ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಕೇಬಲ್ ಮತ್ತು ಪ್ರಸಾರ ಸೇವೆಗಳ ನಿಯಂತ್ರಣ ಚೌಕಟ್ಟು ಕುರಿತು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ – ಟ್ರಾಯ್ ನಿಂದ ಸಮಾಲೋಚನಾ ಪತ್ರ ಬಿಡುಗಡೆ
Posted On:
08 AUG 2023 2:43PM by PIB Bengaluru
ಕೇಬಲ್ ಮತ್ತು ಪ್ರಸಾರ ಸೇವೆಗಳಿಗೆ ಸಂಬಂಧಿಸಿದ ನಿಯಂತ್ರಣ ಚೌಕಟ್ಟು ಕುರಿತು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ [ಟ್ರಾಯ್] ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಿದೆ.
ಕೇಬಲ್ ಟಿವಿ ವಲಯದ ಸಂಪೂರ್ಣ ಡಿಜಿಟಲೀಕರಣಕ್ಕೆ ಅನುಗುಣವಾಗಿ ಟ್ರಾಯ್, 2017, ಮಾರ್ಚ್ 3 ರಂದು ಟ್ರಾಯ್ ನಿಯಂತ್ರಣ ಚೌಕಟ್ಟು ಬಿಡುಗಡೆ ಮಾಡಿತ್ತು. ಕ್ರಮೇಣ ಮದ್ರಾಸ್ ಹೈಕೋರ್ಟ್ ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್ ಈ ಕುರಿತು ಕಾನೂನು ಪರಿಶೀಲನೆ ಮಾಡಿದ ನಂತರ ಇದು 2018 ರ ಡಿಸೆಂಬರ್ 29 ರಿಂದ ಜಾರಿಗೆ ಬಂತು.
2017 ರ ನಿಯಂತ್ರಣ ಚೌಕಟ್ಟು ಜಾರಿಗೊಳಿಸುವ ಸಂಬಂಧ ಕೆಲವು ವಿಷಯಗಳನ್ನು ಪರಿಹರಿಸಿದ ನಂತರ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿ 2020 ರ ಜನವರಿ 1 ರಂದು ದರ ತಿದ್ದುಪಡಿ ಆದೇಶ 2020, ಅಂತರ್ ಸಂಪರ್ಕ ತಿದ್ದುಪಡಿ ನಿಯಮಗಳು 2020 ಮತ್ತು ಕ್ಯೂಒಎಸ್ ತಿದ್ದುಪಡಿ ನಿಯಮಗಳನ್ನು ಬಾಂಬೆ ಮತ್ತು ಕೇರಳ ಹೈಕೋರ್ಟ್ ಸೇರಿ ವಿವಿಧ ಹೈಕೋರ್ಟ್ ಗಳ ಪರಿಶೀಲನೆ ನಂತರ ತಿದ್ದುಪಡಿ ಮಾಡಿದ ಚೌಕಟ್ಟು 2020 ಅನ್ನು ಜಾರಿಗೊಳಿಸಲಾಗಿದೆ. ಕೆಲವು ನಿಬಂಧನೆಗಳನ್ನು ಹೊರತುಪಡಿಸಿ ತಿದ್ದುಪಡಿ ಮಾಡಿದ ಚೌಕಟ್ಟು 2020 ರ ಸಿಂಧುತ್ವವನ್ನು ಹೈಕೋರ್ಟ್ ಗಳು ಎತ್ತಿ ಹಿಡಿದಿವೆ.
ಸಂಪರ್ಕ ಜಾಲ ಸಾಮರ್ಥ್ಯ ಶುಲ್ಕ [ಎನ್.ಸಿ.ಎಫ್], ಮನೆಗಳಿಗೆ ಬಹುಹಂತದ ಟಿವಿ ಮತ್ತು ದೀರ್ಘಕಾಲೀನ ಚಂದಾ ಕುರಿತು 2020 ರ ನಿಬಂಧನೆಗಳನ್ನು ಜಾರಿಗೊಳಿಸಲಾಗಿದೆ.
