ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರು 20ನೇ ಆಸಿಯಾನ್ – ಭಾರತ ಶೃಂಗಸಭೆಯನ್ನುದ್ದೇಶಿಸಿ ಮಾಡಿದ ಆರಂಭಿಕ ಭಾಷಣದ ಆಂಗ್ಲ ಅನುವಾದ
Posted On:
07 SEP 2023 10:39AM by PIB Bengaluru
ಗೌರವಾನ್ವಿತ ಅಧ್ಯಕ್ಷ ಜೊಕೊ ವಿಡೋಡೊ ಅವರೆ,
ಎಲ್ಲ ಮಹಾರಾಜರೇ,
ಎಲ್ಲ ಗೌರವಾನ್ವಿತರೇ,
ನಮಸ್ಕಾರ,
ನಮ್ಮ ಪಾಲುದಾರಿಕೆ ಇದೀಗ ನಾಲ್ಕನೇ ದಶಕ ಪ್ರವೇಶಿಸುತ್ತಿದೆ.
ಆ ನಿಟ್ಟಿನಲ್ಲಿ ಭಾರತ – ಆಸಿಯಾನ್ ಶೃಂಗಸಭೆಯ ಸಹ ಅಧ್ಯಕ್ಷತೆಯನ್ನು ವಹಿಸುತ್ತಿರುವುದು ನನಗೆ ಹೆಮ್ಮೆ ಎನಿಸುತ್ತಿದೆ.
ಈ ಅದ್ಭುತ ಶೃಂಗಸಭೆಗಾಗಿ ನಾನು ಅಧ್ಯಕ್ಷ ವಿಡೋಡೊ ಅವರಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಮತ್ತು ನನ್ನ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ.
ಅಲ್ಲದೆ ನಾನು ಆಸಿಯಾನ್ ಬಳಗದ ಸಮರ್ಥ ನಾಯಕತ್ವಕ್ಕೂ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ.
ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡ ಕಾಂಬೋಡಿಯಾ ಪ್ರಧಾನಮಂತ್ರಿಗಳಾದ ಗೌರವಾನ್ವಿತ ಹುನ್ ಮಾನೆಟ್ ಅವರಿಗೂ ಸಹ ನಾನು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ.
ಅಲ್ಲದೆ ನಾನು ತಿಮೋರ್ ಲೇಸ್ತೆಯ ಪ್ರಧಾನಮಂತ್ರಿಗಳು ಹಾಗೂ ಈ ಸಭೆಯ ವೀಕ್ಷಕರೂ ಆಗಿರುವ ಗೌರವಾನ್ವಿತ ಕ್ಸಾನಾನಾ ಗುಸ್ಮಾವೊ ಅವರನ್ನು ಸ್ವಾಗತಿಸುತ್ತೇನೆ.
ಎಲ್ಲಾ ಘನೆತವೆತ್ತ ಮಹಾಮಹಿಮರೇ,
ನಮ್ಮ ಇತಿಹಾಸ ಮತ್ತು ಭೂಗೋಳ, ಭಾರತ ಮತ್ತು ಆಸಿಯಾನ್ ನಡುವೆ ಸಂಪರ್ಕ ಬೆಸೆದಿದೆ. ಅವುಗಳ ಜತೆ ಮೌಲ್ಯಗಳ ಹಂಚಿಕೆ ಮತ್ತು ಪ್ರಾದೇಶಿಕ ಏಕತೆಯೂ ಒಳಗೊಂಡಿದೆ.
ಬಹುಧ್ರುವ ಜಗತ್ತಿನಲ್ಲಿ ಶಾಂತಿ ಸಮೃದ್ಧಿ ಮತ್ತು ಹಂಚಿಕೊಂಡ ನಂಬಿಕೆ ನಮ್ಮೆಲ್ಲರನ್ನೂ ಒಗ್ಗೂಡಿಸಿದೆ.
ಆಸಿಯಾನ್ ಭಾರತದ ಪೂರ್ವ ಕ್ರಿಯಾ ನೀತಿಯ ಕೇಂದ್ರ ಸ್ಥಂಭವಾಗಿದೆ.
ಆಸಿಯಾನ್ ನ ಕೇಂದ್ರೀಯತೆಯನ್ನು ಭಾರತ ಸಂಪೂರ್ಣ ಬೆಂಬಲಿಸುತ್ತದೆ ಮತ್ತು ಇಂಡೋ-ಪೆಸಿಫಿಕ್ ಗೆ ಸಂಬಂಧಿಸಿದಂತೆ ಆಸಿಯಾನ್ ದೂರದೃಷ್ಟಿಯನ್ನೂ ಸಹ ಬೆಂಬಲಿಸುತ್ತದೆ.
ಭಾರತದ ಇಂಡೋ, ಪೆಸಿಫಿಕ್ ಉಪಕ್ರಮದಲ್ಲಿ ಆಸಿಯಾನ್ ಗೆ ಅತ್ಯಂತ ಪ್ರಮುಖ ಸ್ಥಾನವಿದೆ. ಕಳೆದ ವರ್ಷ ನಾವು ಭಾರತ-ಆಸಿಯಾನ್ ಮತ್ರ ವರ್ಷವನ್ನು ಆಚರಿಸಿದೆವು ಮತ್ತು ನಮ್ಮ ಸಂಬಂಧಗಳನ್ನು ಸಮಗ್ರ ಕಾರ್ಯತಂತ್ರ ಪಾಲುದಾರಿಕೆಗೆ ಎತ್ತರಿಸಿದ್ದೇವೆ.
