ಉಪರಾಷ್ಟ್ರಪತಿಗಳ ಕಾರ್ಯಾಲಯ
ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ರಾಷ್ಟ್ರದ ಜನತೆಯನ್ನುಉದ್ದೇಶಿಸಿ ಸಂದೇಶ ನೀಡಿದ ಘನತೆವೆತ್ತ ಉಪರಾಷ್ಟ್ರಪತಿ
Posted On:
14 AUG 2023 4:20PM by PIB Bengaluru
“ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಸಂದರ್ಭದಲ್ಲಿ ನಾನು ನನ್ನ ಎಲ್ಲಾ ಸಹ ನಾಗರಿಕರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಮತ್ತು ಶುಭ ಹಾರೈಕೆಗಳನ್ನು ತಿಳಿಸುತ್ತೇನೆ.
ಅಮೃತ ಕಾಲದ ಈ ಆರಂಭದಲ್ಲಿ, ಕಳೆದ ಎಪ್ಪತ್ತಾರು ವರ್ಷಗಳ ಪ್ರಗತಿ ಮತ್ತು ಸಾಧನೆಗಳಲ್ಲಿ ನಾವು ಸಂತೋಷಪಡುತ್ತಿರುವಾಗ, ಭಾರತವನ್ನು ಸ್ವತಂತ್ರವಾಗಲು ಸಾಧ್ಯವಾಗಿಸಿದ ನಮ್ಮ ವೀರ ಸ್ವಾತಂತ್ರ್ಯ ಹೋರಾಟಗಾರರ ಅಸಾಧಾರಣ ತ್ಯಾಗವನ್ನು ಗೌರವಿಸೋಣ. ಅವರ ಅಚಲವಾದ ಧೈರ್ಯವು ನಮಗೆ ಸ್ಫೂರ್ತಿ ನೀಡುತ್ತದೆ. ನಮ್ಮ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕೃತಜ್ಞತೆಯಿಂದ ಪಾಲಿಸಬೇಕೆಂದು ನಮಗೆ ನೆನಪಿಸುತ್ತದೆ. ಇಂದು ನಾವು ಆಧುನಿಕ ಭಾರತದ ದಾರ್ಶನಿಕರು ಮತ್ತು ವಾಸ್ತುಶಿಲ್ಪಿಗಳಿಗೆ ಗೌರವ ಸಲ್ಲಿಸುತ್ತೇವೆ. ಅವರ ದಣಿವರಿಯದ ಪ್ರಯತ್ನಗಳು ಬಲವಾದ, ವೈವಿಧ್ಯಮಯ ಮತ್ತು ಸ್ಥಿತಿಸ್ಥಾಪಕತ್ವದಿಂದ ಪುಟಿದೇಳುತ್ತಾ ಚೇತರಿಸಿಕೊಂಡು ಸದೃಢ ರಾಷ್ಟ್ರವಾಗಲು ನಮಗೆ ದಾರಿ ಮಾಡಿಕೊಟ್ಟವು.
ಈ ಐತಿಹಾಸಿಕ ದಿನದಂದು, ಏಕತೆ, ನ್ಯಾಯ, ಸಮಾನತೆ ಮತ್ತು ಭ್ರಾತೃತ್ವದ ಮೂಲಭೂತ ಸಂವಿಧಾನದ ತತ್ವಗಳಿಗೆ ನಮ್ಮ ಸಮರ್ಪಣೆಯನ್ನು ಪುನರುಚ್ಚರಿಸೋಣ. ನಾವು ಕೈಜೋಡಿಸಿ ಮುಂದೆ ಸಾಗುತ್ತಿರುವಾಗ, ‘ಭಾರತ’ದ ಶ್ರೀಮಂತ ನಾಗರಿಕತೆಯ ತತ್ವಗಳನ್ನು ಒಳಗೊಂಡಿರುವ ದೃಢವಾದ, ಪ್ರಗತಿಶೀಲ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸೋಣ. ”
**********
(Release ID: 1948582)
Visitor Counter : 162