ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಉತ್ತರ ಭಾರತದ ಮೊದಲ ನದಿ ಪುನರುಜ್ಜೀವನ ಯೋಜನೆ ದೇವಿಕಾ ಮುಕ್ತಾಯದ ಹಂತದಲ್ಲಿದೆ, ಇದಕ್ಕೆ ಪ್ರಧಾನಮಂತ್ರಿ ಮೋದಿಯವರೇ ಚಾಲನೆ ನೀಡಿದ್ದರು: ಡಾ. ಜಿತೇಂದ್ರ ಸಿಂಗ್


ಡಾ. ಜಿತೇಂದ್ರ ಸಿಂಗ್ ಅವರು ಪವಿತ್ರ ದೇವಿಕಾ ನದಿಯ ಪಾವಿತ್ರ್ಯತೆಯನ್ನು ರಕ್ಷಿಸುವುದಕ್ಕಾಗಿ ಇರುವ  ದ್ರವ ತ್ಯಾಜ್ಯ ನಿರ್ವಹಣೆಯನ್ನು ಪರಿಶೀಲಿಸಿದರು

Posted On: 06 AUG 2023 4:24PM by PIB Bengaluru

ಕೇಂದ್ರ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ವಿಜ್ಞಾನ ಮತ್ತು ತಂತ್ರಜ್ಞಾನ; ಪಿಎಂಒ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ, ಡಾ ಜಿತೇಂದ್ರ ಸಿಂಗ್ ಇಂದು ಹೇಳಿದರು, ಉತ್ತರ ಭಾರತದ ಮೊದಲ ನದಿ ಪುನರುಜ್ಜೀವನ ಯೋಜನೆ ದೇವಿಕಾ ಮುಕ್ತಾಯದ ಹಂತದಲ್ಲಿದೆ. ‘ನಮಾಮಿ ಗಂಗಾ’ ಮಾದರಿಯಲ್ಲಿ 190 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಯೋಜನೆಗೆ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಪವಿತ್ರ ದೇವಿಕಾ ನದಿಯ ಪಾವಿತ್ರ್ಯತೆಯನ್ನು ರಕ್ಷಿಸಲು ಪ್ರತ್ಯೇಕವಾಗಿ ಕೈಗೊಂಡ ದ್ರವ ತ್ಯಾಜ್ಯ ನಿರ್ವಹಣೆ ಯೋಜನೆಯನ್ನು ಪರಿಶೀಲಿಸುವಾಗ ಇದನ್ನು ಡಾ. ಜಿತೇಂದ್ರ ಸಿಂಗ್ ಅವರು ಹೇಳಿದರು.

ಪರಿಶೀಲನಾ ಸಭೆಯಲ್ಲಿ, ಡಾ.ಜಿತೇಂದ್ರ ಸಿಂಗ್ ಮಾತನಾಡಿ, ಪವಿತ್ರ ಗಂಗಾ ನದಿಯ ಸಹೋದರಿ ಎಂದು ಪರಿಗಣಿಸಲಾದ ದೇವಿಕಾಗೆ ಹೆಚ್ಚಿನ ಧಾರ್ಮಿಕ ಮಹತ್ವವಿದೆ, ಅದಕ್ಕಾಗಿಯೇ ದೇವಿಕಾ ಪುನರುಜ್ಜೀವನದ ಅಡಿಯಲ್ಲಿ ಅದರ ಪಾವಿತ್ರ್ಯತೆಯನ್ನು ರಕ್ಷಿಸಲು ದ್ರವ ತ್ಯಾಜ್ಯ ನಿರ್ವಹಣಾ ಯೋಜನೆಯಡಿಯಲ್ಲಿ  ಎಲ್ಲಾ ಮನೆಗಳಿಗೆ ಪೈಪ್ಗಳು ಮತ್ತು ಮ್ಯಾನ್ಹೋಲ್ಗಳ ಜಾಲದೊಂದಿಗೆ ಸಂಪರ್ಕಿಸಲಾಯಿತು. ಯುಇಇಡಿಯಿಂದ ಈ ಯೋಜನೆಯನ್ನು ನಿರ್ಮಿಸಲಾಗುತ್ತಿದೆ. ಯೋಜನೆಗೆ ಮೀಸಲಿಟ್ಟ 190 ಕೋಟಿ ಹಣದಲ್ಲಿ, ಹಂಚಿಕೆಯ ಭಾಗವು ಕೇಂದ್ರ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಕ್ರಮವಾಗಿ 90:10 ಅನುಪಾತದಲ್ಲಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು.

ದ್ರವ ತ್ಯಾಜ್ಯ ನಿರ್ವಹಣಾ ಯೋಜನೆಯ ಜೊತೆಗೆ ದೇವಿಕಾ ನದಿಯ ಪಾವಿತ್ರ್ಯತೆಯನ್ನು ರಕ್ಷಿಸುವ ಹಲವು ಅಂಶಗಳಿಂದ ಪ್ರಮುಖವಾದ ದೇವಿಕಾ ಪುನರುಜ್ಜೀವನ ಯೋಜನೆಯಡಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ಯೋಜನೆಯನ್ನು ಸಹ ನಿರ್ಮಿಸಲಾಗುವುದು ಎಂದು ಡಾ. ಜಿತೇಂದ್ರ ಸಿಂಗ್ ತಿಳಿಸಿದರು.

ಸಭೆಯಲ್ಲಿ, ಡಾ. ಜಿತೇಂದ್ರ ಸಿಂಗ್ ಅವರು ಸಮಾಜದ ತಳಮಟ್ಟದ ಪ್ರತಿನಿಧಿಗಳಾಗಿರುವ ಪಿಆರ್ಐ ಗಳ ಪಾತ್ರವು ಪ್ರಮುಖ ಅಭಿವೃದ್ಧಿ ಯೋಜನೆಗಳ ಯಶಸ್ಸಿಗೆ ಪ್ರಮುಖವಾಗಿದೆ ಎಂದು ಪ್ರತಿಪಾದಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಪಿಆರ್ಐಗಳು ಸಚಿವರೊಂದಿಗೆ ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದು, ಕಡಿಮೆ ಸಮಯದಲ್ಲಿ ಸಮಸ್ಯೆಗಳನ್ನು ಪರಿಹರಿಸುವಂತೆ ಸಚಿವರು ಇಲಾಖೆಗಳಿಗೆ ಸೂಚಿಸಿದರು.

ಸಭೆಯಲ್ಲಿ ಉಧಂಪುರದ ಡಿಸಿ, ಶ್ರೀ ಸಚಿನ್ ಕುಮಾರ್ ವೈಶ್ಯ, ಹೆಚ್ಚುವರಿ ಡಿಆರ್ಎಂ ಉತ್ತರ ರೈಲ್ವೆ, ಶ್ರೀ ಬಲದೇವ್ ರಾಜ್, ಉಧಂಪುರ್ ನ ಎಸ್ಎಸ್ಪಿ ಡಾ.ವಿನೋದ್ ಕುಮಾರ್, ಡಿಡಿಸಿ, ಬಿಡಿಸಿ ಸದಸ್ಯರು, ಸರಪಂಚರು ಮತ್ತು ಪಂಚಾಯತಿಯ ಸದಸ್ಯರು ಉಪಸ್ಥಿತರಿದ್ದರು.

***



(Release ID: 1946210) Visitor Counter : 132