ಆದಾಗ್ಯೂ ಪ್ರಸಾರಕರು ದರಪಟ್ಟಿ ಪ್ರಕಟಿಸಿದಾಗ ಟ್ರಾಯ್, ಡಿಸ್ಟ್ರೀಬ್ಯೂಷನ್ ಪ್ಲಾಟ್ ಫಾರ್ಮ್ ಆಪರೇಟರ್ಸ್ [ಡಿಪಿಒಗಳು], ಅಸೋಸಿಯೇಷನ್ ಆಫ್ ಕೇಬಲ್ ಆಪರೇಟರ್ಸ್ [ಎಲ್.ಸಿ.ಒಗಳು] ಮತ್ತು ಕನ್ಸೂಮರ್ ಆರ್ಗನೈಝೇಷನ್ಸ್ ಗಳಿಂದ ಮನವಿಗಳನ್ನು ಸ್ವೀಕರಿಸಿತು. ಪಾಲುದಾರರು ತಮ್ಮ ಆದಾಯ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ಹೊಸ ದರಗಳನ್ನು ಜಾರಿಗೆ ತರುವಲ್ಲಿ ಮತ್ತು ಹೊಸ ಗ್ರಾಹಕರನ್ನು ಹೊಸ ದರಪಟ್ಟಿ ಆಡಳಿತಕ್ಕೆ ದೊಡ್ಡ ಪ್ರಮಾಣದಲ್ಲಿ ವರ್ಗಾಯಿಸುವಲ್ಲಿ ತಾವು ಎದುರಿಸಬಹುದಾದ ತೊಂದರೆಗಳನ್ನು ಎತ್ತಿ ತೋರಿಸಿದರು. ಪ್ರಸಾರಕರು ಘೋಷಿಸಿದ ಪಾವತಿ ವಾಹಿನಿಗಳು, ದರಗಳಲ್ಲಿನ ಮೇಲ್ಮುಖ ಪರಿಷ್ಕರಣೆಯಿಂದಾಗಿ ಇದು ಬಹುತೇಕ ಎಲ್ಲಾ ವಲಯಗಳ ಮೇಲೆ ಪರಿಣಾಮ ಬೀರಿದವು.
ತಿದ್ದುಪಡಿ ಮಾಡಿದ 2020 ರ ಚೌಕಟ್ಟಿನ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲು ಮತ್ತು ಮುಂದಿನ ಹಾದಿಯನ್ನು ಸೂಚಿಸಲು ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಮತ್ತು ಡಿಜಿಟಲ್ ಫೌಂಡೇಷನ್ [ಐಬಿಡಿಎಫ್], ಆಲ್ ಇಂಡಿಯಾ ಡಿಜಿಟಲ್ ಕೇಬಲ್ ಫೆಡರೇಷನ್ [ಎಐಡಿಸಿಎಫ್] ಮತ್ತು ಡಿಟಿಎಚ್ ಅಸೋಸಿಯೇಷನ್, ಡಿಟಿಎಚ್ ಅಸೋಸಿಯೇಷನ್ ಸದಸ್ಯರನ್ನು ಒಳಗೊಂಡಂತೆ ಟ್ರಾಯ್ ಸಮಿತಿ ರಚಿಸಿದೆ.
ಸಮಿತಿ 2020 ರ ತಿದ್ದುಪಡಿ ಮಾಡಲಾದ ಚೌಕಟ್ಟಿನ ಕುರಿತ ಪರಿಶೀಲನೆಗಾಗಿ ಹಲವು ವಿಷಯಗಳನ್ನು ಪಟ್ಟಿ ಮಾಡಿತು. 2020 ರ ತಿದ್ದುಪಡಿ ಚೌಕಟ್ಟು ಜಾರಿ ಕುರಿತು ಕೆಲವು ಸಂಕಿರ್ಣದಾಯಕ ವಿಷಯಗಳು, ಅಡೆತಡೆಗಳನ್ನು ನಿವಾರಿಸುವಂತೆ ಎಲ್ಲಾ ಪಾಲುದಾರರು ಟ್ರಾಯ್ ಗೆ ಮನವಿ ಮಾಡಿದರು.
