ಗೃಹ ವ್ಯವಹಾರಗಳ ಸಚಿವಾಲಯ

ನಿಜವಾದ ನಾಯಕ ಪ್ರತಿ ಸಂದರ್ಭದಲ್ಲೂ ತನ್ನ ಜನರ ಪರವಾಗಿ ನಿಲ್ಲುತ್ತಾನೆ: ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿಯವರು ಇಂದು ಬೆಳಗ್ಗೆ ಗ್ರೀಸ್ನಿಂದ ನೇರವಾಗಿ ಬೆಂಗಳೂರಿಗೆ ಹಾರಿದರು, ಭಾರತದ ಯಶಸ್ವಿ ಚಂದ್ರಯಾನ 3 ರ ಹಿಂದಿನ ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಿದರು.

ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕೇಂದ್ರದಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಅವರು ಮಾಡಿದ ಸ್ಪೂರ್ತಿದಾಯಕ ಭಾಷಣವು ಆಕಾಶವನ್ನು ತಲುಪಿದ ಭಾರತದ ಅದ್ಭುತ ಸಾಧನೆಯ ಸಂಕೇತವಾಗಿದೆ.

ಆಗಸ್ಟ್ 23 ಭಾರತಕ್ಕೆ ಐತಿಹಾಸಿಕ ದಿನವಾಗಿದೆ, ಏಕೆಂದರೆ ಇದು ಚಂದ್ರಯಾನ 3 ರ ಸಾಧನೆಗೆ ಸಾಕ್ಷಿಯಾಗಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಇದನ್ನು 'ರಾಷ್ಟ್ರೀಯ ಬಾಹ್ಯಾಕಾಶ ದಿನ' ಎಂದು ಘೋಷಿಸಿದರು, ಇದರಿಂದಾಗಿ ಈ ಮಿಷನ್ನ ಹಿಂದೆ ಭಾರತದ ವಿಜ್ಞಾನಿಗಳ ಯಶಸ್ಸಿನ ಕಥೆಯು ಭವಿಷ್ಯದ ಪೀಳಿಗೆಯನ್ನು ತಲುಪುತ್ತದೆ.

ಈ ನಿರ್ಧಾರವು 'ತಿರಂಗ'ದ ಹೆಮ್ಮೆ ರಾರಾಜಿಸುವುದಲ್ಲದೇ ಭಾರತೀಯ ವಿಜ್ಞಾನಿಗಳನ್ನು ಬಾಹ್ಯಾಕಾಶ ಪರಿಶೋಧನೆಯ ಕ್ಷೇತ್ರದಲ್ಲಿ ಹೊಸ ಎತ್ತರವನ್ನು ಸಾಧಿಸಲು ಪ್ರೇರೇಪಿಸುತ್ತದೆ, 

ಭಾರತದ ಚಂದ್ರಯಾನದ ಐತಿಹಾಸಿಕ ಯಶಸ್ಸಿನೊಂದಿಗೆ, ನಮ್ಮ ವಿಜ್ಞಾನಿಗಳು ಅಳಿಸಲಾಗದ ಗುರುತು ಹಾಕಿದ್ದಾರೆ.

ಈ ಸಾಧನೆಯನ್ನು ಸ್ಮರಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರು ಚಂದ್ರಯಾನ-3 ರ ಲ್ಯಾಂಡಿಂಗ್ ಸ್ಪಾಟ್ಗೆ 'ಶಿವಶಕ್ತಿ' ಮತ್ತು ಚಂದ್ರಯಾನ-2 ಪತನಗೊಂಡ ಸ್ಥಳಕ್ಕೆ 'ತಿರಂಗ' ಎಂದು ಹೆಸರಿಸಿದರು, 'ಯಾವುದೇ ವೈಫಲ್ಯ ಶಾಶ್ವತವಲ್ಲ' ಎಂದು ನಮಗೆ ನೆನಪಿಸುತ್ತದೆ.

