ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮನೆಯ ಕನಸುಗಳನ್ನು ನನಸಾಗಿಸಿದ್ದಕ್ಕಾಗಿ ಪ್ರಧಾನಿಗೆ ಧನ್ಯವಾದ ತಿಳಿಸಿದ ಕಲ್ಕಾಜಿ ದೆಹಲಿಯ ವಸತಿ ಫಲಾನುಭವಿ ಮಹಿಳೆಯರು 

Posted On: 04 AUG 2023 10:31AM by PIB Bengaluru

'ಜಹಾನ್ ಜುಗ್ಗಿ ವಹಾನ್ ಮಕಾನ್' ಯೋಜನೆಯಡಿ ದೆಹಲಿಯ ಕಲ್ಕಾಜಿ ಪ್ರದೇಶದಲ್ಲಿ ಪಕ್ಕಾ ಮನೆಗಳನ್ನು(pucca house) ಮಂಜೂರು ಮಾಡಿದ ಫಲಾನುಭವಿಗಳು ಬರೆದಿರುವ ಪತ್ರ ಕಂಡು ತೀವ್ರ ಸಂತಸಕ್ಕೊಳಗಾಗಿದ್ದೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿಕೊಂಡಿದ್ದಾರೆ. 

ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಅವರಿಗೆ ಮಹಿಳೆಯರು ಪತ್ರಗಳನ್ನು ಹಸ್ತಾಂತರಿಸಿದ್ದರು.  ಫಲಾನುಭವಿಗಳು ತಮಗೆ ವಸತಿ ಯೋಜನೆಯಡಿ ಸರ್ಕಾರ ಮನೆಗಳನ್ನು ನೀಡಿದ್ದಕ್ಕೆ ಸಂತೋಷವನ್ನು ವ್ಯಕ್ತಪಡಿಸಿದ್ದು, ತಮ್ಮ ಕನಸನ್ನು ನನಸಾಗಿಸಲು ಮತ್ತು ತಮ್ಮ ಜೀವನವನ್ನು ಸುಲಭಗೊಳಿಸಲು ಸಹಾಯ ಮಾಡಿದ್ದಕ್ಕಾಗಿ ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ. 

ಬಡವರ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುವ ಸರ್ಕಾರದ ಬದ್ಧತೆಯನ್ನು ಇದೇ ಸಂದರ್ಭದಲ್ಲಿ ಪ್ರಧಾನಿ ಪುನರುಚ್ಛರಿಸಿದ್ದಾರೆ. 

ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು: 'ಜಹಾನ್ ಜುಗ್ಗಿ ವಹಿ ಮಕಾನ್' ಯೋಜನೆಯಡಿ ಪಕ್ಕಾ ಮನೆಗಳನ್ನು ಪಡೆದಿರುವ ದೆಹಲಿಯ ಕಲ್ಕಾಜಿಯ ತಾಯಂದಿರು ಮತ್ತು ಸಹೋದರಿಯರಿಂದ ನನಗೆ ಸಾಕಷ್ಟು ಪತ್ರಗಳು ಬಂದಿವೆ. ಇತ್ತೀಚೆಗೆ ವಿದೇಶಾಂಗ ಇಲಾಖೆ ಸಚಿವರು ಅಲ್ಲಿಗೆ ಹೋದಾಗ, ಮಹಿಳೆಯರು ಈ ಪತ್ರಗಳನ್ನು ನೀಡಿದರು, ಅದರಲ್ಲಿ ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಈ ಯೋಜನೆಯ ಮೂಲಕ ತಮ್ಮ ಹಲವು ವರ್ಷಗಳ ಕನಸು ಹೇಗೆ ನನಸಾಗಿದೆ ಮತ್ತು ಇಡೀ ಕುಟುಂಬದ ಜೀವನವು ಹೇಗೆ ಸುಲಭವಾಯಿತು ಎಂದು ಹೇಳುತ್ತಾರೆ. ಪತ್ರ ಬರೆದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು! ನಮ್ಮ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಬದ್ಧತೆಯಿಂದ ಕೆಲಸ ಮಾಡುತ್ತದೆ ಎಂದು ತಿಳಿಸಿದ್ದಾರೆ.

 

***


(Release ID: 1946082) Visitor Counter : 137