ಪಾಲುದಾರರು ಸಮಿತಿಗೆ ಕೆಲವು ವಿಷಯಗಳನ್ನು ಪರಿಹರಿಸುವಂತೆ ಮಾಡಿದ ಮನವಿ ಹಿನ್ನೆಲೆಯಲ್ಲಿ ಟ್ರಾಯ್ ಪ್ರಸಾರ ವಲಯಕ್ಕೆ ಸಂಬಂಧಿಸಿದಂತೆ ಹೊಸ ನಿಯಂತ್ರಣ ಚೌಕಟ್ಟು ಮತ್ತು ಕೇಬಲ್ ಸೇವೆಗಳಿಗೆ ಸಂಬಂಧಿಸಿದಂತೆ 2022 ರ ಮೇ 7 ರಂದು ತಿದ್ದುಪಡಿ ಮಾಡಿದ 2020ರ ಚೌಕಟ್ಟಿನ ಸಂಪೂರ್ಣ ಅನುಷ್ಠಾನಕ್ಕಾಗಿ ಬಾಕಿ ಉಳಿದಿರುವ ಸಮಸ್ಯೆಗಳ ಕುರಿತು ಪಾಲುದಾರರ ಸಲಹೆಗಳನ್ನು ಪಡೆಯಲು ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಿತು.
ಸಮಗ್ರ ಸಮಾಲೋಚನಾ ಪ್ರಕ್ರಿಯೆ ನಂತರ ಟ್ರಾಯ್ 2022 ರ ನವೆಂಬರ್ 22 ರಂದು ಟ್ರಾಯ್ ದೂರ ಸಂಪರ್ಕ [ಪ್ರಸಾರ ಮತ್ತು ಕೇಬಲ್] ಸೇವೆಗಳು [ಎಂಟನೇ] [ವಿಳಾಸ – ವ್ಯವಸ್ಥೆಗಳು] ದರ [ಮೂರನೇ ತಿದ್ದುಪಡಿ] ಆದೇಶ 2022 ಮತ್ತು ದೂರ ಸಂಪರ್ಕ [ಪ್ರಸಾರ ಮತ್ತು ಕೇಬಲ್] ಅಂತರ್ ಸಂಪರ್ಕಿತ ಸೇವೆಗಳು [ವಿಳಾಸ ವ್ಯವಸ್ಥೆಗಳು] [ನಾಲ್ಕನೇ ತಿದ್ದುಪಡಿ ನಿಯಮಗಳು 2022, ಇವು ಈ ಕೆಳಕಂಡಂತೆ ಇವೆ.