Posted On: 26 AUG 2023 2:39PM by PIB Bengaluru

ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ನಿಜವಾದ ನಾಯಕ ಪ್ರತಿ ಸಂದರ್ಭದಲ್ಲೂ ತನ್ನ ಜನರ ಪರವಾಗಿ ನಿಲ್ಲುತ್ತಾನೆ ಎಂದು ಹೇಳಿದ್ದಾರೆ. ಎಕ್ಸ್ನಲ್ಲಿ ಈ ಕುರಿತು ಸರಣಿ ಪೋಸ್ಟ್ ಗಳನ್ನು ಮಾಡಿದ್ದಾರೆ.

ಭಾರತದ ಯಶಸ್ವಿ ಚಂದ್ರಯಾನ 3 ರ ಹಿಂದಿನ ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಇಂದು ಬೆಳಿಗ್ಗೆ ಗ್ರೀಸ್ನಿಂದ ನೇರವಾಗಿ ಬೆಂಗಳೂರಿಗೆ ತೆರಳಿದರು. ಬೆಂಗಳೂರಿನಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಅವರ ಸ್ಪೂರ್ತಿದಾಯಕ ಭಾಷಣ ಗಗನಕ್ಕೇರಿದ ಭಾರತದ ಅದ್ಬುತ ಸಾಧನೆಗೆ ಗೌರವಾರ್ಪಣೆಯಾಗಿತ್ತು.

ಆಗಸ್ಟ್ 23 ಭಾರತಕ್ಕೆ ಐತಿಹಾಸಿಕ ದಿನವಾಗಿದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು, ಇದು ತನ್ನ ಚಂದ್ರಯಾನ 3 ರ ಸಾಧನೆಯನ್ನು ಗುರುತಿಸುತ್ತದೆ. ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಇದನ್ನು 'ರಾಷ್ಟ್ರೀಯ ಬಾಹ್ಯಾಕಾಶ ದಿನ' ಎಂದು ಘೋಷಿಸಿದರು. ಈ ಮಿಷನ್ನ ಹಿಂದೆ ಭಾರತದ ವಿಜ್ಞಾನಿಗಳ ಯಶಸ್ಸಿನ ಕಥೆಯು ಪ್ರತಿ ಭವಿಷ್ಯದ ಪೀಳಿಗೆಯನ್ನು ತಲುಪುತ್ತದೆ. 'ತಿರಂಗ'ದ ಹೆಮ್ಮೆ ರಾರಾಜಿಸುವ ಮೂಲಕ ಈ ನಿರ್ಧಾರವು ಭಾರತೀಯ ವಿಜ್ಞಾನಿಗಳನ್ನು ಬಾಹ್ಯಾಕಾಶ ಪರಿಶೋಧನೆಯ ಕ್ಷೇತ್ರದಲ್ಲಿ ಹೊಸ ಎತ್ತರಗಳನ್ನು ಸಾಧಿಸಲು ಪ್ರೇರೇಪಿಸುತ್ತದೆ. 

ಭಾರತದ ಚಂದ್ರಯಾನದ ಐತಿಹಾಸಿಕ ಯಶಸ್ಸಿನೊಂದಿಗೆ ನಮ್ಮ ವಿಜ್ಞಾನಿಗಳು ಚಂದ್ರನ ಮರಳಿನಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಸಾಧನೆಯನ್ನು ಸ್ಮರಿಸಲು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರು ಚಂದ್ರಯಾನ-3 ರ ಲ್ಯಾಂಡಿಂಗ್ ಸ್ಥಳಕ್ಕೆ 'ಶಿವಶಕ್ತಿ' ಎಂದು ಹೆಸರಿಸಿದರು ಮತ್ತು ಚಂದ್ರಯಾನ-2 ಪತನಗೊಂಡ ಸ್ಥಳಕ್ಕೆ 'ತಿರಂಗ' ಎಂದು ಹೆಸರಿಸಿದರು, 'ಯಾವುದೇ ವೈಫಲ್ಯ ಶಾಶ್ವತವಲ್ಲ' ಎಂಬುದನ್ನು ನಮಗೆ ನೆನಪಿಸುತ್ತದೆ.

*****



(Release ID: 1952535) Visitor Counter : 115