ಮುನ್ನಡೆಸಲು ಸಿದ್ಧವಾಗಿದೆ ಎಂದು ಹೇಳುತ್ತಾರೆ ಡಾ ಜಿತೇಂದ್ರ ಸಿಂಗ್ 

" ಬಾಹ್ಯಾಕಾಶ ಪ್ರಯಾಣದತ್ತ ಒಲವು ಹೊಂದಿದ ಜಗತ್ತಿನ ಎಲ್ಲಾ ರಾಷ್ಟ್ರಗಳು ಒಗ್ಗೂಡಬೇಕು, ಸಾಮೂಹಿಕವಾಗಿ ಮುಂದುವರಿಯಬೇಕು, ಏಕೆಂದರೆ ನಾವು ಜಾಗತಿಕ ಪ್ರಪಂಚದ ಭಾಗವೇ ಆಗಿದ್ದೇವೆ"

Posted On: 08 SEP 2023 1:11PM by PIB Bengaluru

ಬಾಹ್ಯಾಕಾಶದಲ್ಲಿ ದೇಶದ ಸಾಧನೆಯೊಂದಿಗೆ ಭಾರತದ ಜಿ 20 ಅಧ್ಯಕ್ಷತೆಯು ಒಡಗೂಡಿದೆ ಎಂದು ಕೇಂದ್ರದ  ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ)  ; ಪ್ರಧಾನಮಂತ್ರಿ ಕಚೇರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿ, ಬಾಹ್ಯಾಕಾಶ ಮತ್ತು ಪರಮಾಣು ಶಕ್ತಿ ಸಹಾಯಕ ಸಚಿವರು ಆಗಿರುವ ಡಾ ಜಿತೇಂದ್ರ ಸಿಂಗ್ ಹೇಳಿದರು 

“ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವದ ಅಗ್ರಮಾನ್ಯ ನಾಯಕರಾಗಿ ಹೊರಹೊಮ್ಮಿರುವ ಪರಿಣಾಮವಾಗಿ ಭಾರತದಲ್ಲಿ ಜಿ20 ಶೃಂಗಸಭೆ ನಡೆಯುತ್ತಿದೆ. ವಿಶ್ವದ ಯಾವುದೇ ಬಾಹ್ಯಾಕಾಶ ನೌಕೆಯು ಚಂದ್ರನ ದೂರದ ಭಾಗವಾದ ದಕ್ಷಿಣ ಧ್ರುವದಲ್ಲಿ  ಮೊದಲ ಬಾರಿಗೆ ಇಳಿದಿದ್ದು ಚಂದ್ರನ ಮೇಲೆ ಭಾರತದ ಧ್ವಜವನ್ನು ಹಾರಿಸುತ್ತಿರುವ ಸಮಯದಲ್ಲಿ, ಕೋವಿಡ್ ಲಸಿಕೆಗಳ ಸಂಶೋಧನೆ ಮತ್ತು ಅಭಿವೃದ್ಧಿ ಉಪಕರ್ಮದ ಯಶೋಗಾಥೆ ಸೇರಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ರಾಷ್ಟ್ರದ ಸಾಧನೆಗಳನ್ನು ಪ್ರಪಂಚದಾದ್ಯಂತ ಪ್ರಶಂಸಿಸಲಾಗುತ್ತಿರುವ ಸಮಯದಲ್ಲಿ ಶೃಂಗಸಭೆ ನಡೆಯುತ್ತಿದೆ ”ಎಂದು ಸಚಿವರು ಹೇಳಿದರು.

ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯ ವಿಷಯವಾದ ‘ವಾಸುದೈವ ಕುಟುಂಬಕಂ’ನ ಸ್ಪೂರ್ತಿಗೆ ಅನುಗುಣವಾಗಿ, ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ಪ್ರಧಾನಮಂತ್ರಿ ಮೋದಿಯವರ ಮಂತ್ರವನ್ನು ವಿಶ್ವವೇ ಇಂದು ಅಂಗೀಕರಿಸುತ್ತಿದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು.

ಭಾರತವು ಒಂದಕ್ಕಿಂತ ಹೆಚ್ಚು ಮಾರ್ಗಗಳಲ್ಲಿ ಜಗತ್ತನ್ನು ಮುನ್ನಡೆಸಲು ಸಿದ್ಧವಾಗಿದೆ ಎಂದು ನವದೆಹಲಿಯಲ್ಲಿ ಜಿ 20 ಶೃಂಗಸಭೆಯ ಮುನ್ನಾದಿನದಂದು ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಡಾ ಜಿತೇಂದ್ರ ಸಿಂಗ್ ಹೇಳಿದರು. ಬಾಹ್ಯಾಕಾಶ ಕ್ಷೇತ್ರ ಸೇರಿದಂತೆ ಯಾವುದೇ ಭವಿಷ್ಯದ ವೈಜ್ಞಾನಿಕ ಪ್ರಯತ್ನಕ್ಕಾಗಿ, ಪ್ರಪಂಚದ ಎಲ್ಲಾ ಪಾಲುದಾರ ರಾಷ್ಟ್ರಗಳು ಒಗ್ಗೂಡುವ ಅಗತ್ಯವಿದೆ ಎಂದು ಕೂಡ ಅವರು ಹೇಳಿದರು.

