ರಾಷ್ಟ್ರಪತಿಗಳ ಕಾರ್ಯಾಲಯ

ಆಗಸ್ಟ್ 16 ರಿಂದ ಅಮೃತ್ ಉದ್ಯಾನ್ ಸಾರ್ವಜನಿಕರಿಗೆ ತೆರೆಯಲಿದೆ


ಸೆಪ್ಟೆಂಬರ್ 5 ರಂದು ಶಿಕ್ಷಕರಿಗೆ ಮಾತ್ರ ವಿಶೇಷವಾಗಿ ಮೀಸಲಿಡಲಾಗುವುದು

ಸಂದರ್ಶಕರು ಆನ್ಲೈನ್ ಬುಕಿಂಗ್ ಅಥವಾ ಸ್ವಯಂ ಸೇವಾ ಕಿಯೋಸ್ಕ್ ಗಳ ಮೂಲಕ ಪ್ರವೇಶ ಪತ್ರಗಳನ್ನು ಪಡೆಯಬಹುದು

Posted On: 03 AUG 2023 3:17PM by PIB Bengaluru

ಉದ್ಯಾನ್  ಉತ್ಸವ್ -2 ರ ಅಡಿಯಲ್ಲಿ ಅಮೃತ್ ಉದ್ಯಾನ್ 2023ರ ಆಗಸ್ಟ್ 16 ರಿಂದ ಒಂದು ತಿಂಗಳ ಕಾಲ (ಸೋಮವಾರ ಹೊರತುಪಡಿಸಿ) ಸಾರ್ವಜನಿಕರಿಗೆ ತೆರೆದಿರುತ್ತದೆ. ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ಅಂಗವಾಗಿ ವಿಶೇಷವಾಗಿ ಶಿಕ್ಷಕರಿಗೆ ಪ್ರವೇಶಾವಕಾಶಕ್ಕಾಗಿ ತೆರೆದಿರುತ್ತದೆ.

ಉದ್ಯಾನ್ ಉತ್ಸವ್ -2 ಬೇಸಿಗೆಯಲ್ಲಿ ಅರಳುವ  ವಾರ್ಷಿಕ ಹೂವುಗಳನ್ನು   ಸಂದರ್ಶಕರಿಗೆ ನೋಡುವ ಅವಕಾಶವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಸಂದರ್ಶಕರು ಉದ್ಯಾನಗಳಿಗೆ 1000 ರಿಂದ 1700 ಘಂಟೆಗಳವರೆಗೆ ಭೇಟಿ ನೀಡಬಹುದು (ಕೊನೆಯ ಪ್ರವೇಶ 1600 ಗಂಟೆಗೆ). ನಾರ್ತ್ ಅವೆನ್ಯೂ ಬಳಿಯ ರಾಷ್ಟ್ರಪತಿ ಭವನದ ಗೇಟ್ ಸಂಖ್ಯೆ 35 ರಿಂದ ಪ್ರವೇಶ ಅವಕಾಶ ಇರುತ್ತದೆ.

ರಾಷ್ಟ್ರಪತಿ ಭವನದ ಜಾಲತಾಣ (ವೆಬ್ಸೈಟ್ https://visit.rashtrapatibhavan.gov.in/) ನಲ್ಲಿ 2023ರ ಆಗಸ್ಟ್ 7 ರಿಂದ ಆನ್ಲೈನ್ ನಲ್ಲಿ ಬುಕ್ಕಿಂಗ್ ಮಾಡಬಹುದು. ಸ್ಥಳಕ್ಕೆ ಬಂದು ಪ್ರವೇಶಾವಕಾಶ ಪಡೆಯಲು ಇಚ್ಛಿಸುವವರು (ವಾಕ್-ಇನ್ ಸಂದರ್ಶಕರು)  ಗೇಟ್ ಸಂಖ್ಯೆ 35 ರ ಬಳಿ ಇರಿಸಲಾಗಿರುವ ಸ್ವಯಂ ಸೇವಾ ಕಿಯೋಸ್ಕ್ ಗಳಿಂದ ಪಾಸ್ ಗಳನ್ನು ಪಡೆಯಬಹುದು. ಅಮೃತ್ ಉದ್ಯಾನಕ್ಕೆ ಪ್ರವೇಶ ಉಚಿತ.

ಉದ್ಯಾನ್ ಉತ್ಸವ್ -1 ರ ಅಡಿಯಲ್ಲಿ ಈ ವರ್ಷ ಜನವರಿ 29 ರಿಂದ ಮಾರ್ಚ್ 31 ರವರೆಗೆ ಅಮೃತ್ ಉದ್ಯಾನ್ ಗೆ ಪ್ರವೇಶಾವಕಾಶ ನೀಡಲಾಗಿತ್ತು,  10 ಲಕ್ಷಕ್ಕೂ ಹೆಚ್ಚು ಜನರು ಇಲ್ಲಿಗೆ ಭೇಟಿ ನೀಡಿದ್ದರು.

ಅಮೃತ್ ಉದ್ಯಾನ್ ಜೊತೆಗೆ, ಸಂದರ್ಶಕರು ತಮ್ಮ ಪ್ರವೇಶಾವಕಾಶಗಳನ್ನು (ಸ್ಲಾಟ್ ಗಳನ್ನು)  ಆನ್ಲೈನ್ ನಲ್ಲಿ  (https://visit.rashtrapatibhavan.gov.in/) ಕಾಯ್ದಿರಿಸುವ ಮೂಲಕ ರಾಷ್ಟ್ರಪತಿ ಭವನ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಬಹುದು. ಉದ್ಯಾನ ಉತ್ಸವ-2ರ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ವಸ್ತುಸಂಗ್ರಹಾಲಯಕ್ಕೆ ಉಚಿತವಾಗಿ ಭೇಟಿ ನೀಡಬಹುದು.

****
 



(Release ID: 1945463) Visitor Counter : 98