ರಾಷ್ಟ್ರಪತಿಗಳ ಕಾರ್ಯಾಲಯ
ಅಸ್ಮಿತಾ – ಯೋಧರ ಪತ್ನಿಯರಿಂದ ಸ್ಪೂರ್ತಿದಾಯಕ ಅಂತಾರಾಷ್ಟ್ರೀಯ ಕಥೆಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಷ್ಟ್ರಪತಿ
Posted On:
21 AUG 2023 1:35PM by PIB Bengaluru
ನವದೆಹಲಿಯಲ್ಲಿ ಆರ್ಮಿ ವೈವ್ಸ್ ಅಸೋಸಿಯೇಷನ್ (AWWA) ಇಂದು (ಆಗಸ್ಟ್ 21, 2023) ರಂದು ಆಯೋಜಿಸಿದ್ದ 'ಅಸ್ಮಿತಾ- ಯೋಧರ ಪತ್ನಿಯರಿಂದ ಸ್ಪೂರ್ತಿದಾಯಕ ಅಂತಾರಾಷ್ಟ್ರೀಯ ಕಥೆಗಳು ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಯವರು ಎಲ್ಲಾ ಭಾರತೀಯರ ಪರವಾಗಿ ಅಸ್ಮಿತೆಯ ಲಾಂಛನದಂತೆ ಗೌರವಿಸಲ್ಪಡುವ 'ವೀರ ನಾರಿಯರಿ'ಗೆ ಕೃತಜ್ಞತೆಗಳನ್ನು ಸಲ್ಲಿಸಿದರು. 'ವೀರ ನಾರಿಯರ’ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ AWWA ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.
ಸಮಾಜ ಮತ್ತು ರಾಷ್ಟ್ರದ ಘನತೆ ಮಹಿಳೆಯರ ಸ್ವಾಭಿಮಾನವನ್ನು ಆಧರಿಸಿದೆ ಎಂದು ರಾಷ್ಟ್ರಪತಿಯವರು ಹೇಳಿದರು. ಕೆಲವು ಹಳೆಯ ವಿಚಾರಗಳನ್ನು ಬಿಟ್ಟು ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳುವ ಅಗತ್ಯತೆ ಬಗ್ಗೆ ಅವರು ಒತ್ತಿ ಹೇಳಿದರು. 'ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದಾಳೆ' ಎಂಬ ಹಳೆಯ ಮಾತನ್ನು ಉಲ್ಲೇಖಿಸಿದ ಅವರು, ‘ಪ್ರತಿಯೊಬ್ಬ ಯಶಸ್ವಿ ಪುರುಷನ ಪಕ್ಕದಲ್ಲಿ ಒಬ್ಬ ಮಹಿಳೆ ಇದ್ದಾಳೆ’ ಎಂದು ಗಾದೆ ಬದಲಾಗಬೇಕು ಎಂದು ಹೇಳಿದರು. ಪ್ರಗತಿಪರ ವಿಚಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಹಿಳೆಯರ ಅಸ್ಮಿತೆ ಮತ್ತು ಆತ್ಮವಿಶ್ವಾಸವನ್ನು ವೃದ್ಧಿಸಬಹುದು ಎಂದು ಅವರು ಹೇಳಿದರು.
http://ರಾಷ್ಟ್ರಪತಿಯವರ ಭಾಷಣಕ್ಕಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
(Release ID: 1950802)
Visitor Counter : 100