"ನಾವು ಎಲ್ಲದನ್ನು ಮೀರಿ ಸಾಧಿಸಬೇಕಾದರೆ, ನಾವು ಸಾಮೂಹಿಕವಾಗಿ ಮುಂದುವರಿಯಬೇಕು, ಏಕೆಂದರೆ ನಾವು ಜಾಗತಿಕ ಪ್ರಪಂಚದ ಭಾಗವೇ ಆಗಿದ್ದೇವೆ. ಆದ್ದರಿಂದ ಭವಿಷ್ಯದ ಯಾವುದೇ ಅಭಿವೃದ್ಧಿ ಹೆಚ್ಚೆಚ್ಚು ವಿಸ್ತೃತ ಏಕೀಕರಣದ ಮೂಲಕವೇ ಸಂಭವಿಸಬೇಕು. ಇಲ್ಲಿಂದ ಮುಂದಕ್ಕೆ ಅಭಿವೃದ್ಧಿ ಎಂಬುದು ಬಹುಪಾಲು ತಂತ್ರಜ್ಞಾನ ಚಾಲಿತವಾಗಿರುತ್ತದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು.

ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ಈಗ ವಿಶ್ವದ ಪ್ರಮುಖ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಸಮಾನ ವೇಗದಲ್ಲಿದೆ ಎಂದು ಸೂಚಿಸಿದ ಡಾ ಜಿತೇಂದ್ರ ಸಿಂಗ್, ನಾಸಾ ಚಂದ್ರನ ಮೇಲೆ ಮೊದಲ ಬಾರಿಗೆ ಇಳಿದಿರಬಹುದು, ಆದರೆ ಭಾರತದ ಚಂದ್ರಯಾನ -1 - ಚಂದ್ರನ ಮೇಲೆ ನೀರಿನ ಅಣುಗಳು ಇವೆ ಎಂಬ ಸಂಭವನೀಯ ಪುರಾವೆಗಳನ್ನು ಸಂಗ್ರಹಿಸಿರುವುದು ಪ್ರಥಮ ಬಾರಿ ಎಂಬುದಕ್ಕೆ ಸಾಕ್ಷಿಯಾಗಿದೆ. ಅದೇ ರೀತಿ ಈಗ ಚಂದ್ರಯಾನ-3 ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿದೆ.

" ಜಗತ್ತಿನಾದ್ಯಂತ ಇಡೀ ವೈಜ್ಞಾನಿಕ ಸಮುದಾಯವು ಚಂದ್ರಯಾನದತ್ತ ಬಹು ನಿರೀಕ್ಷೆಯಿಂದ ನೋಡುತ್ತಿದೆ ಏಕೆಂದರೆ ಅಲ್ಲಿಂದ ಕೆಲವು ಹೊಸ ಮಾಹಿತಿಗಳನ್ನು ಸಂಗ್ರಹಿಸಲಾಗುವುದು ಎಂಬ ಆಶಯವಿದೆ, ಅದರಲ್ಲೂ ಮುಖ್ಯವಾಗಿ ಚಂದ್ರಯಾನ -3  ಪ್ರಥಮ ಬಾರಿಗೆ ದಕ್ಷಿಣ ಧ್ರುವದಲ್ಲಿ ಇಳಿದಿರುವುದರಿಂದ ನಿರೀಕ್ಷೆಗಳು ಹೆಚ್ಚಿವೆ. ಆದ್ದರಿಂದ ನಿಸ್ಸಂಶಯವಾಗಿ, ಅಲ್ಲಿಂದ ಬರಲಿರುವ ಮಾಹಿತಿ, ಮಾದರಿ ಮುಂತಾದವು ಇತರ ಎಲ್ಲಾ ಬಾಹ್ಯಾಕಾಶ ಸಂಸ್ಥೆಗಳಿಗೆ ಮತ್ತು ಅವರ ರೂಪುರೇಷೆಗಳು  ಹಾಗೂ ಯೋಜನೆಗಳಿಗೆ ಉಪಯುಕ್ತವಾಗಿರುತ್ತದೆ, ”ಎಂದು ಅವರು ಹೇಳಿದರು.

ಆರ್ಟೆಮಿಸ್ ಒಪ್ಪಂದದಿಂದ ಹಿಡಿದು ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದವರೆಗಿನ  ಮತ್ತು ಭಾರತವು ಸೆಮಿಕಂಡಕ್ಟರ್ ಒಕ್ಕೂಟಕ್ಕೆ  ಸಹಿ ಹಾಕುವವರೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಇತ್ತೀಚಿನ ಅಮೇರಿಕಾ ಭೇಟಿಯ ಸಂದರ್ಭದಲ್ಲಿ ಸಹಿ ಹಾಕಲಾದ ಎಲ್ಲಾ ಒಪ್ಪಂದಗಳು ತಂತ್ರಜ್ಞಾನವನ್ನು ಆಧರಿಸಿವೆ ಎಂದು ಡಾ. ಜಿತೇಂದ್ರ ಸಿಂಗ್ ಸ್ಮರಿಸಿದರು. 

