ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ʻಹರ್ ಘರ್ ತಿರಂಗಾʼ ಅಭಿಯಾನದ ಭಾಗವಾಗಿ ನವದೆಹಲಿಯ ತಮ್ಮ ನಿವಾಸದ ಮೇಲೆ ತಿರಂಗಾ ಹಾರಿಸಿದರು ಮತ್ತು ತಿರಂಗಾ ಜೊತೆ ತಮ್ಮ ಸೆಲ್ಫಿಯನ್ನು ಹಂಚಿಕೊಂಡರು
ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಭಾರತದ ಆಗಸದಲ್ಲಿ ರಾರಾಜಿಸುತ್ತಿರುವ ಲಕ್ಷಾಂತರ ತಿರಂಗಾಗಳು ಭಾರತವನ್ನು ಮತ್ತೆ ಶ್ರೇಷ್ಠತೆಯ ಪರಾಕಾಷ್ಠೆಗೆ ಕೊಂಡೊಯ್ಯುವ ರಾಷ್ಟ್ರದ ಸಾಮೂಹಿಕ ಇಚ್ಛಾಶಕ್ತಿಯನ್ನು ಸಂಕೇತಿಸುತ್ತವೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರೆ ನೀಡಿರುವ ʻಹರ್ ಘರ್ ತಿರಂಗಾʼ ಅಭಿಯಾನ ದೇಶಾದ್ಯಂತ ನಡೆಯುತ್ತಿದೆ
ಭಾರತದ ನಾಗರಿಕರು ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿ, ರಾಷ್ಟ್ರಧ್ವಜದ ಜತೆಗಿನ ಸೆಲ್ಫಿಗಳನ್ನು http://harghartiranga.com ವೆಬ್ಸೈಟ್ ಗೆ ಅಪ್ಲೋಡ್ ಮಾಡಿ. ಸಹ ನಾಗರಿಕರನ್ನು ಅದೇ ರೀತಿ ಮಾಡಲು ಉತ್ತೇಜಿಸಿ, ಇದು ರಾಷ್ಟ್ರದ ಜನರಿಗೆ ನನ್ನ ಪ್ರಾಮಾಣಿಕ ಮನವಿ
ಭಾರತದ ಏಕತೆ ಮತ್ತು ಭ್ರಾತೃತ್ವದ ಮನೋಭಾವವನ್ನು ಹೆಚ್ಚಿಸುತ್ತಿರುವುದಾಗಿ ಹೇಳಿದ ಶ್ರೀ ಅಮಿತ್ ಶಾ ಅವರು, ಇಂದು ದೆಹಲಿಯ ತಮ್ಮ ನಿವಾಸದಲ್ಲಿ ತಿರಂಗಾವನ್ನು ಹಾರಿಸಿದರು
Posted On:
14 AUG 2023 1:09PM by PIB Bengaluru
ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ʻಹರ್ ಘರ್ ತಿರಂಗಾʼ ಅಭಿಯಾನದ ಅಡಿಯಲ್ಲಿ ನವದೆಹಲಿಯ ತಮ್ಮ ನಿವಾಸದ ಮೇಲೆ ತಿರಂಗಾ ಹಾರಿಸಿದರು, ತಿರಂಗಾ ಜೊತೆ ತಮ್ಮ ಸೆಲ್ಫಿಯನ್ನು ಹಂಚಿಕೊಂಡರು. ಈ ಕುರಿತು ಟ್ವೀಟ್ ಮಾಡಿರುವ ಶ್ರೀ ಅಮಿತ್ ಶಾ, ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಭಾರತದ ಆಗಸದಲ್ಲಿ ರಾರಾಜಿಸುತ್ತಿರುವ ಲಕ್ಷಾಂತರ ತಿರಂಗಗಳು ಭಾರತವನ್ನು ಮತ್ತೆ ಶ್ರೇಷ್ಠತೆಯ ಪರಾಕಾಷ್ಠೆಗೆ ಕೊಂಡೊಯ್ಯುವ ರಾಷ್ಟ್ರದ ಸಾಮೂಹಿಕ ಇಚ್ಛಾಶಕ್ತಿಯನ್ನು ಸಂಕೇತಿಸುತ್ತವೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕರೆ ನೀಡಿರುವ ʻಹರ್ ಘರ್ ತಿರಂಗಾʼ ಅಭಿಯಾನ ದೇಶಾದ್ಯಂತ ನಡೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಭಾರತದ ಎಲ್ಲಾ ನಾಗರಿಕರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬೇಕು ಮತ್ತು http://harghartiranga.com ವೆಬ್ ಸೈಟ್ ನಲ್ಲಿ ಸೆಲ್ಫಿಗಳನ್ನು ಅಪ್ಲೋಡ್ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಜೊತೆಗೆ, ಪ್ರತಿಯೊಬ್ಬರೂ ತಮ್ಮ ಸಹ ನಾಗರಿಕರನ್ನು ಅದೇ ರೀತಿ ಮಾಡಲು ಪ್ರೋತ್ಸಾಹಿಸಬೇಕು ಎಂದು ಅವರು ಕೋರಿದ್ದಾರೆ. ಭಾರತದ ಏಕತೆ ಮತ್ತು ಭ್ರಾತೃತ್ವದ ಮನೋಭಾವವನ್ನು ಪೋಷಿಸುತ್ತಿರುವುದಾಗಿ ಹೇಳಿದ ಶ್ರೀ ಶಾ ಅವರು ಇಂದು ದೆಹಲಿಯ ತಮ್ಮ ನಿವಾಸದಲ್ಲಿ ತಿರಂಗಾವನ್ನು ಹಾರಿಸಿದ್ದಾಗಿ ಹೇಳಿದ್ದಾರೆ. 'ಹರ್ ಘರ್ ತಿರಂಗಾ' ಅಭಿಯಾನದಲ್ಲಿ ಭಾಗವಹಿಸಿದ್ದಕ್ಕಾಗಿ ಪಡೆದ ಪ್ರಶಂಸಾ ಪತ್ರವನ್ನು ಗೃಹ ಸಚಿವರು ಹಂಚಿಕೊಂಡಿದ್ದಾರೆ.
*****
(Release ID: 1948494)
Visitor Counter : 148