ಎಲ್ಲಾ ಘನೆತವೆತ್ತ ಮಹಾಮಹಿಮರೇ,
ಇಂದಿನ ಜಾಗತಿಕ ಅನಿಶ್ಚಿತತೆಗಳ ಪರಿಸ್ಥಿತಿಗಳ ನಡುವೆಯೂ ನಮ್ಮ ಪರಸ್ಪರ ಸಹಕಾರದಲ್ಲಿ ಪ್ರತಿಯೊಂದು ವಲಯದಲ್ಲೂ ನಿರಂತರ ಪ್ರಗತಿಯನ್ನು ಸಾಧಿಸುತ್ತಿದ್ದೇವೆ. ಇದು ನಮ್ಮ ಸಂಬಂಧದ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವದ ಸಂಕೇತವಾಗಿದೆ.
ಈ ವರ್ಷದ ಆಸಿಯಾನ್ ಸಮಿಟ್ ನ ಘೋಷವಾಕ್ಯ “ಆಸಿಯಾನ್ ವಿಷಯಗಳ; ಪ್ರಗತಿಯ ಕೇಂದ್ರಬಿಂದು” ಎಂಬುದಾಗಿದೆ. ಆಸಿಯಾನ್ ವಿಷಯಗಳು ಮುಖ್ಯವಾದವು ಏಕೆಂದರೆ ಇಲ್ಲಿ ಪ್ರತಿಯೊಬ್ಬರ ಧ್ವನಿಯೂ ಕೇಳಬಹುದಾಗಿದೆ ಮತ್ತು ಆಸಿಯಾನ್ ಪ್ರಗತಿಯ ಕೇಂದ್ರ ಬಿಂದುವಾಗಿದೆ. ಏಕೆಂದರೆ ಜಾಗತಿಕ ಅಭಿವೃದ್ಧಿಯಲ್ಲಿ ಆಸಿಯಾನ್ ಪ್ರಾಂತ್ಯ ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
‘ವಸುಧೈವ ಕುಟುಂಬಕಂ’ ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಇದು ಈ ಭಾವನೆಯು ಭಾರತದ ಜಿ-20 ಅಧ್ಯಕ್ಷತೆಯ ಘೋಷವಾಕ್ಯವಾಗಿದೆ.
ಎಲ್ಲಾ ಘನೆತವೆತ್ತ ಮಹಾಮಹಿಮರೇ,
21ನೇ ಶತಮಾನ ಏಷ್ಯಾದ ಶತಮಾನವಾಗಿದೆ. ಇದು ನಮ್ಮ ಶತಮಾನವಾಗಿದೆ.
ಅದಕ್ಕಾಗಿ ನಾವು ನಿಯಮಾಧಾರಿತ, ಕೋವಿಡ್ ನಂತರದ ಜಗತ್ತನ್ನು ನಿರ್ಮಾಣ ಮಾಡುವ ಅಗತ್ಯವಿದೆ ಮತ್ತು ಎಲ್ಲ ಮಾನವರ ಕಲ್ಯಾಣಕ್ಕಾಗಿ ಪ್ರಯತ್ನಗಳನ್ನು ಕೈಗೊಳ್ಳಬೇಕಿದೆ.
ಮುಕ್ತ ಮತ್ತು ತೆರೆದ ಭಾರತ-ಪೆಸಿಫಿಕ್ ನ ಪ್ರಗತಿ ಎಲ್ಲಾ ಸಾಮಾನ್ಯ ಜನರ ಹಿತಾಸಕ್ತಿಯನ್ನು ಒಳಗೊಂಡ ಜಾಗತಿಕ ದಕ್ಷಿಣದ ಧ್ವನಿಯಾಗಿದೆ.
ಇಂದಿನ ಚರ್ಚೆಗಳು ಭಾರತ ಮತ್ತು ಆಸಿಯಾನ್ ವಲಯದ ಭವಿಷ್ಯ ಬಲವರ್ಧನೆಗೆ ಕಾರಣವಾಗುವ ಹೊಸ ನಿರ್ಣಯಗಳಿಗೆ ಕಾರಣವಾಗಲಿದೆ ಎಂದು ನಾನು ನಂಬಿದ್ದೇನೆ.
ದೇಶಗಳ ಸಮನ್ವಯಕಾರರಾದ ಸಿಂಗಾಪುರ, ಮುಂದೆ ಅಧ್ಯಕ್ಷತೆ ವಹಿಸಿಕೊಳ್ಳಲಿರುವ ಲಾವೋ ಪಿಡಾರ್ ಮತ್ತು ಭಾರತ ನಿಮ್ಮೊಂದಿಗೆ ಹೆಗಲಿಗೆ ಹೆಗಲುಕೊಟ್ಟು ಕೆಲಸ ಮಾಡಲು ಬದ್ಧವಿದೆ.
ಧನ್ಯವಾದಗಳು
ಘೋಷಣೆ – ಪ್ರಧಾನಮಂತ್ರಿ ಅವರ ಭಾಷಣದ ಯಥಾವತ್ ಅನುವಾದವಲ್ಲ, ಅವರು ಮೂಲತಃ ಹಿಂದಿ ಭಾಷೆಯಲ್ಲಿ ಮಾತನಾಡಿದರು.
***
(Release ID: 1955405)
Visitor Counter : 129
Read this release in:
Hindi
,
Punjabi
,
Gujarati
,
Tamil
,
Bengali
,
Manipuri
,
Odia
,
English
,
Urdu
,
Marathi
,
Assamese
,
Telugu
,
Malayalam