ಇಸ್ರೋ 380ಕ್ಕೂ ಹೆಚ್ಚು ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿದೆ, ಕ್ರಮವಾಗಿ ಯುರೋಪಿಯನ್ ಮತ್ತು ಅಮೇರಿಕನ್ ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ  250 ಮಿಲಿಯನ್ ಯುರೋಗಳು ಮತ್ತು 170 ಮಿಲಿಯನ್ ಅಮೇರಿಕ  ಡಾಲರ್ ‌ಗಳಿಗಿಂತ ಹೆಚ್ಚು ಆದಾಯಗಳಿಸಿದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು.

"ಭಾರತದ ಒಟ್ಟಾರೆ ಬಾಹ್ಯಾಕಾಶ ಆರ್ಥಿಕತೆಯು ಇಂದು ಸುಮಾರು $8 ಶತಕೋಟಿ ಆಗಿದೆ, ಅಂದರೆ ಜಾಗತಿಕ (ಮಾರುಕಟ್ಟೆ ಪಾಲು) 2% ರಷ್ಟು ಆದರೆ ಇಡೀ ಪ್ರಪಂಚವು ವೇಗದಲ್ಲಿ ವೃದ್ಧಿಯನ್ನು ಗುರುತಿಸುತ್ತಿದೆ ಮತ್ತು ಅದಕ್ಕಾಗಿಯೇ ಸಾಂಪ್ರದಾಯಿಕ ನಿರೀಕ್ಷಿತ ಆದಾಯ 2040ರ ವೇಳೆಗೆ $40 ಶತಕೋಟಿ ಆಗಲಿದೆ, ಆದರೆ ನಂತರ ನಾವು ಪಡೆದ ADL (ಆರ್ಥರ್ ಡಿ ಲಿಟಲ್) ವರದಿ ಪ್ರಕಾರ, 2040 ರ ವೇಳೆಗೆ ಭಾರತದ ಬಾಹ್ಯಾಕಾಶ ಆದಾಯವು $100 ಶತಕೋಟಿಗೆ  ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ನಮ್ಮ ಚಲನೆಯ ವೇಗ ವೃದ್ಧಿಸಿದೆ, ನಮ್ಮನ್ನು ನಾವು ಅಳೆಯುವುದರಲ್ಲಿ ನಾವು ಇನ್ನೂ ಸಂಪ್ರದಾಯವಾದಿಯಾಗಿದ್ದೇವೆ, ಆದರೆ ಇತರರ ಮೌಲ್ಯಮಾಪನವು ಬಹಳಷ್ಟು ಹೆಚ್ಚಾಗಿದೆ, ಅಂದರೆ ನಾವು ನಿಜವಾಗಿಯೂ ಸಾಧಿಸಿದ್ದೇವೆ” ಎಂದು ಅವರು ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆ, ರೈಲ್ವೆ ಹಳಿಗಳು ಮತ್ತು ಮಾನವರಹಿತ ರೈಲ್ವೆ ಕ್ರಾಸಿಂಗ್ ‌ಗಳು, ರಸ್ತೆಗಳು ಮತ್ತು ಕಟ್ಟಡಗಳ ನಿರ್ವಹಣೆ, ಟೆಲಿಮೆಡಿಸಿನ್, ಆಡಳಿತ, ಮತ್ತು ಮುಖ್ಯವಾಗಿ, ‘ಸ್ವಾಮಿತ್ವ’ ಜಿಪಿಎಸ್ ಲ್ಯಾಂಡ್ ಮ್ಯಾಪಿಂಗ್ ‌ನಂತಹ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಬಾಹ್ಯಾಕಾಶ ಅಪ್ಲಿಕೇಶನ್ ‌ಗಳನ್ನು ಬಳಸಲಾಗುತ್ತಿದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು.

ಪ್ರಧಾನಮಂತ್ರಿ ಮೋದಿಯವರ ಒಂಬತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಭಾರತದ ವಿಪತ್ತು ಸಾಮರ್ಥ್ಯಗಳು ವಿಶ್ವ ದರ್ಜೆಗೇರಿವೆ ಮತ್ತು ನಾವು ನೆರೆಯ ದೇಶಗಳಿಗೂ ವಿಪತ್ತು ಮುನ್ಸೂಚನೆಗಳನ್ನು ನೀಡುತ್ತಿದ್ದೇವೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು.

"ವಿಪತ್ತು ಮುನ್ಸೂಚನೆ ಮತ್ತು ನಿರ್ವಹಣೆಯಲ್ಲಿ ಬಾಹ್ಯಾಕಾಶ ಸಂಶೋಧನೆಯ ಅಪ್ಲಿಕೇಶನ್ ‌ಗಳು ನೀಡಿದ ಸಹಾಯ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಮಾಡಿದ ಹೂಡಿಕೆಗಳಿಗಿಂತ ಹೆಚ್ಚಿನದಾಗಿದೆ" ಎಂದು ಅವರು ಹೇಳಿದರು.

*****



(Release ID: 1955607) Visitor Counter : 110