· ಟಿವಿ ವಾಹಿನಿಗಳ ಎಂ.ಆರ್.ಪಿ ಅನುಸರಿಸದಿರುವಿಕೆ
· ಟಿವಿ ವಾಹಿನಿಗಳ ದರ ಗುಚ್ಚ 19/- ರೂ ಮೀರದಂತೆ ನಿಗದಿ
· ತನ್ನ ಗುಚ್ಚದಲ್ಲಿ ವೈಯಕ್ತಿಕ ವಾಹಿನಿಗಳು 45% ರಷ್ಟು ರಿಯಾಯಿತಿ ನೀಡಲು ಅವಕಾಶ
· ತನ್ನ ಗುಚ್ಚದಲ್ಲಿ ಹೆಚ್ಚುವರಿಯಾಗಿ 15% ರಷ್ಟು ಪ್ರೋತ್ಸಾಹಧನವನ್ನು ನೀಡಲು ಪ್ರಸಾರಕರಿಗೆ ಅವಕಾಶ
ಟ್ರಾಯ್ ನೊಂದಿಗೆ ನಿರಂತರ ಪರಿಶೀಲನೆ ನಂತರ ಸಮಿತಿಯ ಪಾಲುದರಾರರು ಹಲವಾರು ವಿಷಯಗಳನ್ನು ಪಟ್ಟಿ ಮಾಡಿದ್ದಾರೆ. ಹೆಚ್ಚುವರಿಯಾಗಿ ಪ್ರಾಧಿಕಾರ ಎಂ.ಎಸ್.ಓ ಗಳು, ಪ್ರಸಾರಕರು, ಡಿಟಿಎಚ್ ಆಪರೇಟರ್ಸ್ ಮತ್ತು ಎಲ್.ಸಿ.ಓಗಳೊಂದಿಗೆ ಬಹು ಹಂತದ ಸಭೆಗಳನ್ನು ನಡೆಸಿತು. ಸಭೆಯಲ್ಲಿ ಹಲವಾರು ವಿಷಯಗಳನ್ನು ಮುಂದೂಡಲಾಯಿತು, ಟ್ರಾಯ್ ವಿವಿಧ ಪಾಲುದಾರರಿಗೆ ಸಂಬಂಧಿಸಿದಂತೆ ಪ್ರಮುಖ ಸಲಹೆಗಳನ್ನು ಪರಿಗಣಿಸಿತು.
ದರಪಟ್ಟಿಗೆ ಸಂಬಂಧಿಸಿದ ಉಳಿದ ವಿಷಯಗಳನ್ನು ಅಂತರ್ ಸಂಪರ್ಕಿತ ಮತ್ತು ಪ್ರಸಾರಕರ ಗುಣಮಟ್ಟದ ಸೇವೆ ಹಾಗೂ ಕೇಬಲ್ ಸೇವೆಗಳನ್ನು ಸಮಿತಿಯ ಪಾಲುದಾರರು ಗುರುತಿಸಿದರು. ಪಾಲುದಾರರ ಸಲಹೆಗಳ ಆಧಾರದ ಮೇಲೆ ಪ್ರಾಧಿಕಾರ ಈ ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಿ ಸಲಹೆಗಳನ್ನು ಆಹ್ವಾನಿಸಿದೆ. ಸಮಾಲೋಚನಾ ಪತ್ರದ ಮೇಲೆ 2023 ರ ಸೆಪ್ಟೆಂಬರ್ 5 ರ ಒಳಗಾಗಿ ಸಲಹೆಗಳನ್ನು ಲಿಖಿತ ರೂಪದಲ್ಲಿ ನೀಡಬಹುದು. ಆಕ್ಷೇಪಣೆಗಳನ್ನು ಸಲ್ಲಿಸುವವರಿಗೆ 2023 ರ ಸೆಪ್ಟೆಂಬರ್ 19 ರ ವರೆಗೆ ಕಾಲಾವಕಾಶವಿದೆ. ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ವಿದ್ಯುನ್ಮಾನ ಮಾಧ್ಯಮದ ಮೂಲಕ ಸಲ್ಲಿಸಬಹುದಾಗಿದ್ದು, ಮಿಂಚಂತೆ ವಿಳಾಸ ; http://advbcs-2@trai.gov.in and jtadvbcs-1@trai.gov.in
ಯಾವುದೇ ಸ್ಪಷ್ಟನೆ/ಮಾಹಿತಿಗಾಗಿ ಶ್ರೀ ಅನಿಲ್ ಕುಮಾರ್ ಭಾರಧ್ವಜ್, ಸಲಹೆಗಾರರು [ಬಿಅಂಡ್ ಸಿಎಸ್ ಅವರನ್ನು ಈ ದೂರವಾಣಿ ಮೂಲಕ ಸಂಪರ್ಕಿಸಬಹುದು +91-11-23237922.
***
(Release ID: 1946730)
Visitor Counter : 103